Kannada Blogs (ಕನ್ನಡ ಬ್ಲಾಗ್ಸ್)

Last updated by Venus on 27th January 2012 at 8 a.m. CST for Amit Chakradeo

ಪ್ರೇಮದ ಕಡಲಲ್ಲಿ

ಬಿಳಿಯ ಹಾಳೆಯೊ೦ದನ್ನು ಕೊಟ್ಟು ಬರಿ ಎ೦ದರೆ ನಾ ಏನು ಬರೆಯಲಿ

 ನಾನಿರುವುದು ಪ್ರೀತಿಯ ಸುಳಿಯಲಿ



 

ಮುಂದೆ ಓದಿ...

Posted by sudhakarkrishna on October 11, 2011 09:59 AM· permalink

ಕಥೆ........ ಕಥೆಯ೦ತಿಲ್ಲ! ಕಥೆಯೊಂದು ಜೀವನ


ಆತ ...

ಮುಖ ತಿರುಗಿಸಿ ಮತ್ತೊಂದು ಕಡೆ ಮುಖ ಮಾಡಿ ಮಲಗಿದ...


ನನಗೂ.. ಅಸಾಧ್ಯ ಕೋಪ ಬಂತು..



ನಾನು .....
ಇನ್ನೊಂದು ಕಡೆ ಮುಖ ಮಾಡಿ ಮಲಗಿದೆ...
(ಇಲ್ಲಿಗೆ ಮುಗಿದ ಇಟ್ಟಿಗೆ ಸಿಮೆಂಟಿನ ಪ್ರಕಾಶರ ಕಥೆ "ನೀತಿ" ಯ ಮುಂದುವರೆದ ಭಾಗ ಕೊಂಡಿ: http://ittigecement.blogspot.com/2011/09/blog-post.html


ಆತ...

ಅಬ್ಬಾ ಎಷ್ಟೊಂದು ಅನುಮಾನ ಇವಳಿಗೆ

ಇಂದು ಮೊದಲ ರಾತ್ರಿಯೇ ಹೀಗೆ
ಆದರೆ ಇನ್ನು ಜೀವನ ಪರ್ಯಂತರ ಹೇಗೆ?
"ಆದರೆ ಹೇಗೆ ನಂಬಲಿ" ಎಂದರೆ... ನಾನೇನು ಹೇಳಬೇಕಿತ್ತು...??
ನಾನು ಮಾಡಿದ್ದೆ ಸರೀ!
ಒಮ್ಮೆಲೆ ಮೊದಲ ರಾತ್ರಿ ನಾನು ಅದು ಇದು ನೇರ ಅಂಥಾ ಎಲ್ಲವನ್ನೂ ಒಮ್ಮೆ ಹೇಳಿದ್ದೆ ತಪ್ಪಾಯಿತು .....ಸ್ವಲ್ಪ ಸಮಯದ ನಂತರ ಹೇಳಬಹುದಿತ್ತು... ಹೇಳದೆ ಮುಚ್ಚಿಟ್ಟಿದ್ದಾರೆ ಏನಾಗುತ್ತಿತ್ತು...??? ಸುಮ್ಮನೆ ನೆರವೆಂದು ಎಲ್ಲವನ್ನೂ ಬಿಚ್ಚಿಟ್ಟು ಅನುಮಾನಕ್ಕೆಡೆ ಮಾಡಿಸಿದೆನಲ್ಲಾ ...ಹೋಗಲಿ ಅಷ್ಟಕ್ಕೂ ಅನುಮಾನಪಟ್ಟಿದ್ದು ಅವಳು... ಅದಕ್ಕೆ ಸಿಟ್ಟು ಬಂದು ನಾನು ತಿರುಗಿದೆ... ಅಬ್ಬಾ.. ಅದಕ್ಕೆ ತಾನೂ ತಿರುಗಿ ಮಲಗಬೇಕೆ...? ಹೋಗಲಿ ಹೆಣ್ಣಿಗೆ ಹಠ ಎನ್ನುತ್ತಾರೆ ನಾನೆ ಒಮ್ಮೆ ಮಾತಾಡಿಸಲೇ... ಮಾತಾಡಿಸಿ ಸೋತು ...ಮೊದಲ ರಾತ್ರಿ ಗೆಲ್ಲಲೇ ????.....ಮೆಲ್ಲ ಅರೆ ನಿದ್ದೆಯಲ್ಲಿದ್ದ೦ತೆ ... ಕೈ ಅವಳ ಮೈ ಮೇಲೆ ಹಾಕಲೇ...ಗಂಡಿಗೆ ಹೇಗಿದ್ದರೂ ಚಟ ವಲ್ಲವೇ? ಹಾಕಿ ಬಿಡುತ್ತೇನೆ.... ಇನ್ನು ಸಿಟ್ಟಿದ್ದರೆ ಕೈ ಬಿಸಾಕುತ್ತಾಳೆ ... ಇಲ್ಲಿದಿದ್ದರೆ ನಾನೆಂದು ಕೊಂಡ೦ತೆ ಮೊದಲ ರಾತ್ರಿ ಮಿಲನ ಮಹೋತ್ಸವ...



ಆಕೆ .....
"ನಾನೇಗೆ ನಂಬುವದು" ಎಂಬ ನನ್ನ ಪ್ರಶ್ನೆ ಅವರ ಅಸ್ತಿತ್ವವನ್ನೇ ಕೆಣಕುವ೦ತಿತ್ತಲ್ಲವೆ ??
ನಾನು ಅದನ್ನು ಕೇಳಬಾರದಿತ್ತು ...
ಪರಸ್ಪರರನ್ನು ನಂಬದೆ ಸಂಭಂಧ ಗಟ್ಟಿ ಮಾಡುವದು ಹೇಗೆ?...
ಅದು ಪ್ರಾರಂಭದಲ್ಲೇ...
ಅವರು ಆದನ್ನು ಹೇಳದೆ ಮುಚ್ಚಿಡಬಹುದಿತ್ತು...
ಹೇಳಿದ ಮೇಲೆ ಅದ್ದನ್ನು ನಾನು ನಂಬದೆ ಅನುಮಾನಿಸುವದು ತಪ್ಪು ನಾನು
ಅವರು ಹೇಳಿದ್ದರಲ್ಲಿ ಅರ್ಧವನ್ನೇ ನಂಬಿದೆ ಇನ್ನರ್ಧ ಅನುಮಾನಿಸಿದೆ...
ಅದನ್ನು ಅನುಮಾನಿಸಬಹುದಿತ್ತು...
ಇಲ್ಲ ಇದನ್ನು... ನ೦ಬಬಹುದಿತ್ತು...
ಹೆಣ್ಣಿಗೆ ಹಠ ಎನ್ನುವದು ಇವರಿಗೆ ಗೊತ್ತಿಲ್ಲವೇ/.... ಒಮ್ಮೆ ಅವರ ಕೈ ನನ್ನ ಮೇಲೆ ಬಿದ್ದರೆ ನಾನೆಲ್ಲಾ ಮರೆತು ಅವರನ್ನ ತಬ್ಬಿ ಬಿಡುತ್ತೇನೆ....

ನಿದ್ರೆಯಲ್ಲಿದ್ದಂತೆ ನಟಿಸುತ್ತಾ ಅವನು ಬದಿ ತಿರುಗಿಸಿ ಅವಳೆಡೇಗೆ ಮುಖ ಮಾಡಿ ತಿರುಗುತ್ತಾನೆ...

ಅವನು ತನ್ನ ಕಡೆ ತಿರುಗಿದ್ದು ಅವಳಿಗೆ ಅರಿವಾಗುತ್ತೆ...ನಿದ್ದೆಯಲ್ಲಿದ್ದಾನೋ...? ಅಥವಾ ಬೇಕಂತಲೇ ತಿರುಗಿರುವನೋ? ತಿರುಗಿ ನೋಡಲು ಕಾತರ... ಆದರೆ ನೇರ ನೋಡಲಾಗುವದಿಲ್ಲ... ಆದ್ದರಿಂದಲೇ ನಿದ್ರೆಯಲಿಂದಲೇ ಮೇಲ್ಮುಖಕ್ಕೆ ತಿರುಗಿ ನಿಮಿಲಿತ ನೇತ್ರದಲ್ಲಿ ಅವನನ್ನು ನೋಡುತ್ತಾಳೆ... ನಿದ್ರೆಯಲ್ಲಿದ್ದಂತೆ ನಟಿಸುತ್ತಿರುವದು ಗೊತ್ತಾಗುತ್ತೆ ....ಇರಲಿ ನೋಡೋಣ....ಗಂಡಿಗೆ ಚಟವಂತೆ... ಸರಿಯೇ ನೋಡೋಣ...
ಅವಳು ಮೇಲ್ಮುಖ ಮಾಡಿ ತಿರುಗಿದ್ದು ಇವನು ನಿಮಿಲಿತನಾಗೆ ಗಮನಿಸುತ್ತಾನೆ... ಅಬ್ಬ ಹೆಣ್ಣೇ ಇನ್ನು ಹಟವೇ? ಇರಲಿ ಮೆಲ್ಲ ಕೈ ಮೇಲೆ ಹಾಕುತ್ತೇನೆ ನೋಡೋಣ...ಕೈ ನಿದ್ರೆಯಲ್ಲಿ ಬಂದಂತೆ ಅವಳ ಮೇಲೆ ಬಳಸಿಯೂ ಬಳಸದಂತೆ ಇರಿಸಿದ...

ಕೈ ಬೀಳುತ್ತಲೇ ಇವಳು ಅವನೆಡೆಗೆ ನಿದ್ರೆಯಲ್ಲಿದ್ದಂತೆ ನಟಿಸುತ್ತಾ ಅವನೆಡೆಗೆ ಸರಿಯುತ್ತಾಳೆ... ಈಗ

ಈಗ ನಟನೆಯಲ್ಲಿ ಮುಚ್ಚಿದ ಇಬ್ಬರ ಕಣ್ಣುಗಳಲ್ಲಿ ಅಪಾರ ಆಶೆ ತುಂಬಿದೆ... ಪರಸ್ಪರರ ಮುಖಕ್ಕೆ ಪರಸ್ಪರರ ಬಿಸಿಯುಸಿರು ಬೀಸುತ್ತಿದೆ...ತಂಗಾಳಿಯಂತೆ..ಮಂದಾನಿಲದಂತೆ .... ಮಾರುತವಾಗಿ... ಅದರೊಡನೆ ಮನದ ಸುಪ್ತ ಬಯಕೆಗಳು ಹೊತ್ತಿ ಕಂಬಾರನ ತಿದಿಗೇ ಬೆದೆಯೋಡಿವ ಬೆಂಕಿಯಂತೆ ಹರಡಿ ಸುತ್ತೆಲ್ಲಾ ಮುತ್ತಿ, ಜಗಳ ಕದನಗಳ ಕಾರಣಗಳು ಗೌಣವಾಗಿ ಅದರಲ್ಲಿ ಸುಟ್ಟು ಕರಗಿತು ... ಕೇವಲ ಬಯಕೆ ಪ್ರೀತಿಯ ಬೆಂಕಿ ಹೊತ್ತೊಡೆದು ...ಪರಸ್ಪರರನ್ನು ಅಪ್ಪಿಸಿ ಮುತ್ತಾಡಿಸಿ ಮಿಲನಕ್ಕೆ ಮುಂದುವರೆಸುತ್ತದೆ... ಮುಚ್ಚಿದ ಕಂಗಳು ತೆರೆಯದೆ ಎಲ್ಲವನ್ನೂ ನೋಡಿ ಸವಿಯಿತು... ತೆಗೆದಾಗ ಕಾಣದ್ದು ಮುಚ್ಚಿದಾಗಲೇ ಕಂಡಿತು...ಕತ್ತಲು ಆಪ್ತವಾಯಿತು... ಬಯಕೆ ಮುಗಿಲ ಮುತ್ತಿಟ್ಟು ಮುತ್ತಿಕ್ಕಿ ... ಮೊದಲಿನ ಮಾತಿನ ಕದನ ಕಾಣದಾಗಿ ಈಗ ಇಲ್ಲಿ ಮಾತಿಲ್ಲದ ಪ್ರೇಮದ ಕದನ ಆರಂಭವಾಯಿತು ...ಒಬ್ಬರಲ್ಲಿ ಒಬ್ಬರು ಕಳೆದು ಹೋದರು....!

ಮಿಲನದ ಕದನದಲ್ಲಿ ಸುಸ್ತಾಗಿ ಅಪ್ಪಿ ವಿರಮಿಸಿದ ಪರಸ್ಪರ ಮೈ ಮನಗಳಲ್ಲಿ ಧನ್ಯತೆ ತುಂಬಿ ....
ಆತ "ಪುಟ್ಟಾಣಿ ನಾನು ತಿರುಗಿ ಮಲಗಿದ್ದು ತಪ್ಪು" ಎಂದ

ಅವಳು " ಪೋಲಿ ಕಿಟ್ಟಾಣಿ ಅನುಮಾನಿಸಿದ್ದು ನನ್ನ ತಪ್ಪು"

ಆಮೇಲೆ ಇಬ್ಬರು ಒಟ್ಟಿಗೆ ಅರಿವಿಲ್ಲದೆ ಅಂದಿದ್ದು "ಇರಲಿ ಬಿಡು ಅದೊಂದು ಕಹಿ ಕಾಲ -ಸುಖದಲ್ಲಿ ಅದೆನೇಕೆ ನೆನೆವ"

"ಹೆಣ್ಣಿಗೆ ಹಠ - ಗಂಡಿಗೆ ಚಟ " ಇದು ಸತ್ಯ.... ಇದರಲ್ಲಿ ಸಹಸ್ರಾರು ವಿಚ್ಚೆದನಕ್ಕೆ ಕಾರಣವಾಗಬಹುದಾದ ಘಟನೆಗಳು ಸತ್ತು ಮತ್ತು ಸುಟ್ಟು ಹೋಗಿವೆ....

ಅದಕ್ಕೆ ಹೇಳಿದ್ದು " ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ "

Posted by ಸೀತಾರಾಮ. ಕೆ. / SITARAM.K (noreply@blogger.com) on October 11, 2011 09:40 AM· permalink

ಶೂನ್ಯ ದಿಂದ........ ಪರಿಪೂರ್ಣದೆಡೆಗೆ...........

ಸಹ ಬ್ಲೋಗಿತ್ತಿ-ಸುಗುಣಾರ " ಮೃದಮನಸ್ಸು" ಬ್ಲಾಗ್ ನ ಶೂನ್ಯ ಕಥೆಯ ಮುಂದುವರೆದ ಭಾಗ..........
(ಮೊದಲ ಭಾಗದ ಕೊಂಡಿ : http://mrudhumanasu.blogspot.com/2011/10/blog-post_09.html)


ಉಸಿರು ಬಿಕ್ಕುತಿದೆ...

ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆ ಯ
ಶೂನ್ಯ ಸಿಂಹಾಸನದಡಿ
ನನ್ನ ಬದುಕು ಜೋತಾಡುತಿದೆ.....

ಇಪ್ಪತ್ತು ವರ್ಷಗಳ ಗಂಡನ ಅಪರಿಮಿತ ಪ್ರೀತಿಯಲ್ಲಿ ನಾನು ನನ್ನೆಲ್ಲಾ ಕೊರತೆಯನ್ನು ಮರೆತು ಆನಂದದಿಂದ ಮರೆತಿದ್ದೆ ...
ತವರ ನೆನಪು ಮಾಸಿತ್ತು ....
ಮಕ್ಕಿಳಿಲ್ಲದ ಕೊರಗು ಕಾಡಲಿಲ್ಲ.....
ಬದುಕು ಸಾಗಿದ ಬಗೆಯೇ ಅರಿವಾಗಲಿಲ್ಲ....
ಇಂದು ಆ ಅಪರಿಮಿತ ಪ್ರೀತಿ ನೀಡಿದ ಸಹೃದಯ ಜೀವ ನನ್ನಿನಿಯ ನಡುವಿನಲ್ಲೇ ಬಿಟ್ಟಗಲಿದಾಗ ....
ಮೇಲಿನ ಗೀತೆ ಮನದಲ್ಲಿ ಗವ್ವೆನ್ನುವಂತೆ ಬಾರಿ ಬಾರಿ ಸುಳಿಯುತಿದೆ ...
ಮಕ್ಕಳಿಲ್ಲದ ಕೊರಗು ಕಾಡುತಿದೆ...
ದತ್ತು ಮಗುವನ್ನೂ ತಂದು ಸಾಕಲಿಲ್ಲವಲ್ಲಾ ಆಸರೆಗೆ... ಎಂಬ ಭಾವ ಅಪರಾಧೀ ಪ್ರಜ್ಞೆಯಾಗಿ ಕಾಡುತಿದೆ ಎನಿಸಹತ್ತಿತು ....
ವೃದ್ಧ ಅತ್ತೆಮಾವರು ನನಗೆ ಆರ್ಥಿಕ ಭಾರವಾಗಬಾರದೆಂದು ಈಗ ಮೈದುನನ ಮನೆಗೆ ನಡೆದಿಹರು......
ಮೈದುನ -ತಂಗಿ ತಮ್ಮಲ್ಲಿಗೆ ನನ್ನನ್ನು ಕರೆದರೂ ಇವರೊಡನೆ ಇಪ್ಪತ್ತುವರ್ಷ ಬಾಳಿದ ನೆನಪುಗಳ ಹೊತ್ತ ಈ ಸ್ವಂತ ಮನೆಯ ತ್ಯಜಿಸಲು ಮನಸಿಲ್ಲ.....
ಅಪ್ಪ-ಅಮ್ಮರೇ ಅಣ್ಣ ಅತ್ತಿಗೆಯರ ಆಡಳಿತದ ನಡುವೆ ತವರಲ್ಲಿ ನೇಪಥ್ಯವಾಗಿರುವಾಗ ಮತ್ತು ಇಷ್ಟು ದಿನ ಅದನ್ನು ಬಯಸದೆ ಇದ್ದು ಇಂದು ಅದನ್ನು ಆಸರೆ ಎ೦ದು ಕಲ್ಪಿಸಲಾಗದು.....

ದೀಪ ನೋಡುತ್ತಾ ಕುಳಿತಿದ್ದ ಅನ್ನಪೂರ್ಣಾ ಒಮ್ಮೆ ಕಣ್ಣು ತಿರುಗಿಸಿ.... ಸುತ್ತೆಲ್ಲಾ ನೋಡಿದಾಗ,
ಕತ್ತಲು ಅಡರಿದ೦ತೆಸಿತು...ಸೂರ್ಯ ಸಂಪೂರ್ಣ ಮರೆಯಾಗಿ ಸಂಜೆ ದಾಟಿ ಕತ್ತಲು ಸುತ್ತೆಲ್ಲಾ.. ಮುತ್ತಿತ್ತು...
ಒಮ್ಮೆ ಭಯವು ಎನಿಸಹತ್ತಿತು....

.............ಹೀಗೆ ಅನ್ನಪೂರ್ಣಾಳ ಮನ, ಭೂತ-ವರ್ತಮಾನ-ಭವಿಷ್ಯತ್ತುಗಳ ಯೋಚನೆಯಲ್ಲಿ, ಗತಿಸಿದ ಗಂಡ ಅನುರಾಗನ ನೆನಪಲ್ಲಿ, ಅಂಗಳದಲ್ಲಿ ಹಚ್ಚಿಟ್ಟ ಹಣತೆಯ ಜ್ಯೋತಿಯಲ್ಲಿ , ಎವೆಯಿಕ್ಕದೆ ನೆಟ್ಟ ನೋಟದಲ್ಲಿ.... ಗರ ಗರ ತಿರುಗುತ್ತಿತ್ತು....



-೧-
ಕತ್ತಲಿನ ಭಯದಲ್ಲಿಯೇ ಅನ್ನಪೂರ್ಣ ಬೆಳುಕು ಚೆಲ್ಲುತ್ತಿದ್ದ ದೀಪವನ್ನು ಮತ್ತೆ ತದೇಕ ಚಿತ್ತವಾಗಿ ನೋಡಲಾರ೦ಭಿಸಿದಳು....ಕ ದೀಪದಲ್ಲಿನ ಬೆಳಕು ಈಗ ಮೆಲ್ಲ ಮೆಲ್ಲ ಸುತ್ತಾ ಹರಡುತ್ತಾ ಕತ್ತಲನ್ನು ನು೦ಗುತ್ತಿದ್ದ೦ತೆನಿಸಿತು...
ಆಶೆ ಬೆಳಕಾಗಿ ಚೆಲ್ಲುತ್ತಿದೆ ಎನಿಸುತ್ತಲೇ...
ಮನ ಮತ್ತೆ ವಿಚಾರಕ್ಕೆ ತಿರುಗಹತ್ತಿತು...


ನೆನಪಿನ ಸರಣಿ ಮತ್ತೆ ಮುಂದು ವರೆಯಿತು.....


"ಅನ್ನು ನೀನೇಕೆ ಕೆಲಸಕ್ಕೆ ಸೇರಬಾರದು "
"ಏಕೆ ಅನು ನೀನು ದುಡಿಯುತ್ತಿರುವದು ನಮಮ್ಮಿಬ್ಬರಿಗೆ ಸಾಲದೇ?"
"ಹಾಗಲ್ಲ ಅನ್ನು ನಿನಗೂ ಹೊರ ಪ್ರಪಂಚದ ಸಂಪರ್ಕವಿರಬೇಕು ... ಸಾಮಾಜಿಕ ಸಂಪರ್ಕ ಒಳ್ಳೆಯದು ... ಜೊತೆಗೆ ಆರ್ಥಿಕ ಸ್ವಾಯುತ್ತತೆ ಹೆಣ್ಣಿಗೆ ಅವಶ್ಯ ಸಹಾ.....ಗಂಡನಿಗೆ ಪೂರ್ತಿ ಅಲವತ್ತಿಕೊಂಡ ಜೀವನ... ಮುಂದೆ... ನಾನೇನಾದರೂ ನಿನ್ನ ಒಂಟಿ ಬಿಟ್ಟು ಹೋಗಬೇಕಾದ..."
"ಛೀ ಬಿಡ್ತು ಎನ್ನಿ... ನಿಮಗೂ ಏನಾಗೋಲ್ಲ..... ನನಗೂ ಏನಾಗೋಲ್ಲ.....ನನಗೆ ಯಾವ ಸಾಮಾಜಿಕ ಸಂಪರ್ಕವು ಬೇಡ.. ಆರ್ಥಿಕ ಸ್ವಾಯುತ್ತತೆಯು ಬೇಡ.... ನೀವಿದ್ದರೆ ಸಾಕು..." ಎಂದು ಅವನ ಬಾಯಲ್ಲಿ ಕೈ ಇಟ್ಟು ನುಡಿದ್ದದ್ದು ನೆನಪಿಗೆ ಸಳ್ಳೇ೦ದು ಬಂತು....
ಅಂದು ಅವನ ಮಾತು ಕೇಳಿ ಕೆಲಸಕ್ಕೆ ಸೇರಿದ್ದರೆ... ಕೆಲಸದ ನಡುವೆ... ಮಿತ್ರರ ಸಂಪರ್ಕದ ನಡುವೆ ....
ಇಂದಿನ ಅವನ ಅಗಲಿಕೆಯಲ್ಲಿನ ಈ ಒಂಟಿತನ ಇಷ್ಟೊಂದು ಕಾಡುತ್ತಿರಲಿಲ್ಲವೇನೋ ಎನಿಸಿತು......
ಇಗಲೂ ಕಾಲ ಮಿಂಚಿಲ್ಲ.... ಇನ್ನು ಮುಂದೆಯೂ... ಕೆಲಸಕ್ಕೆ ಸೇರಿ ಅವರ ಮನಸ್ಸಿನಂತೆ ನಡೆದು ಈ ಒಂಟಿತನದ ಹಾದಿಯನ್ನು ಮರೆಯಬಹುದು......ಎನ್ನಿಸಹತ್ತಿತು..
ಮಧ್ಯೆ ಮೊನ್ನೆ ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ಇವರ ಮೇಲಧಿಕಾರಿ ಕಿರಣ ದಂಪತಿಗಳು- ಇವರನ್ನು ಕೊಂಡಾಡುತ್ತಾ..." ಮೇಡಂ ನೀವು ಕೆಲಸಕ್ಕೆ ಸೇರಿ..ನಿಮ್ಮ ದುಖ ಮರೆಯಲು ಇಡು ಒಂದು ದಾರಿ... ಜೊತೆಗೆ ಸ್ವಲ್ಪ ಸಂಪಾದನೆಯು ಆಗುತ್ತೆ... ಯೋಚಿಸಿ ... ನಿಮಗೆ ನನ್ನ ಸಲಹೆ ಸೂಕ್ತ ಎನಿಸಿದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ " ಎಂದದ್ದು ನೆನಪಿಗೆ ಸುಳಿಯಿತು..
ಕಿರಣ ದಂಪತಿಗಳನ್ನು ಅನು ಸದಾ ಹೊಗಳುತ್ತಿದ್ದುದು ಮತ್ತು ಅವರ ಸಹಾಯದ ಗುಣವನ್ನೂ
ಕೊಂಡಾಡುತ್ತಿದ್ದು ಆ ಕ್ಷಣ ನೆನಪಾಗಿತ್ತು...
ತಾನು ಕೆಲಸಕ್ಕೆ ಸೇರಬೇಕು ಎನ್ನುವ ತುಡಿತ ಬಲವಾಗತೊಡಗಿತು....
ತಾನು ಕೆಲಸಕ್ಕೆ ಸೇರಿದರೆ ಅತ್ತೆ -ಮಾವ ಖಂಡಿತ ಬಂದು ಜೊತೆಯಲ್ಲಿರುತ್ತಾರೆ....

-೨-
ಅನಾಥ ಮಗುವನ್ನು ದತ್ತು ತೆಗೆದುಕೊಂಡಿದ್ದರೆ??....
ಎಂಬ ವಿಷಯ ತಲೆಗೆ ಬಂದದ್ದನ್ನು ಮತ್ತೆ ನೆನಸುತ್ತಲೇ ಅನ್ನಪೂರ್ಣಾಳ ಮನ ಮತ್ತೆ ಯೋಚಿಸತೊಡಗಿತು....
ಅನಾಥ ಮಗುವನ್ನು ಇಗಲೂ ತಂದು ಸಾಕಬಹುದು...
ಇವರು ಮಾಡಿದ ಆಸ್ತಿಯಲ್ಲಿ ಮಗುವೊಂದನ್ನು ಸಾಕಿ ಸಲುಹಬಹುದೆನಿಸಹತ್ತಿತು..
ಆ ಮಗುವ ಲಾಲನೆ ಪಾಲನೆಯಲ್ಲಿ ...ಒಂಟಿತನದ ಮುಂದಿನ ಬದುಕು ಸ್ವಲ್ಪ ಹಗುರವಾಗಬಹುದು....
ನಲವತ್ತರ ನಾನು ಅರವತ್ತಾಗುವಲ್ಲಿ ಮಗು ಇಪ್ಪತ್ತರದ್ದಾಗಿ ನನ್ನ ಮುದಿಕಾಲಕ್ಕೆ ಆಸರವಾಗಳು ಬಹುದು....
ಅತ್ತೆಮಾವರ ಜೊತೆ ಮಗುವ ಲಾಲನೆ ಪಾಲನೆಗೇ ಜೊತೆಯೂ ಆಗಬಹುದ೦ತೆನಿಸಿ ಮನ ಮುದವ೦ತೆನಿಸಿತು...
ದೀಪದ ಬೆಳಕಲ್ಲಿ ಈಗ ಕತ್ತಲೆ ಕಾದಿಮೆಯಾಗುತ್ತಿದೆ ಎನಿಸಹತ್ತಿತ್ತು....

-೩-
ಮತ್ತೆ ಯೋಚನೆ ಭೂತಕ್ಕೆ ತಿರುಗಿತು.....
ಅಂದು ಮನೆಯಿಂದ ದೂರದಲ್ಲಿ ..ಇಬ್ಬರು ಸಂಜೆ ವಿಹಾರಕ್ಕೆ ಮನೆಯ ದೂರದಲ್ಲಿರುವ ಉದ್ಯಾನವನದಲ್ಲಿ ತಿರುಗುತ್ತಿದ್ದಾಗ ವೃಧ್ದರ ತಂಡವೊಂದು ಮೋಜಿನಿಂದ ಆಟವಾಡುತ್ತಿದ್ದರು...... ಮಧ್ಯವಯಸ್ಕ ದಂಪತಿಗಳು ಅವರೊಡನೆ ಮೋಜಿನಲ್ಲಿ ನಿರತರಾಗಿದ್ದು ಅವರನ್ನೆಲ್ಲಾ ಆಟಕ್ಕೆ ಹುರಿದು೦ಬಿಸುತ್ತಿದ್ದು ಕಂಡಿತು....
"ಅನು ಇವರೆಲ್ಲಾ ಯಾರು"
" ಅನ್ನು ಆ ದಂಪತಿಗಳು ಪಕ್ಕದ ಕಾರ್ಖಾನೆ ಮಾಲೀಕರು...ನಮ್ಮ ಹಾಗೆ ಮಕ್ಕಳಿಲ್ಲ... ಅವರು ಒಂದು ವ್ರುಧ್ಧಾಶ್ರಮ ನಡೆಸುತ್ತಿದ್ದಾರೆ.. ವಾರಾ೦ತ್ಯದಲ್ಲಿ ಅವರು ಎಲ್ಲರೊಡನೆ ಸೇರಿ ಸಮಯ ಕಳೆಯುತ್ತಾರೆ... ಕೆಲೋವೊಮ್ಮೆ .... ಹೀಗೂ ಹೊರ ಪ್ರವಾಸಕ್ಕೂ ಬರುತ್ತಾರೆ..."
"ಹೌದಾ!!...ನಿಜಕ್ಕೂ ಒಳ್ಳೆ ಕೆಲಸ"
" ಹೌದು ಅನ್ನು ನಾವು ಒಂದಿಷ್ಟು ಹಣ ಮಾಡಿದ ಮೇಲೆ ಹೀಗೆ ಒಂದು ವ್ರುಧ್ಧಾಶ್ರಮಕ್ಕೆ ಸೇರಿ ಬಿಡುವಾ....ಮುಪ್ಪಲ್ಲಿ ಎಲ್ಲರೊಡನೆ ಹೀಗೆ ಇರುವದು ಮಜವಲ್ಲವೇ...."
"ಹೌದು ನಿಜ ಅನು ಇಗಲೇ ಸೇರಿ ಬಿಡುವಾ ಈಗ ಅವರ ಸೇವೆ ಮಾಡುತ್ತಾ ಇರುವಾ...ಮುಪ್ಪಲ್ಲಿ ನಮಗೆ ಯಾರೋ ಆಸರೆ ಆಗುತ್ತಾರೆ..ಅಲ್ಲವಾ..."
ಅಂದು ಹೇಳಿದ್ದು ಪೂರ್ತಿಗ೦ಭೀರವಾಗಿಲ್ಲದಿದ್ದರೂ ಮನದ ಮೂಲೆಯಲ್ಲೇನು ತುಡಿತವಿತ್ತು ಎಂದು ಇಂದು ಅನ್ನಿಸುತಿದೆ .....
ಗಂಡ ಸಂಪಾದಿಸಿದ ಹಣದಲ್ಲಿ ಅದನ್ನು ಇಂದು ಸಾಕಾರಮಾಡಿಕೊಳ್ಳಬಹುದೆನಿಸಹತ್ತಿತು....
ಜೊತೆಗೆ ತಾನು ಕೆಲಸ ಮಾಡುತ್ತಿದ್ದರೆ .......
ಆ ಹಣದಿಂದ ಇನ್ನೂ ಹೆಚ್ಚಿನ ಸಾರ್ಥಕತೆ ಇಂತಹುವುಗಳಲ್ಲಿ ಹೊಂದಬಹುದಲ್ಲವೇ.....
ಬೆಳಸಿದ ಮಕ್ಕಳು ಮುಪ್ಪಿನಲ್ಲಿ ನೋಡದಿದ್ದರೂ ಇ೦ತಹ ಕಾರ್ಯಗಳು ಮುಂದೊ೦ದು ದಿನ ಬದುಕಿಗೆ ಆಸರೆಯಾಗಬಹುದಲ್ಲವೇ...

ಈಗ ದೀಪದ ಬೆಳಕು ಮನೆಯಲ್ಲಿನ ಕತ್ತಲೆ ಓಡಿಸಿದ೦ತೆನಿಸಹತ್ತಿತ್ತು.....
-೪-
ಕತ್ತಲ ಬಗ್ಗೆ ಯೋಚಿಸುವಾಗ ಅನುಗೆ ಆ ಘಟನೆ ನೆನಪಾಗದೆ ಇರದು.....
ಅಂದು ಸಂಜೆ ಭಾರೀ ಗುಡುಗು... ಸಿಡಿಲು.....
ಅನು ಅಂದು ಆಫಿಸಿನಿಂದ ಇನ್ನು ಬಂದಿರಲಿಲ್ಲ.....
ಗಾಳಿ ಮಳೆ ಗುಡುಗು ಸಿಡಿಲು ಜೋರಾಗಿ..... ವಿಧ್ಯುತ್ ಬಂದಾಗಿತ್ತು....ಮನೆ ಕತ್ತಲು ಗವ್ವೆನಿಸಹತ್ತಿತು... ಸ೦ಜೆ ರಾತ್ರಿಗೆ ಸರಿದು ...ಅನು ಇನ್ನು ಬರದೆ...ಅವನ ಫೋನ್ ಇರದೇ.... ಮನವನ್ನ ಭಯವಾವರಿಸಿತ್ತು....ಮೇಣಬತ್ತಿ ಹಚ್ಚಲು ತಡಕಾಡಿ ಸಿಗದೇ ದೇವರ ಮನೆಯ ದೀಪದಲ್ಲಿಯೇ ಮನೆಯಲ್ಲಿ ಹೆದರಿ ಮುದ್ದೆಯಾಗಿದ್ದಳು ಅನ್ನಪೂರ್ಣಾ..
ಬಾಗಿಲು ತಡಬಡ ಬಡೆದ ಶಬ್ದಕ್ಕೆ ಭಯದಿಂದಲೇ ದೇವರ ಮನೆಯಿಂದ ಹೊರತು ಬಾಗಿಲು ತೆರೆದಿದ್ದ ಅವಳು ಅನುವನ್ನ ನೋಡುತ್ತಲೇ ...ಅವನನ್ನು ಜೋರಾಗಿ ಆಪ್ಪಿ ಅಳುತ್ತಾ..
" ಅನು ಏಕೆ ತಡ? ಫೋನ್ ಏಕೆ ಮಾಡಲಿಲ್ಲ? ಮನೆಯೆಲ್ಲಾ ಕತ್ತಲು ...ಮಳೆ... ಗುಡುಗು... ಸಿಡಿಲು.. ಮಿಂಚು... ನನಗೆ ಎಸ್ತ್ತೊಂದು ಭಯ ಆಗಿತ್ತು ಗೊತ್ತಾ???"
ಅವಳನ್ನು ಒಂದು ಕೈಯಲ್ಲಿ ಬಳಸಿ ಜೋರಾಗಿ ಅಪ್ಪಿ, ಇನ್ನೊಂದು ಕೈಯಲ್ಲಿ ತಲೆ ನೇವರಿಸುತ್ತಾ "ಅನ್ನು ಹೀಗೆ ಭಯ ಪಟ್ಟರೆ ಹೇಗೆ ಆಫೀಸಿನಿಂದ ಹೊರಟ ನನಗೆ.. ಬಸ್ಸ ಸಿಗದೇ... ಆಟೋ ಸಿಗದೇ... ಮೊಬಿಲ್ ಸಂಪರ್ಕ ಬಂದ ಆಗಿ... ಯಾರದೋ ಕಾರಲ್ಲಿ ಬೇಡಿ ಸಹಾಯ ಪಡೆದು ಇಲ್ಲಿಗೆ ಬಂದೆ..ಕ್ಷಮಿಸು... ಆದರೆ ನೀನು ಹೀಗೆ ಹೆದರಿದರೆ ಹೇಗೆ .... ನಾನೆ ಇಲ್ಲವಾದರೆ ಇನ್ನು ಹೇಗೆ ?...."
ಅವನ ಬಾಯಿಗೆ ಕೈ ಇಟ್ಟು " ಛೀ ಹಾಗೆ ಹೇಳಬೇಡಿ" ಎಂದಳು.
" ಅನ್ನು ಹೀಗೆ ಹೆದರಿದರೆ ಹೇಗೆ... ಬದುಕನ್ನು ಎದುರಿಸಬೇಕು... ಎಂಥ ಕತ್ತಲು ಬಂದರು ಮೆಟ್ಟಿ ನಿಲ್ಲುವ ಛಲವಿರಬೇಕು... ನಾನಿಲ್ಲ ಎಂದರು ನೀನು ಬಾಳಿ ತೋರಿಸಬೇಕು... ಹೀಗೆ ಎದೆಗು೦ದಬಾರದು..." ಎಂದೆಲ್ಲಾ ಸಂತೈಸಿದ್ದು ನೆನಪಿಗೆ ಬರಹತ್ತಿತ್ತು....


ಆ ಮಾತೆಲ್ಲಾ ನೆನಪಾದಂತೆ ಅನ್ನಪೂರ್ಣಾಳ ಮನ ಗಟ್ಟಿಯಾದನ್ತೆನಿಸಿತು... ದೀಪದ ಬೆಳಕು ಪ್ರಕಾರವಾಗಿ... ಮನೆಯ ಕತ್ತಲು... ಮನದ ಭಯವು...ಇಲ್ಲವಾದ೦ತೆನಿಸಿ ಮುಂದಿನ ದಾರಿ ಸ್ಪಷ್ಟವೆನಿಸತೊಡಗಿತು...


......ಮುಕ್ತಾಯ ಅಲ್ಲ ಪ್ರಾರ೦ಭ........

ಅನ್ನಪೂರ್ಣಳ ಮನ ಈಗ ದೀಪದ ಜ್ಯೋತಿಯಲ್ಲಿ ಬೆಳಕಾಗಿತ್ತು... ಮನೆ-ಮನದಲ್ಲಿ ಆವರಿಸಿದ್ದ ಕತ್ತಲೆ ಓಡಿದ೦ತೆನಿಸಿತು....
ಅವಳ ನಿರ್ಧಾರಗಟ್ಟಿಯಾಗಿತ್ತು. ಬೆಳಿಗ್ಗೆ ಎದ್ದವಳೇ ಕಿರಣ ದಂಪತಿಗಳನ್ನು ಕಂಡು ಕೆಲಸವೊಂದಕ್ಕೆ ಸೇರುವದು...ಅತ್ತೆ-ಮಾವರನ್ನು ಜೊತೆಗೆ ಕರೆದುಕೊಂಡು ತ೦ದಿಟ್ಟುಕೊಳ್ಳುವದು... ಆಮೇಲೆ ಅವರೊಡನೆ ಅನಾಥಾಶ್ರಮಕ್ಕೆ ಹೋಗಿ ಮಗುವೊಂದನ್ನು ದತ್ತು ಪಡೆದು ಬೆಳೆಸುವದು...
ಸಮಯ ಸಿಕ್ಕಾಗ ವ್ರುಧ್ಧಾಶ್ರಮದಲ್ಲಿ ತನು -ಮನ-ಧನಗಳ ಸೇವೆ ಸಲ್ಲಿಸಿ ಬದುಕ ಸಾರ್ಥಕಪಡಿಸಿಕೊಳ್ಳುವ ಕಾಯಕಕ್ಕೆ ತೊಡುಗುವದು...
ಈಗ ಮನ ಶೂನ್ಯದಿ೦ದ ಪರಿಪೂರ್ಣದೆಡೆಗೆ ಸಾಗುತ್ತಿದೆ ಎನಿಸಹತ್ತಿತ್ತು..
ಮನದ ಮೂಲೆಯಲ್ಲೋ ಸುಶ್ರಾ ವ್ಯವಾಗಿ ....

"ಸೂರ್ಯನಿಲ್ಲದಿದ್ದರೇನು ??
ಹಣತೆ ಬೆಳಕ ನೀಡದೇ.......?

ಜಗವ ಬೆಳಗದಿದ್ದರೇನು?
ಮನೆಯ ಬೆಳಗಲಾಗದೇ...?

ಮನಕೆ ಮನವು ಇಲ್ಲದಿದ್ದರೇನು?
ಮನವೇ ಮನಕೆ ಆಗದೆ?"




Posted by ಸೀತಾರಾಮ. ಕೆ. / SITARAM.K (noreply@blogger.com) on October 11, 2011 09:40 AM· permalink

ಹಕ್ಕಿಗೆ ಚೆಲ್ಲಾಟ -ಚಿಟ್ಟೆಗೆ ಪ್ರಾಣ ಸಂಕಟ

(ಚಿತ್ರ ಕೃಪೆ - ಕೆ ಶಿವೂ -ಛಾಯಾ ಕನ್ನಡಿ ಅಂಕಣದ ಒಡೆಯರು )



ಅಷಿಪ್ರಿನಿಯಾದ ಹಸಿವೆಗೆ ಚಿಟ್ಟೆ ಸಿಕ್ಕಿತ್ತು......

ಹೊಂಚಿ ಹಾಕಿದ ಬೇಟೆ ತಿನ್ನೋ ಗಮ್ಮತ್ತು....

ತಪ್ಪಿಸಿ ಹಾರಲು ಅವಿರತದ ಹೋರಾಟ..
ಸುತ್ತಮುತ್ತೆಲ್ಲಾ ಚದುರಿದ್ದು ಬಣ್ಣ ಓಕುಳಿಯಾಟ...

ರೆಕ್ಕೆಗಂಟಿದ ವರ್ಣ ಹುಡಿಯಾ ಚೆಲ್ಲಾಟ...
ತಂದಿತ್ತುದು ಪ್ರಾಣ ಸಂಕಟ....

ದೂರದಲ್ಲೆಲೋ ಕ್ಯಾಮರ ಕಣ್ಣಿನ ನೋಟ....
ಜುಮಾಯಿಸಿ ತೆಗೆದುದು ವರ್ಣ ಪಟ....

ನನ್ನ ಪ್ರಾಣದ ಜೊತೆಯಾಟ.....
ಒಬ್ಬರಿಗೆ ಹಬ್ಬದೂಟ...
ಇನ್ನೊಬ್ಬರಿಗೆ ಬಹುಮಾನಕ್ಕೆ ಚಿತ್ರಪಟ....
ನೋಡಿ ವಾ ಎನ್ನುವ ಕಂಗಳಿಗೆ ರಸದೂಟ....
ಕೆಲವು ಕವಿಗಳ ಕಾವ್ಯಕ್ಕೆ ಸ್ಫೂರ್ತಿಯ ಪಟ ....

Posted by ಸೀತಾರಾಮ. ಕೆ. / SITARAM.K (noreply@blogger.com) on October 11, 2011 09:39 AM· permalink

ಸಿಟ್ಯಾಕೆ ಸಿಡುಕ್ಯಾಕೆ ನನ ಮ್ಯಾಲೆ ಗೆಳತಿ

ಸಿಟ್ಯಾಕೆ ಸಿಡುಕ್ಯಾಕೆ ನನ ಮ್ಯಾಲೆ ಗೆಳತಿ

ನೀ ಮೌನವಾದರೆ ನನ್ನ ಮಾತುಗಳಿಗೇನು ಬೆಲೆ...

ಚಂದಾದ ಆ ಮುಖದಲ್ಲಿ ಕೋಪದ ಗೆರೆಯೇಕೆ

ಹುಣ್ಣಿಮೆಯ ಚಂದ್ರನಲಿ ಕಪ್ಪನೆ ಕಲೆಯಿದ್ದಂತೆ..

 

ಅರಳು ಹುರಿದಂತೆ ಪಟಪಟನೆ ಮಾತನಾಡುವ ನೀನು

 

ಮುಂದೆ ಓದಿ...

Posted by Jayanth Ramachar on October 11, 2011 09:23 AM· permalink

ಹೂ.. ಕೆನ್ನೆಗಳ ಮೇಲೆ..



ಕಣ್ಣು
ಬಯಸಿದ..
ಹೃದಯ ಪೂಜಿಸಿದ..

ಈ..
ಹೂ..
ಕೆನ್ನೆಗಳ ಮೇಲೆ..
ಬಿಸಿಯುಸಿರ ರಂಗೇರಿಸಿ..

ನಾ..
ಕಟ್ಟಿ ..
ಕೊಡಲೇನೆ  ನಲ್ಲೆ..
ನಿನ್ನ..
ಕತ್ತಿನ  ಮೇಲೆ..
ನನ್ನ ..
ಸಿಹಿ ಮುತ್ತುಗಳ ಮಾಲೆ ?...


Posted by ಸಿಮೆಂಟು ಮರಳಿನ ಮಧ್ಯೆ (kash531@gmail.com) on October 11, 2011 09:22 AM· permalink

ಭಯ....( ಕಥೆ)

ಎಲ್ಲಿ ನೋಡಿದರೂ ರಕ್ತದ ಕಲೆಗಳು...

ಮಚ್ಚಿನಿಂದ ರಕ್ತದ ಹನಿಗಳು ತೊಟ್ಟಿಕ್ಕುತ್ತಿವೆ...

ಮಚ್ಚು ಹಿಡಿದ ವ್ಯಕ್ತಿಯ ಬಟ್ಟೆಯ ಮೇಲೆಲ್ಲಾ ರಕ್ತದ ಕಲೆಗಳು...

ಮಚ್ಚಿನಿಂದ ಕಚಕಚನೆ ಕತ್ತರಿಸುತ್ತಿದ್ದಾನೆ..ಆದರೂ ಅವನ ಮುಖದಲ್ಲಿ ಯಾವುದೇ ಭಾವನೆ ಗಳು ಇರಲಿಲ್ಲ...

 

ಮುಂದೆ ಓದಿ...

Posted by Jayanth Ramachar on October 11, 2011 09:21 AM· permalink

ಸ್ಹ್ಱೂಪಾ

ಶೄ೦ಗಾರವಿಲ್ಲದ ಜೀವನ ವನಕ್ಕೆ ಸಮಾನ ಅಲ್ವೆ

 

Posted by sudhakarkrishna on October 11, 2011 09:05 AM· permalink

ಕಿಟ್ಟ

ಯಾರನ್ನು ಎಷ್ತೇ ಹೊಗಳಿ ಕೊಟ್ಟರೂ ಪಟ್ಟ 

ಕೊನೆಗೆ ಹೇರೋದು ಚಟ್ಟ

ಇದನ್ನು ತಿಳದೋನಿಗಿಲ್ಲ ಬುದ್ಧಿ ಮಟ್ಟ

ಇದನ್ನ ಹೇಳಿದೋನೆ ಕಿಲಾಡಿ ಕಿಟ್ಟ 

 

Posted by sudhakarkrishna on October 11, 2011 08:59 AM· permalink

ನೀ

ನೀ ಪ್ರೀತಿಸದಿದ್ದರು 

ನೀನಿರುವೆ ಮನದಲ್ಲಿ

 ಸಾಯುವ ತನಕವಾದರು

 ನಾ ಕಾಯುವೆ.....

ನೀ ಹೇಳುವ ತನಕ ...
 

 

Posted by sudhakarkrishna on October 11, 2011 08:37 AM· permalink

"ಭಾರತದಲ್ಲಿ ಭ್ರಷ್ಟಾಚಾರ" ಕುರಿತು ಜಸ್ಟೀಸ್ ಸಂತೋಶ್ ಹೆಗ್ಡೆಯವರಿಂದ ಉಪನ್ಯಾಸ

ಮೈಸೂರಿನ ವಿಸ್ಮಯ ಪ್ರಕಾಶನವು ಅಕ್ಟೋಬರ್ 13ರಂದು "ಭ್ರಷ್ಟಾಚಾರವೆಂಬ ರೋಗವು: ಮನುಷ್ಯರೆಂಬ ನಾವು" ಕೃತಿಯನ್ನು ಲೋಕಾರ್ಪಣೆ ಮಾಡಲಿದೆ. ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಂಸ್ಥಾಪಕರು ಹಾಗೂ ಕರ್ನಾಟಕವನ್ನು ಭ್ರಷ್ಟಾಚಾರಮುಕ್ತಗೊಳಿಸಬೇಕೆಂದು ಹೋರಾಡುತ್ತಿರುವ ನಾಯಕರಲ್ಲಿ ಮುಂಚೂಣಿಯಲ್ಲಿರುವ ಡಾ.ಆರ್.ಬಾಲಸುಬ್ರಹ್ಮಣ್ಯಂರವರು ಈ ಕೃತಿಯನ್ನು ರಚಿಸಿದ್ದಾರೆ. ಕರ್ನಾಟಕದ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿ ಅಪಾರ ಜನಮನ್ನಣೆ ಗಳಿಸಿರುವ ಜಸ್ಟೀಸ್ ಸಂತೋಶ್ ಹೆಗ್ಡೆಯವರು ಪುಸ್ತಕ ಬಿಡುಗಡೆಗೊಳಿಸಿ "ಭಾರತದಲ್ಲಿ ಭ್ರಷ್ಟಾಚಾರ" ಕುರಿತು ಉಪನ್ಯಾಸ ನೀಡಲಿದ್ದಾರೆ.

 

ಮುಂದೆ ಓದಿ...

Posted by shashikannada on October 11, 2011 07:45 AM· permalink

"ಸಂಪೂರ್ಣ ಶರಣಾಗತಿ"-ಒಂದು ವಿಶಿಷ್ಟ ಅನುಭವ!!

1994 ರಲ್ಲಿ ದಾಂಡೇಲಿಯ ಸಮೀಪದ ಅಂಬಿಕಾ ನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ "ಸಿದ್ಧ ಸಮಾಧಿ ಯೋಗದ"
ಹತ್ತು ದಿನಗಳ ತರಬೇತಿ ಪಡೆದು, ಬೆಳಗಾವಿ ಬಳಿಯ 'ಸೊಗಲ ಶ್ರೀ ಕ್ಷೇತ್ರ'ದಲ್ಲಿ ಮೂರು ದಿನಗಳ  A.M.C.ಯಲ್ಲಿ (Advanced meditation course) ಭಾಗ ವಹಿಸಿದ್ದೆ.ಎರಡನೇ ದಿನ ಗುರುಗಳು ಅಲ್ಲೇ ಹತ್ತಿರವಿದ್ದ ಬೆಟ್ಟವೊಂದಕ್ಕೆ ಕರೆದೊಯ್ದರು.ಬೆಟ್ಟ ಹತ್ತುವ ಮೊದಲು ಕಣ್ಣಿಗೆ ಬಟ್ಟೆ ಕಟ್ಟಲಾಯಿತು .ಮನಸ್ಸಿನಲ್ಲಿ"ಓಂ ನಮೋ ಭಗವತೇ ವಾಸುದೇವಾಯ" ಎಂದು ಜಪ ಮಾಡುತ್ತಾ ಬೆಟ್ಟ ಹತ್ತುವಂತೆ ಹೇಳಿದರು.ಕಲ್ಲು ಮುಳ್ಳು ಗಳಿಂದ ಆವೃತವಾದ ಬೆಟ್ಟವನ್ನು ಹತ್ತಿಸುವ ಸಂಪೂರ್ಣ ಜವಾಬ್ದಾರಿಯನ್ನು ಜೊತೆಯಲ್ಲಿದ್ದ ಇಬ್ಬರಿಗೆ ವಹಿಸಿ,ಭಗವನ್ನಾಮ ಸ್ಮರಣೆ ಮಾಡುತ್ತಾ,ನಿಶ್ಚಿಂತೆಯಿಂದ ಸುಮಾರು ದೊಡ್ಡದಾಗಿದ್ದ ಬೆಟ್ಟವನ್ನು ಒಂದು ಗಂಟೆಯ ಅವಧಿಯಲ್ಲಿ ಅನಾಯಾಸವಾಗಿ ಹತ್ತಿದ್ದೆವು.ನಮ್ಮ ಜೊತೆಯಲ್ಲಿ ಮಂಡಿ ನೋವಿನಿದ ನರಳುತ್ತಿದ್ದ ಒಂದಿಬ್ಬರು ವಯೋ ವೃದ್ಧರೂ ಇದ್ದರು.ಅವರೂ ಯಾವ ತೊಂದರೆ ಇಲ್ಲದೆ ಬೆಟ್ಟವನ್ನು ಹತ್ತಿದ್ದು ನಮಗೆಲ್ಲಾ ಅಚ್ಚರಿ ತಂದಿತ್ತು!ಹತ್ತುವ ಮೊದಲು ಇಷ್ಟು ದೊಡ್ಡ ಬೆಟ್ಟವನ್ನು ಕಲ್ಲು ಮುಳ್ಳುಗಳ ಹಾದಿಯಲ್ಲಿ ಹತ್ತಲು ಸಾಧ್ಯವೇ ಎಂದು ಅನುಮಾನ ಪಟ್ಟಿದ್ದ ನಮಗೆ, ಬೆಟ್ಟದ ತುದಿ ತಲುಪಿ ಕಣ್ಣಿಗೆ ಕಟ್ಟಿದ್ದ ಬಟ್ಟೆ ತೆಗೆದು ಕೆಳಗೆ ನೋಡಿದಾಗ ನಾವು ನಿಜಕ್ಕೂ ಇಷ್ಟು ದೊಡ್ಡ ಬೆಟ್ಟವನ್ನು ,ಸ್ವಲ್ಪವೂ ಕಷ್ಟವಿಲ್ಲದೆ ಹತ್ತಿದ್ದು ಅದ್ಭುತವೆನಿಸಿತ್ತು.ಅದಕ್ಕೆ ಗುರುಗಳು 'ಭಗವನ್ನಾಮ ಸ್ಮರಣೆ ಮತ್ತು ಸಂಪೂರ್ಣ ಶರಣಾಗತಿಯಿಂದ ಜೀವನದಲ್ಲಿ ಎಂತಹ ಕಠಿಣ ಹಾದಿಯನ್ನಾದರೂ ಕ್ರಮಿಸಬಹುದು ಎನ್ನುವುದಕ್ಕೆ ಇಂದಿನ ನಿಮ್ಮ ಈ ಅನುಭವವೇ ಉದಾಹರಣೆ'ಎಂದರು.ಬೆಟ್ಟದ ತುದಿಯಲ್ಲಿ ಅಸ್ತಮಿಸುತ್ತಿದ್ದ ಕೆಂಪಾದ ಸೂರ್ಯನನ್ನು ನೋಡುತ್ತಾ ನಿಂತಿದ್ದೆವು.ಬೆಟ್ಟದ ಮೇಲಿನ ತಣ್ಣನೆ ಗಾಳಿ ಹಿತವಾಗಿ ಬೀಸಿ ಆ ವಿಶಿಷ್ಟ ಸಂಜೆ ಮತ್ತಷ್ಟು ವಿಶೇಷ ವೆನಿಸುವಂತೆ ಮಾಡಿತ್ತು

Posted by Dr.D.T.Krishna Murthy. (noreply@blogger.com) on October 11, 2011 07:45 AM· permalink

ಕನ್ವಡವನ್ನು android ಮೊಬೈಲ್ನಲ್ಲಿ ಹೇಗೆ ಓದೋದು ಮತ್ತು ಬರಿಯೋದು.

ಸೂಪರ್.. ಕೊನೆಗೂ ಸಂಪದದಲ್ಲಿ ಮೊಬೈಲ್ನಿಂದ ನೇರವಾಗಿ ಬರಿತಾ ಇದೀನಿ.  ಅಂದ್ರೆ ಸಂಪದದಲ್ಲಿ ನನ್ನ ಮೊಬೈಲ್ ಬ್ಲಾಗಿಂಗ್ ಶುರು.

ವಿಶಯ ಏನು ಬರಿಬೇಕು ಅಂತ ಯೋಚುಸ್ತಾ ಇದ್ದಾಗ.. ಕನ್ನನಡವನ್ನ ಮೊಬೈಲ್ನಲ್ಲ್ಲಿ  ಹೇಗೆ  ಓದೋದು ಮತ್ತು ಬರಿಯೋದು ಅನ್ನೋದರ ಬಗ್ಗೇನೆ ಬರಿಯೋಣ ಅಂತ ಈ ಬರಹ.

ನಾನು ಅಂಡ್ರಾಯ್ಡ ಮೊಬೈಲ್ ಬಳಸಕ್ಕೆ ಶುರು  ಮಾಡಿ ಸುಮಾರು  ಒಂದೆರಡು ತಿಂಗಳುಗಳೆ ಆಯ್ತು..  
ನನ್  ಮೊಬೈಲ್ ತಗೊಂಡ ಮೊದಮೊದಲು ಹುಡಕಿದ್ದೇ ಕನ್ನಡ ಹೇಗೆ ಬರಿಯೋದು , ಓದೋದು ಅಂತ.

ಒಪೆರ ಮಿನಿ ಬ್ರವ್ಸರ್ನಲ್ಲಿ 'ಮಾತ್ರ' ಕನ್ನಡ ಹೇಗೆ 'ಓದೋದು ' ಅಂತ ಗೊತ್ತಾದ್ರೂ  … ಹೇಗೆ  'ಬರಿಯೋದು' ಅಂತ ಮಾತ್ರ ಗೊತ್ತಾಗಿರ್ಲಿಲ್ಲ. ಇನ್ ಫ್ಯಾಕ್ಟ್ , ಆಂಡ್ರಾಯ್ಡ್ ನಲ್ಲಿ ಕನ್ನಡದ ಯುನಿಕೋಡ್ ಫಾಂಟ್ ಸಪೋರ್ಟ ಇರಲೇ  ಇಲ್ಲ.  ಈಗ್ಲೂ ಇಲ್ಲ.

 

ಮುಂದೆ ಓದಿ...

Posted by savithru on October 11, 2011 05:33 AM· permalink

ಕಂದ


 


ಬಾಳ ಸಿಹಿಯ ತಂದಿಟ್ಟ ಸಿರಿಯೆ


ಬೆಳಕಿನಲಿ ಬೆಳೆಸುವೆನು ನಗುಚೆಲ್ಲು ನೀ


ನಿನ್ನ ಒಳದನಿ ಕೇಳಿಸುವುದೆನ್ನಂತರಂಗಕೆ


ತೋಳತೊಟ್ಟಿಲಲಿ ತೂಗುವೆನು ನಾನು


ಬರುವುದು ಕಂದ ಹಾಯಾದ ನಿದ್ದೆ


 


ಜಗದನಿಧಿ ಅರಳುತಿರುವ ಬೆಳಕೆ


ಹಿಗ್ಗಿ ನಲಿದಾಡುತ ನೀಡುವೆ ವಾತ್ಸಲ್ಯಧಾರೆ


ಸುರಿಸುವೆ ಒಲವ ಅಮೃತಧಾರೆ


ಮಡಿಲಲ್ಲಿ ತಟ್ಟಿ ಮಲಗಿಸುವೆನು ನಾನು


ಮಾಡುತಿರು ಕಂದ ಹಾಯಾಗಿ ನಿದ್ದೆ


 


ಚೈತನ್ಯದ ಚಿಲುಮೆ ಜೇನಹನಿಯೆ


ಸಂಭ್ರಮದ ಬೀಜ ಬಿತ್ತಿದೆನ್ನಲಿ


ನಿನ್ನಮ್ಮನಿಗಿಂತ ನನ್ನಮ್ಮ ಹೆಚ್ಚು


ಎಲ್ಲರಿಗು ನೀನು ಅಚ್ಚುಮೆಚ್ಚು


ತೂಗುವೆನು ತೊಟ್ಟಿಲನು ನಾನು


ಸಾಗಲಿ ಕಂದ ಸವಿನಿದ್ದೆ


 

Posted by Premashri on October 11, 2011 04:16 AM· permalink

ಕಾರಂತರ ಬಾಳ್ವೆಯೇ ಬೆಳಕು

ಕಾರಂತರ ಬಾಳ್ವೆಯೇ ಬೆಳಕು ಪುಸ್ತಕ ಓದುತ್ತಿರುವೆ. ಬದುಕು, ಹುಟ್ಟು ಸಾವುಗಳು, ಜೀವನವನ್ನು ಎದುರಿಸಬೇಕಾದ ಕ್ರಮ ಮುಂತಾದವುಗಳ ಕುರಿತಾದ ಲೇಖನಗಳಿರುವ ಪುಸ್ತಕವಿದು.

ಹಟ್ಟಿ ಹರಳಿನಂತಹ ವಾಕ್ಯಗಳನ್ನು ಓದುತ್ತ ಕಾರಂತರನ್ನು ಮೆಚ್ಚಿದ್ದೇ ಹೆಚ್ಚು ಓದಿದ್ದು ಕಡಿಮೆ ಎನ್ನಿಸತೊಡಗಿತು.

ದೇವರು, ಧರ್ಮ, ಸಂಪ್ರದಾಯಗಳ ಬಗ್ಗೆ ಬರೆಯುವುದಕ್ಕೆ, ಚರ್ಚಿಸುವುದಕ್ಕೆ ನನಗೆ ಆಸಕ್ತಿ ಇತ್ತು. ಇವುಗಳ ವಿರುದ್ಧ ಮಾತನಾಡುವಾಗ ಬಳಸುತ್ತಿದ್ದ ಚಿಂತನೆಗಳು, ಕಟ್ಟಿಕೊಳ್ಳುತ್ತಿದ್ದ ವಾದ ಸರಣಿ, ಅವುಗಳಿಗೆ ಭೂಮಿಕೆಯಾಗಿರುತ್ತಿದ್ದ ನನ್ನ ಗ್ರಹಿಕೆ ಇವು ತೀರಾ ಭಿನ್ನವಾಗಿರುವಂತಹ ಪುಸ್ತಕ 'ಬಾಳ್ವೆಯೇ ಬೆಳಕು'. ನಾನು ಪರವಾಗಿದ್ದೇನೆ ಎಂದು ತಿಳಿದ ವಿಚಾರ ಧಾರೆಯೇ ನನಗೆಷ್ಟು ಅಪರಿಚಿತ, ನಾನು ವಿರೋಧ ಮಾಡುತ್ತಿದ್ದ ಚಿಂತನೆ ನಾನು ತಿಳಿದದ್ದಕ್ಕಿಂತ ಎಷ್ಟು ಭಿನ್ನ ಎಂಬ ಜಿಜ್ಞಾಸೆ ಹುಟ್ಟು ಹಾಕುವಂತೆ  ಮಾಡಿದೆ.

ಸತ್ಯಕ್ಕೆ ಹತ್ತಿರವಾಗಿರುವುದಕ್ಕೆ ಬರಹಗಾರನಿಗೆ ಬರವಣಿಗೆಯೇ ದೊಡ್ಡ ಅಡ್ಡಿಯಾಗುವುದೇ- ಮೊದಲಾದ ಪ್ರಶ್ನೆಗಳು ಈ ಓದಿನಿಂದ ಟಿಸಿಲೊಡೆಯುತ್ತಿವೆ.

 

ಮುಂದೆ ಓದಿ...

Posted by uniquesupri on October 11, 2011 04:10 AM· permalink

ನೋಟ್ ಬುಕ್ಕಿನ ಕೊನೆಯ ಪೇಜು

                                                            (ಚಿತ್ರ ಕೃಪೆ: ಅಂತರ್ಜಾಲ)
'ನೋಟ್ ಬುಕ್ಕಿನ ಕೊನೆಯ ಪೇಜು'  ಇದೊಂದು ತೀರ ಪರಿಚಯದ, ಆದರೆ ಅದೇನೋ ವಿಶಿಷ್ಟ ಎನಿಸುವ ಶಬ್ದ. ಆ ಪೇಜಿನ ಮೇಲೆ  ಅದೊಂಥರದ ಮೋಹ, ಮಮತೆ ಎಲ್ಲ. ! ಪಟ್ಟಿ-ಪುಸ್ತಕಗಳೆಂದ ಮೇಲೆ ಅದಕ್ಕೊಂದು ಮೊದಲನೆಯ ಹಾಗೂ ಕೊನೆಯ ಪೇಜುಗಳೆಂದು ಇರಲೇ ಬೇಕು. ಎಲ್ಲದಕ್ಕೂ ಒಂದು ಆದಿ ಹಾಗು ಅಂತ್ಯ ಎಂದು ಇರುವಂತೆ! ಮೊದಲ ಪೇಜಿನಲ್ಲಿ ಆದಷ್ಟು ಸುಂದರವಾಗಿ ಹೆಸರನ್ನೂ ತರಗತಿಯನ್ನೂ ರೋಲ್ ನಂಬರ್ ಗಳನ್ನೆಲ್ಲ ಬರೆಯುತ್ತಿದ್ದೆವು  ಅಲ್ವಾ? ನಾವು ನಮ್ಮ ಶಾಲಾ ದಿನಗಳಲ್ಲಿ. ಕೊನೆಗೆ ಕಾಲೇಜಿನ ಮೆಟ್ಟಿಲೇರುತ್ತಿದ್ದಂತೆ ಆ ಹೆಸರು ಬರೆಯುವ ಹುಮ್ಮಸ್ಸು ಮಾಸುತ್ತ ಸಾಗುತ್ತದೆ. ಥೇಟ್ ನೆನಪುಗಳಂತೆ. !ಕೊನೆಗೆ ಕಾಲೇಜಿನಲ್ಲಿ ನೋಟ್ ಪುಸ್ತಕ ಒಯ್ಯುವುದೇ ಒಂದು ರಗಳೆ ಎನಿಸಿಬಿಡುತ್ತದೆ. (ಅದಕ್ಕೆ ನಮ್ಮ ಹುಡುಗರು folding front page ಇರುವ ನೋಟ್ ಪುಸ್ತಕಗಳನ್ನು ಸುರುಳಿ ಸುತ್ತಿ ಒಯ್ಯುತ್ತಾರೆ.) ನೋಡಿ ಇಂಥ ಹರಟೆ ಹೊಡೆಯುವಾಗಲೇ ನನ್ನ ರೈಲು ಹಳಿ ತಪ್ಪುತ್ತದೆ. ಇರಲಿ ಬಿಡಿ ! ಓಡಿಸಿದ್ದೇನೆ ಓದಿ.
ವಿ.ಸೂ: ಇಲ್ಲಿ ಯಾರದ್ದೇ ಮನ ನೋಯಿಸುವ ಉದ್ದೇಶವಿಲ್ಲ .ಇಲ್ಲಿನ ಹಾಸ್ಯವನ್ನಷ್ಟೇ ಸ್ವೀಕರಿಸಬೇಕಾಗಿ ವಿನಂತಿ .

ನಾನು ಜನರನ್ನು ಎರಡೇ ಎರಡು ವಿಧವಾಗಿ ವಿಂಗಡಿಸುತ್ತೇನೆ.
 ೧. ನೋಟ್ ಬುಕ್ಕಿನ ಕೊನೆಯ ಪೇಜಿನಲ್ಲಿ ಬರೆದವರು (ಬರೆಯುವವರು )
೨. ಬರೆಯದೇ ಇರುವವರು.(ಇದ್ದವರು )

ನಿಮ್ಮ ಶಾಲಾ ಕಾಲೇಜು ದಿನಗಳನ್ನು  ಒಮ್ಮೆ ನೆನಪಿಸಿ ಕೊಳ್ಳಿ ಅದರಲ್ಲಿ ಕೊನೆಯ ಪೇಜಿನದೊಂದು ಅಧ್ಯಾಯ ಇದ್ದೇ ಇರುತ್ತದೆ. ಇನ್ನು ಕೆಲವರು 'ನಾನು ಏನು ಬರೆಯುತ್ತಿರಲಿಲ್ಲ ಮಾರಾಯ್ರೆ' ಎನ್ನಬಹುದು. ನಿಮ್ಮ ಬಗ್ಗೆ ಏನೂ ಹೇಳಲೂ ಆಗುವುದಿಲ್ಲ. ಸಿಕ್ಕಾಪಟ್ಟೆ ಪಂಕ್ಚುವಲ್ ನೀವು..! ಈ ಲೇಖನವನ್ನು ಓದುತ್ತ ಹೋಗಿ ನೀವು ಏನನ್ನು ಮಿಸ್ ಮಾಡಿಕೊಂಡಿದ್ದೀರಿ ಎಂಬುದು ತಿಳಿಯುತ್ತದೆ.! 


ಮನದಲ್ಲಿ ಮುಚ್ಚಿಟ್ಟ ಭಾವನೆಗಳಿಗೆ ಕನ್ನಡಿ ಹಿಡಿಯುತ್ತವೆ ಈ ಕೊನೆಯ ಪೇಜು. ನಮ್ಮ ಮನಸ್ಸಿಗೆ ಪ್ರಬುದ್ಧತೆ ಬರುವುದನ್ನು ಸಲೀಸಾಗಿ ಈ ಕೊನೆಯ ಪೇಜು ಹೇಳಿ ಬಿಡುತ್ತದೆ. ಬೇಕಿದ್ದರೆ ನಿಮ್ಮ ಶಾಲಾ ದಿನಗಳ ಹಾಗೂ ಕಾಲೇಜಿನ ದಿನಗಳ ನೋಟ್ ಬುಕ್ ತೆಗೆದು ನೋಡಿ. ವ್ಯತ್ಯಾಸ ಕಂಡು ಬರುತ್ತದೆ.
ನೋಟ್ ಬುಕ್ಕಿನ ಕೊನೆಯ ಪೇಜನ್ನು ನೋಡಿ ನೀವು ಎಂಥವರು ಎಂಬುದನ್ನು ಹೇಳಬಹುದಂತೆ. ! 

ನನಗಂತೂ ಅದೇನೋ ವಿಚಿತ್ರ ಪ್ರೀತಿ ಈ ಹಾಳೆಯ ಮೇಲೆ. ನೋಟ್ ಬುಕ್ ರದ್ದಿಗೆ ಕೊಡುವಾಗ ಕೊನೆಯ ಹಾಳೆಯನ್ನು ಹರಿದು ಕೊಡುವುದೂ ಇತ್ತು. ಅದೇ ಹಾಳೆಗಳ ಸಂಗ್ರಹ ಮತ್ತೊಂದು ನೋಟ್ ಬುಕ್ ಆಗುವಷ್ಟಿದೆ..!


ಅದೆಷ್ಟೋ ಸಲ ಅಂದು ಕೊಂಡಿದ್ದೆ, ಈ ಸಲ ಕೊನೆಯ ಪೇಜಿನಲ್ಲಿ ಬರೆಯಲೇ ಬಾರದು ಎಂದು. ಆದರೆ ಹಾಳಾದ ಪೆನ್ನು ಕೆಲವೊಮ್ಮೆ ಬರೆಯುವುದೇ ಇಲ್ಲ ನೋಡಿ, ಆಗ ಗೀಚಲು ಹಿಂಬದಿಯ ಪೇಜೇ ಬೇಕು..! ಅದೊಂದು ನೆವದಲ್ಲಿ ಶುರುವಾದ ಬರೆಹ ಅದೊಂದು ಪೇಜು ಮುಗಿದು ಅದರ ಹಿಂಬದಿಯ ಪೇಜಿಗೆ ಬರುತ್ತಿತ್ತು.! ಅದೆಷ್ಟೋ ಸಲ ಕೊನೆಯ ಪೇಜುಗಳ ಸಂಖ್ಯೆಯೇ ನೋಟ್ಸ್ ಬರೆದ ಪುಟಗಳಿಗಿಂತ ಜಾಸ್ತಿ ಆದದ್ದೂ  ಇತ್ತು.!


ಇನ್ನು ಈ ಕೊನೆಯ ಪೇಜಿನಿಂದ ಶುರುವಾದ ಅದೆಷ್ಟೋ love storyಗಳಿವೆ ಮಾರಾಯ್ರೆ. ಆಗಾಗ ನೋಟ್ ಬುಕ್ ತೆಗೆದುಕೊಂಡು ಹೋಗುತ್ತಿದ್ದ ಹುಡುಗ i love you ಎಂದು ಬರೆದು ಕೊಟ್ಟಿದ್ದನಂತೆ ನನ್ನ ಗೆಳತಿ ಒಬ್ಬಳಿಗೆ ಇದೇ  ಕೊನೆಯ ಪೇಜಿನಲ್ಲಿ .! (ಇದೆಲ್ಲ ಮೊಬೈಲ್ ಫೋನ್ ಹಾವಳಿಗಿಂತ ಹಿಂದಿನ ಸುದ್ದಿ. ಈಗೆಲ್ಲ i love you ಎಂದು ಹೇಳಲು ನೋಟ್ ಬುಕ್ಯಾಕೆ ಬೇಕು ಹೇಳಿ? ಪ್ರಪೋಸ್ ಮಾಡೋದ್ರಿಂದ ಹಿಡಿದು ಬ್ರೇಕ್ ಅಪ್ ವರೆಗೂ ಮೆಸ್ಸೇಜಿನಲ್ಲೇ ಆಗೋ ಕಾಲ ಇದು..! ) 


ಸ್ಕೂಲಿನ ದಿನಗಳಲ್ಲಿ ನೋಟ್ ಬುಕ್ ತೆಗೆದುಕೊಂಡು ಹೋದ ಹುಡುಗ ನಿಮ್ಮ ಕೊನೆಯ ಪೇಜಿನಲ್ಲಿ ಚಿತ್ರ ಬರೆದನೋ ಅವನೇನೋ ವಿಶಿಷ್ಟವಾದುದನ್ನು ಹೇಳಲಿದ್ದಾನೆ ಎಂದೇ ಅರ್ಥ..! 'ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ' ... (ಇದನ್ನು ಮುಂದೆ ನಿಮ್ಮ ಮಕ್ಕಳಿಗೆ ಇರಲಿ ಎಂದು ಹೇಳಿದೆ )


ಇನ್ನು ಈ crushಗಳ ಕಥೆ ಕೇಳಿ:  ಹುಡುಗನೊಬ್ಬ ಇಷ್ಟವಾದರೆ ಅವನ ಹೆಸರನ್ನು ಅದ್ಹೇಗೋ ಕದ್ದು ಮುಚ್ಚಿ ಕೊನೆಯ ಪೇಜಿನ ಅಕ್ಷರಗಳ ನಡುವೆ ಬರೆಯುತ್ತಿದ್ದಳು ಹುಡುಗಿ. ಹಾಗೆ ಅಂಥ ಹೆಸರುಗಳ ಬರೆಯಲು ಆ ಹಾಳೆ ಸಾಕಾಗದೆ ಹಿಂದಿನ ಪೇಜಿನಲ್ಲಿ ಶುರುಮಾಡಿದಳಂತೆ..!
ನಾನೂ ನನ್ನ ಹೈಸ್ಕೂಲಿನ ದಿನಗಳಲ್ಲಿ ಕೊನೆಯ ಪೇಜಿನಲ್ಲಿ ಸೌರವ ಗಂಗೂಲಿ ಹೆಸರಿನ ಜೊತೆಗೆ ನನ್ನ ಹೆಸರನ್ನು ಬರೆದಿಡುತ್ತಿದ್ದೆ..!


ಇಂಥದ್ದೇ ಒಂದು ನೈಜ ಘಟನೆ ಕೇಳಿ :
ನಾನು ಕನ್ನಡ ಶಾಲೆಯಲ್ಲಿ ಓದುತ್ತಿರುವಾಗ ಪಕ್ಕದ ಮನೆಯಲ್ಲಿ ಡಿಗ್ರೀ ಕೊನೆಯ ವರ್ಷದಲ್ಲಿದ್ದ ಹುಡುಗನೊಬ್ಬನಿದ್ದ, ನಾನು 'ಮಾಧವಣ್ಣ' ಎಂದೇ ಕರೆಯುತ್ತಿದ್ದೆ. ನಮ್ಮ ಮನೆಗೆ ಕ್ರಿಕೆಟ್ ನೋಡಲು ಬರುತ್ತಿದ್ದ ಪರೀಕ್ಷೆಯಿದ್ದರೂ.! ಹೆಸರಿಗೆ ಮಾತ್ರ ನೋಟ್ ಬುಕ್ ಕೈಯಲ್ಲಿ, ಗಮನವೆಲ್ಲ ಟಿವಿಯಲ್ಲಿಯೇ.! ಒಮ್ಮೆ ಸುಮ್ಮನೆ ಅವನ ನೋಟ್ ಬುಕ್ ತೆಗೆದು ನೋಡಿದ್ದೆ. ಹಿಂಬದಿಯ ಪೇಜಿನಲ್ಲಿ ಎಲ್ಲಿ ನೋಡಿದರಲ್ಲಿ shamadhav .. shamadhav ಎಂದು ಬರೆದಿರುತ್ತಿತ್ತು. ಕೊನೆಗೆ ತಿಳಿದದ್ದು, ಅವನು shama (ಶಮಾ) ಎನ್ನುವ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂದು ..!


ನಾವು satellite communication ಪಾಠ ಮಾಡುವ ಸರ್ ಒಬ್ಬರ ಕುರಿತು  pappu can't teach saala ಎಂದು remix ಹಾಡೊಂದನ್ನು ಕೊನೆಯ ಪೇಜಿನಲ್ಲಿ ಬರೆದೂ ಆಗಿತ್ತು. ಈ ಹಾಡು ಭಯಂಕರ ಪ್ರಸಿದ್ಧಿಯಾಗಿತ್ತು ಒಮ್ಮೆ.!


ಇನ್ನು ಕೆಲವರಿರುತ್ತಾರೆ ನೋಡಿ, ಮೊದಲ ಪೇಜಿನಿಂದ ನೋಟ್ಸ್ ಬರೆಯಲು ಶುರು ಮಾಡಿ, ಮಾರ್ಜಿನ್ ಕೂಡ ಬಿಡದೆ. ಕೊನೆಯ ಪೇಜಿನ ಕೊನೆಯ ಸಾಲಿನ ವರೆಗೂ ನೋಟ್ಸ್ ಬರೆಯುವಷ್ಟು ನಿಷ್ಠಾವಂತರು.! ಅವರನ್ನು ಅದ್ಹೇಗೆ ನಮ್ಮ ಸಾಲಿನಲ್ಲಿ ಕೂರಿಸಿಕೊಳ್ಳುವುದು ನೀವೇ ಹೇಳಿ ? 


ಕೆಲವರು ನೋಟ್ ಬುಕ್ಕಿಗೆ ಕವರ್ ಹಾಕಿ. ಹಿಂಬದಿ ಮುಂಬದಿ ತಿಳಿಯದೆ ಎರಡೂ ಕಡೆ ನೋಟ್ಸ್ ಬರೆಯುವ ಪುಣ್ಯಾತ್ಮರೂ ಇದ್ದಾರೆ .! ಅವರದು ಕೊನೆ ಮೊದಲು ಎಲ್ಲೆಲ್ಲೋ ಇರುವ ನೋಟ್ ಬುಕ್ .! ಅಥವಾ ಕೊನೆ ಮೊದಲು ಇದ್ದೂ ಇಲ್ಲದಂತಿರುವ ನೋಟ್ ಬುಕ್ ..!

ಈ ಕೊನೆಯ ಪೇಜಿನಲ್ಲಿ ಬರೆಯುವ ಚಟ assignment ನೋಟ್ ಬುಕ್ ಕೂಡ ಬಿಡಲು ಬಿಡುವುದಿಲ್ಲ..!  assignment ಅದನ್ನು ಅದೇನೋ ನೆನಪಾಗಿ ಹಿಂಬದಿಯ ಪೇಜಿನಲ್ಲಿ ಬರೆದು ಬಿಡುತ್ತೇವೆ. ಅದ್ಯಾವುದೋ ಹಾಡು, ಸಾಲು, ಮೆಸ್ಸೇಜು ಹೀಗೆ ಏನೋ ಒಂದು ನಂತರ ಲೆಕ್ಚರರ್ ಕೇಳಿದಾಗ ಅದನ್ನು ಅಂಟಿಸಿ ತಿಳಿಯದಂತೆ ಮಾಡಲು ಹರ ಹರಿ ಸಾಹಸ ಮಾಡಿದ್ದೂ ಇದೆ .! ಈ ಲೆಕ್ಚರರ್ ಗಳಿಗೂ ಹಿಂಬದಿಯ ಪೇಜು ಓದುವ ಘೀಳು ಇದೆ. ನಂತರ ಕ್ಲಾಸಲ್ಲಿ ಬಂದು ಸುಮ್ಮನೆ ಮರ್ಯಾದೆ ಹರಾಜು ಮಾಡಿಬಿಡುತ್ತಾರೆ ಮಾರಾಯ್ರೆ!

ಹಿಂಬದಿಯ ಪೇಜಿನಲ್ಲಿ ಏನಿರುತ್ತದೆ ?
* ಕೆಲವರು ಹಿಂಬದಿಯ ಪೇಜಿನಲ್ಲಿ ವಿವಿಧ ರೀತಿಯ ಅಕ್ಷರ ವಿನ್ಯಾಸವನ್ನ್ನು practice ಮಾಡುತ್ತಾರೆ. ಕೆಲವರು ಎದುರಿಗೆ ಪಾಠ ಮಾಡುವವರ ಚಿತ್ರ ಬರೆಯುತ್ತಾರೆ .! ಹೊರಗಡೆ ಕಿಟಕಿಯಲ್ಲಿ ಕಂಡಿದ್ದನ್ನೆಲ್ಲ ಚಿತ್ರಿಸುತ್ತಾರೆ. !

ತುಂಬಾ ಜನರು ಅವರವರ signature ಹಾಕಿರುತ್ತಾರೆ. ಮಾರ್ಕ್ಸ್ ಕಮ್ಮಿ ಬಂದರೆ ಇರಲಿ ಎಂದು, ಅಪ್ಪನ ಸಹಿ ನಕಲು ಮಾಡಲೂ ಕಲಿಯುವುದು ಈ ಹಿಂಬದಿಯ ಪೇಜಲ್ಲೇ..!

*ಹುಡುಗಿಯರ ನೋಟ್ ಬುಕ್ ಹಿಂಬದಿಯ ಪೇಜಿನಲ್ಲಿ ರಂಗೋಲಿ, ಬಂಡಿ ಆಟ (ನಾಲ್ಕು ಮನೆಮಾಡಿ ಆಡುತ್ತಾರೆ), ಹಾಡುಗಳ ಸಾಲುಗಳು, ಸಹಿ, ಪ್ರೀತಿಯ ಹುಡುಗನ ಹೆಸರು (ಅಸ್ಪಷ್ಟವಾಗಿ), ಓಂ, ಶ್ರೀ, 687  ಇತ್ಯಾದಿ ಇತ್ಯಾದಿ ಕಂಡು ಬರುತ್ತವೆ..!



*ಇನ್ನು ಹಲವರಿಗೆ ಹಿಂಬದಿಯ ಪೇಜಿನ ಮೇಲೆ ಫೋನ್ ನಂಬರ್ಗಳ ಬರೆದಿಡುವ ಚಟ.! ಅದೂ ಎಲ್ಲೂ ಯಾರ ನಂಬರ್ ಎಂದು ಹೆಸರು ಬರೆಯದೆ..! ಯಾವ್ಯಾವುದೋ ನಂಬರಿಗೆ ಫೋನ್ ಮಾಡಿ ಪೇಚಾಡುತ್ತಾರೆ ಆಮೇಲೆ!

* ಇಬ್ಬರು ಹುಡುಗಿಯರು ಬೆಂಚ್ ಮೇಟ್ಸ್, ಎದುರುಗಡೆ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಸರ್ ಪಾಠ ಮಾಡುತ್ತಿದ್ದರೂ ಇವರು ಅವರ ಕ್ಲಾಸಿನ chocolate boy ಲುಕ್ಕಿನ ಹುಡುಗನ ಹೊಸ hair style ಕುರಿತು ಮಾತನಾಡುತ್ತಲೇ ಇರುತ್ತಾರೆ. ಅದೂ ಕೊನೆಯ ಪೇಜಿನ ಮೂಲೆಯಲ್ಲಿ ಬರೆದು ..!



*ಇನ್ನು ಕೆಲವರಿಗೆ ಲಾಸ್ಟ್ ಪೇಜ್ ಎಂದರೆ ಅದೊಂದುತರಹದ ರಫ್ ನೋಟ್ ಬುಕ್ ..! ಎಲ್ಲ ವಿಷಯಗಳ ಕಲಸು ಮೇಲೋಗರ ಅಲ್ಲಿ ..!


* ಕೆಲವರು 'ಫಾರ್ಮುಲ' ಬರೆದಿಟ್ಟರೆ ಮತ್ತು ಕೆಲವರು' ಫಾರ್ಮುಲ ಒನ್' ಕಾರ್ ಚಿತ್ರ ಬಿಡಿಸುತ್ತಾರೆ..!


*ಹೈಸ್ಕೂಲಿನ ದಿನಗಳಲ್ಲಿ ಹಿಂಬದಿಯ ಪೇಜಿನಲ್ಲಿ ಭಾರತದ ನಕ್ಷೆ ಇರುತ್ತಿತ್ತು. ಅದೇನು ದೇಶಪ್ರೇಮ ಎನ್ನಬೇಡಿ.ಕೆಲವೊಮ್ಮೆ ಕಾಪಿ ಹೊಡೆಯಲು ಬೇಕಾಗುತ್ತದೆ ಎಂದು .!


*quick referenceಗೆ ಬಳಕೆಯಾಗುವುದು ಈ ಕೊನೆಯ ಪೇಜೆ! ವೆಬ್ ಸೈಟ್ ಗಳ ಹೆಸರುಗಳು, ಮೊಬೈಲ್ ಸೆಟ್ಟಿಂಗ್ ಕೋಡ್ ಇವೆಲ್ಲ ಬರೆಯಲು ಕೊನೆಯ ಪೇಜಿಗೆ ಶರಣಾಗುತ್ತೇವೆ..!


ಕೊನೆಯ ಪೇಜಿನೊಂದಿಗೆ ಸೇರಿಹೋಗಿರುವ ನೆನಪುಗಳು:
ನಮಗೋರ್ವರು ಸರ್ ಇದ್ದರು, in particular cases ಎಂದು ಪ್ರತಿ ವಾಕ್ಯದ ಹಿಂದೆ ಸೇರಿಸುವ ಚಟ ಅವರಿಗೆ.! ಒಮ್ಮೆ ನಾನು ನನ್ನ ಗೆಳತಿ ಒಂದು ಕ್ಲಾಸಿನಲ್ಲಿ ಅವರು ಎಷ್ಟು ಬಾರಿ ಹೇಳಬಹುದೆಂದು ಲೆಕ್ಕ ಹಾಕಲು ಶುರು ಮಾಡಿದೆವು, ಅವರು in particular cases ಎಂದು ಹೇಳಿದಾಗಲೆಲ್ಲ ಒಂದು ಗೀಟು ಹಾಕುತ್ತ ಸಾಗಿದ್ದು ನಮ್ಮ ಕೆಲಸ ! ಕೊನೆಗೆ ಕ್ಲಾಸು ಮುಗಿದು ಲೆಕ್ಕ ಮಾಡಿದರೆ ಬರೋಬ್ಬರಿ 147 ಗೀಟುಗಳು..! ಗೀಟು ಹಾಕಿದ್ದು ಹಿಂಬದಿಯ ಪೇಜಿನಲ್ಲೇ ಎಂದು ಬೇರೆ ಹೇಳಬೇಕಿಲ್ಲ ಅಲ್ಲವೆ ? !


ಕ್ಲಾಸು ನಡೆಯುತ್ತಿರುವಾಗಲೇ ಅದೇನೋ ಒಂದು ವಿಷಯ ಜ್ಞಾಪಕಕ್ಕೆ ಬಂದು ಬಿಡುತ್ತದೆ. (ಅದ್ಯಾಕೆ ಮಾರಾಯ್ರೆ ಕ್ಲಾಸು ನಡೆಯುವಾಗಲೇ ಈ ಅಸಂಬದ್ಧ ವಿಷಯಗಳು ಜ್ಞಾಪಕಕ್ಕೆ ಬರುವುದು?) ಕೊನೆಯ ಬೆಂಚಿನ ಹುಡುಗಿಗೆ ವಿಷಯ ಹೇಳಬೇಕು, ಅದೂ ತುರ್ತಾಗಿ, ಆಗ ನೋಡಿ ಮತ್ತೆ ಹೆಲ್ಪಿಗೆ ಬರುವುದು ಇದೇ ಕೊನೆಯ ಪೇಜು..! ಅದರ ಮೂಲೆಯೊಂದನ್ನು ಹರಿದು ಅದರಲ್ಲಿ ವಿಷಯವ ಬರೆದು ಹಿಂಬದಿಗೆ ಪಾಸು ಮಾಡುವುದು. ಈ ಹುಡುಗಿಯರಿಗೆ ಸಿಕ್ಕಾಪಟ್ಟೆ ಕುತೂಹಲ. ಅದೇನು ಬರೆದಿದೆ ಎಂದು ಓದಿಯೇ ಹಿಂದೆ ಪಾಸ್ ಮಾಡುವುದು..! 
ಒಮ್ಮೆ ಹೀಗಾಗಿತ್ತು:


ನಮಗೆ ಒಂದೇ ಶರ್ಟ್ ಒಂದು ವಾರ ಹಾಕುವ ಸರ್ ಒಬ್ಬರಿದ್ದರು. ಅವರ ಕುರಿತು ಆ ದಿನ ಅವರದ್ದೇ ಕ್ಲಾಸಿನಲ್ಲಿ  ನಾವು (ನಾನು & ಬೆಂಚ್ ಮೇಟ್) ಬರೆದಿದ್ದು ಹೀಗೆ "RDX ಚೆಸ್ ಬೋರ್ಡ್ ಶರ್ಟು ಸತತ 6ನೆಯ ದಿನದ ಯಶಸ್ವೀ ಪ್ರದರ್ಶನದತ್ತ..!" ಇಡೀ ಕ್ಲಾಸಿಗೆ ಅದರ ಸುದ್ದಿಯಾಗಿ,ಅವೈರೂ ತಿಳಿದು..   ಕ್ಲಾಸನ್ನೇ ಸಸ್ಪೆಂಡ್ ಮಾಡಿದ್ದರು ! ಇಂಥ ನೆನಪುಗಳು ಕೊನೆಯ ಪೇಜಿನಲ್ಲಿ ಸೇರಿಕೊಂಡಿವೆ ..!

ಒಬ್ಬ ಸ್ನೇಹಿತನಿದ್ದ ಅವನು autograph ಬರೆದಿದ್ದು ಕೊನೆಯ ಪೇಜಿನಲ್ಲೇ. ಕೇಳಿದರೆ ಹೇಳುತ್ತಿದ್ದ, 'ಜೀವನದ ಕೊನೆಯವರೆಗೂ ಇರಲಿ ಸ್ನೇಹ' ಎಂದು ..! ಅವರವರ ಭಾವಕ್ಕೆ ಅಲ್ಲವೇ ?

ನಾನು, ನನ್ನ ಒಂದಿಷ್ಟು ಕೊನೆಯ ಪೇಜಿನ ಸಾಲುಗಳ ಕುರಿತೇ ಒಂದು ಲೇಖನವನ್ನು ಬರೆದಿದ್ದೆ ಅಲೆಮಾರಿ ಸಾಲುಗಳು ಎಂದು.
ಹೀಗೆ ಸಾಗುತ್ತದೆ ಕೊನೆಯ 'ಪೇಜಾಯಣ'..!


ನೋಡಿ.. ಹುಡುಗಿಗೆ ಹೇಳಲಾಗದ ಮಾತುಗಳನ್ನೆಲ್ಲ ಈ ಕೊನೆಯ ಪೇಜು ಕೇಳಿಸಿಕೊಳ್ಳುತ್ತದೆ, ಸಾಂತ್ವನ ಹೇಳುತ್ತದೆ. ಆ ಪೇಜಿನೊಂದಿಗೆ ಒಂದು ಬಗೆಯ ಅವಿನಾಭಾವ ಸಂಬಂಧವಿದೆ. ನೀವು ಒಮ್ಮೆ ನಿಮ್ಮ ಹಳೆಯ ನೋಟ್ ಬುಕ್ ತೆಗೆದು ನೋಡಿ.! ನಿಮ್ಮ ನೆನಪುಗಳ ಸುರುಳಿ ಬಿಚ್ಚುತ್ತದೆ....


ನೋಟ್ ಬುಕ್ ಗಳು ಇರುವವರೆಗೂ ಕೊನೆಯ ಪೇಜುಗಳು ಇರುತ್ತವೆ. ಅಲ್ಲಿ ಅಕ್ಷರಗಳ ಚಿತ್ರಗಳ ಮೆರವಣಿಗೆ ಇರುತ್ತದೆ. 
ಶ್ರೀ ಕೃಷ್ಣ ಪ್ರತಿಯೊಂದು ಯುಗದಲ್ಲೂ ಅವತರಿಸಿದರೆ, ಲಾಸ್ಟ್ ಪೇಜ್ ಪ್ರತಿಯೊಂದು ನೋಟ್ ಬುಕ್ ನಲ್ಲೂ ಅವತರಿಸುತ್ತದೆ ..!
ಎಲ್ಲರೂ ಹೇಳಿ ಬಿಡಿ :ಜೈ 'ಲಾಸ್ಟ್ ಪೇಜ್' ..!
ಹಾಗೆ ಬರಹ ಹೇಗಿದೆ ಎಂದೂ ತಿಳಿಸಿರಿ.


Posted by Soumya. B (noreply@blogger.com) on October 10, 2011 10:33 AM· permalink

ಮನದ ಅಂಗಳದಿ.........೬೦.‘ಕವಿ'ಎಂದರೆ.........

ಇತ್ತೀಚೆಗೆ ನಡೆದ ಒಂದು ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನ್ನನ್ನು ತಮ್ಮ ತಾಲ್ಲೂಕಿನವಳು ಎಂಬ ಅಭಿಮಾನದಿಂದ ಕವಿಗೋಷ್ಠಿಗೆ ಅಧ್ಯಕ್ಷತೆಯನ್ನು ವಹಿಸಲು ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ ಕವನ-ಕವಿಯ ಬಗ್ಗೆ, ಮಾತುಗಳನ್ನು ಆಡುವುದು ಅಗತ್ಯವೆನಿಸಿತು. ಸಾಮಾನ್ಯವಾಗಿ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು, ಅಥವಾ ಅನುಭವವನ್ನು ಕವನವನ್ನಾಗಿಸುವ ಸಂದರ್ಭದಲ್ಲಿ ಬಳಸುವ ಭಾಷೆ, ರಚಿಸುವ ರೀತಿ ಒಬ್ಬೊಬ್ಬರದು ಒಂದೊಂದು ವಿಧವಾಗಿರುತ್ತದೆ. ಕವಿಯ ಈ ವೈಶಿಷ್ಟ್ಯವನ್ನೇ ‘ಶೈಲಿ(style)' ಎನ್ನುವುದರಿಂದ ಈ ಬಗ್ಗೆ ಮಾತನಾಡುವುದೇ ಸೂಕ್ತ ಎಂದುಕೊಂಡು ನನ್ನ ಬಳಿ ಇದ್ದ ಕೆ. ವಿ. ನಾರಾಯಣ ಅವರ ‘ಶೈಲಿಶಾಸ್ತ್ರ' ಎನ್ನುವ ಪುಸ್ತಕದಿಂದ ಕೆಲವು ಅಂಶಗಳನ್ನು ಗುರುತುಮಾಡಿಕೊಂಡೆ:
‘*ಈಗಾಗಲೇ ವಿಮರ್ಶಾ ಪರಂಪರೆಯಲ್ಲಿ ಕವಿಯ ಕೃತಿಗಳನ್ನು ಚರ್ಚಿಸುವಾಗ ಆಯಾ ಕವಿಗಳ ಭಾಷಿಕ ವೈಶಿಷ್ಟ್ಯಗಳನ್ನು ಆಯಾ ಕವಿಗಳ ಶೈಲಿ ಎಂದು ವಿವರಿಸುವುದು ವಾಡಿಕೆಯಿದೆ.
*ಅನುಭವಗಳನ್ನು, ಅವುಗಳ ಪರಿಣಾಮವಾದ ಭಾವತೀವ್ರತೆಯನ್ನು ಕಾವ್ಯವನ್ನಾಗಿ ಪರಿವರ್ತಿಸಲು ಕವಿ ‘ಭಾಷೆಯೊಡನೆ ನಡೆಸುವ ಹೋರಾಟ'ದಿಂದ ಅವನ ಶೈಲಿಯು ರೂಪುಗೊಳ್ಳುತ್ತದೆ. ಯುಕ್ತ ಶೈಲಿ ಎಂದರೆ ಅಭಿವ್ಯಕ್ತಿಯಲ್ಲಿ ಪರಿಪೂರ್ಣತೆ ಎಂದರ್ಥ.
*ಕೃತಿರಚನೆಯನ್ನು ‘ಅನುಭವ ಗ್ರಹಿಕೆ' ಹಾಗೂ ‘ಅನುಭವ ಮಂಡನೆ' ಎಂಬ ಎರಡು ಸ್ತರದಲ್ಲಿ ನೋಡುವ ಸಾಹಿತ್ಯ ತತ್ವಗಳು, ಇವೆರಡರ ಸಮತೋಲನವನ್ನು ಸಾಧಿಸಿದ ಸಂದರ್ಭವನ್ನು ‘ಶೈಲಿ'ನಿರ್ಮಾಣವೆನ್ನುತ್ತಾರೆ. ಅನುಭವ ಮತ್ತು ಶೈಲಿಗಳ ನಡುವೆ ಅವಿನಾಭಾವ ಸಂಬಂಧವಿರುತ್ತದೆ.
*ಸಂಸ್ಕೃತ, ಇಂಗ್ಲಿಷ್.... ಪದಗಳನ್ನು ಬೆರೆಸುವ 'ನುಡಿಬೆರಕೆ'(code mixing)ಯು ಕನ್ನಡ ಕಾವ್ಯಗಳ ಶೈಲಿ ನಿರ್ವಹಿಸುವಲ್ಲಿ ಅನಿವಾರ್ಯ ಅಂಶವಾಗುತ್ತದೆ. ನುಡಿಬೆರಕೆಯ ವೈವಿಧ್ಯತೆಯಿಂದಲೇ ಶೈಲಿಯ ವೈವಿಧ್ಯ ರೂಪುಗೊಂಡಿದೆ.'
ನಾವು ಶಾಲೆಯಲ್ಲಿ ಓದುವಾಗ ‘ಪದ್ಯ'ಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದುದು ಏಕೆಂದು ನೆನಪಿರಬಹುದು. ಅವುಗಳಲ್ಲಿದ್ದ ಗೇಯತೆಯ ಗುಣ ಪದೇಪದೇ ಮನಸ್ಸಿನಲ್ಲಿ ಗುಣಗುಣಿಸುವಂತೆ ಮಾಡಿ ಈಗಲೂ ಅವು ನಮ್ಮ ನೆನಪಿನ ಕೋಶದಲ್ಲಿ ಭದ್ರವಾಗಿ ಉಳಿದಿವೆ. ‘ಪದ್ಯಗಳು ಕಾವ್ಯೇತರ ವಾಞ್ಮಯದಲ್ಲೂ ಬಳಕೆಯಾಗಲು ಎರಡು ಮುಖ್ಯ ಕಾರಣಗಳಿವೆ' ಎಂದು ತಿಳಿಸುತ್ತಾ ಹೀಗೆ ಹೇಳುತ್ತಾರೆ, ‘ಅ) ಪದ್ಯಗಳು ಸಂಕ್ಷಿಪ್ತ ನಿರೂಪಣೆಯನ್ನು ಬಯಸುವುದರಿಂದ ಖಚಿತವಾಗಿಹೇಳುವುದು ಸಾಧ್ಯವಾಗುತ್ತದೆ.
ಆ) ಪದ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸುಲಭ. ಶಿಕ್ಷಣವು ಮೌಖಿಕ ವಿಧಾನವನ್ನು ಅನುಸರಿಸುತ್ತಿದ್ದ ಕಾಲದಲ್ಲಿ ಇಂಥಾ ವಿಧಾನಗಳು ಅತ್ಯಂತ ಉಪಯುಕ್ತವೆನಿಸುತ್ತಿದ್ದಿರಬಹುದು.
ಕುವೆಂಪು ತಮ್ಮ ‘ನೆನಪಿನ ದೋಣಿಯಲ್ಲಿ' ಗೆಳೆಯನೊಬ್ಬನಿಗೆ ಚರಿತ್ರೆಯ ಪಾಠದ ಇಸವಿಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಅನುವಾಗುವಂತೆ ಆ ಇಸವಿಗಳೆಲ್ಲಾ ಬರುವ ಪದ್ಯವೊಂದನ್ನು ಬರೆದು ಕೊಟ್ಟಿದ್ದರಂತೆ ಎಂದು ಹೇಳುತ್ತಾರೆ.'
ಕವಿಗೋಷ್ಟಿಯಲ್ಲಿ ವಾಚಿಸಿದ ಕವನಗಳು ವೈವಿಧ್ಯತೆಯಿಂದ ಕೂಡಿದ್ದವು. ಕನ್ನಡನಾಡು-ನುಡಿಗೆ ಸಂಬಂಧಿಸಿದವು, ರೈತರ ಅನುಭವಗಳು-ಸಮಸ್ಯೆಗಳು, ಸಮಾಜದ ಕುಂದು-ಕೊರತೆಗಳು, ರಾಜಕೀಯ, ಶಿಶುಗೀತೆ, ಪ್ರೀತಿ-ವಿರಹ......ಬಳ್ಳಾರಿಯ ಗಣಿಯ ಧೂಳೂ ವೇದಿಕೆಯನ್ನೇರಿ ಶ್ರೋತೃಗಳನ್ನು ಚಿಂತಿಸುವಂತೆ ಮಾಡಿತು! ಕವನಗಳನ್ನು ಆಲಿಸುತ್ತಾ ಇದ್ದಂತೆಯೇ ಸಮ್ಮೇಳನದ ಅಧ್ಯಕ್ಷರು ಹಂಚಿಕೊಂಡ ಅಭಿಪ್ರಾಯ ಮೌಲ್ಯಯುತವೆನಿಸಿತು,
*‘ರೂಪಕ ಪ್ರತಿಮೆ ಇಲ್ಲದಿದ್ದರೆ ಕವನ ಪಟ್ಟಿಯಾಗುತ್ತದೆ.'
ನೇರ-ನೇರವಾಗಿ ಮುಖಾಮುಖಿಯಾದಂತೆನಿಸುವಂತಿದ್ದ ಕೆಲವು ಕವನಗಳು ಅವರನ್ನು ಹಾಗೆ ಚಿಂತಿಸುವಂತೆ ಮಾಡಿದ್ದವು.
ಕವನ ಎಂದರೆ ಏನು? ಅದು ಗದ್ಯಕ್ಕಿಂತ ಹೇಗೆ ಭಿನ್ನವಾಗಿರುತ್ತದೆ? ಎನ್ನುವುದನ್ನು ಅರ್ಥಮಾಡಿಕೊಳ್ಳದೇ ಬರೆಯಲು ಹೊರಟಾಗ ಉಂಟಾಗುವ ಅಭಾಸದಿಂದ ಕವನವನ್ನು ರಚಿಸುವ ವಿಧಾನವನ್ನೂ ಕಲಿಯುವುದು ಅಗತ್ಯವಿದೆ ಎನಿಸುತ್ತದೆ. ಅದಕ್ಕೆ ಅಧ್ಯಕ್ಷರು ತಿಳಿಸಿದಂತೆ *‘ಶಾಲೆಗಳಲ್ಲಿ ಶಿಕ್ಷಕರು ಮಾರ್ಗದರ್ಶನ ನೀಡಬೇಕು.' ಗದ್ಯದ ಸಾಲುಗಳನ್ನು ಕತ್ತರಿಸಿ ಬರೆದರೆ ಅದೇ ಪದ್ಯವಾಗುತ್ತದೆ ಎಂಬಂಥಾ ಕಲವು ಬಾಲಿಶ ಭಾವನೆಗಳಿಂದ ನಾವು ಹೊರಬರಬೇಕಾಗುತ್ತದೆ ಎನಿಸಬಹುದು ಆದರೆ ಈ ಮೊದಲು ನಾನು ಬರೆದಿದ್ದ ‘ಹಾರ' ಎಂಬ ಕಥೆಯಲ್ಲಿನ ಕವನವೆಂದರೇನೆಂದೇ ಅರಿಯದ ನಾಯಕಿ ತನ್ನ ಜೀವನದ ಕಷ್ಟಗಳಿಂದ ನೊಂದು-ಬೆಂದು, ತನ್ನ ಭಾವನೆಗಳನ್ನು ತನಗರಿವಿಲ್ಲದಂತೆಯೇ ಕವನದ ರೂಪದಲ್ಲಿ ಪ್ರಚುರ ಪಡಿಸುತ್ತಾಳೆ. ‘........ಆದರೂ ಆತನ ಅನುಪಸ್ಥಿತಿ ನೀಡಿದ ಏಕಾಂತ ಅವಳಿಗೆ ತನ್ನೊಳಗನ್ನು ತಾನೇ ಜಾಲಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಆತನ ಸಾಮೀಪ್ಯ ತನ್ನ ಬದುಕಿಗೆ ಸಾರ್ಥಕ್ಯ ನೀಡಿತ್ತೇ ಎನ್ನುವ ಗೊಂದಲದಲ್ಲಿ ನೆನಪುಗಳು ಭೂತವ ಮೀಟಿ ನವೋದಯದ ದಾಟಿ ಹಿಡಿದವು. ಓದೇ ಜೀವಾಳವಾಗಿದ್ದವಳ ಕೈಗೆ ಲೇಖನಿ ಬಂತು. ಖಡ್ಗ ಹಿಡಿದ ‘ಸಮುರೈ'ನಂತೆ ಅವಳು ಬರೆಯುವುದರಲ್ಲಿ ತನ್ನಲ್ಲೇ ತಾನು ಲಯವಾದಳು. ಮನದಲ್ಲಿ ಮೊಳೆದ ನೂರಾರು ಪ್ರಶ್ನೆಗಳು-ಪ್ರಶ್ನೆಗಳಿಗೇ ಹುಟ್ಟು ನೀಡಿದವು. ಭಾವನೆಗಳನ್ನು ಮೆಟ್ಟಿನಿಂತ ವಿಚಾರ ಶಕ್ತಿ ವಿರಾಟರೂಪ ತಾಳಿತು. ಒಂಟಿ ಬದುಕು ಬಯಲಿಗಿಟ್ಟಂತಾಗಿ ಭಂಡಕಣ್ಣುಗಳ ಬೇಟೆಯ ವಸ್ತುವಾದ ಅರಿವಾಗಿ ಬಂಡಾಯಗೊಂಡರೂ ಸಮಸ್ಥಿತಿ ಸಾಧಿಸಿ ನವೋದಯ, ನವ್ಯ, ಬಂಡಾಯಗಳ ಅರಿವೇ ಇಲ್ಲದ ಅವಳು ತನ್ನದೇ ಹಾದಿಯಲ್ಲಿ ಸಾಗಲಾರಂಭಿಸಿದಳು. ‘ಸಂಗೀತದ ಸ್ವರ ಸಾಧನೆಯ ಅರಿವಿಲ್ಲದ ಮಗುವಿನ ಅಳುವಿನಂತೆ ತನ್ನ ಕವನ' ಎಂದುಕೊಂಡಳು.'
‘ಕವಿ ಕೇವಲ ಕವಿಯಲ್ಲ......' ಎನ್ನುವ ಕವನದಲ್ಲಿ ‘ಕವಿ'ಏನೇನೆಲ್ಲಾ ಆಗಿದ್ದಾನೆ ಎನ್ನುವ ಬಗ್ಗೆ ಕೇಳುವಾಗ........
‘ಒಮ್ಮೆ ಒಬ್ಬ ಹುಡುಗಿಯು ಬೇಂದ್ರೆಯವರಿಗೆ ತನ್ನ ಒಂದು ಕವನವನ್ನು ನೀಡಿ, ‘ಕವಿಯಾಗಲು ಎಷ್ಟು ಕವನಗಳನ್ನು ಬರೆಯಬೇಕು?' ಎಂದು ಕೇಳುತ್ತಾಳೆ. ಆಗ ಬೇಂದ್ರೆಯವರು, ‘ಒಂದು ಮಗುವನ್ನು ಪಡೆದ ತಾಯಿಯೂ ತಾಯಿಯೇ, ಒಂದು ಕವನವನ್ನು ಬರೆದರೂ ಕವಿ' ಎಂದು ಹೇಳುತ್ತಾರೆ!' ಎನ್ನುವುದು ನೆನಪಾಯಿತು.
ಮಾತನಾಡಲು ನಿಂತಾಗ ನಾನು ಗುರುತುಮಾಡಿಕೊಂಡಿದ್ದ ಆಂಶಗಳೆಲ್ಲಾ ಪರದೆಯ ಹಿಂದೆ ಸರಿದು ಬೇರೆಯದೇ ಧಾಟಿಯನ್ನು ಹಿಡಿಯಿತು. ನನ್ನೊಳಗಿನ ಪ್ರಾಮಾಣಿಕ ಅನಿಸಿಕೆಗಳೆಲ್ಲವೂ ಶಬ್ದರೂಪ ಪಡೆಯಲು ಹಂಬಲಿಸಿದವು. ಸಮಯದ ಅಭಾವದಿಂದ ಹೇಳಲು ಸಾಧ್ಯವಾದವುಗಳನ್ನು ಹೇಳಿ ಅವಕಾಶ ನೀಡಿದವರಿಗೆ ವಂದಿಸಿದೆ.

Posted by prabhamani nagaraja (noreply@blogger.com) on October 09, 2011 12:14 PM· permalink

ಸಾಲವಿಲ್ಲದ ಮನೆಯ ಸಾಸುವೆ!

       ಚಲೋ ಮಲ್ಲೇಶ್ವರ ಸೀರಿಯಲ್ಲು ಓದುತ್ತಿರುವವರಿಗೆ ಅಂಡಾಂಡ ಬಂಡ ಜ್ಯೋತಿಷಿಗಳ ಬಗ್ಗೆ ತಿಳಿದೇ ಇರುತ್ತದೆ. ಆದರೆ ನಾನೀಗ ಹೇಳ ಹೊರಟಿರುವುದು, ಧರಣಿ ಮಂಡಲ ಮಧ್ಯದೊಳಗೆ, ಕರ್ಣಾಟ ದೇಶದೊಳಿದ್ದ ಭಂಡ-ಗುಂಡನ ಕಥೆಯನ್ನು. ಪುರಾತನ ಸಮಸ್ಯೆಯನ್ನು ಈ ಭಂಡ-ಗುಂಡ ಸ್ವಾಮಿಗಳು ಬಗೆಹರಿಸಿದ ಪರಿಯ ನಾನ್ವಿಂತು ಪೇಳ್ವೆನು, ಕೇಳಿ ಆನಂದಿಸುವಂತಾಗಿರೈ ಸಂಪದಿಗರೇ! ಈ ಕತೆಯನ್ನು ಈ ಮೊದಲು ನೀವು ಬೇರೆಯಲ್ಲಿಯಾದರೂ ಓದಿರಬಹುದು ಅಥವಾ ಕೇಳಿರಬಹುದು; ಇರಲಿ ಇನ್ನು ಮೂಲ ಕಥೆಗೆ ಬರೋಣ, ಅದು ಹೀಗಿದೆ:

 

ಮುಂದೆ ಓದಿ...

Posted by makara on October 09, 2011 09:19 AM· permalink

ಕಾರಂತಜ್ಜನ ನೆನಪುಗಳು

       ಡಾ. ಕೋಟ ಶಿವರಾಮ ಕಾರಂತರು ನಮ್ಮ ನಡುವೆ ಬಾಳಿ ಬದುಕಿದ ಒಂದು ದೈತ್ಯ ಪ್ರತಿಭೆ. ನಡೆದಾಡುವ ವಿಷ್ವವಿದ್ಯಾಲಯ ಎನ್ನುವ ಅನ್ವರ್ಥ ನಾಮಕ್ಕೆ

   ದಿಟವಾಗಿಯು ಅರ್ಹರಾಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಾರಂತರು ಸಾಹಿತ್ಯದಲ್ಲಿ ಕೈಯಾಡಿಸದ ವಿಭಾಗವೇ ಇಲ್ಲವೆನ್ನಬಹುದು ಕತೆ , ಕಾದಂಬರಿ, ನಾಟಕ, ಗೀತರೂಪಕ, ಯಕ್ಷಗಾನ, ಪ್ರವಾಸ ಕಥನ,ಚಿಂತನೆ, ಆತ್ಮಚರಿತ್ರೆ,ಮಕ್ಕಳ ಸಾಹಿತ್ಯ, ಚಿತ್ರಕಲೆ ಇತ್ಯಾದಿ ಪ್ರಕಾರಗಳಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ.
       ಕಡಲ ತಡಿಯ ಭಾರ್ಗವರೆಂದು ಪ್ರಸಿದ್ಧರಾದ ಕಾರಂತರು ಜನಿಸಿದ್ದು ೧೯೦೨ರ ಅಕ್ಟೋಬರ್ ೧೦ರಂದು. ೯೬ ವರ್ಷ ಸಾರ್ಥಕ ಜೀವನ ನಡೆಸಿದ್ದ ಕಾರಂತರು ಮರಣ ಹೊಂದಿದ್ದು ೧೯೯೭ರ ದಶಂಬರ್ ೯ರಂದು. ನುಡಿದಂತೆ ನಡೆದ ಕಾರಂತರು ತಮ್ಮ ಕೃತಿಗಳ ಮೂಲಕ ಇನ್ನೂ ನಮ್ಮ ನಡುವೆ ಜೀವಂತವಾಗಿದ್ದಾರೆ. 

 

ಮುಂದೆ ಓದಿ...

Posted by basho aras on October 09, 2011 08:48 AM· permalink

-ಶೂನ್ಯ- (೦)

ಮದುವೆಯಾಗಿ ಇಲ್ಲಿಗೆ ಆಗಲೇ ೨೦ ವರ್ಷಗಳು ತುಂಬಿದೆ, ತವರನ್ನು ಮುಕ್ಕಾಲು ಮರೆತಾಯ್ತು, ಗಂಡನ ಮನೆಯೇ ಎಲ್ಲಾ. ಬೇಕು ಬೇಡಗಳ ತೀರಿಸುವುದೆಲ್ಲವೂ ಇಲ್ಲಿಯೇ, ನಾನು ಪೂರ್ಣ ಗಂಡ ಮತ್ತು ಈ ಮನೆಯವಳಾಗಿ ಬಿಟ್ಟಿದ್ದೇನೆ. ಅಂದು ಬಂದಾಗ ಎಲ್ಲವೂ ಹೊಸದಾಗಿತ್ತು, ತವರಿನ ಸಿರಿಯೇ ಕಣ್ಣ ಮುಂದಿತ್ತು... ಆದರೆ ಈಗ ಈ ಮನೆಯ ಸಿರಿಯ ಮುಂದೆ ತವರಿನ ಸಿರಿ ಮಾಸಿಹೋಗಿದೆ......

ಎಲ್ಲವೂ ಚೆನ್ನಾಗಿತ್ತು ಆದರೆ ಮದುವೆಯಾಗಿ ಇಷ್ಟು ವರ್ಷಗಳು ಕಳೆದರೂ ನನ್ನದೆಂಬ ಆಸ್ತಿ ಸಂಪಾದಿಸಲೇ ಇಲ್ಲ, ಗಂಡನ ಜೊತೆಗೆ ಅತ್ತೆ ಮಾವ ಮೈದುನಂದಿರು, ನಾದಿನಿಯರು, ತಂಗಿಯರು ಎಲ್ಲರ ಪ್ರೀತಿ ಸಂಪಾದಿಸಿದೆ, ಆದರೆ ಇಲ್ಲಿ ನನ್ನದೇ ಇದು ಎಂದು ಹಕ್ಕು ಚಲಾಯಿಸುವುದಾಗಲಿ, ಪ್ರೀತಿಯಿಂದ ಜೋರುಮಾಡುವುದಕ್ಕಾಗಲಿ ಆಗುತ್ತಿಲ್ಲವಲ್ಲ.... ಅದೇನು ಕೊರತೆಯೋ ಏನೋ ನಾನು ನನ್ನ ಕರುಳ ಕುಡಿ ಕೊಟ್ಟು ಕತ್ತರಿಸಿಕೊಳ್ಳುವಂತಹ ಯಾವುದೇ ಸಂದರ್ಭ ಬರಲೇ ಇಲ್ಲ....

ನಾನು ಸುಮಾರು ೨೦ ವರ್ಷಗಳೇ ಕಾದು ಬಿಟ್ಟೆ... ಅನಾಥ ಮಗುವಿಗಾದರೂ ಆಸರೆ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತೋ ಏನೋ ಅದು ಸಹ ನಾನು ಮಾಡಲೇ ಇಲ್ಲ......... ಈಗ ಯಾಕೋ ಎಲ್ಲವೂ ನನ್ನನ್ನು ತುಂಬಾ ಕಾಡುತ್ತಲಿದೆ ಕಾರಣ ನನ್ನವನ ಇಲ್ಲದಿರುವಿಕೆ..!!!

ಪ್ರತಿ ಮನುಷ್ಯನಿಗೂ ಹೃದಯ ಇರಲೇಬೇಕು... ಪ್ರೀತಿಸೋಕೆ, ಮೆಚ್ಚಿ ಮಾತನಾಡೋಕೆ, ಉಸಿರು ಗಟ್ಟಿಯಾಗಿ ನಿಲ್ಲೋಕೆ, ರಕ್ತ ಹರಿದಾಡೋಕೆ ಎಲ್ಲಕ್ಕೂ ಬೇಕಾದದ್ದು ಹೃದಯ.. ಹಾ!! ಹೃದಯ ಇದೆ ನನ್ನಲ್ಲೂ, ಆದರೆ ಅದು ನಿಶಬ್ಧವಾಗಿದೆ ಏಕೋ ಏನೋ ಕೆಲಸನೇ ಮಾಡ್ತಾ ಇಲ್ಲ ಅನ್ನಿಸ್ತಾ ಇದೆ ಯಾಕೆ ಗೊತ್ತ... ಇತ್ತೀಚೆಗಷ್ಟೆ ನನ್ನವನೇ ಎಂದುಕೊಂಡಿದ್ದ ನನ್ನ ಹೃದಯ ಕಾಣದ ಊರಿಗೆ ತೆರಳಿಬಿಟ್ಟಿದೆ... ಹೃದಯ ಇಷ್ಟೆಲ್ಲಾ ಕಷ್ಟ ಕೊಡುತ್ತೆ ಅಂತ ಗೊತ್ತೇ ಇರಲಿಲ್ಲ... ನನಗೆ ನನ್ನವರು ಎಂಬುವರೇ ಇಲ್ಲದಾಗಿದೆ.

ಇನ್ನು ಪ್ರೀತ್ಸೋ ಗಂಡ ಇರುವಾಗ ಮಕ್ಕಳ ಹಂಗೇಕೆ ಎಂದು ೨೦ ವರ್ಷ ಕಾಲ ಹಾಕಿದೆ ಆದ್ರೆ ಇವತ್ತು ಏಕೋ ಅನಾಥ ಪ್ರಜ್ಞೆ ಕಾಡ್ತಾ ಇದೆ. ಪ್ರೀತ್ಸೋ ಗಂಡ ಇದ್ದಿದ್ದ್ರೆ ಈ ಯೋಚನೆ ಖಂಡಿತಾ ಬರ್ತಾ ಇರಲಿಲ್ಲ... ಆ ಹೃದಯ ಅವರಿಗೆ ಕೈಕೊಡ್ತು ಈಗ ನನ್ನ ಅನಾಥಳನ್ನಾಗಿ ಮಾಡ್ತು...

ತವರು ಮನೆಗೆ ವಾಪಸ್ಸ್ ಹೋಗೋಣ ಎಂದರೆ ಅಲ್ಲಿ ನಾನ್ನಿದ್ದಾಗ ಇದ್ದಂತ ಮನೆಯಂತಿಲ್ಲ ಎಲ್ಲವೂ ಬದಲಾಗಿದೆ. ಅಮ್ಮ ಅಪ್ಪ ತಮ್ಮ ಸ್ವಂತಿಕೆನ ಕಳೆದುಕೊಂಡಿದ್ದಾರೆ. ಅವರೇ ಸಂಪಾದಿಸಿದ ಕೋಟಿಗಟ್ಟಲೆ ಆಸ್ತಿಯಲ್ಲಿ ಮಜ ಮಾಡುವುದಕ್ಕೂ ಹಿಂದೂಮುಂದು ನೋಡ್ತಾ ಇದ್ದಾರೆ, ಕಾರಣ ಅಣ್ಣಂದಿರ ದರ್ಬಾರು ಅತ್ತಿಗೆಯರ ವ್ಯವಹಾರ, ನಮ್ಮವರೇ ಅಪರಿಚತರಂತೆ ಕಾಣ್ತಾ ಇದಾರೆ. ನಾನು ಇನ್ನು ಹೋಗಿ ಆ ಮನೆಯಲ್ಲಿ ಹೇಗೆ ಜೀವಿಸೋಕೆ ಆಗುತ್ತೆ.... ಇನ್ನು ೨೦ ವರ್ಷ ದೂಡಿದ ಗಂಡನ ಮನೆಯಲ್ಲಿ ಇರಬೇಕು. ಇವರೆಲ್ಲ ನನ್ನವರೇ ಆದರೆ ನನ್ನವನು ಇಲ್ಲದ ಮೇಲೆ ನನ್ನವರೆಲ್ಲ ಪರಕೀಯರೆಂಬ ಭಾವನೆ ಮೂಡ್ತಾ ಇದೆ. ಅತ್ತೆ ಮಾವನಿಗೆ ಕೊನೆಗಾಲದಲ್ಲಿ ಆಸರೆಯಾಗುವ ಆಸೆ ಇದೆ, ಆದರೆ ನನ್ನ ಮುಖ ನೋಡಿ ಅವರ ಮಗ ಇಲ್ಲವೇ ಎಂಬ ಕೊರಗು ದಿನವೂ ಅವರಿಗೆಲ್ಲ ಕಾಡದೆ ಇರುತ್ತಾ....

"ಗಂಡನನ್ನು ಕಳೆದುಕೊಂಡ ನಾನು ಅತ್ತೆಮಾವರಿಗೆ ಇತ್ತ ಮಗಳೂ ಆಗಲಾರೆ ಸೊಸೆಯೂ ಆಗಲಾರೇನೋ... ಎಂದೆನಿಸಿದೆ..."

ಮನೆಯಲ್ಲಿ ಮನೆಯೊಡಯನು ಇರಬೇಕು... ಕುಂಟನೋ ಕುರುಡನೋ ಏನಾಗಿದ್ದರೂ ಪರವಾಗಿ ಮನೆಯ ಮೂಲೆಯಲ್ಲಿ ಕುಳಿತಿದ್ದರೆ ಸಾಕಿತ್ತು.... ನನಗೂ ಧೈರ್ಯವಿತ್ತು, ೪೦ ದಾಟಿದ ವಯಸ್ಸು, ಆಸರೆಯೇ ಇಲ್ಲದ ಮನಸ್ಸು , ಸ್ವಂತಂತ್ರ ನಿರ್ಧಾರಗಳು ತೆಗೆದುಕೊಳ್ಳುವುದು ನಿಜಕ್ಕೂ ಕಷ್ಟ, ಗಂಡನಿದ್ದರೆ ನನಗೆ ಅವನು ಅವನಿಗೆ ನಾನು ಎಂದು ಇದ್ದುಬಿಡುತ್ತಿದ್ದೆವು.... ಇನ್ನೂ ನಾನು ಸುಮಾರು ೨೦ ವರ್ಷಗಳಷ್ಟೇನಾದರೂ ಬದುಕಿದ್ದರೆ ಅಥವಾ ನನ್ನ ಕೈಕಾಲಾಡದಂತ ಕಾಲದಲ್ಲಿ ಯಾರ ಆಸರೆ ಬಯಸಲಿ, ಅಮ್ಮ ಅನ್ನೋ ಸ್ವರವಿಲ್ಲ, ಪ್ರೀತಿಯಿಂದ ಅಮ್ಮಿ ಎಂದು ಕರೆಯೋ ಗಂಡನಿಲ್ಲ....... "ಬದುಕೇ ಶೂನ್ಯ"ವಾಗಿದೆ ಮುಂದೇನು ಗತಿ...ಎಂಬ ಭಯ ಕಾಡ್ತಾ ಇದೆ...????
ಮಗನೋ, ಮಗಳೊ ಇದ್ದಿದ್ದರೆ ಸ್ವಲ್ಪವಾದರೂ ಮರೆಯುತ್ತಲಿದ್ದೆನೋ ಏನೋ.... ಮುಂದಿನ ಜೀವನದ ಭಯವನ್ನಾದರೂ ಆ ಕೂಸು ಮರೆಮಾಚಿಸುತ್ತಿತ್ತೇನೋ ಗೊತ್ತಿಲ್ಲ... ಎಲ್ಲರೂ ಹೇಳಿದಂತೆ ಮಕ್ಕಳು ಬೆಳದ ಮೇಲೆ ಕೈಗೆ ಸಿಗುವುದಿಲ್ಲ ಅಂತಾರೆ... ಆದರೆ ಕೈಗೆ ಸಿಗದಿದ್ದರೂ ಎಲ್ಲೋ ನನ್ನವರು ಅನ್ನೋರು ಇದ್ದಾರೆ ಸತ್ತಾಗ ಮಣ್ಣಾಕುವ ಜೀವವೊಂದಿದೆ ಎಂದೆನಿಸುತ್ತೆ..!!! ಆದರೆ ಈಗ ಇದಾವುದೂ ನನಗಿಲ್ಲ.. ಯಾವ ಭಾಗ್ಯವೂ ನನಗಿಲ್ಲವೇ ಹೇ!! ದೇವರೆ... ಮುಂದಿನ ಶೂನ್ಯ ಬದುಕು ದೂಡುವುದು ಹೇಗೆ...???????? ಎಲ್ಲವೂ ಪ್ರಶ್ನಾರ್ಥಕ..??? ಕಂಬನಿಯೇ ನನ್ನ ಸಮಾದಾನಕ್ಕೆ ನಿಂತಿದೆ ಬೇರಾವ ಸಾಂತ್ವಾನ ನನ್ನೊಳಗಿಲ್ಲದಾಗಿದೆ..

ನನ್ನವನ ಜೊತೆ ನಾನು ಹೋಗುವ ಹಾಗೆ ಆ ದೇವರು ಕರುಣಿಸಿದ್ದರೆ ಎಲ್ಲವೂ ಚೆನ್ನಾಗಿತ್ತು...ಈಗ ನನ್ನಲ್ಲಿ "ಸಾಯುವ ಧೈರ್ಯ" ಕೂಡಾ ಇಲ್ಲ...

ಉಸಿರು ಬಿಕ್ಕುತಿದೆ...
ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆಯ
ಶೂನ್ಯ ಸಿಂಹಾಸನದ
ನನ್ನ ಬದುಕು ಜೋತಾಡುತಿದೆ.....
-----
ಚಿತ್ರಗಳು: ಅಂತರ್ಜಾಲ

Posted by ಮನಸು (noreply@blogger.com) on October 09, 2011 07:36 AM· permalink

ಹೀಗೊಬ್ಬ ಮಹನೀಯರ ಒಂದು ಭಾಷಣವು !!


ಭಾರತ ಸರಕಾರದ ಒಂದು ದೊಡ್ಡ ಹುದ್ದೆಯಲ್ಲಿರುವ ಒಬ್ಬ ಮಹನೀಯರು ಮಾಡಿದ ಭಾಷಣದ ಪ್ರತಿಯೊಂದನ್ನು ನೋಡಿದೆ.  ಏಳು ಪುಟಗಳ ಭಾಷಣ ಅದು.


ಶುರುವಾಗೋದು ಹೀಗೆ.

ಶ್ರೀ ..... ಯವರನ್ನು ಸ್ವಾಗತಿಸಲು ನನಗೆ ಸಂತೋಷ ಆಗುತ್ತದೆ. ಅವರು  ಈಗ "...." ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಇದು ಅವರು ಇತ್ತೀಚೆಗೆ ಬರೆದಿರುವ ಪುಸ್ತಕ "...." ದ ಬಗ್ಗೆ ಇರಬಹುದೆಂದು ನಾನು ತಿಳಿದುಕೊಂಡಿದ್ದೇನೆ.

(ಆಮೇಲೆ  ಅವರ ಪರಿಚಯ )  
" ಅವರು ಇತ್ತೀಚೆಗೆ ಬರೆದ ಪುಸ್ತಕದಿಂದ ತುಂಬ ಪ್ರಸಿದ್ಧಿ ಪಡೆದಿದ್ದಾರೆ. ನಾನು ಆ ಪುಸ್ತಕ ಓದಿಲ್ಲವಾದರೂ  ನಾನಿರುವ ಹುದ್ದೆಯ ಕಾರಣದಿಂದ ಪುಸ್ತಕಗಳನ್ನು ಓದದಿದ್ದರೂ ಅವುಗಳ ಬಗೆಗೆ ಮಾತನಾಡಬಹುದಾಗಿದೆ.  ಆದರೆ ನಾನು ಈ ಪುಸ್ತಕದ ಬಗೆಗೆ ಓದಿಕೊಂಡಿದ್ದೇನೆ. ಆದ್ದರಿಂದ  ಈ ಪುಸ್ತಕದಲ್ಲಿನ ಅವರ ಸಿದ್ಧಾಂತದ ಕುರಿತು ನಾನು ಇನ್ನು ಮಾತನಾಡುತ್ತೇನೆ."


ಇದೀಗ ಮೂರನೇ ಪುಟಕ್ಕೆ ಬಂದೆ.

"ಶ್ರೀಯುತ .... ರ ಸಿದ್ಧಾಂತದಲ್ಲಿ ಮೂರು ಅಂಶಗಳಿವೆ......
೧)...
೨)...

 

ಮುಂದೆ ಓದಿ...

Posted by shreekant.mishrikoti on October 09, 2011 05:36 AM· permalink

ಭಾನುವಾರದ - ಕಚಗುಳಿ

ಜಯತು ಜಯ - ಎಂಕ್ಟೇಸಾ
"ಇದೇನಪ್ಪಾ ಮೀನಿನ ರೋಗ ನಿವಾರಣೆಗೆ ಮೀನಿನ ಡಾಕ್ಟರು ವೆಂಕಟೇಶನ ಜಪ ಹೊರಡಿಸ್ತಾ ಇದ್ದಾರಾ ಮೀನಿನ ಬಾಯಿಂದ...!!!" ಅಂದ್ಕೊಂಡ್ರಾ..?? ಅಯ್ಯೋ ಇಲ್ಲಾರೀ... ನಮ್ಮ ಪಕ್ಕು ಮಾಮನ ಪ್ರಭಾವ ಇದು..., ಎಂಕ್ಟೇಸಾ!?...ಪಕ್ಕೂ ಮಾಮಾ??.....
ಬ್ಯಾಡ್ವೇ ಬ್ಯಾಡ ಕನ್ ಪೂಸನ್ನು....ಹಹಹ. 
ಬಂದೇ ಬಿಡ್ತೀನಿ ವಿಷಯಕ್ಕೆ.

ಶುಕ್ರವಾರ ನನಗೆ ರಜಾ...ಹಾಗಾಗಿ ನಮಾಜ್ ಗೆ ಮುಂಚೆ ಚಾಟಲ್ಲಿ ನಮ್ಮ ಪಕ್ಕು ಮಾಮನ ಭೇಟಿ ಆಯ್ತು, ಪ್ರೇಯರ್ ಗೆ ಮುಂಚೆ. ಹಾಗೇ ಲೋಕಾಭಿರಾಮ ಚಾಟ್ ಆಗ್ತಿದ್ದಾಗ...ನನಗೆ ಅನಾಯಾಸವಾಗಿ ನೆನಪಿಗೆ ಬಂದಿದ್ದು ಈ ಸುಲಲಿತ, ಮಧುರ, ಭಕ್ತಿಭಾವಪೂರಿತ ಆಲ್ ಟೈಮ್ ಹಿಟ್ ಹಾಡು "ಜಯತು ಜಯ ವಿಠಲ..ನಿನ್ನ ನಾಮವು ಶಾಂತಿ ಧಾಮವು ಸೌಖ್ಯದಾರಾಮಾ...”


ಈ ಹಾಡನ್ನ ಹಾಕಿದೆ ಚಾಟ್ ಬಾಕ್ಸಲ್ಲಿ....



“ಇದೇನೋ..ಶುಕ್ರವಾರ ನಮಾಜ್ ಅಂತ ಹೇಳಿ ದೇವರನಾಮ ಶುರು ಮಾಡಿದ್ದೀಯಾ..??” ಅಂತ ಪ್ರಕಾಶನ ಚಾಟ್ ಉತ್ತರ.
ಅದಕ್ಕೆ ನಾನು..
 “ಒಂದು ಸ್ವಾರಸ್ಯಕರ ಘಟನೆ ನಮ್ಮ ಸ್ಕೂಲಲ್ಲಿ ನಡೆದದ್ದು” ಅಂತ ಚಾಟಲ್ಲೇ ಸಂಕ್ಷಿಪ್ತವಾಗಿ ಹಾಕ್ದೆ...
ಅವನಿಗೆ ಏನನ್ನಿಸ್ತೋ..
 “ಬ್ಲಾಗಲ್ಲಿ ಹಾಕೋ ಮಾರಾಯಾ”.....
ನಾನು “ಎಸ್ ಬಾಸ್” ಎಂದವನೇ ಟೈಪಿಸೋದಕ್ಕೆ ಸುರು ಅಚ್ಕಂಡೆ.... ಅದರ ಫಲವೇ ಈ ಭಾನುವಾರದ ಕಚಗುಳಿ....
ಅದು ಹಳ್ಳಿ ಹೈಯರ್ ಪ್ರೈಮರಿ ಸ್ಕೂಲ್ ನ ಏಳನೇ ತರಗತಿ ಕ್ಲಾಸ್ ರೂಮು, ಹಳ್ಳಿ ಸ್ಕೂಲು ಅಂದ್ರೆ ಗೊತ್ತಲ್ಲ...?? ಕೆಳಗಡೆ ಮಣೆಗಳು.. ಸುಮಾರು ೬ ಅಡಿ ಉದ್ದ ಒಂದೊಂದೂ...ಹೆಚ್ಚು ಅಂದ್ರೆ ಅರ್ಧ ಅಡಿ ಎತ್ತರ...!!! ಹೂಂ...
ನೆಲದ ಮೇಲೆ ಕೂತಿಲ್ಲ.... ಅಥವಾ ಪಟ್ಟಣದ ಸ್ಸೂಕ್ಲೂಲಿನಲ್ಲಿರುವಂತೆ ಬೆಂಚಿನ ಎತ್ತರದಲ್ಲೂ ಕೂತಿಲ್ಲ... ಅನ್ನೋ ರೀತಿಯ ಎಡಬಿಡಂಗಿ ಸೀಟಿಂಗ್... ಈಗ್ಲೂ ಇದೆಯೇನೋ ಆ ಸಿಸ್ಟಮ್ ಗೊತ್ತಿಲ್ಲ....
ಓಕೆ...ಬಂದೆ..ಪ್ರಸಂಗಕ್ಕೆ...

ಕ್ಲಾಸಿನಲ್ಲಿ ಆ ದಿನ ಏನೋ ಕಾತರ ಮತ್ತೆ ಆಸಕ್ತಿ ಎಲ್ಲಾರಿಗೂ... ಯಾಕಂದ್ರೆ ಆ ದಿನ ನಮ್ಮ  ಹಳ್ಳಿಗಿಂತಾ ಹಳ್ಳಿ ಅನ್ನೋ ಸ್ಕೂಲಿಗೆ ಹತ್ತಿರದ ಪಟ್ಟಣಾಂತ ಅನ್ನಲಾಗದ ಪಟ್ಟಣದ ಹೊಸಾ ಮೇಡಂ ವರ್ಗವಾಗಿ ಬರ್ತಿದ್ದುದು.
ಸರಿ.. ಮೂರನೇ ಪಿರಿಯಡ್ಡು ಗಣಿತದ್ದು.  ಪ್ರವೇಶ ಆಯ್ತು ಮೇಡಂ ದು...

“ಗೂಡ್ ಮಾರ್ನಿಂಗ್ ಸಾ....”
ಎಲ್ಲಾ ಒಕ್ಕೊರಲಲ್ಲಿ ಹೇಳ್ತಿದ್ದುದು ಬೆಳಿಗ್ಗೆ ಇದನ್ನು ಮಾತ್ರ. ಗಂಡಸಾಗಲೀ...ಹೆಂಗಸಾಗಲೀ...ಹೇಳ್ತಿದ್ದುದು “ಸಾ” ಅಂತಲೇ...

“Attention... please...ಇಲ್ಲಿ ಕೇಳಿ...” ಅಂತ ಮೇಡಂ ಕೋಮಲ ದನಿ ಕೇಳಿ ಎಲ್ಲರೂ ಗಪ್-ಚಿಪ್.
“ನನ್ನ ಹೆಸರು- ಸುವರ್ಣ ನಾನು ಪಕ್ಕದ ವಿಜಯಪುರ ಪಟ್ಟಣದವಳು...ಇಂದಿನಿಂದ ನಿಮಗೆ ಗಣಿತ ಪಾಠ ನಾನೇ ಮಾಡುವುದು... ಓಕೆ...” ಹೊಸ ಮೇಡಂ ತನ್ನ ಬಗ್ಗೆ ಪರಿಚಯಕೊಟ್ಟರು.
“ಎಸ್ಸಾ” ಮತ್ತೆ ಎಲ್ಲರ ಒಕ್ಕೊರಲು...
“ನಾನು ಸರ್ ಅಲ್ಲ... ಮಿಸ್ ಅನ್ನಿ ಇಲ್ಲಾ ಮ್ಯಾಮ ಅನ್ನಿ” ಎನ್ನುತ್ತಾ
“ಸರಿ ಈಗ ಎಲ್ಲ ನಿಮ್ಮ ನಿಮ್ಮ ಪರಿಚಯ ಮಾಡ್ಕೊಳ್ಳಿ... ಹಾಂ...”
ಮೊದಲ ಸಾಲಿನ ಹುಡುಗಿಯರಲ್ಲಿ ಮೊದಲಿನ ಹುಡುಗಿಯನ್ನ ನೋಡಿ..


“ನೀನು ಹೇಳಮ್ಮ... ನಿನ್ನ ಹೆಸರು ಯಾವ ಊರು..ಅಂತ”...



ಹೀಗೇ...ಒಬ್ಬೊಬ್ಬರಾಗಿ ಎಲ್ಲರ ಪರಿಚಯ ಆದಮೇಲೆ.. ಮೇಡಂ ...
“ನಿಮ್ಮ ಕ್ಲಾಸಿನಲ್ಲಿ ಯಾರು ಚನ್ನಾಗಿ ಹಾಡು ಹಾಡ್ತಾರೆ..?” ಎಂದು ಕೇಳಿದರು. ಒಡನೆಯೇ ಮತ್ತೆ ಒಕ್ಕೊರಲಲ್ಲಿ.... “ಎಂಕ್ಟೇಸಾ”....ಎಂದರು ಎಲ್ಲರೂ...
“ಏನಿದು...?? ಏನು..?? ಎಂಕ್ಟೇಸಾ!! ..ಅಂದ್ರೆ??” ಕೇಳಿದ್ರು ಮೇಡಂ ಏನೂ ಗೊತ್ತಾಗದೇ.
ಶೈಲಜಾ ಎದ್ದು ನಿಂತು... “ಮ್ಯಾಮ್ ವೆಂಕಟೇಶ್ ..ಅದೇ ಮೂರನೇ ಬೆಂಚಲ್ಲಿ ಕುಳಿತಿದ್ದಾನಲ್ಲಾ.....ಹಾಂ..ಅಲ್ಲಿ...,  ಅವನು ಚನ್ನಾಗಿ ಹಾಡ್ತಾನೆ” ಎಂದಳು.
“ಬನ್ರೀ ವೆಂಕಟೇಶ್.....” ಎಂದರು ಮೇಡಂ....  ಒಡನೇ ಹುಡುಗರೆಲ್ಲಾ...
“ಓ ಓ.. ಏನು ಮರ್ವಾದೆ,,??!!! ಎಂಕ್ಟೇಸನ್ಗೆ..” ಎಂದರು ಉದ್ಗಾರ ತೆಗೆಯುತ್ತಾ,,,,
“ಓಗೋ ಎಂಕ್ಟೇಸಾ..” ಎನ್ನುತ್ತ ಮೆಲ್ಲಗೆ ತಳ್ಳಿದ ಅವನ ಬೆನ್ನ ಮೇಲೆ ಕೈಯಿಟ್ಟು ಅವನ ಸ್ನೇಹಿತ ಪಕ್ಕದಲ್ಲೇ ಕುಳಿತಿದ್ದ ಸುಲೇಮಾನ್. "ಓಗೋ..ಓಗೋ..." ಎಂದರು ಎಲ್ಲಾ ಹುಡುಗರು.
ಆದರೆ....
ಯಾಕೋ ..ಬೆಳಿಗ್ಗೆಯಿಂದ ಒಂಥರಾ ಮುಖ ಮಾಡಿದ್ದ ವೆಂಕಟೇಶ... ಮೂಡಲ್ಲಿ ಇರ್ಲಿಲ್ಲ..... ಇಲ್ಲಾಂದ್ರೆ..ಸಿಳ್ಳೆ ಸೀನ, ಎಂಕ್ಟೇಸ ಇಬ್ರದ್ದು ಆರ್ಕೆಸ್ಟ್ರಾನೇ ಶುರು ಆಗ್ತಿತ್ತು. ಅದಕ್ಕೆ ತಕ್ಕ ಹಾಗೆ ಸಿಲ್ವರ್ ಸುಲೇಮಾನ್ ಬೆಂಚನ್ನೇ ತಬಲ ಮಾಡ್ತಿದ್ದ.


ಮೇಡಂ ಮೂರ್ನ್ಲಾಲ್ಕು ಬಾರಿ ಹೇಳಿ .. ಅವನ ಸ್ನೇಹಿತ್ರು..ಬಲವಂತ ಮಾಡಿದ ಮೇಲೆ...ವೆಂಕಟೇಶ ಬೋರ್ಡ್ ಬಳಿ ಹೋಗಿ ಕೈ ಕಟ್ಟಿ ನಿಂತ. ಮಕ್ಕಳೆಲ್ಲಾ ಅವನ ಹಾಡನ್ನು ಕೇಳಲು ನಿಶ್ಶಬ್ದರಾಗಿ ಕುಳಿತರು.
ವೆಂಕಟೇಶ ಪ್ರಾರಂಭಿಸಿದ...
“ಜಯತು... ಜಯ... ವಿಠಲಾ... ನಿನ್ನ ನಾಮವು..ಶಾಂತಿ..........."
ಎಲ್ಲರೂ ಮೌನ.... ಹುಡುಗ ಹುಡುಗಿಯರ ಮುಖದ ಮೇಲೆ ಅತ್ಯಾಶ್ಚರ್ಯದ ಮುಖಭಾವ.... ಮೇಡಂ ಸಹಾ...ಸ್ಟನ್....!!!!
ಸುಶ್ರಾವ್ಯ ಹಾಡು ಬಯಸಿದವರಿಗೆ!!! 
ಪಾಠವನ್ನು ಒಪ್ಪಿಸೋ ಎರಡನೇ ತರಗತಿ ಹುಡುಗ... “ಶಾಲೆ” ಪಾಠವನ್ನು ಓದಿದಂತಿತ್ತು ವೆಂಕಟೇಶನ ಹಾಡು....
“ಜಯತು ಜಯ ವಿಠಲ (ಇದು ನನ್ನ ಶಾಲೆ). ನಿನ್ನ ನಾಮವು ಶಾಂತಿಧಾಮವು (ನನ್ನ ಶಾಲೆ ನಮ್ಮ ಅಕ್ಕ ಪಕ್ಕದ ಊರುಗಳಿಗೆಲ್ಲಾ ಮಾದರಿ ಶಾಲೆ). ಸೌಖ್ಯದಾರಾಮಾ (ನನ್ನ ಶಾಲೆಯಲ್ಲಿ ಹದಿನಾಲ್ಕು ಕೊಠಡಿಗಳಿವೆ)” ಇತ್ಯಾದಿ...... 
ಕ್ಲಾಸೆಲ್ಲಾ ನಗುವಿನ ಗುಲ್ಲೋ ಗುಲ್ಲು...
ಮೇಡಂ...ಸಹನೆ ಕಟ್ಟೆ ಒಡೆಯಿತು....
“ಏಯ್... ಏಯ್.ಏಯ್.....ಸಾಕು ನಿಲ್ಲಿಸಿ...” ಎನ್ನುತ್ತಾ ಎಲ್ಲರನ್ನು ಗದರಿಸಿ, ವೆಂಕಟೇಶನ್ನ ನೋಡುತ್ತಾ
“ನಿಲ್ಲಿಸ್ರೀ ...ವೆಂಕಟೇಶ್!!....ನಾನು ಪಾಠ ಓದಿ ಅಂತ ಅಲ್ಲಾ ಹೇಳಿದ್ದು!!!,...ಹಾಡು ಹಾಡಿ ಅಂತಾ....!!” ಎಂದರು ಬೇಸರದಿಂದ
“ಹಾಡೋಕೆ ಬರೋಲ್ಲಾ ಅಂದ್ರೆ ಮುಂಚೆನೇ ಹೇಳ್ಬೇಕಪ್ಪಾ.... ಏನಮ್ಮ ಶೈಲಜಾ ನಿಮ್ಮ ಕ್ಲಾಸಿನ ಗಾನ ಗಂಧರ್ವ ಇವರೇನಾ??!!... ಬಹಳ ಚನ್ನಾಗಿದೆ....!!!!” ಎಂದರು ಬೇಸರದಿಂದ.
ಎಲ್ಲರೂ.. “ ಇಲ್ಲಾ ಮೇಡಂ ಚನ್ನಾಗಿ ಹಾಡ್ತಾನೆ ಇವನು....ಯಾಕೋ ಈವೊತ್ತು...ಗೊತ್ತಿಲ್ಲ....”
ಮೇಡಂ ಗೆ ರೇಗಿತ್ತು...
“ಸಾಕು ನಿಲ್ಲಿಸ್ರೀ ನಿಮ್ಮ ರೆಕಮೆಂಡೇಶನ್ನು... ಅಲ್ಲಾ ಹಾಡಿನ ಗಂಧಾನೇ ಗೊತ್ತಿಲ್ಲ ಇವರಿಗೆ...ಹಾಡ್ತಾರಂತೆ..ಹಾಡು...!!!”
ಎಂದು.. ಮುಖ ಗಂಟಿಕ್ಕಿ...
“ಆಯ್ತು ಬಿಡಿ.. ನಾಳೆಯಿಂದ ಪಾಠ ಪ್ರಾರಂಭಿಸ್ತೇನೆ... ಈ ದಿನ ನೀವು ಕೊಟ್ಟಿರೋ ಶಾಕೇ ಸಾಕು...” ಎನ್ನುತ್ತಾ...ತಮ್ಮ ಪುಸ್ತಕಗಳನ್ನು ಕೈಲಿ ಹಿಡಿದು ಹೊರನಡೆದರು.

ತಿಂಗಳಲ್ಲಿ ಒಮ್ಮೆ ನಡೆಯುವ ’ಶಾರದಾ” ಪೂಜೆಯೂ ಮೂರುದಿನಗಳಲ್ಲಿ ನಡೆಯುವುದಿತ್ತು.. ಆ ದಿನದ ಬೆಳಿಗ್ಗೆ ಪ್ರಾರ್ಥನೆ ನಂತರ HM ಘೋಷಣೆ ಮಾಡಿದರು...
“ನಿಮಗೆಲ್ಲಾ ಗೊತ್ತಿರೋ ಹಾಗೆ ತಿಂಗಳ ಶಾರದಾ ಪೂಜೆ ಶುಕ್ರವಾರ ಸಂಜೆ ೩.೦ ಗಂಟೆಗೆ ಎಲ್ಲಾ ಕ್ಲಾಸು ಮುಗಿದ ನಂತರ ಸ್ಕೂಲಿನ ಸಭಾಂಗಳದಲ್ಲಿ ಆಗುತ್ತೆ... ಸುಲೇಮಾನ್ ನೀನು ಪೂಜೆ ಮೆಮೋ ಪುಸ್ತಕಾನ ಊರಿನ ಹಿರಿಯರಿಗೆ ತೋರಿಸಿ ಅವರನ್ನ ಆಹ್ವಾನಿಸಿ ಬಾ... ಇನ್ನು ಪೂಜೆಯ ಸಮಯದ ಪ್ರಾರ್ಥನೆ ಜವಾಬ್ದಾರಿ... ವೆಂಕಟೇಶನದ್ದು” ಎಂದರು... 
ತಕ್ಷಣ ಹೊಸ ಮೇಡಂ ಸುವರ್ಣ...
"ಸರ್ ಸರ್.. ವೆಂಕಟೇಶಾನಾ??... ಏಳನೇ ಕ್ಲಾಸಿನ ವೆಂಕಟೇಶಾನಾ..???. ಅಯ್ಯೋ ಅವನು ಮಾತ್ರ ಬೇಡ ಸರ್..ಎಷ್ಟು ಕೆಟ್ಟದಾಗಿರುತ್ತೆ ಗೊತ್ತಾ ಅವನು ಹಾಡೋದು ..?? ಅವನು ಹಾಡೋದೂಂದ್ರೆ ಏನು..??!!!” 
ಎನ್ನುತ್ತಾ ತಮ್ಮ ಆತಂಕ ತೋಡಿಕೊಂಡರು..
ಅವರ ಮಾತನ್ನು ಕೇಳಿ HM  ಮತ್ತೆ ಇತರ ಉಪಾದ್ಯಾಯರು ಚಕಿತರಾದರು. ..ಆದ್ರೆ...
ಮಕ್ಕಳೆಲ್ಲಾ...ಅದರಲ್ಲೂ ಏಳನೇ ತರಗತಿ ಮಕ್ಕಳು ನಗಲು ಪ್ರಾರಂಭಿಸಿದರು.
“ಸೈಲೆನ್ಸ್.... ಯಾಕೆ ..ಯಾಕೆ ಎಲ್ಲಾರೂ ನಗೋದು...??” ಎನ್ನುತ್ತಾ HM ರವರು ಹೊಸ ಮೇಡಂ ಕಡೆ ನೋಡಿ... 
“ಯಾಕಮ್ಮಾ ..ಯಾಕೆ ಹಾಗೆ ಹೇಳಿದ್ರಿ?... ವೆಂಕಟೇಶ್ ನಮ್ಮ ಶಾಲೆಯ ಒಳ್ಳೆಯ ಗಾಯಕ...” ಎಂದಾಗ ಶಾಕ್ ಆಗೋ ಸರದಿ ಹೊಸ ಮೇಡಂದು....
“ಅಲ್ಲ ಸರ್..ಮೊನ್ನೆ ಇವರ ಕ್ಲಾಸಿಗೆ ಹೋಗಿ..........................” ಎಂದು ಪೂರ್ತಿ ವಿಷಯ ತಿಳಿಸಿದಾಗ ....
ಉಪಾದ್ಯಾಯರೂ ಸೇರಿಕೊಂಡರು ಈಗಾಗಲೇ ನಗಲು ಪ್ರಾರಂಭಿಸಿದ್ದ ಮಕ್ಕಳ ಜೊತೆ.


ಆ ನಂತರವೇ ಗೊತ್ತಾಗಿದ್ದು.... ಆ ದಿನ ಗೌಡರ ತೋಟದ ಸೀಬೇ ಕಾಯಿ ಕದ್ದು ಬಂದಿದ್ದರಿಂದ ಅವನ ಅಪ್ಪನ ಬೈಗುಳ ತಿಂದು ಬಂದಿದ್ದೂ ಅಲ್ಲದೇ ಆ ದಿನದ ಖರ್ಚಿನ ಎಂಟಾಣೆಗೂ ಖೋತಾ ಮಾಡ್ಕೊಂಡಿದ್ದ ಎಂಕ್ಟೇಸಾ ಅಂತ!!. ಹಾಡೋಕೆ ಆಗೊಲ್ಲ ಅಂತ ಸುಲೇಮಾನ್ ಗೆ ಹೇಳಿದ್ನಂತೆ...
ಅದಕ್ಕೆ ಸುಮೇಮಾನ್ “ಲೇ ಎಂಕ್ಟೇಸಾ ..ಮ್ಯಾಡಮ್ಮು ಮ್ಯಾತ್ಸ್ ಪಾಠ ಮಾಡೋದು ಆಮ್ಯಾಕೆ ಇನ್ನೂ ಟಫ್ ಮಾಡ್ಬಿಡ್ತಾರೆ ಹೋಗಿ ಹಾಡೋ” ಅಂತ ಹೆದರ್ಸಿದ್ದನಂತೆ. 
ಹೊಸ ಮೇಡಂ ಗೆ ಬೇಸರ ತರಿಸೋದು ಬೇಡ ಅಂತ ತೋರಿಸಿದ್ದು ಈ ವರಸೆ...!!! ಆಗ್ಲಿಂದ ಸ್ಕೂಲ್ ಮಕ್ಕಳೆಲ್ಲಾ... ಎಂಕ್ಟೇಸಾ ಅಂದ್ರೆ .... "ಓ..ಜಯತು ಜಯ ಎಂಕ್ಟೇಸಾ ನಾ" ಅಂತ ಹೇಳ್ತಿದ್ದರಂತೆ. 

Posted by ಜಲನಯನ (suruaz@gmail.com) on October 08, 2011 05:52 PM· permalink

ಆಂಡ್ರಾಯ್ಡ್ ನಲ್ಲಿ ಕನ್ನಡ.. ಸಂಪದದಲ್ಲಿನ ತೊಂದರೆ ಬಗೆಹರಿಸಿ.

ಕೆಲ ತಿಂಗಳ ಹಿಂದೆ ಒಂದು ಆಂಡ್ರಾಯ್ಡ್ ಮೊಬೈಲ್ ತಗೊಂಡೆ. ತಗೊಂಡ ಮೊದಲ ದಿನವೇ ನನಗೆ ಕೆಲವು ಆಶ್ಚರ್ಯಗಳು ಕಾದಿದ್ವು! ಅವುಗಳಲ್ಲಿ ಒಂದು ಕನ್ನಡವನ್ನು ನನ್ನ ( ಅರ್ಥಾತ್ ಆಂಡ್ರಾಯ್ಡ್) ಮೊಬೈಲ್ನಲ್ಲಿ ಓದಕ್ಕೇ ಆಗಲಿ ಅತ್ವ ಬರಿಯಕ್ಕೇ ಆಗಲಿ ಆಗಲ್ಲ ಅನ್ನುವುದು. 


ಅಂದಿನಿಂದ ಕನ್ನಡವನ್ನು ಆಂಡ್ರಾಯ್ಡ್ ನಲ್ಲಿ ನೋಡಕ್ಕೆ ಅತ್ವ ಬರಿಯಕ್ಕೇ ಯಾಕೆ ಆಗ್ತಾ ಇಲ್ಲ, ಮತ್ತು ಕನ್ನಡವನ್ನು ಆಂಡ್ರಾಯ್ಡ್ ನಲ್ಲಿ ತರುವ ಯಾವ್ಯಾವ್ ಪ್ರಯತ್ನಗಳು ನಡಿತಾ ಇದವೆ ಅನ್ನೋ ಬಗ್ಗೆ ದಿನವೂ ಒಂದು ಕಣ್ಣಿಟ್ಟಿರುತ್ತಿದ್ದೆ. ಕೆಲ ವಾರಗಳ ಹಿಂದೆ  ಒಂದು ಅಪ್ಲಿಕೇಶನ್ ಕಣ್ಣಿಗೆ ಬಿತ್ತು ಮತ್ತು ಅವತ್ತಿಂದ ನಾನು ಕನ್ನಡವನ್ನು ನನ್ನ ಮೊಬೈಲ್ನಲ್ಲಿ ಓದ್ತಾ ಇದೀನಿ ಜೊತೆಗೆ ಕನ್ನಡದಲ್ಲೇ ಕಾಮೆಣ್ಟ್ ಹಾಕ್ತಾ ಇದೀನಿ.

 

ಮುಂದೆ ಓದಿ...

Posted by savithru on October 08, 2011 03:47 PM· permalink

ಕಚ್ಚೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ ಅಚ್ಯುತನಪ್ಪ ಅಜನಪ್ಪ !!


ಕಚ್ಚೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ ಅಚ್ಯುತನಪ್ಪ ಅಜನಪ್ಪ !!

ಮತ್ತೂರು ಕೃಷ್ಣಮೂರ್ತಿಗಳು ದಿವಂಗತರು ಎಂಬ ಸುದ್ದಿ ಕೇಳಿಬಂದಿದ್ದು ವಿಜಯದಶಮಿಯ ಬೆಳ್ಳಂಬೆಳಿಗ್ಗೆಯ ೯ ಗಂಟೆಯ ವಾರ್ತೆಯಲ್ಲಿ. ನಾವೆಲ್ಲಾ ಹಬ್ಬದ ಸಡಗರದಲ್ಲಿ ಮೈಸೂರಿನ ಜಂಬೂಸವಾರಿ, ೯ ದಿನಗಳ ಮಟ್ಟಿಗೆ ಗತವೈಭವ ಮರುಕಳಿಸುವ ಈಗಿನ ಅರಸರ ಭಾಗ್ಯ, ಶೃಂಗೇರಿ-ಕೊಲ್ಲೂರು ಮುಂತಾದ ಕ್ಷೇತ್ರಗಳಲ್ಲಿನ ಉಪಾಸನಾ ವೈಖರಿ ಇವುಗಳ ಬಗ್ಗೆ ಕುತೂಹಲಿಗಳಾಗಿ ಮಾಧ್ಯಮವಾಹಿನಿಗಳನ್ನು ಅವಲೋಕಿಸುತ್ತಾ ಕುಂತಾಗಲೇ ಈ ವಿಷಯ ತಿಳಿಯಿತು. ಹಳ್ಳಿಯ ಮೂಲೆಯ ಬಡ ಹುಡುಗನೊಬ್ಬ ವಾರಾನ್ನವನ್ನುಂಡು ಸಂಸ್ಕೃತವನ್ನು ಕಲಿತು ಬೆಂಗಳೂರು ಸೇರಿ ಭಾರತೀಯ ವಿದ್ಯಾಭವನದ ನಿರ್ದೇಶಕರ ಸಾಲಿಗೆ ಸೇರುವ ಎತ್ತರಕ್ಕೆ ಬೆಳೆದಿದ್ದು, ಪದ್ಮಶ್ರೀ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ಪಡೆದಿದ್ದು ಎಲ್ಲವೂ ನೆನಪಾದವು. ಸಂಸ್ಕೃತಗ್ರಾಮವೆಂದೇ ಖ್ಯಾತವಾದ ಶಿವಮೊಗ್ಗೆಯ ಮತ್ತೂರಿನಲ್ಲಿ ಜನಿಸಿದರೂ ಬ್ರಿಟಿಷರ ಕಾಲದಲ್ಲಿ ಅಲ್ಲೆಲ್ಲಾ ಬಡತನವೇ ಹಾಸುಹೊಕ್ಕಾಗಿತ್ತು.

ಸಹಜವಾಗಿ ರಾಜಾಶ್ರಯ ತಪ್ಪಿದ ಹಲವು ಬ್ರಾಹ್ಮಣ ವರ್ಗಗಳಲ್ಲಿ ಒಂದಾದ ಸಾಂಕೇತಿ ಬ್ರಾಹ್ಮಣ ಮನೆತನದಲ್ಲಿ ಜನಿಸಿದ ಹುಡುಗನಿಗೆ ಅಧ್ಯಯನ ಮತ್ತು ಅಧ್ಯಾಪನಗಳೇ ಹಿಡಿಸಿದವು. ಉದರಂಭರಣೆಗಾಗಿ ಖಾಸಗೀ ಬಸ್‍ಕಂಡಕ್ಟರ್ ಆಗಿ ಕೆಲವುಕಾಲ ಕೆಲಸಮಾಡಿದರೂ ಮಾನಸಿಕ ಹಸಿವು ಭರಿಸುವುದಕ್ಕೆ ಅಥವಾ ಮನೋದರಂಭರಣೆಗೆ ಮಾಡುವ ಆವೃತ್ತಿ ಹಿಡಿಸುತ್ತಿರಲಿಲ್ಲ. ’ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ’ ಎಂದ ದಾಸವಾಣಿಯಂತೇ ಬದುಕಿನಲ್ಲಿ ಬೇರೇಯದನ್ನೇ ಬಯಸಿದ ವ್ಯಕ್ತಿ ಕೃಷ್ಣಮೂರ್ತಿಗಳು. ಅಲ್ಲಲ್ಲಿ ಉನ್ನತಮಟ್ಟದ ವ್ಯಾಖ್ಯಾನಗಳನ್ನು ನಡೆಸಿಕೊಡುತ್ತಿದ್ದ ಅವರ ಉಪನ್ಯಾಸಗಳನ್ನೂ, ಅರ್ಥವಿವರಣೆಗಳನ್ನೂ ಸ್ವತಃ ಕಂಡ ನಟ ಶ್ರೀನಾಥ್ ಹಿಂದಕ್ಕೆ ಉದಯ ವಾಹಿನಿಯ ನಿರ್ವಾಹಕ ಮುಖ್ಯಸ್ಥರಾಗಿದ್ದಾಗ ಕೃಷ್ಣಮೂರ್ತಿಗಳಲ್ಲಿ ಒಂದು ಬೇಡಿಕೆ ಇಟ್ಟರಂತೆ. ಅದರ ಫಲವಾಗಿ ಉದಯವಾಹಿನಿಯಲ್ಲಿ ಹಲವು ವರ್ಷಗಳ ಕಾಲ ಮಹಾಭಾರತದ ವ್ಯಾಖ್ಯಾನ ನಡೆಯಿತು. ಗಮಕ ವಿದ್ವಾನ್ ಹೊಸಳ್ಳಿ ಕೇಶವಮೂರ್ತಿ ಮತ್ತು ಮತ್ತೂರು ಕೃಷ್ಣಮೂರ್ತಿ -ಈ ಮೂರ್ತಿದ್ವಯರ ಸಾಂಗತ್ಯ ಬೆಳಗಿನ ಅರ್ಧಗಂಟೆ ಕನ್ನಡ ಸಾರಸ್ವತಲೋಕದ/ಭಾವುಕ ಜನರ, ವಿದ್ವಾಂಸರ ಮನೋರಂಜನೆಗೆ ಕಾರಣವಾಗಿತ್ತು. ಕುಮಾರವ್ಯಾಸ ಭಾರತದ ಕಥಾಮಾಲಿಕೆ ಹರಿದು ಬರುವಾಗ ಸಮಯಾನುಕೂಲವುಳ್ಳ ಬಹಳಜನ ಅದನ್ನು ಇಷ್ಟಪಟ್ಟು ನೋಡುತ್ತಿದ್ದರು.

ಹಲವು ಜನರೊಡನೆ ಬೆರೆತು, ದೇಶವಿದೇಶಗಳಲ್ಲಿ ಸಂಚರಿಸಿ ಉಪನ್ಯಾಸಗಳನ್ನು ನೀಡಿ, ೭ ಭಾಷೆಗಳಲ್ಲಿ ಪ್ರೌಢಿಮೆ ಸಾಧಿಸಿ, ಇತಿಹಾಸದ ಪುಟಗಳನ್ನು ಸೇರಬೇಕಿದ್ದ ಕೆಲವು ಶಾಲೆಗಳನ್ನು ಊರ್ಜಿತಗೊಳಿಸಿ, ನವೀಕರಿಸಿ, ಹೊಸದಾಗಿ ಒಂದೆರಡು ಶಾಲೆಗಳನ್ನೂ ಆರಂಭಿಸಿ ಸಮಾಜಕ್ಕೆ ಈ ರೀತಿಯಲ್ಲಿ ಸೇವೆಮಾಡಿದವರು ಕೃಷ್ಣಮೂರ್ತಿಗಳು. ಇದು ಅವರಿಗೆ ನನ್ನ ಭಾವನಮನ. ಇವರಂತಹ ಆದರ್ಶ ಜನ ಇವತ್ತಿನಲ್ಲಿ ಕಡಿಮೆ ಇದ್ದಾರೆ. ಆಡಂಬರವನ್ನೇ ಆಲಿಂಗಿಸಿಕೊಂಡ, ಅಹಂಕಾರವೇ ಮೈವತ್ತ ಅನೇಕ ವಿದ್ವನ್ಮಣಿಗಳಿದ್ದಾರೆ. ಅಂಥವರಲ್ಲಿ ವಿದ್ವತ್ತಿಗಿಂತ ಅವರ ’ಮಣಿ’ಗಳೇ ಎದ್ದು ಕಾಣುತ್ತವೆ! ಅಂಥವರ ಮಧ್ಯೆ ಇಂಥವರೂ ಅಲ್ಲಲ್ಲಲ್ಲಲ್ಲಿ ಇದ್ದಾರೆ ಎಂಬುದನ್ನು ತೆಗೆದುಹಾಕುವ ಹಾಗಿಲ್ಲ.

ದಸರೆಯ ಮರುದಿನ ಅಂದರೆ ನಿನ್ನೆ ಬೆಂಗಳೂರಿನಲ್ಲಿ ಕಾರ್ಯನಿಮಿತ್ತ ಸಂಚರಿಸುವಾಗ ಟ್ರಾಫಿಕ್ ಸಿಗ್ನಾಲ್‍ನಲ್ಲಿ ನನ್ನ ವಾಹನ ನಿಲ್ಲಿಸಿಕೊಂಡೆ. ೬ ವರ್ಷದ ಚಿಕ್ಕ ಹುಡುಗ ಗಿಜಿಗುಡುವ ಹಲವು ವಾಹನಗಳ ಜಂಗುಳಿಯ ಮಧ್ಯೆ ಓಡೋಡಿ ಬೇಡುತ್ತಿದ್ದ. ಇನ್ನೇನು ಹಸಿರು ನಿಶಾನೆ ಬಂದರೆ ಆತ ಯಾವುದದರೂ ವಾಹನದ ಚಕ್ರಕ್ಕೆ ಸಿಲುಕಬಹುದೇ ಎಂಬ ಆತಂಕ ನನ್ನಲ್ಲಿತ್ತು. ಆದರೆ ಆತನಿಗೆ ಅದ್ಯಾವ ಭಯವೂ ಇದ್ದಿರಲಿಲ್ಲ. ಜನ್ಮಕೊಟ್ಟ ಅಪ್ಪ-ಅಮ್ಮ ಹೇಳಿಕೊಟ್ಟು ಹೆದರಿಸಿ ಬೇಡುವಂತೇ ಮಾಡಿದರೋ ಅಥವಾ ಯಾವುದೋ ಕಾಣದ ಧೂರ್ತ ಇಂತಹ ಮಕ್ಕಳನ್ನು ಹೀಗೆಲ್ಲಾ ದುಡಿಸಲು ತೊಡಗಿದ್ದಾನೋ ತಿಳಿಯಲಿಲ್ಲ. ಮನದತುಂಬ ಹಲವು ಭಾವನೆಗಳ ಅಲೆಗಳು ಎದ್ದವು. ನಾವು ಕೊಡಬಹುದಾದ ಒಂದು ನಾಣ್ಯ ಆತನ ಜೀವನಕ್ಕೇನೂ ಸಾಲುವುದಿಲ್ಲ, ಆದರೆ ಅವನಂತಹ ಅಸಂಖ್ಯ ಮಕ್ಕಳು ಇದೇ ರೀತಿ ರಸ್ತೆಗಳ ಬದಿಯಲ್ಲಿ ಡೊಂಬರಾಟ ತೋರಿಸುತ್ತಾ, ಇನ್ನೇನೋ ಮಾರುತ್ತಾ ಅಲ್ಲಲ್ಲಿ ಕಾಣಸಿಗುತ್ತಾರೆ. ಬಾಲ್ಯದ ಆಡುವ ವಯಸ್ಸಿಗೇ ಸ್ವಯಂ ಬಾಲಕಾರ್ಮಿಕರಾಗಿದ್ದಾರೆ; ಇಲ್ಲದಿದ್ದರೆ ಅವರಿಗೆ ಹೊತ್ತಿಗೆ, ತುತ್ತಿಗೆ ಕಾಸಿಲ್ಲ!

ನಮ್ಮಗಳ ಮನೆಯಲ್ಲಿ ಒಂದನ್ನೇ ಹಡೆಯುತ್ತೇವೆ, ಹಲವು ರೀತಿಯಲ್ಲಿ ಪ್ರಯತ್ನಿಸಿದರೂ ಊಟಮಾಡಿಸುವುದೇ ಒಂದು ಯಜ್ಞ. ಅದಕ್ಕೇ ಇರಬೇಕು ನಮ್ಮೂರಲ್ಲೊಂದು ಗಾದೆ-’ಕಂಡು ಸಾಕಿದ ಎಮ್ಮೆಯ ಕಣ್ಣು ಕುರುಡು’ ಎಂಬುದಾಗಿ. ವಯೋಮಾನದಲ್ಲಿ ಚಿಕ್ಕವರು ಮಾಡಲು ಕಷ್ಟವದುದನ್ನು ಹೊಟ್ಟೆಪಾಡಿನ ಅನಿವಾರ್ಯತೆಗೆ ಮಾಡುವ ಆ ಕಂದಮ್ಮಗಳಿಗೂ ಹೊತ್ತಿಗೆ ನಿಮಗೇನೂ ಕೊರತೆಮಾಡುವುದಿಲ್ಲ ತಿಂದುಂಡು ಸುಖವಾಗಿರಿ ಎಂದರೂ ರಂಪಮಾಡುತ್ತಾ ಮಾಧ್ಯಮಗಳ ಕಾರ್ಟೂನುಗಳಿಗಂಟಿಕೊಳ್ಳುವ ನಮ್ಮ ಮಕ್ಕಳಿಗೂ ತುಲನೆಮಾಡಿಕೊಂಡೆ. ಎಂತಹ ವಿಪರ್ಯಾಸ ನೋಡಿ: ಅಲ್ಲಿಗೂ ಇಲ್ಲಿಗೂ ಅಜಗಜಾಂತರ, ’ಪರಿಸ್ಥಿತಿ ಮನುಷ್ಯನನ್ನು ನಿರ್ಮಿಸುತ್ತದೆ’ ಎಂಬುದು ಸುಳ್ಳಲ್ಲ.

ಕೊನೆಯದಾಗಿ ನಿನ್ನೆಯ ಸಾಯಂಕಾಲದ ಒಂದು ಘಟನೆ. ಪತ್ನೀಪೀಡಕನಾಗಿ ಜೈಲು ಸೇರ್‍ರಿದ್ದ ಕನ್ನಡದ ನಟ ದರ್ಶನನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ ಸುದ್ದಿ ಕೇಳಿ ಸಾವಿರಾರು ಅಭಿಮಾನಿಗಳು ಆತನ ಮನೆಹತ್ತಿರ ಜಮಾಯಿಸಿಬಿಟ್ಟರಂತೆ! ಪಟಾಕಿ ಹಚ್ಚಿದರಂತೆ, ಕೇಕು ತಂದರಂತೆ. ಇಂತಹ ಅಭಿಮಾನಿಗಳೆಲ್ಲಾ ಪೊರ್ಕಿಜನ ಎಂಬುದನ್ನು ಮರೆಯುವ ಹಾಗಿಲ್ಲವಲ್ಲ. ಅಂತಹ ಜನರನ್ನು ಹಾಗೆ ಕಲೆಹಾಕಲು ನಟನಟಿಯರಿಗೆ ತಗಲುವ ಖರ್ಚು ಸುಮಾರು ಜಾಸ್ತಿಯೇ ಇರಬಹುದು! ಆದರೂ ಸಮಾಜದಲ್ಲಿ ಏನೂ ಬಿಲ್ಡಪ್ ತೋರಿಸದಿದ್ದರೆ ವರ್ಚಸ್ಸಿಗ್ಗೇ ಕಮ್ಮಿ ಎಂಬ ಅಂತ[ಸ್ತು]ರಂಗದ ಅನಿಸಿಕೆಯಿಂದ ಸಹೋದರನಿಗೋ ಇನ್ನಾರಿಗೋ ಹೇಳಿ ಹೀಗೆ ಮಾಡಿಸಿರಬಹುದು ಬಿಡಿ. ಎಲ್ಲಾರಂಗಗಳೂ ಗಬ್ಬೆದ್ದು ನಾರುವಾಗ ಮೊದಲೇ ವೇಷಧಾರಿಗಳಾಗಿ ವಿಜೃಂಭಿಸುವ ಸಿನಿಮಾರಂಗದಲ್ಲಿರುವವರ ನಾಟಕ, ವೇಷ, ರಾಜಕೀಯ, ರುಷುವತ್ತು ಇವುಗಳ ಬಗ್ಗೆ ಬರೆಯುವಾತನಿಗೆ ನಿತ್ಯವೂ ಒಂದಿಲ್ಲೊಂದು ಸುದ್ದಿ ದೊರೆಯಬಹುದು.

ಸಮಾಜ ವಿಚಿತ್ರವಾಗಿದೆ. ದರ್ಶನ್ ಮಾಡಿದ ಕೆಲಸವನ್ನು ಇನ್ಯಾರೋ ಶ್ರೀಸಾಮಾನ್ಯ ಮಾಡಿದರೆ ಜನತೆ ಕ್ಷಮಿಸುತ್ತಿರಲಿಲ್ಲ. ಯಾವ ಹೆಂಡತಿಗೂ ಕೊಟ್ಟ ದೂರನ್ನು ಮರಳಿಪಡೆಯುವ ಒತ್ತಡ ಅಷ್ಟಾಗಿ ಬರುತ್ತಿರಲಿಲ್ಲ! ಖೈದಿಯಾಗಿ ಒಮ್ಮೆ ಒಳಸೇರಿ ಹೊರಬಂದಮೇಲೆ ಮನೆಯವರನ್ನುಳಿದು ಯಾರೂ ಆತನನ್ನು ಸ್ವಾಗತಿಸುವ ಮನೋಸ್ಥಿತಿ ಉಳ್ಳವರಾಗಿರುವುದಿಲ್ಲ. ಖರ್ಚಿಗೆ ಕೊಟ್ಟು ಕರೆದರೂ ಬರುವುದಿಲ್ಲ! ಅದೇ ನಟನೊಬ್ಬ ಅಥವಾ ರಾಜಕಾರಣಿಯೊಬ್ಬ ಮಾಡಿದ ಅಪರಾಧಗಳು ಆಗಸದಲ್ಲಿ ಮಿಂಚು ಮಿಂಚಿ ಮರೆಯಾದಹಾಗೇ ಗುಡುಗಿ ಮಳೆಸುರಿಸದೇ ಸುಮ್ಮನಾಗುವ ಕೆಲವು ಮೋಡಗಳ ಹಾಗೇ ಏನೂ ನಡೆದೇ ಇಲ್ಲವೆಂಬ ರೀತಿ ಮಾಯವಾಗಿಬಿಡುತ್ತವೆ. ಈ ದಿಸೆಯಲ್ಲಿ ಅಧಿಕಾರಶಾಹಿಯಾದ ಬೀಜೇಪಿಯ ಉಡುಪಿ ಶಾಸಕ ರಘುಪತಿ ಭಟ್ಟ ಒಬ್ಬಾತ ಧುತ್ತನೇ ಕಾಣುತ್ತಾನೆ. ಹೋದ ಹೆಂಡತಿ ಹೋದಳು-ಇರುವಶಾಸಕನಿಗೆ ಜೀವದಾನ ಕೊಡಿ ಎಂದು ಮೇಲ್ದರ್ಜೆಯ ರಾಜಕಾರಣಿಗಳು ಉಸುರಿದರೇ ? ಗೊತ್ತಿಲ್ಲ.

ಸದಾ ಹೊಸಬಟ್ಟೆಯಲ್ಲೇ ಮಿರುಗಿತ್ತಿದ್ದ ಸಭೆಗಳಲ್ಲಿ ಸಮಾಜಕ್ಕೆ ಸದ್ಬೋಧನೆಗೈತಿದ್ದ ಹಾಲಪ್ಪನೆಂಬ ಮಂತ್ರಿ , ಸಿನಿಮಾರಂಗದಲ್ಲಿ ಮಸಲ್ ಪೂರಿ ಸಿನಿಮಾ ಗೀತಸಾಹಿತ್ಯವನ್ನು ಬರೆದು ಇಂದಿನ ಯುವ ಜನಾಂಗಕ್ಕೆ ಬೇಕಾದ್ದನ್ನೇ ಕೊಡುತ್ತಿರುವ ಯೋಗರಾಜ ಭಟ್ಟರ ’ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ ಯಾವತ್ತೂ ಹೋಗ್ಬಾರ್ದುರೀ’ ಹಾಡಿಗೆ ತಕ್ಕವನಾದ ಜಯಲಕ್ಷ್ಮೀ ಹೃದಯಾಂತರ್ಗತ ’ಜಗದ್ಗುರು ನರ್ಸ್ ರೇಣುಕ’ ಇನ್ನೂ ನೇಪಥ್ಯದಲ್ಲಿ ಖಾಯಂ ಪರಸ್ತ್ರೀಯರ ಶೀಲವನ್ನೇ /ಮೈಸುಖವನ್ನೇ ಮೇಯುತ್ತಿರುವ ಬಹುತೇಕ ರಾಜಕಾರಣಿಗಳು, ಸಿನಿಮಾ ರಂಗದ ದಿಗ್ಗಜ, ಆಗಜ ಈಗಜ, ಗಜ ಎಲ್ಲಾ ತೆರನಾದ ಗಜಗಳು ಇವರುಗಳನ್ನೆಲ್ಲಾ ನೆನಪಾದಾಗ ಸಾಮಜಿಕ ಸ್ವಾಸ್ಥ್ಯ ಎಂಬುದು ಬರೀ ಕಲ್ಪನೆಯೇ ಅಥವಾ ವಾಸ್ತವವೇ ಎಂಬ ಇಬ್ಬಂದಿತನ ಕಾಡುತ್ತದೆ.

ಮನುಷ್ಯ ಸಹಜವಾಗಿ ತಪ್ಪು ಮಾಡುತ್ತಾನೆ-ಸಮಾಜ ಅದನ್ನು ಕ್ಷಮಿಸಬೇಕು ಎನ್ನುವ ಹಲವರಲ್ಲಿ ನನ್ನದೊಂದು ಸಣ್ಣ ಪ್ರಶ್ನೆ, ಮನುಷ್ಯ ತಪ್ಪುಮಾಡದಿರಲಿ ಎಂಬ ಕಾರಣಕ್ಕೆ ನಮ್ಮ ಪೂರ್ವಜರು ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು ಬರೆದರು ಮತ್ತು ಅವುಗಳಲ್ಲಿ ತಮ್ಮಕಾಲಘಟ್ಟದ ಜೀವನಾನುಭವಗಳನ್ನು ಕಥೆಗಳನ್ನಾಗಿ ಉಪಕಥೆಗಳನ್ನಾಗಿ ಜೋಡಿಸಿದರು ಅಲ್ಲವೇ ? ಅವುಗಳನ್ನು ಓದುವ ವ್ಯವಧಾನ ಸಮಾಜದ ಮುಖಂಡಿರಿಗಿದೆಯೇ ? ಮಹತ್ವಾಕಾಂಕ್ಷಿಗಳಾಗಿ ದಿಲ್ಲಿ ಸರಕಾರದಲ್ಲೇ ಮಹೋನ್ನತ ಸ್ಥಾನವನ್ನು ಬಯಸುವವರು ಯಾರನ್ನೋ ಬಿಟ್ಟು ’ಮಹಾನ್ವೇಷಣ’ ಬರೆಸುತ್ತಾರೆ-ಬರೆದವರಿಗಾಗಲೀ ಬರೆಸಿದವಗಾಗಲೀ ಅದರ ತಲೆಬುಡ ಗೊತ್ತಿರುವುದಿಲ್ಲ! ಕೆಟ್ಟುಹೋದ ಸಮಾಜದಲ್ಲಿ ಮುಂದಾದರೂ ಭಾರತೀಯ ಕೌಟುಂಬಿಕ ಮೌಲ್ಯಗಳು ಮತ್ತೆ ಚಿಗುರಲಿ ಎಂಬ ಕಾರಣಕ್ಕಾಗಿ. ವಿಜೃಂಭಿಸುತ್ತಿರುವ ವಿದೇಶೀ ಸಂಸ್ಕೃತಿಯ ಕೊಡೆಯಾದ ಲಿವ್-ಇನ್, ಒನ್ ನೈಟ್ ಸ್ಟೇ, ಡೇಟಿಂಗ್ ಮುಂತಾದ ಅನೈತಿಕ ಸಂಪರ್ಕ-ಸಂಬಂಧಗಳು ನಾಶವಾಗಲಿ ಎಂಬ ಕಾರಣಕ್ಕಾಗಿ, ಪರೀಕ್ಷೆಗಳಲ್ಲಿ ಮತ್ತು ಜೀವನದಲ್ಲಿ ಹತಾಶೆಯಿಂದ, ನಿರಾಸೆಯಿಂದ, ನೋವಿನಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ಅಧಃಪತನಕ್ಕೆ ಇಳಿಯುವ ಜನರನ್ನು ಉದ್ದೇಶಿಸಲಾಗಿ ಕೆಲವು ಮಠಮಾನ್ಯಗಳು ಭಾರತೀಯ ಮೂಲದ್ದಾಗಿ ವಿಶ್ವವೇ ನಿಬ್ಬೆರಗಾಗಿ ಓದುವ ಬೌದ್ಧಿಕ ತರಬೇತಿ ಗ್ರಂಥ ’ಭಗವದ್ಗೀತೆ’ಯನ್ನು ಬೋಧಿಸಲು ಮುಂದಾದರೆ ರಾಜಕೀಯದ ಕೊಳಕರು ಅದರ ವಿರುದ್ಧ ಜನಾಂಗಗಳನ್ನು ಎತ್ತಿಕಟ್ಟುತ್ತಾರೆ; ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ ! ಇದು ಇಂದಿನ ಜೀವನದ ಮತ್ತೊಂದು ಮಜಲು.

ಮಾನಸಿಕ, ದೈಹಿಕ ಹಲವು ನೋವುಗಳನ್ನು ಸಹಿಸಿಯೂ ಕುಟುಂಬ ಒಡೆಯದಿರಲಿ, ತನ್ನ ಮಗನ ಭವಿಷ್ಯ ಹಾಳಾಗದಿರಲಿ, ತನ್ನಿಂದ ತನ್ನನ್ನು ಹೆಂಡತಿಯನ್ನಾಗಿ ಸ್ವೀಕರಿಸಿದವನ ಕಲಾಬದುಕಿನ ಭವಿಷ್ಯ ಕೆಡದಿರಲಿ ಎಂಬ ಕಾರಣಕ್ಕೆ ಭಾರತೀಯತೆಯನ್ನು ಮೆರೆದ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರಿಗೆ ನನ್ನದೊಂದು ಸಲಾಮು. ತನ್ನ ನೋವನ್ನೆಲ್ಲಾ ನುಂಗಿ ತಾನು ತಿರುಗಿ ಬಿದ್ದಿದ್ದೇ ಸುಳ್ಳೆಂದು ವಾದಿಸುತ್ತಾ ಯಾವುದೋ ವಿಷಮ ಘಳಿಗೆ ನಮ್ಮ ಬದುಕಿನಲ್ಲಿ ಘಟಿಸಿಹೋಗಿದೆ, ಅದನ್ನೆಲ್ಲಾ ಮರೆತಿದ್ದೇವೆ ಮತ್ತೆ ಒಂದಾಗಿ ಬದುಕುತ್ತೇವೆ ಎಂಬ ಅವರ ಮನೋವೃತ್ತಿಗೆ ಎಂತಹ ತಾಕತ್ತಿರಬೇಕು ಅನಿಸಿತು, ಅವರ ಕ್ಷಮಾಗುಣದ ಅರಿವಾಯಿತು. ಬಣ್ಣದ ರಂಗದಲ್ಲಿರುವ ಬಹುತೇಕರ ಹಿಂದೆ ಸದಾ ಅಪಸ್ವರಗಳು ಕೇಳುತ್ತಲೇ ಇರುತ್ತವೆ. ಅವು ಬೆಂಕಿಯಿರದೇ ಎದ್ದ ಹೊಗೆಯ ಸುರುಳಿಗಳಲ್ಲ! ಕೆಲವು ಆರುತ್ತವೆ; ಮತ್ತೆ ಕೆಲವು ಮುಂಬರುವ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರತಿಫಲನಗೊಳ್ಳುತ್ತವೆ!

ಮನುಷ್ಯನ ಬದುಕಿಗೆ ಕಲಾವಿದರು, ನಟನಟಿಯರು, ಸಂಗೀತಜ್ಞರು, ವಿದ್ವಾಂಸರು ಮಾದರಿಯೆನಿಸುತ್ತಾರೆ ! ಆ ಯಾ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಆ ಜನ ಕಚ್ಚೆಹರುಕರಾಗಿದ್ದರೆ ಸಮಾಜಕ್ಕೆ ಅವರಿಂದ ದುಷ್ಪರಿಣಾಮ ಉಂಟಾಗುತ್ತದೆ. ಪ್ರತಿಭಾವಂತರಬೇಕರು ಕೆಲವೊಮ್ಮೆ ಮಾನಸಿಕ ಉದ್ವಿಗ್ನರೂ ಒಂಥರಾ ಹುಚ್ಚರೂ ಆಗಿರುತ್ತಾರೆ. ಕೆಲವು ಸಂಗೀತಗಾರರ ಕೂದಲು, ದಿರಿಸುಗಳನ್ನು ಗಮನಿಸಿ! ಯಾಕೆ ಅವರೂ ಮನುಷ್ಯರಲ್ಲವೇ ಅನಿಸುತ್ತದೆ ತಾನೇ ? ನಾವು ಶ್ರೀಸಾಮಾನ್ಯರು, ಯುವಜನಾಂಗ ಇನ್ನಾದರೂ ತಿಳಿಯಬೇಕು ಏನೆಂದರೆ ಇಂತಹ ಯಾರೂ ನಮಗೆ ರೋಲ್ ಮಾಡೆಲ್ ಅಲ್ಲ. ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದರಲ್ಲಾ ಹಲವು ಗಣ್ಯರು ಅಂತಹ ದೇಶಭಕ್ತರು, ನೈತಿಕ ನಿಷ್ಠೆಯಿದ್ದವರು ನಮಗೆ ಆದರ್ಶವೆನಿಸಬೇಕೇ ಶಿವಾಯಿ ಇಂದಿನ ರಾಜಕಾರಣಿಗಳು,ಕಲಾವಿದರು, ಸಂಗೀತಗಾರರು [ಕ್ಷಮಿಸಿ ಕೆಲವು ಅಪವಾದಗಳು ಇರಲೂ ಸಾಕು] ನಮಗೆ ರೋಲ್ ಮಾಡೆಲ್ ಅಲ್ಲ. ಸರ್ವಜ್ಞನ ಕಾಲದಲ್ಲೂ ಕಚ್ಚೆಹರುಕರಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಯಾಕೆಂದ್ರೆ ಕವಿ ಹೇಳಿದ್ದಾನೆ

ಕಚ್ಚೆ ಕೈ ಬಾಯಿಗಳು ಇಚ್ಛೆಯಲಿ ಇದ್ದಿಹರೆ
ಅಚ್ಯುತನಪ್ಪ ಅಜನಪ್ಪ ಲೋಕದೊಳು
ನಿಶ್ಚಿಂತನಪ್ಪ | ಸರ್ವಜ್ಞ

-ಎಂಥಾ ಹಿತವಚನ ಅಲ್ಲವೇ ? ನಮ್ಮ ಇಂದ್ರಿಯಗಳು ನಮ್ಮ ಹಿಡಿತದಲ್ಲಿದ್ದರೆ ಆಗ ಜಗವನ್ನೂ ಜಯಿಸಬಹುದಂತೆ! ಕಾಲ, ದೇಶ ಯಾವುದೇ ಇದ್ದರೂ ಉತ್ತಮ ಅಂಶಗಳನ್ನು, ಉಚ್ಚ ಸ್ವಭಾವಗಳನ್ನು ಅಳವಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ನಮ್ಮೊಳಗೇ ಅವಿತಿರುವ ಕಾಮ,ಕ್ರೋಧ, ಲೋಭ, ಮೋಹ, ಮದ, ಮತ್ಸರ ಗಳೆಂಬ ರಾಕ್ಷಸೀ ಪ್ರವೃತ್ತಿಯನ್ನು ದಮನಗೊಳಿಸುವರೇ ಶರನ್ನವರಾತ್ರಿಯ / ವಿಜಯದಶಮಿಯ/ ದಸರೆಯ ಈ ಸಂದೇಶವನ್ನು ತಮ್ಮಲ್ಲಿ ಈ ಅಂಕಣದ ಮೂಲಕ ಪ್ರಚುರಪಡಿಸಲು ಪ್ರಯತ್ನಿಸಿದ್ದೇನೆ

ಮುಗಿಸುವ ಮುನ್ನ ಒಂದು ಸಣ್ಣ ಜೋಕು-- ’ ಮಾಡಿದ್ದುಣ್ಣೋ ಮಹರಾಯ ’ ಎಂಬ ನಾಟಕ ವೇದಿಕೆಯೇರುತ್ತಿದೆ. ಪರಿಕಲ್ಪನೆ ಮತ್ತು ಮೂಲ ಕಥೆ: ಶ್ರೀ ಅಣ್ಣಾ ಹಜಾರೆ. ಕದ್ದು ದುರುದ್ದೇಶಕ್ಕೆ ಗೀತರೂಪಕಕ್ಕೆ ಅಳವಡಿಸಿದವರು : ಕೇಂದ್ರ ಕಾಂಗೈ, ಚಪ್ಪರ ಚಾವಡಿ ಮತ್ತು ನೃತ್ಯ ಸಂಯೋಜನೆ : ಸಿಬಿಐ. ಪ್ರಧಾನ ಭೂಮಿಕೆಯಲ್ಲಿ : ಜನಾರ್ದನ ರೆಡ್ಡಿ, ಶ್ರೀನಿವಾಸ ರೆಡ್ಡಿ, ಇವರಿಂದ ಕೃತಜ್ಞತಾ ಪೂರ್ವಕ ರಂಗಸಜ್ಜಿಕೆಯನ್ನು ನಿರ್ಮಿಸಿಕೊಳ್ಳಲಾಗಿದೆ : ಕರ್ನಾಟಕ ಲೋಕಾಯುಕ್ತ. ಪ್ರಾಂತೀಯ ಜೋಕರ್‍ಗಳಾಗಿ ಕಟ್ಟಾ ಸುಬ್ರಹ್ಮಣ್ಯ ಮತ್ತು ಕಟ್ಟಾ ಜಗದೀಶ್. ಮೊದಲಬಾರಿಗೆ ಖಳನಾಯಕನಾಗಿ ಕುಮಾರಣ್ಣ. ಮರದಕೆಳಗೆ ಬಿದ್ದ ಮಂಗನ ಪಾತ್ರದಲ್ಲಿ ಯಡ್ಯೂರಣ್ಣ. ಹಿನ್ನೆಲೆ ಗಾಯನ : ’ಮಣ್ಣಿನಮಕ್ಕಳಿ’ಂದ! ನಾಟಕ ಪೊಗದಸ್ತಾಗಿದೆ! ಅಂತೂ ಜನತೆಗೆ ಜೀವ ಇಲ್ಲದಿದ್ದರೂ ನಿಸರ್ಗ ಒಬ್ಬರಮೇಲೆ ಇನ್ನೊಬರನ್ನಾದರೂ ಛೂ ಬಿಟ್ಟು ಕೊನೆಗೊಮ್ಮೆ ನಿಯಂತ್ರಿಸುವುದೇ ಕಥೆಯ ಮೂಲವಸ್ತು! ಇನ್ನೂ ಹಲವು ಪಾತ್ರಗಳು ಚೌಕಿಯಲ್ಲಿ [ಗ್ರೀನ್ ರೂಮ್] ಬಣ್ಣ ಮೆತ್ತಿಸಿಕೊಳ್ಳುತ್ತಾ ವೇಷ ಕಟ್ಟಿಕೊಳ್ಳುತ್ತಾ ಇವೆ, ವಿದ್ಯುತ್ ಅಭಾವ ಇರುವುದರಿಂದ ಸ್ತ್ರೀರಾಮುಲು ಸೀಮೆ ಎಣ್ಣೆ ಗ್ಯಾಸ್‍ಲೈಟುಗಳನ್ನು ಸಂಗ್ರಹಿಸುವತ್ತ ಹೋಗಿದ್ದಾರೆ! ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ,

ಮಧ್ಯೆ ಹೀಗೊಂದು ಹಾಡು ಹರಿದುಬರುತ್ತದೆ --

ಜೈಲಲ್ಲಿ ಕರಡೀಗೆ ಜಾಮೀನು ಕೊಡಿಸೋಕೆ
ಯಾವತ್ತು ಹೋಗ್ಬಾರ್ದುರೀ
ಲಾರೀಲಿ ಲೋಡ್‍ಮಾಡಿ ಮುಟ್ಟುಗೋಲ್ಹಾಕ್ಕೊಳಕೆ
ಯಾವತ್ತು ಮರಿಬಾರ್ದುರೀ
ಅವ್ನೊಬ್ಬ ಇವ್ನೊಬ್ಬ ಮತ್ತೊಬ್ಬ ಮಗದೊಬ್ಬ
ಗಣಿಗೊಬ್ಬ ಧಣಿಗೊಬ್ಬ ೨ಜಿ ಸ್ಪೆಕ್ಟ್ರಂಗೊಬ್ಬ
ಯಾರನ್ನೂ ಹೊರಗಡೆಗೆ ಬಿಡಬಾರ್ದುರೀ.........

[ದೇಶಾದ್ಯಂತ ಒಂದೇ ಪ್ರದರ್ಶನ. ಆಕಸ್ಮಿಕವಾಗಿ ಸಂಭವಿಸಿಬಹುದಾದ ರಾಜಕೀಯ ಅವಘಡಗಳಿಂದ ಪ್ರದರ್ಶನ ರದ್ದಾದರೆ ಯಾವುದೇಕಾರಣಕ್ಕೂ ಹಣಮರುಪಾವತಿ ಸಾಧ್ಯವಿಲ್ಲ, ಸಹೃದಯೀ ಪ್ರೇಕ್ಷಕರು ಸಹಕರಿಸಲು ಕೋರಿದೆ] ನಮಸ್ಕಾರ.

Posted by ವಿ.ಆರ್.ಭಟ್ (vrbhat06@gmail.com) on October 08, 2011 02:48 PM· permalink

ಯೋಗರಾಜ ಭಟ್ಟರ ಹೊಸ ಪರಮಾತ್ಮ

 ಯೋಗರಾಜ ಭಟ್ಟರ ಹೊಸ ಪರಮಾತ್ಮ


 



ಪರಮ ಆತ್ಮ ವಿಶ್ಲೇಶಿಸುತ್ತಾ ತನ್ನ ಖುಷಿಯೋ ಶಾಂತಿಯೋ ಅನ್ವೇಷಣೆಯನ್ನು ಕ್ಲಾಸಿನಲ್ಲಿ ಡುಮ್ಕಿ ಹೊಡೆದೋ, ಹೊಡೆದಾಟದಲ್ಲೋ ಸಿಗದೆ ಹಿಮಾಲಯದಲ್ಲೂ ಅರಸಿ ಕಾಣದೇ ನೇಪಾಲದಲ್ಲೂ ಅರಸಿ ಸಿಗದೇ, ಅವನಿಗೆ ಒಪ್ಪೂ ಹಾಕದ ಗಂಡು ಹುಡುಗಿಯಲ್ಲಿ ಕಂಡು ಅವಳ ಪ್ರೇಮದಲ್ಲಿ, ಸಂಗದಲ್ಲಿ ತನ್ನ ಸುಖವನ್ನರಸುತ್ತಾನೆ ಪಾಪ ಪರಮಾತ್ಮ.

 

ಮುಂದೆ ಓದಿ...

Posted by gopinatha on October 08, 2011 02:18 PM· permalink

"ದಾರಿ ......ಯಾವುದಯ್ಯಾ!!!?"

ದಾರಿಗಳಲ್ಲಿ ಹಲವು ದಾರಿ !
ಹೆದ್ದಾರಿ,ಕಾಲುದಾರಿ ,
ಅಡ್ಡ ದಾರಿ,ಕವಲು ದಾರಿ ,
ಆ ದಾರಿ,ಈ ದಾರಿ,
ಹಲ ಕೆಲವು ದಾರಿ!
ದಾರಿಗಳಲ್ಲಿ ಹಲವು ಪರಿ!
ಕೆಲವರದ್ದು ಬರೀ ಪಿರಿ ಪಿರಿ!
ಬದುಕುವುದಕ್ಕೆ........
ಒಬ್ಬೊಬ್ಬರಿಗೊಂದೊಂದು ದಾರಿ!
ಕೆಲವರಿಗೆ.............,
ತಾವು ಹಿಡಿದಿದ್ದೇ  ದಾರಿ!
ಬಡವನಿಗೆ  ಪಾಪ 
ಎಲ್ಲವೂ ದುಬಾರಿ !
ಹಣವಿದ್ದವರಿಗೋ ......,
ಎಲ್ಲದಕ್ಕೂ ರಹ ದಾರಿ!
ಕೆಲವೊಮ್ಮೆ ದಾರಿ ಕಾಣದೇ
ರಾಘವೇಂದ್ರನಿಗೆ............,
ಮೊರೆಯಿಡುವುದೊಂದೇ ದಾರಿ!
ನನಗೆ ನನ್ನ ದಾರಿ!
ನಿಮಗೆ ನಿಮ್ಮ ದಾರಿ!
ಅವರವರ ದಾರಿಯಲ್ಲಿ 
ಅವರವರು ನಡೆದೂ ನಡೆದೂ 
ಕೊನೆಗೆ................,
ಅವರೂ.......... ಇಲ್ಲ!
ದಾರಿಯೂ...... ಇಲ್ಲ !
ಎಲ್ಲವೂ ...............,
ಬಯಲು.... ದಾರಿ!!!
ಅದಕ್ಕೇ  ಅಲ್ಲವೇ 
ದಾಸರು ದಾರಿ ಕಾಣದೇ
ಕೊನೆಗೆ ................,
ದಾರಿ ಯಾವುದಯ್ಯಾ....?
ಎಂದು ಹಾಡಿದ್ದು ........!!!

Posted by Dr.D.T.Krishna Murthy. (noreply@blogger.com) on October 08, 2011 01:41 PM· permalink

ಈ ರೀತಿ ಶರಣಾದ ಪ್ರೀತಿ

    ಇದು ಪ್ರಕಾಶ್ ಹೆಗಡೆಯವರು ಬರೆದ "ರೀತಿ" ಕಥೆಯ ಮುಂದುವರಿದ ಭಾಗ ನನಗಿಂತ ಮೊದಲು ಪ್ರಕಾಶ್ ಹೆಗಡೆಯವರು, ಅಜಾದ್, ದಿನಕರ್ ಸರ್, ಪ್ರವೀಣ್, ಬಾಲು ಸರ್, ಬದರಿನಾಥ ಪಾಲವಳ್ಳಿ, ಸುಗುಣಕ್ಕ ಮತ್ತು ಸೀತರಾಂ ಸರ್ ಬರೆದಿದ್ದಾರೆ. ಅದರ ಮುಂದಿನ ಭಾಗ ನಾನು ಬರೆದಿದ್ದೀನೆ. ನೀವೆಲ್ಲ ಒಮ್ಮೆ ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ..
      

         ಪುಟ್ಟಣ್ಣಿ ತನ್ನ ಇಷ್ಟುದಿನದ ಬದುಕಿನಲ್ಲಿ ಎಂದೂ ಅಷ್ಟು ಗಟ್ಟಿಯಾಗಿ ಆತನ ಸುಕ್ಕುಗಟ್ಟಿದ್ದ ಕೈಗಳನ್ನು ಹಿಡಿದಿರಲಿಲ್ಲ. ಹಾಗಂತ ಅವಳ ಕೈಗಳೇನು ಯುವತಿಯ ಅಂಗೈನಂತೆ ಸುಕೋಮಲವಾಗಿರಲಿಲ್ಲ. ಅವಳ ಕೈಗಳು ಅವನಷ್ಟೇ ಸುಕ್ಕುಗಟ್ಟಿದ್ದವು.  ಕಿಟ್ಟಾಣಿ ಸುಕ್ಕುಗಟ್ಟಿದ್ದ ತನ್ನ ಕೈಯಲ್ಲಿ ಅವಳ ಅಂಗೈಯನ್ನು ಹಿಡಿದಿದ್ದರೂ ಅದರಲ್ಲಿ ಸುಕ್ಕಿರಲಿಲ್ಲ. ಬದಲಾಗಿ ಆಗ ತಾನೆ ಹೊಸದಾಗಿ ಮದುವೆಯಾದ ಗಂಡು ಹೆಣ್ಣು ಸಪ್ತಪದಿ ತುಳಿದ ಮೇಲೆ ಅವಳ ಸೆರಗನ್ನು ಅವನ ಹೆಗಲ ಮೇಲಿನ ವಸ್ತ್ರಕ್ಕೆ ಗಂಟುಹಾಕಿ ಅವನ ಎಡಗೈ ಅಸ್ತದಿಂದ ಅವಳ ಬಲಗೈ ಅಸ್ತವನ್ನು ಹಿಡಿಸಿದಾಗ ಮೊದಲ ಭಾರಿಗೆ ಉಂಟಾಗುತ್ತದಲ್ಲ ಕಂಪರ್ಟ್ ಎನ್ನುವ ಅನುಭೂತಿ ಅದೇ ಇವತ್ತು ಅವಳಿಗೆ ಆಗಿತ್ತು. ಅವನ ಮಿದುವಾದ ಹಿಡಿತದಲ್ಲಿ ವಾತ್ಸಲ್ಯಮಯ ಅಪ್ಪನಿರಬಹುದಾ, ಮಮತೆಯ ಅಮ್ಮನಿರಬಹುದಾ, ಪುಟ್ಟ ಮಕ್ಕಳ ಅಂಗಾಲಿನಷ್ಟೇ ಮಿತವೆನಿಸುವ ಮುಗ್ದ ಮಗ ಅಥವ ಮಗಳಿರಬಹುದಾ, ಬದುಕಿಗೆ ದಾರಿ ತೋರುವ ಗುರುವಿರಬಹುದಾ, ಕೇಳಿದ್ದೆಲ್ಲಾ ಕೊಡುವ ದೇವರಿರಬಹುದಾ, ಇವೆಲ್ಲ ಭಾವಗಳ ಜೊತೆಗೆ ಕಾಮವನ್ನು ಪ್ರೇಮಮಯವನ್ನಾಗಿಸುವ ಗಂಡನಿರಬಹುದಾ? ನಿರೀಕ್ಷೆಯಿಲ್ಲದ ನಿಶ್ಕಲ್ಮಶ ಮನಸ್ಸಿನ ಜೀವದ ಗೆಳೆಯನಿರಬಹುದಾ? ಆ ಕ್ಷಣ ಅವಳೆಷ್ಟು ಯೋಚಿಸಿದರೂ ಉತ್ತರ ಸಿಗಲಿಲ್ಲ.

       ಮೊದಲ ಭಾರಿಗೆ ಬದುಕಿನಲ್ಲಿ ಇಷ್ಟು ಗಾಢವಾದ ದಟ್ಟ ಅನುಭವವನ್ನು ಕೊಡುತ್ತಿರುವ ಆತನ ಅಂಗೈ ಹಿಡಿತವನ್ನು ಅನುಭವಿಸುತ್ತಿರುವ ನಾನು ಉತ್ತರವನ್ನೇಕೆ ಹುಡುಕಲು ಪ್ರಯತ್ನಿಸುತ್ತಿರುವೆ, ನಾನೆಂತ ದಡ್ಡಿ, ಕೆಲವೊಮ್ಮೆ ಇಂಥವಕ್ಕೆ ಅರ್ಥ ಹುಡುಕಲು ಪ್ರಯತ್ನಿಸಬಾರದು ಅನುಭವಿಸಿಬಿಡಬೇಕು ಅಂದುಕೊಂಡು ಎಲ್ಲವನ್ನು ಮರೆತು ಮಗುವಿನಂತೆ ಆತನ ಜೊತೆ ನಿದಾನವಾಗಿ ಹೆಜ್ಜೆ ಹಾಕತೊಡಗಿದಳು. ಅವರಿಬ್ಬರ ಹೆಜ್ಜೆಗಳು ಮುಂದೆ ಸಾಗಿದಂತೆ ಅವಳ ನೆನಪುಗಳ ಸುರುಳಿ ಹಿಂದಕ್ಕೆ ಓಡಲಾರಂಭಿಸಿತ್ತು.

    ಅವರಿಬ್ಬರ ಹೆಜ್ಜೆಗಳು ಅದ್ಯಾಕೋ ವೇಗವಾಗಿರಲಿಲ್ಲ ಮತ್ತು ಒತ್ತಡವಂತೂ ಇರಲೇ ಇಲ್ಲ. ಏಕೆಂದರೆ ಅವರಿಬ್ಬರೂ ನವದಂಪತಿಗಳಾಗಿರಲಿಲ್ಲ. ಮದ್ಯವಯಸ್ಕರಂತೂ ಆಗಿರಲೇ ಇಲ್ಲ. ಈ ಮದ್ಯ ವಯಸ್ಕ ದಂಪತಿಗಳ ಬದುಕೇ ಹಾಗೆ. ಮಗ ಅಥವ ಮಗಳನ್ನು ಒಳ್ಳೆ ಸ್ಕೂಲಿಗೆ ಸೇರಿಸಬೇಕು, ಮಕ್ಕಳನ್ನು ಮದುವೆ ಮಾಡಬೇಕು, ಎದುರು ಮನೆಯ ಗೆಳತಿ ಕಾಂಜಿವರಂ ಸೀರೆ ಉಟ್ಟಿದ್ದಾಳೆ ನಾನು ಕೊನೇ ಪಕ್ಷ ಕ್ರೇಪ್ ಸಿಲ್ಕ್ ಸೀರೆಯನ್ನಾದರೂ ಉಡಬೇಕು,  ಆತ ಸ್ಕೋಡ ತಗೊಂಡಿದ್ದಾನೆ ನಾನು ಕೊನೇ ಪಕ್ಷ ಮಾರುತಿ ಆಲ್ಟೋ ಕಾರಿನಲ್ಲಿ ಅವನ ಮುಂದೆ ಸಾಗಬೇಕು, ಅವನು ಮನೆ ಕಟ್ಟಿಸಿಬಿಟ್ಟಿದ್ದಾನೆ ನಾನು ಸೈಟಾನ್ನಾದರೂ ಕೊಳ್ಳಬೇಕು...ಹೀಗೆ. ಆದ್ರೆ ಆಗ ತಾನೆ ಮದುವೆಯಾದ ನವ ದಂಪತಿಗಳಿಗೆ ಪ್ರಪಂಚದ ಪರಿವೇ ಇಲ್ಲ. ಯಾವುದರ ಬಗ್ಗೆಯೂ ಚಿಂತೆಯಿಲ್ಲ. ಅವರಿಬ್ಬರೂ ಮೈಮರೆತು ಕುಳಿತರೆ, ನಿಂತರೆ, ನಡೆದರೆ, ಸಾಗಿದರೆ....ಹೀಗೇ ಏನಾದರಾಗಲಿ, ಪ್ರತಿಕ್ಷಣವೂ ವರ್ಣಿಸಲಾಗದ ಆನಂದ. ಅವರ ಕಣ್ಣಿಗೆ ಪ್ರಪಂಚ ಕಾಣುವುದಿಲ್ಲ. ಕಾಣುವುದೆಲ್ಲಾ ಅವರಿಬ್ಬರ ಬದುಕು ಮಾತ್ರ. ಹಾಗೆ ವಯಸ್ಸಾದ ದಂಪತಿಗಳಿಗೂ ಒಂಥರ ಹೀಗೇನೇ. ಎಲ್ಲಾ ಜವಾಬ್ದಾರಿಗಳನ್ನು ಮುಗಿಸಿ, ಒಬ್ಬರಿಗೊಬ್ಬರು ಹೆಗಲ ಮೇಲೆ ಕೈಗಳನ್ನು ಹಾಕಿಕೊಂಡು ಪ್ರಪಂಚವನ್ನು ಮರೆತು ಅನುಭವದ ದಾರಿಯಲ್ಲಿ ಸಾಗುತ್ತಿರುತ್ತಾರೆ. ಇಲ್ಲಿಯೂ  ಹಾಗೆ ಅರವತ್ತು ದಾಟಿದ ಪುಟ್ಟಣ್ಣಿ ಮತ್ತು ಕಿಟ್ಟಾಣಿ ಸಾಗುತ್ತಿದ್ದಾರೆ ಅಂದುಕೊಂಡಿದ್ದರೆ ಕಿಟ್ಟಾಣಿ ಪ್ರಕಾರ ಹೌದು. ಅವನು ಬದುಕಿನ ಪ್ರತಿಕ್ಷಣ ಅನುಭವಿಸುತ್ತಾ ಇದ್ದವನು ಈಗಲೂ ಆಕೆಯ ಹಸ್ತದ ಹಿತವಾದ ಬಿಸಿಯನ್ನು ಅನುಭವಿಸುತ್ತಾ ಪ್ರಪಂಚವನ್ನೇ ಮರೆತು ತನ್ನದೇ ಲೋಕದಲ್ಲಿ ತೇಲುತ್ತಿದ್ದಾನೆ. ಆದ್ರೆ ಪುಟ್ಟಾಣಿ ವಿಚಾರದಲ್ಲಿ ಆಗಿಲ್ಲ. ಏಕೆಂದರೆ ಅವಳು ಈ ಕ್ಷಣವನ್ನು ಪೂರ್ತಿಯಾಗಿ ಅನುಭವಿಸದೇ ತನ್ನ ಯೌವ್ವನದ ನೆನಪಿನಲ್ಲಿ ಹಿಂದಕ್ಕೆ ಓಡುತ್ತಿದ್ದಾಳೆ.

        ಅಪ್ಪನ ಇಷ್ಟದಂತೆ ಮದುವೆ, ನಾವಿಬ್ಬರೂ ಮೊದಲ ರಾತ್ರಿ ಒಬ್ಬರ ಮನಸ್ಸನ್ನು ಮತ್ತೊಬ್ಬರು ಅರಿತುಕೊಳ್ಳಲು ಪ್ರಯತ್ನಿಸಿದ್ದು ಆತನ ಹಳೆಯ ಪ್ರೇಮದ ಬಗ್ಗೆ ನನಗೆ ಮೂಡಿದ ಅಸಮದಾನ, ಅದೆಷ್ಟೋ ರಾಗಿಣಿ, ಜಯಂತುಗಳಿಂದ ಬಂದರು ಅವರಿಂದ ಉಂಟಾದ ಸಂಶಯಗಳು, ಗೆಳೆಯ ಗೆಳೆತಿಯರ ಬಗ್ಗೆ ಮೂಡಿದ ಸಂಶಯಗಳು.... ಒಂದಾ ಎರಡಾ,... ಮುಂದೆ ನಮ್ಮಿಬ್ಬರಲ್ಲಿ ಪುಟ್ಟ ವಿಚಾರಗಳಿಗೆ ಉಂಟಾದ ಹಟಗಳು, ಹೀಗೋಯಿಸಂಗಳು,...ಇವು ನಮ್ಮ ಬದುಕನ್ನೇ ನುಂಗಿ ನೀರು ಕುಡಿದಿದ್ದವು. ಇದರಲ್ಲಿ ತಪ್ಪು ಯಾರದು? ನನ್ನದ ಅಥವ ಕಿಟ್ಟಾಣಿದಾ! ಉತ್ತರ ಹುಡುಕಲು ಪ್ರಯತ್ನಿಸುತ್ತಿರುವಾಗಲೇ ನಮಗೆ ಒಂದು ಗಂಡು ಒಂದು ಹೆಣ್ಣು ಮಕ್ಕಳಾದವು. ಅವರ ಬೆಳವಣಿಗೆ, ಓದು, ಮದುವೆ....ಇವೆಲ್ಲದರ ನಡುವೆ ತಪ್ಪು ಯಾರದೂ ಅಂತ ಕಂಡುಕೊಳ್ಳುವ ಪ್ರಯತ್ನದಲ್ಲಿ ನಮ್ಮ ವಯಸ್ಸು ಅರವತ್ತು ದಾಟಿಬಿಟ್ಟೆವಲ್ಲ!  ಉತ್ತರ ಸಿಕ್ಕಿತಾ ಅಂದುಕೊಂಡರೆ ಇಲ್ಲ.

       ನಿತ್ಯ ಸಣ್ಣ ಸಣ್ಣದಕ್ಕೂ ಒಬ್ಬರಿಗೊಬ್ಬರೂ ಮುನಿಸಿಕೊಳ್ಳುತ್ತಿದ್ದನ್ನು ಬೆಳೆದ ಮಕ್ಕಳು ಗಮನಿಸಿದ್ದಾರೆ. ಅವರಿಬ್ಬರಿಗೂ ಅವರಿಷ್ಟಪಟ್ಟಂತೆ ಮದುವೆಯಾಗಿದೆ.  ಈಗಿನ ಮಕ್ಕಳ ರೀತಿಯೇ ಬೇರೆ.  ಬದುಕಿನ ಪ್ರತಿಕ್ಷಣವನ್ನು ಅನಂದಿಸುತ್ತಾರೆ. ಅವರ ಆನಂದದ ನಡುವೆ ನಮ್ಮನ್ನು ಗಮನಿಸಿದ್ದಾರೆ. ನಾವು ಏನನ್ನೋ ಕಳೆದುಕೊಂಡಿದ್ದೇವೆ ಅಂತ ಅವರಿಗನ್ನಿಸುವ ಹೊತ್ತಿಗೆ ನನಗೆ ಅರವತ್ತು ಚಿಟ್ಟಾಣಿಗೆ ಅರವತ್ತೈದು. ಒಂದು ವಾರ ನಮ್ಮನ್ನೆಲ್ಲಾ ಮರೆತು ಸುತ್ತಾಡಿಕೊಂಡು ಖುಷಿಯಾಗಿ ಬನ್ನಿ ಅಂತ ಒಂದು ಪ್ರವಾಸದ ಪ್ಯಾಕೇಜ್ ಮಾಡಿ ಕಳಿಸಿದ್ದಾರೆ. ಈ ಪ್ರವಾಸವಾದರೂ ಎಂಥದ್ದು ನಮ್ಮ ವಯಸ್ಸಿಗೆ ತಕ್ಕಂತೆ ದೇವಸ್ಥಾನ ತೀರ್ಥಕ್ಷೇತ್ರಗಳೊಂದು ಇಲ್ಲ. ಮೊದಲೆರಡು ದಿನ ರಿಸಾರ್ಟು, ನಂತರ ಕೆಮ್ಮಣ್ಣುಗುಂಡಿಯಂತ ಗಿರಿಧಾಮದಲ್ಲಿ ರೆಲ್ಯಾಕ್ಸು, ಅಲ್ಲಿಂದ ಮುಂದಕ್ಕೆ ನೇರವಾಗಿ ಪ್ರಖ್ಯಾತ ಜೋಗ್ ಫಾಲ್ಸ್. ನನ್ನ ತುಂಟ ಮಗಳಂತೂ "ಅಮ್ಮ ಇದು ನಿಮ್ಮಿಬ್ಬರಿಗೂ ಛಾನ್ಸ್ ಎರಡನೇ ಹನಿಮೂನ್ ಮುಗಿಸಿಕೊಂಡು ಬನ್ನಿ" ಅಂತ ಕಣ್ ಹೊಡೆದು ಕಳಿಸಿದ್ದು ಯಾಕೆಂದು ಈಗ ಅರ್ಥವಾಗುತ್ತಿದೆ.

  ತಾವು ಉಳಿದುಕೊಂಡಿದ್ದ ರಿಸಾರ್ಟ್‍ನಿಂದ ಜೋಗ್ ಫಾಲ್ಸ್ ಒಂದು ಕಿಲೋಮೀಟರ್ ಇದ್ದಿದ್ದರಿಂದ ಇಬ್ಬರು ಕೈ ಕೈ ಹಿಡಿದು ನಡೆದುಕೊಂಡು ಹೋಗುತ್ತಿದ್ದಾರೆ.  ಅರ್ಧ ಕಿಲೋಮೀಟರ್ ದಾರಿ ಸಾಗಿರಬೇಕು ತನ್ನದೇ ಹಳೆಯ ನೆನಪುಗಳಲ್ಲಿ ಮುಳುಗಿ ಹೋಗಿದ್ದ ಪುಟ್ಟಾಣಿ ಸಣ್ಣದೊಂದು ಕಲ್ಲನ್ನು ಎಡವಿ ಮುಗ್ಗರಿಸಿ ಬೀಳಬೇಕೆನ್ನುವಷ್ಟರಲ್ಲಿ ಗಟ್ಟಿಯಾಗಿ ಹಿಡಿದುಕೊಂಡ ಕಿಟ್ಟಾಣಿ ಅವಳನ್ನೊಮ್ಮೆ ನೋಡಿ " ಯಾವ ಲೋಕದಲ್ಲಿದ್ದೀಯ" ಕೇಳಿದ.  ಅವಳು ಉತ್ತರಿಸಲಿಲ್ಲ ಅವನನ್ನೊಮ್ಮೆ ನೋಡಿ ನಕ್ಕಳಷ್ಟೇ. ಮುಂದೆ ಇಬ್ಬರ ನಡುವೆ ಮಾತಿರಲಿಲ್ಲ. ನಡುವೆ ಒಮ್ಮೆ ಕಿಟ್ಟಾಣಿಯ ಮುಖವನ್ನೊಮ್ಮೆ ಪುಟ್ಟಾಣಿ ತಿರುಗಿ ನೋಡಿದಳಲ್ಲ!  ಅರೆರೆ ಇವತ್ತು ಇವರ ಮುಖ ತುಂಬಾ ಚೆನ್ನಾಗಿ ಕಾಣುತ್ತಿದೆಯಲ್ಲ!  ಮುಖದಲ್ಲಿ ವಯಸ್ಸಾಗಿರುವುದು ಕಾಣುತ್ತಿದ್ದರೂ ನನ್ನ ಗಂಡನೆನ್ನುವ ಕಾರಣಕ್ಕೆ ತುಂಬಾ ಇಷ್ಟವಾಗುತ್ತಿದೆಯಲ್ಲಾ! ಈ ಇಷ್ಟಕ್ಕೆ ಕಾರಣವೇನು?  ಮದುವೆಯಾದ ಹೊಸತರಲ್ಲಿ, ಮೊದಲ ರಾತ್ರಿಯಲ್ಲಿ ನಂತರದ ದಿನಗಳಲ್ಲಿ ಯುವ ಸುರಸುಂದರಾಂಗನಾಗಿದ್ದರೂ ಅವತ್ತಿಗಿಂತ ಇವತ್ತಿನ ಅವರ ತೃಪ್ತಿ ತುಂಬಿದ ಮುಖ ತುಂಬಾ ಅಪ್ಯಾಯಮಾನವಾಗುತ್ತಿದೆಯಲ್ಲ! ಮತ್ತೆ ಮತ್ತೆ ನೋಡಬೇಕೆನಿಸುತ್ತಿದೆಯಲ್ಲ!  ಈ ರೀತಿ ಕದ್ದು ಮುಚ್ಚಿ ನೋಡುವುದರಲ್ಲಿ ಅದೊಂತದೋ ವರ್ಣಿಸಲಾಗದ ಖುಷಿಯಿದೆ. ಸಿಹಿಯನ್ನು ಸ್ವಲ್ಪ ಸ್ವಲ್ಪ ತಿಂದಷ್ಟು ರುಚಿ ಹೆಚ್ಚು. ಹಾಗೆ ಸ್ವಲ್ಪ ಸ್ವಲ್ಪವೇ ಆತನ ಮುಖವನ್ನು ಕಿರುಗಣ್ಣಿನಿಂದ ನೋಡುವುದರಲ್ಲಿ ವರ್ಣಿಸಲಾಗದ ಖುಷಿ ಮನಸ್ಸಿಗೆ. ಹಾಗೆ ದಾರಿಯುದ್ದಕ್ಕೂ ಅವನಿಗರಿವಿಲ್ಲದಂತೆ ಕಿರುಗಣ್ಣಿನಲ್ಲೇ ನೋಡುತ್ತಾ ಸಾಗಿದಳು. ಜೋಗ್ ಫಾಲ್ಸ್ ಬಂದೇ ಬಿಡ್ತು.

   ಅದೆಷ್ಟೋ ವರ್ಷಗಳ ನಂತರ ಜೋಗ್ ಫಾಲ್ಸ್ ಇವತ್ತು ಈ ಕ್ಷಣದಲ್ಲಿ ಅವರಿಗೆ ತುಂಬಾ ಚೆನ್ನಾಗಿ ಕಾಣುತ್ತಿದೆ.  "ಅರೆರೆ ಅಲ್ಲಿ ನೋಡ್ರಿ, ಜೋಗ್ ಫಾಲ್ಸ್ ನಡುವೆ ಕಾಮನ ಮೂಡಿದೆ" ವಾಹ್! ಸೂಪರ್ ಅಲ್ಲೇ ಮಗುವಿನಂತೆ ಕುಣಿದಾಡಿದಳು ಪುಟ್ಟಾಣಿ. ಜೋಗ್ ಫಾಲ್ಸ್ ಮುಂದೆ ಕಾಮನಬಿಲ್ಲು ಯಾವಾಗಲೂ ಬರುವುದಿಲ್ಲ. ಮತ್ತು ಎಲ್ಲರಿಗೂ ಕಾಣಿಸಿಕೊಳ್ಳುವುದಿಲ್ಲ.  ಅಪರೂಪಕ್ಕೆ ಕಾಣಿಸುವ ಅದನ್ನು ನೋಡುವವರೇ ಅದೃಷ್ಟವಂತರು. ಅಂತ ಅದೃಷ್ಟ ನಮಗಿದೆಯಲ್ಲ ಅವರಿಬ್ಬರೂ ಕುಣಿದಾಡಿದರು.

     "ಪುಟ್ಟಾಣಿ, ನಿನಗೊಂದು ವಿಶೇಷವನ್ನು ತೋರಿಸಲೇನೋ" ಹೇಳಿದ ಕಿಟ್ಟಾಣಿ ಪ್ರೀತಿಯಿಂದ.

      ಕಾಮನಬಿಲ್ಲನ್ನು ಮೈಮರೆತು ಕಣ್ತುಂಬಿಕೊಳ್ಳುತ್ತಿದ್ದ ಪುಟ್ಟಾಣಿ ಆತನ ಮಾತು ಕೇಳಿ ಅವನತ್ತ ತಿರುಗಿದಳು.

      " ಇಲ್ಲಿ ನೋಡೋ" ಅಂತ ಪ್ರೀತಿಯಿಂದ ಕರೆದು, "ನಿನಗೆ ಇದೇ ಕಾಮನಬಿಲ್ಲನ್ನು ನನ್ನ ಕಣ್ಣಲ್ಲಿ ತೋರಿಸುತ್ತೇನೆ"

      "ಹೌದಾ, ಹೇಗೆ ತೋರಿಸ್ತೀರಿ"

      ಆದ್ರೆ ಒಂದು ಷರತ್ತು.  ನೀನು ನನ್ನ ಕಣ್ಣಲ್ಲಿ ಕಣ್ಣಿಟ್ಟು ಒಂದು ಕ್ಷಣವೂ ಮಿಟುಕಿಸದೇ ನೋಡಬೇಕು.

      "ಒಹ್! ಖಂಡಿತ. ಆದ್ರೆ ನೀವು ಕಣ್ಣು ಮಿಟುಕಿಸುವುದಿಲ್ಲವೇ?

       "ಇಲ್ಲ ಇಲ್ಲ ನಿನಗೆ ಕಾಮನಬಿಲ್ಲು ತೋರಿಸಲಿಕ್ಕಾಗಿ ನಾನು ಒಮ್ಮೆಯೂ ಕಣ್ಣು ಮಿಟುಕಿಸುವುದಿಲ್ಲ

       ಇದೇ ಮಾತಾ? ನೀವು ಮಿಟುಕಿಸಿ ಸೋತರೇ?

       ಸೋತರೆ ನೀನು ಏನು ಕೇಳಿದರೂ ಕೊಡಿಸುತ್ತೇನೆ, ನೀನು ಸೋತರೆ?

       ನಾನು ಒಮ್ಮೆಯೂ ಕಣ್ಣು ಮಿಟುಕಿಸದೇ ನಿಮ್ಮ ಕಣ್ಣನ್ನೇ ನೋಡುತ್ತೇನೆ. ನಾನು ಮಿಟುಕಿಸಿದಲ್ಲಿ ನೀವು ಕೇಳಿದ್ದನ್ನು ಕೊಡುತ್ತೇನೆ. ಕಿಟ್ಟಾಣಿ ಒಂದು ಕಲ್ಲುಬೆಂಚಿನ ಮೇಲೆ ಕಾಮನ ಬಿಲ್ಲಿಗೆ ಅಭಿಮುಖವಾಗಿ ಖುಳಿತ.

       ಆಯ್ತು ಈಗ ಪ್ರಾರಂಭಿಸೋಣವಾ? ಕೇಳಿದ ಕಿಟ್ಟಾಣಿ. ಆಯ್ತು ಎಂದಳು.

       ಕಣ್ಣು ನಿದಾನವಾಗಿ ತೆರೆದ. ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡತೊಡಗಿದಳು ಪುಟ್ಟಾಣಿ.

        ಐದು ಸೆಕೆಂಡುಗಳಾಯಿತು. ಜೋಗ್ ಫಾಲ್ಸ್ ಜಲಪಾತದ ಮುಂದೆ ಸೃಷ್ಟಿಯಾಗಿದ್ದ ಕಾಮನಬಿಲ್ಲು ಅವನ ಕಣ್ಣಿನಲ್ಲಿ ನಿದಾನವಾಗಿ ಅಸ್ಪಸ್ಟವಾಗಿ ಅವಳಿಗೆ ಕಾಣತೊಡಗಿತು.  ಹತ್ತು ಸೆಕೆಂಡುಗಳು ಕಳೆದವು. ಈಗ ಸ್ಪಷ್ಟವಾಗಿ ತುಂಬಾ ಚೆನ್ನಾಗಿ ಕಾಣುತ್ತಿದೆ ಕಾಮನಬಿಲ್ಲು. ಇಬ್ಬರಲ್ಲೂ ಗೆಲ್ಲಬೇಕೆನ್ನುವ ಚಲದಲ್ಲಿ ಒಮ್ಮೆಯೂ ಮಿಟುಕಿಸಲಿಲ್ಲ. ಅವಳ ದೃಷ್ಟಿ ಅವನ ದೃಷ್ಟಿಗೆ ಮತ್ತಷ್ಟು ನೇರವಾಯಿತು. ಇಬ್ಬರಲ್ಲಿ ಒಬ್ಬರೂ ಒಮ್ಮೆಯೂ ಮಿಟುಕಿಸುತ್ತಿಲ್ಲ. ಇನ್ನತ್ತು ಸೆಕೆಂಡುಗಳು ಕಳೆದವು. ನಿದಾನವಾಗಿ ಸ್ಪರ್ಧೆಯನ್ನು ಮರೆತ ಅವರಿಬ್ಬರ ಕಣ್ಣುಗಳು ನಿದಾನವಾಗಿ ಒಂದಾಗುತ್ತಿವೆ.  ಈಗ ಪುಟ್ಟಣ್ಣಿಯ ಕಣ್ಣುಗಳಲ್ಲಿ ಅದೆಂತದೋ ವರ್ಣಿಸಲಾಗದ ಪ್ರೀತಿ ಮತ್ತು ಮಮತೆ ತುಂಬಿದ ಭಾವುಕತೆ ತುಂಬಿ ತುಳುಕುತ್ತಿರುವುದು ಅವನಿಗೆ ಅರಿವಾಗುತ್ತಿದೆ. ಜೊತೆಗೆ ತಾನು ಬದುಕಿನ ಇಷ್ಟು ವರ್ಷಗಳು ಅಹಂನಿಂದ ಅನುಭವಿಸಿದ ನೋವುಗಳು ಕಿಟ್ಟಾಣಿಗೆ ಕೊಟ್ಟ ಮಾನಸಿಕ ತೊಂದರೆಗಳೆಲ್ಲಾ ನೆನಪಾಗಿ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತವೆನ್ನುವ ಅವಳ ಕಣ್ಣು ತುಂಬಿಕೊಳ್ಳುತ್ತಿವೆ.  ಅವನ ಕಣ್ಣುಗಳಲ್ಲಿ ಮೂಡಿದ ಕಾಮನಬಿಲ್ಲು ನಿದಾನ ಪ್ರೀತಿಯ ಸಂಕೇತವಾಗಿ, ಪ್ರೀತಿಯಾಗಿ ಕಾಣುತ್ತಿದೆ. ಅವಳಿಗೆ ಕಿಟ್ಟಾಣಿಯ ಕಣ್ಣುಗಳನ್ನೇ ನೋಡುತ್ತಿದ್ದರೆ, ಮನಸ್ಸಿನಲ್ಲಿ ವರ್ಣಿಸಲಾಗದ ಭಾವ ತುಂಬಿಹೋಗುತ್ತಿದೆ.  ಇನ್ನು ತಡೆಯಲಾಗುತ್ತಿಲ್ಲ ಆಹಂಕಾರವೆಲ್ಲಾ ನೀರಿನಂತೆ ಕರಗಿಹೋಗುತ್ತಿವೆ. ಪಶ್ಚಾತಾಪ ಮನದಲ್ಲಿ ತುಂಬಿಕೊಳ್ಳುತ್ತಿದೆ. ಮತ್ತೈದು ಸೆಕೆಂಡು ಕಳೆಯಿತಷ್ಟೆ ಅವಳಿಗರಿವಿಲ್ಲದಂತೆ ಮನತುಂಬಿ  ಕಣ್ಣುಗಳಲ್ಲಿ ಆನಂದ ಭಾಸ್ಪ ಉಕ್ಕಿ ಬಂದೇ ಬಿಟ್ಟಿತ್ತು.  ಅದನ್ನು ನೋಡುತ್ತಿದ್ದ ಚಿಟ್ಟಾಣಿಯ ಕಣ್ಣುಗಳಲ್ಲಿ ಆನಂದ ಬಾಷ್ಪ. ಅದ್ಯಾವ ಕ್ಷಣದಲ್ಲಿ ಕಿಟ್ಟಾಣಿಯ ಎದೆಗೆ ಅವಚಿಕೊಂಡಳೋ, ಅಷ್ಟೇ ವೇಗವಾಗಿ ಪುಟ್ಟಾಣ್ಣಿಯನ್ನು ಮಗುವಿನಂತೆ ತನ್ನ ತೋಳ ತೆಕ್ಕೆಯೊಳಗೆ ಸೆಳೆದುಕೊಂಡುಬಿಟ್ಟಿದ್ದಾನೆ.  ಅವರಿಲ್ಲದಂತೆ ಈ ರೀತಿ ಒಬ್ಬರಿಗೊಬ್ಬರು ಶರಣಾಗಿಬಿಟ್ಟಿದ್ದರು. ಅಕ್ಕಪಕ್ಕದಲ್ಲಿ, ಅದರಾಚೆಗೆ ಹತ್ತಾರು ಜನರು ನೂರಾರು ಜನರು, ಎದುರಿಗೆ ಕಾಣುತ್ತಿರುವ ಜೋಗ್ ಫಾಲ್ಸ್, ಅದರೊಳಗೆ ಮೂಡಿಬಂದ ಕಾಮನಬಿಲ್ಲು ಅದರ ಮೇಲಿನ ಆಕಾಶ, ಕೆಳಗಿನ ಭೂಮಿ ಇದ್ಯಾವುದರ ಪರಿವೆ ಇಲ್ಲ. ಅದೆಷ್ಟು ಹೊತ್ತು ಹಾಗೆ ಗಾಡ ಆಲಿಂಗನದಲ್ಲಿ ಒಬ್ಬರಿಗೊಬ್ಬರು ಶರಣಾಗಿಬಿಟ್ಟಿದ್ದರು. ಇತ್ತ ಜೋಗ್ ಪಾಲ್ಸ್‍ನ ರಾಜ ರಾಣಿ, ರಾಕೆಟ್ ರೋರರ್, ಮತ್ತು ಕಾಮನಬಿಲ್ಲು ಇವರಿಬ್ಬರಲ್ಲಿ ಗೆದ್ದವರಾರು ಅಂತ ಮಾತಾಡುತ್ತಿದ್ದರೆ ಇತ್ತ ಪುಟ್ಟಾಣಿಯ ಬಲಗೈ  ಕಿಟ್ಟಾಣಿಯ ಸೊಂಟವನ್ನು ಬಳಸಿದರೆ ಕಿಟ್ಟಾಣಿಯ ಎರಡೈ ಆಕೆಯ ಹೆಗಲನ್ನು ಬಳಸಿತ್ತು. ಇವರ ಕಣ್ಣಳತೆ ದಾರಿಯ ಕೊನೆಯಲ್ಲಿ ಇವರನ್ನೇ ನೋಡಿ ಆಶೀರ್ವಾದಿಸಿದ ಸೂರ್ಯ ನಿದಾನ ಅಸ್ತಂಗತನಾಗುತ್ತಿದ್ದ.




ಶಿವು.ಕೆ
 
         

Posted by shivu.k (shivuu.k@gmail.com) on October 08, 2011 08:08 AM· permalink

ನ್ಯಾನೋ ಕಾರು ಮತ್ತು ನ್ಯಾನೋ ಕಂಪ್ಯೂಟರ್ !!

ವಿಶ್ವದಲ್ಲೇ ಅತೀ ಕಡಿಮೆ ಬೆಲೆಯ ಕಾರು ತಯಾರಿಸಿದ ಕೀರ್ತಿ ಭಾರತಕ್ಕೆ ಸಲ್ಲಬೇಕು. ಟಾಟಾ ಕಂಪನಿ ನ್ಯಾನೋ ಅನ್ನೋ ಈ ಕಾರು ಹೊರ ತಂದಿದ್ದಾಗ ಇಡೀ ವಿಶ್ವ ಬೆರಗಾಗಿ ನೋಡಿತ್ತು.. ಈಗ ಮತ್ತೆ ಇಂಥಾ ಕೀರ್ತಿ ಭಾರತ ದೇಶಕ್ಕೆ. ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ touchscreen  tablet  ಕಂಪ್ಯೂಟರ್ ಬರುತ್ತಿದೆ.. ಹೆಸರು "ಆಕಾಶ್".


ಇದು ಪ್ರಾರಂಭವಾಗಿ ತುಂಬಾ ದಿನಗಳೇ ಆದವು. DataWind ಅನ್ನೋ ಕಂಪನಿ ಅತೀ ಕಡಮೆ ಬೆಲೆಯ ಕಂಪ್ಯೂಟರ್ ಮಾಡಿ ಕೊಡಬೇಕು ಅನ್ನೋ ಕನಸು ಕಂಡು ಬರೋಬ್ಬರಿ ಎರಡು ವರ್ಷಗಳಾದವು. ಇದ್ಯವತ್ತೋ ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಕೊಡಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಮುಂದೂಡುತ್ತಲೇ ಹೋದ ಇಂಥಾ ಒಂದು ಪ್ಲಾನ್ ಕೊನೆಗೂ ಈಗ ಸಾಕಾರಗೊಂಡಿದೆ. ಕೇವಲ ೧,೫೦೦ ರೂಪಾಯಿಗೆ touchscreen  ಕಂಪ್ಯೂಟರ್!!!

ಏನಿದು tablet PC :

Tablet  PC ಅಂದರೆ ಕಂಪ್ಯೂಟರ್ ಥರದ್ದೇ ಒಂದು ಸಾಧನ ಆದರೆ ಇದರ ಗಾತ್ರ ಮಾತ್ರ ಕಂಪ್ಯೂಟರ್ ಗಿಂತ  ತುಂಬಾ ಚಿಕ್ಕದು. ಕಂಪ್ಯೂಟರ್ ನಲ್ಲಿ ಮಾಡಲಾಗುವ ಬಹುತೇಕ ಎಲ್ಲ ಕೆಲಸಗಳನ್ನು ಇದರಲ್ಲಿ ಮಾಡಬಹುದು. ಇಂಥ ಒಂದು ಐಡಿಯಾ ಬಂದಿದ್ದು ಮೊದಲು ೨೦೦೧ ರಲ್ಲಿ. ಆಗ ಮೈಕ್ರೋಸಾಫ್ಟ್ ಅನ್ನೋ ಸಾಫ್ಟ್ವೇರ್ ನ ದೈತ್ಯ ಕಂಪನಿ ಇಂಥ ಒಂದು ಸಾಧನ ಹೊರತಂದಿತ್ತು. ಆದರೆ ಆನಂತರದ ಕೆಲವು ವರ್ಷ ಅದು ಮೊಬೈಲ್ ಫೋನ್ ಗಳಿಗೆ ಸೀಮಿತ ವಾಯಿತಲ್ಲದೆ ಮಾರುಕಟ್ಟೆಗೆ ಬರಲೇ ಇಲ್ಲ.

ಮುಂದೆ?
ಆಮೇಲೆ ನಮಗೆಲ್ಲರಿಗೂ ತಿಳಿದಿರುವಂತೆ ಬೇರೆ ಕಂಪನಿಯ ಇಂಥ Tablet  PC ಗಳು ಜನಪ್ರಿಯವಾದವು. ಸುಮಾರು ೭ ರಿಂದ ೧೦ ಇಂಚು ಪರದೆಯ ಈ ಸಾಧನಗಳು ಎಲ್ಲರ ಕೈಗೂ ಬರತೊಡಗಿದವು. ಆದರೆ  ಇದರ ಬೆಲೆ ಸಾಮಾನ್ಯರ ಕೈಗೆ ಎಟಕುವ೦ತಿರಲಿಲ್ಲ . ಇಂಥ ಸಾದನಗಳು ಸುಮಾರು ೩೦ ರಿಂದ ೫೦ ಸಾವಿರ ಬೆಲೆಯದ್ದಾಗಿದ್ದು ಶ್ರೀಮತರಿಗೆ ಮೀಸಲು ಎನ್ನುವಂತಿತ್ತು.   ಆದರೆ ಎರಡು ವರ್ಷ ಗಳಿಗೆ ಹಿಂದೆ ಭಾರತ ಸರ್ಕಾರ ಇಂಥ ಸಾಧನಗಳು ವಿದ್ಯಾರ್ಥಿಗಳಿಗೂ ಸಿಗಬೇಕು ಅಂತ ತೀರ್ಮಾನಿಸಿ Datawind ಅನ್ನೋ ಕಂಪನಿ ಗೆ ಇದರ ಜವಾಬ್ದಾರಿ ವಹಿಸಿತು. ಆನತರ Datawind ಮತ್ತು ಸಿಕಂದರಾಬಾದ್ ಮೂಲದ Quad Electronics ಕಂಪನಿ ಜೊತೆ ಸೇರಿ ಈಗ ಇಂಥ ಒಂದು Tablet  PC  ಹೊರತಂದಿದೆ.

ಇದರಲ್ಲಿ ಏನಿದೆ?
ಆಕಾಶ್ ಕಂಪ್ಯೂಟರ್ ನ configuration  ಈ ಕೆಳಗಿನಂತಿದೆ.

ಹೆಸರು : ಆಕಾಶ್
ಪರದೆ : ೭ ಇಂಚಿನ ಸ್ಪರ್ಶಜ್ಞಾನದ ಪರದೆ (Touchscreen )
ಒಪೆರಟಿಂಗ್ ಸಿಸ್ಟಮ್ (Operating  System ) : ಗೂಗಲ್ ಅನ್ದ್ರೊಇದ್ 
ಪ್ರೋಸೆಸರ್ : ೩೬೬ MHz 
RAM : ೨೫೬ MB 
ಮೆಮೊರಿ: ೨ GB  (೩೨ GB  ವಿಸ್ತರಿಸಬಹುದಾಗಿದೆ)
ಇಂಟರ್ನೆಟ್: Wi -Fi ಮೂಲಕ 
ಎರಡು USB  ಸ್ಲಾಟ್ ಇದೆ.
ಮೂರು ಗಂಟೆ ಯಾ ತನಕ ಕೆಲಸ ಮಾಡಬಹುದಾದ ಬ್ಯಾಟರಿ.

ಬೆಲೆ: ವಿದ್ಯಾರ್ಥಿ ಗಳಿಗೆ ಸರಕಾರದ ಮೂಲಕ ರೂಪಾಯಿ :೧೧೦೦-೧೨೦೦ (ಉಚಿತವಾಗಿ ನೀಡಲಾಗುತ್ತದೆ ಅಂತನೂ ಹೇಳಿದ್ದಾರೆ. ಬಹುಶ ಶೀಘ್ರದಲ್ಲಿ  ಮತದಾನ ಇರುವ ರಾಜ್ಯಗಳಲ್ಲಿ ಸಿಗಬಹುದೇನೋ :))
ಉಳಿದ ನನ್ನ ನಿಮ್ಮಂಥ ನಾಗರಿಕರಿಗೆ ಇದು ನವೆಂಬರ್ ತಿಂಗಳಿನಿಂದ ಮಾರುಕಟ್ಟೆಯಲ್ಲಿ ದೊರಕುತ್ತದೆ. ಬೆಲೆ ೩೦೦೦ ರೂಪಾಯಿ.    

ಇತರ ಇಂತಹ ಸಾಧನಗಳು ಮತ್ತು ಅವುಗಳ ಬೆಲೆ ಈ ಕೆಳಗಿನಂತಿದೆ

ರಿಲೆಯಾನ್ಸೆ ಕಂಪನಿಯ Tablet  PC :೧೩೦೦೦ ರೂಪಾಯಿ
ಎಂ ಎಸ್ಸ್ ಎಯೇ  ಕಂಪನಿಯ Tablet  PC :೧೪೦೦೦   ರೂಪಾಯಿ
ಬೀಟಲ್  ಕಂಪನಿಯ Tablet  PC :೧೦೦೦೦  ರೂಪಾಯಿ
ಮರ್ಕುರಿ ಕಂಪನಿಯ Tablet  PC :೯೫೦೦  ರೂಪಾಯಿ  
ಹೆಚ್ ಸಿ ಎಲ್  ಕಂಪನಿಯ Tablet  PC :೧೩೦೦೦ - ೩೨೦೦೦  ರೂಪಾಯಿ
ಆಪ್ಪಾಲ್ ಕಂಪನಿಯ Tablet  PC :೨೭೦೦೦ -೩೮೦೦೦  ರೂಪಾಯಿ  
LACS ,Infibeam Phi, OlivePad ,Creative ,Binatone ,Spice , Samsung  ಮುಂತಾದ ಕಂಪೆನಿಯವೂ ಸಿಗುತ್ತವೆ. ಬೆಲೆ ೧೪೦೦೦ ದಿಂದ ೩೮೦೦೦ ತನಕ.
ಇತ್ತೀಚಿಗೆ ಎಲ್ಲರ ಕೈಲೂ ಮೊಬೈಲ್ ಗಳಿದ್ದವು.. ಇನ್ನು ಮುಂದೆ Tablet  PC . ಭಾರತದಲ್ಲಿ ಇಂಟರ್ನೆಟ್ ಬಳಸುವವರ ಸಂಖ್ಯೆ ಸುಮಾರು ೭ % . ಚೀನಾದಲ್ಲಿ ೪೦ %. ಇನ್ನು ಕೆಲವೇ ವರ್ಷಗಳಲ್ಲಿ ನಾವು ಎಲ್ಲರನ್ನೂ ಮೀರಿಸಿ ಮುಂದೆ ಸಾಗುವುದರಲ್ಲಿ ಅನುಮಾನವಿಲ್ಲ. 

ಗೋರೆ ಉವಾಚ :
ಅಮೆರಿಕಾಕ್ಕೆ ಹೊರಟಿದ್ದ ನಮ್ಮ ಸದಾನಂದ "ಆಕಾಶ್" ಅನ್ನೋ ಚಿಕ್ಕ TouchScreen ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿದ್ದ.  ವಯರುಗಳೇ ಇಲ್ಲದೆ ಇಂಟರ್ನೆಟ್ ನೋಡುವ ಈ ಸಾಧನ ಅತ್ಯಂತ ಕಡಿಮೆ ಬೆಲೆಯದ್ದು ಅಂತ ತನ್ನ ಪಕ್ಕದವರೊಡನೆ ಕೊಚ್ಚಿಕೊಂಡ. ಅಷ್ಟರಲ್ಲೇ ಈ ವಯರ್ ಲೆಸ್ ಟೆಕ್ನಾಲಜಿ ಪ್ರಾರಂಭವಾಗಿದ್ದು ಎಲ್ಲಿ ಅನ್ನೋ ಚರ್ಚೆ ಶುರುವಾಯಿತು. 
ಅಮೇರಿಕಾದವ: ನಾವೊಂದು ಸಾರಿ ಭೂಮಿ ಅಗೆದ್ವಿ. ೧೦೦ ಫೀಟ್ ಕೆಳಗೆ ನಮಗೆ ವಯರು ಸಿಗ್ತು. ಅಷ್ಟು ವರ್ಷ ಗಳ ಹಿಂದೇನೆ ನಾವು ವಯರು ಗಿಯರು ಎಲ್ಲ ನಿಷ್ಪ್ರಯೋಜಕ ಅಂತ  ಹೂತು ಬಿಟ್ಟಿದ್ವಿ.. ಅಂದ್ರೆ ನೂರು ವರ್ಷಕ್ಕೆ ಹಿಂದೇನೆ ನಮ್ಮಲ್ಲಿ ವಯರ್ಲೆಸ್ಸ್ ಇತ್ತು.
ಚೀನಾದವ :ನಾವೊಂದು ಸಾರಿ ಭೂಮಿ ಅಗೆದ್ವಿ. ೩೦೦  ಫೀಟ್ ಕೆಳಗೆ ನಮಗೆ ವಯರು ಸಿಗ್ತು. ಅಂದ್ರೆ ಮುನ್ನೂರು ವರ್ಷಕ್ಕೆ ಹಿಂದೇನೆ ನಮ್ಮಲ್ಲಿ ವಯರ್ಲೆಸ್ಸ್ ಇತ್ತು.
ಜಪಾನಿನವ : ನಾವೊಂದು ಸಾರಿ ಭೂಮಿ ಅಗೆದ್ವಿ. ೫೦೦  ಫೀಟ್ ಕೆಳಗೆ ನಮಗೆ ವಯರು ಸಿಗ್ತು. ಅಂದ್ರೆ ಐನೂರು  ವರ್ಷಕ್ಕೆ ಹಿಂದೇನೆ ನಮ್ಮಲ್ಲಿ ವಯರ್ಲೆಸ್ಸ್ ಇತ್ತು.

ಇದನ್ನೆಲ್ಲಾ ಕೇಳಿದ ನಮ್ಮ ಸದಾನಂದ ಏನಂದ ಗೊತ್ತೇ?
ನಾವೊಂದು ಸಾರಿ ಭೂಮಿ ಅಗೆದ್ವಿ. ೧೦೦ ಫೀಟ್  ಬಿಡಿ , ೧೦೦೦, ೨೦೦೦ ೧೦೦೦೦ ಕೆಳಗೆ ಹೋದರು ನಮಗೆ ಒಂದೇ ಒಂದು ವಯರು ಸಿಗಲಿಲ್ಲ . ಅಂದ್ರೆ ಅಷ್ಟು ವರ್ಷಕ್ಕೆ ಹಿಂದೇನೆ ನಮ್ಮಲ್ಲಿ ವಯರ್ಲೆಸ್ಸ್ ಇತ್ತು. !! 
 ಅಷ್ಟು ಹೇಳಿ ಸದಾನಂದ ತನ್ನ ಕಂಪ್ಯೂಟರ್ ನಲ್ಲಿ ಕೆಲಸ ಮುಂದುವರೆಸಿದ.
ಎಲ್ಲರೂ ಮೂಕರಾಗಿ ಬಿಟ್ಟರು..


Posted by ರವಿಕಾಂತ ಗೋರೆ (noreply@blogger.com) on October 08, 2011 08:00 AM· permalink

ಕನ್ನಡ ತಾಯೆ

ನಮ್ಮಮ್ಮ ಕನ್ನಡತಿ ಅವಳಮ್ಮ ಭಾರತಿ
ಕೋಟಿ ನಮನಗಳು ನಿನ ಚರಣದಲಿ ತಾಯೆ

ಖನಿಜ ಸಂಪತ್ತಿನ ರಾಶಿ ನಿನ್ನ ಒಡಲಲಿ ತಾಯೆ
ಶ್ರೀಗಂಧ ಫಲ ಪುಷ್ಪ ನಿನ್ನ ಮಡಿಲಲಿ ತಾಯೆ

ಗಿರಿ ಶೃಂಗ ಪರ್ವತಗಳು ನಿನ ಮುಕುಟದಲಿ ತಾಯೆ
ಹಸಿರ ವನಸಿರಿ ನದಿಗಳು ನಿನಗೆ ಹೊದಿಕೆಯು ತಾಯೆ

ಕೋಟೆ ಕೊತ್ತಲಗಳು ನಿನ್ನ ಸಮ್ರಾಜ್ಯದಲಿ ತಾಯೆ
ಶಿಲ್ಪ ಕಲೆಗಳ ಮೆರುಗು ನಿನ್ನ ತವರಲಿ ತಾಯೆ

ಕವಿ ಶರಣ ದಾಸರು ನಿನ್ನ ನಾಡಲಿ ತಾಯೆ
ಹರಿಸಿಹರು ಕಾವ್ಯದೊಳೆ ನಿನ್ನ ಲೇಖನಿಯಲಿ ತಾಯೆ

ಬಣ್ಣಿಸಲು ಪದಗಳಿಲ್ಲ ನಿನ್ನ ಚೆಲುವನು ತಾಯೆ
ಸೆಳೆದಿಹೆ ನಮ್ಮೆಲ್ಲರ ಏನು ನಿನ್ನಯ ಮಾಯೆ

ಎಷ್ಟು ಸಲುಹಿ ಸಾಕಿರುವೆ ನಿನ್ನ ಮಕ್ಕಳನು ತಾಯೆ
ಅವರೆಲ್ಲ ಮರೆತಿಹರು ನಿನ್ನ ವಾತ್ಸಲ್ಯವ ತಾಯೆ

ಕೊಳ್ಳೆ ಹೊಡೆದಿಹರು ನಿನ್ನ ಮಡಿಲನು ತಾಯೆ
ಬಗೆದಿಹರು ನಿನ್ನೊಡಲ ಖನಿಜ ಸಂಪತ್ತನು ತಾಯೆ

ನಿನ್ನ ವನಸಿರಿ ನದಿಗಳು ಬತ್ತುತ್ತಲಿವೆ ತಾಯೆ
ಪ್ರಾಣಿ ಪಕ್ಷಿಗಳ ಸಂಕುಲ ಹಳಿವಿನಂಚಲಿ ತಾಯೆ

ಅನ್ನ ಬೆಳೆಯುವವರಿಗೆ ಬರ ನಿನ್ನ ನೆಲದಲಿ ತಾಯೆ

 

ಮುಂದೆ ಓದಿ...

Posted by Sarvesh Kumar M V on October 08, 2011 06:48 AM· permalink

|| ದುರ್ಗಾಂ ದೇವೀಗ್ಂ ಶರಣಮಹಂ ಪ್ರಪದ್ಯೇ ಸುತರಸಿ ತರಸೇ ನಮಃ ||


|| ದುರ್ಗಾಂ ದೇವೀಗ್ಂ ಶರಣಮಹಂ ಪ್ರಪದ್ಯೇ ಸುತರಸಿ ತರಸೇ ನಮಃ ||


’ಅಮ್ಮ’ ಎಂಬ ಶಬ್ದದ ಬಗ್ಗೆ ವರ್ಣನೆ ಮಾಡುವುದು ಬೇಕಾಗುವುದಿಲ್ಲ ಯಾಕೆಂದರೆ ಅದರ ತಾಕತ್ತೇ ಅಂಥದ್ದಿದೆ. ಹುಟ್ಟಿದ ಪ್ರತಿಯೊಂದೂ ಜೀವಿಗೂ ಅಮ್ಮ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಜನ್ಮವೀಯುತ್ತಾಳೆ. ಬಹುತೇಕ ಸಸ್ತನಿಗಳಲ್ಲಿ ನೇರವಾದ ಜನ್ಮವಾದರೆ ಕೆಲವು ಸರೀಸೃಪಗಳಲ್ಲಿ, ಪಕ್ಷಿಗಳಲ್ಲಿ, ಜಲಚರಗಳಲ್ಲಿ ಮೊಟ್ಟೆಯ ರೂಪದಲ್ಲಿ ಅಮ್ಮ ಜನ್ಮವೀಯುತ್ತಾಳೆ. ಅಂತಹ ಸಾವಿರಕೋಟಿ ಅಮ್ಮಂದಿರ ಹುಟ್ಟಿಗೂ ಕಾರಣವಾದ ಒಬ್ಬ ಅಮ್ಮ ಇರಬೇಕಲ್ಲ ? ಆ ರೂಪವನ್ನೇ ’ಆದಿಶಕ್ತಿ’ ಎಂದೂ ಜಗನ್ಮಾತೆ ಎಂದೂ ಋಷಿಗಳು ಹೆಸರಿಸಿದರು. ದೇವನೊಬ್ಬನೇ ಆದರೂ ಆತನ ಬಹುರೂಪಗಳನ್ನು ಕಂಡ ಅದೇ ಮಹನೀಯರು ಪುರುಷ ಮತ್ತು ಸ್ತ್ರೀ ಎರಡೂ ಶಕ್ತಿರೂಪಗಳನ್ನು ಅಲ್ಲಿ ಕಂಡಿದ್ದಾರೆ. ಹಾಗೆ ಕಂಡ ಸ್ತ್ರೀ ರೂಪಗಳಲ್ಲಿ ನವದುರ್ಗೆಯರು, ಸಪ್ತಮಾತೃಕೆಯರು, ತ್ರಿಮೂರ್ತಿಗಳ ಹೆಂಡಂದಿರು ಮತ್ತು ಆ ಮೂರು ರೂಪಗಳ ಸಮ್ಮಿಲನದ ಶ್ರೀರಾಜರಾಜೇಶ್ವರೀ ರೂಪವನ್ನೂ ಅವರು ಗುಣಗಾನಮಾಡಿದರು.

ಆರಾಧನೆಯ ಕಾಲದಲ್ಲಿ ವರ್ಷದ ಕೆಲವು ಭಾಗಗಳನ್ನು ಹೀಗೀಗೆ ಅಂತ ತಿಳಿಸಿಕೊಟ್ಟು ಅವುಗಳ ಸಂದರ್ಭದ ಮಹತ್ವವನ್ನೂ ಔಚಿತ್ಯವನ್ನೂ ತಿಳಿಸಿಕೊಟ್ಟರು. ವೇದಗಳಲ್ಲಿ ಅಡಕವಾಗಿರುವ ರೀತಿಯಲ್ಲಿ ಹೇಳಬಹುದಾದರೆ ಶ್ರೀಸೂಕ್ತ, ಸರಸ್ವತೀ ಸೂಕ್ತ, ದುರ್ಗಾಸೂಕ್ತಗಳೇ ಮೊದಲಾದ ಕೆಲವು ಸೂಕ್ತಗಳಿಂದ ಅಮ್ಮನನ್ನು ಅರ್ಚಿಸಿದರು. ಇದನ್ನೇ ಪ್ರತಿಪಾದಿಸಿದ ನಮ್ಮ ಯುಗದ ಪ್ರಮುಖ ಅದ್ವರ್ಯುವಾದ ಭಗವತ್ಪಾದ ಶ್ರೀ ಆದಿಶಂಕರರು ಅಮ್ಮನನ್ನು ಆಜನ್ಮ ಪರ್ಯಂತ ಹಲವು ರೂಪಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಕಂಡರು, ಹಲವು ಕಾರಣಿಕ ಸನ್ನಿಧಾನಗಳನ್ನು ಸೃಜಿಸಿ ಅಲ್ಲೆಲ್ಲಾ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು ಎಂಬುದನ್ನು ನಾವೆಲ್ಲಾ ಓದುತ್ತಾ ತಿಳಿದಿದ್ದೇವೆ, ತಿರುಗುತ್ತಾ ಅವರು ಸ್ಥಾಪಿಸಿದ ಮೂರ್ತಿಗಳಲ್ಲಿ ಅಮ್ಮನನ್ನು ದರ್ಶನಮಾಡಿದ್ದೇವೆ. ಆಚಾರ್ಯ ಶಂಕರರಷ್ಟು ಅಮ್ಮನನ್ನು ಭಜಿಸಿದ ಸನ್ಯಾಸಿಗಳು, ಸಂತರು ಭೂಮಿಯಲ್ಲಿ ಈಗ ಸಿಗುವುದು ವಿರಳ. ಅವರು ರಚಿಸಿದ ಸ್ತೋತ್ರಗಳು, ಸ್ತುತಿಗೀತೆಗಳು ಗೇಯವೂ ಮನೋಹರವೂ ಆಗಿವೆ ಎಂಬುದಕ್ಕೆ ನಿತ್ಯವೂ ನಾವು ರೇಡಿಯೋ, ಮಾಧ್ಯಮಗಳಲ್ಲಿ ಕೇಳುವ ಅವರ ಹಲವು ಕೃತಿಗಳೇ ಸಾಕ್ಷಿಯಾಗಿವೆ. ಪ್ರಾಸಬದ್ಧವಾಗಿ ಅನೇಕ ಸ್ತೋತ್ರಗಳನ್ನು ಅವರು ರಚಿಸುವಾಗ ಅವುಗಳಲ್ಲಿ ಜಗತ್ತಿನ ಭಾಷೆಗಳಿಗೆ ಮಾತೃಭಾಷೆಯಾದ ಸಂಸ್ಕೃತಭಾಷೆಯ ಉತ್ಕೃಷ್ಟ ಪದಗಳನ್ನು ಪೋಣಿಸಿದ ಶೈಲಿಯನ್ನು ನೋಡಿದರೆ ಮೈ ರೋಮಾಂಚನಗೊಳ್ಳುತ್ತದೆ.

ಅಂತಹ ಕೃತಿಗಳನ್ನು ಅರ್ಥವಿಸಿಕೊಂಡು ಆಸ್ವಾದಿಸಿದರೆ ಮಾತ್ರ ಶಂಕರರು ಯಾಕೆ ಹೀಗೆ ಹೇಳಿದರು ಎಂಬುದು ತಿಳಿಯುತ್ತದೆಯೇ ವಿನಃ ಬರಿದೇ ಕಿವಿಗೆ ಮುದನೀಡುತ್ತದೆ ಎಂಬ ಕಾರಣಕ್ಕೆ ಸಿನಿಮಾ ಹಾಡುಗಳಂತೇ ಕೇಳಿಬಿಟ್ಟರೆ ಅವುಗಳ ಮೂಲ ರಸಾಭಿಜ್ಞತೆ ನಮಗೆ ನಿಲುಕುವುದಿಲ್ಲ. ಭಗವಾನ್ ಶ್ರೀಧರ ಸ್ವಾಮಿಗಳು ಒಮ್ಮೆ ಊರೊಂದಕ್ಕೆ ಭೇಟಿ ನೀಡಿ ಗುಡ್ಡದಲ್ಲಿ ನೆಲೆಸಿರುವ ಅಮ್ಮನನ್ನು ದರ್ಶಿಸುತ್ತಾರೆ. ಅಲ್ಲಿನ ಬಡ ಬ್ರಾಹ್ಮಣ ಅರ್ಚಕರಿಗೆ ಯಾವುದೇ ಸೌಲತ್ತು ಇಲ್ಲವಾಗಿ ಅಲ್ಲಿ ಪೂಜೋಪಕರಣಗಳ ಕೊರತೆ ಇದ್ದುದು ಶ್ರೀಧರರಿಗೆ ಕಾಣುತ್ತದೆ. [ತಾವು ಮೊದಲು ಉಪಯೋಗಿಸುತ್ತಿದ್ದ ಮರದ ಪಂಚಪಾತ್ರೆ-ಉದ್ದರಣೆಗಳನ್ನೇ ಇಟ್ಟುಕೊಂಡು]ತಮಗೆ ಯಾರೋ ಶ್ರೀಮಂತ ಭಕ್ತರು ಅರ್ಪಿಸಿದ್ದ ಬೆಳ್ಳಿಯ ಪೂಜೋಪಕರಣಗಳನ್ನು ಅಲ್ಲಿನ ಅರ್ಚಕರಿಗೆ ಬಳಸಲು ನೀಡಿ ಅಮ್ಮನಿಗೆ ಹೊಸ ಸೀರೆಯೊಂದನ್ನು ತರಿಸಿಕೊಟ್ಟು ಅಲಂಕರಿಸಿ ಪೂಜಿಸಿದ್ದನ್ನು ತಾವು ನೋಡುವಾಗ ವಿಗ್ರಹದ ಕಣ್ಣಲ್ಲಿ ಧಾರಾಕಾರವಾಗಿ ನೀರುಹರಿಯಿತಂತೆ! ಇದಕ್ಕೆ ದಾಖಲೆಗಳಿವೆ ಎಂದರಾದರೂ ನೀವು ನಂಬುತ್ತೀರೇನೋ.

ಇಂಥಾ ಅಮ್ಮನನ್ನು ಶರತ್ ಕಾಲದಲ್ಲಿ ನವದಿನಗಳಲ್ಲಿ ನವದುರ್ಗೆಯರೂಪದಲ್ಲಿ, ಲಕ್ಷ್ಮೀ ಪಾರ್ವತೀ ಸರಸ್ವತೀ ರೂಪದಲ್ಲಿ ಆರಾಧಿಸುವುದನ್ನು ಭಾರತವಾಸಿಗಳು ಸಹಸ್ರಮಾನಗಳಿಂದ ಆಚರಿಸುತ್ತಿದ್ದಾರೆ. || ನವೋ ನವೋ ಭವತಿ ಜಾಯಮಾನಃ || ಜಾಯಮಾನ ಕಾಲಮಾನ ಬದಲಾದರೂ ಅಮ್ಮನನ್ನು ಮರೆಯಲು ಸಾಧ್ಯವಾಗುವುದಿಲ್ಲ ಮತ್ತು ಅದು ವಿಹಿತವೂ ಅಲ್ಲ. ನವರಾತ್ರಿ ಪ್ರತೀ ಸಂವತ್ಸರದಲ್ಲೂ ಮೂರು ಬಾರಿ ಬರುತ್ತದೆ, ಆದರೆ ಬರುವ ಮೂರು ನವರಾತ್ರಿಗಳಲ್ಲಿ ಎರಡು ಬಹಳ ವಿಶೇಷ, ಮೊದಲನೆಯದು ವಸಂತ ನವರಾತ್ರಿ ಮತ್ತು ಇನ್ನೊಂದು ಈ ಶರನ್ನವರಾತ್ರಿ. ಇಂತಹ ಪರ್ವಕಾಲದಲ್ಲೇ ಶ್ರೀರಾಮ ರಾವಣನನ್ನು ವಿಜಯದಶಮಿಯ ದಿನ ವಧಿಸಿದನಂತೆ, ಪಾಂಡವರು ಅಜ್ಞಾತವಾಸಕ್ಕೆ ಹೊರಡುವಾಗ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲಾ ಮೂಟೆ ಕಟ್ಟಿ ಬನ್ನಿ ಮರಕ್ಕೆ ಎತ್ತರದಲ್ಲಿ ಬಿಗಿದಿಟ್ಟು ಹೋಗಿದ್ದು ವಿಜಯದಶಮಿಯ ದಿನ ತಮ್ಮ ಆಯುಧಗಳಿಗೆ ಆಶ್ರಯನೀಡಿ ಕಾಪಾಡಿದ ಬನ್ನಿ ಮರವನ್ನು ಪೂಜಿಸಿ ಆಯುಧಗಳನ್ನು ಮರಳಿ ಎತ್ತಿಕೊಂಡರಂತೆ. ಹೀಗೇ ಹಲವು ಕಾರ್ಯಗಳು ನಡೆದು ಸಾತ್ವಿಕ ಶಕ್ತಿ ವಿಜೃಂಭಿಸಿ ವಿಜಯ ಲಭಿಸಿದ ದಿನವನ್ನು ಇವತ್ತಿಗೂ ವಿಜಯದಶಮಿ ಎಂಬುದಾಗಿ ನಾವು ಕರೆಯುತ್ತೇವೆ, ಆಚರಿಸುತ್ತೇವೆ.

ವೈದಿಕರೊಬ್ಬರ ಕೂಡ ನನ್ನ ಮಾತುಕತೆನಡೆದಿತ್ತು. ಕೆಲವು ವೈದಿಕರು ವೇದಪಾಠವನ್ನು ಗಿಣಿಪಾಠದಂತೇ ಕಂಠಪಾಠ ಮಾಡಿಕೊಂಡಿರುತ್ತಾರೆ, ಎಲ್ಲರಿಗೂ ವೇದಪಾಠಗಳ ಹುರುಳು ಕರಗತವಾಗಿರುವುದಿಲ್ಲ. ವೇದಪಾಠಗಳನ್ನು ಸಮರ್ಪಕವಾಗಿ ಅರ್ಥವಿಸಿಕೊಳ್ಳಲು ಶ್ರದ್ಧೆ ಮತ್ತು ಆಸಕ್ತಿ ಇವುಗಳ ಜೊತೆಗೆ ಸಂಸ್ಕೃತದ ಪ್ರೌಢಿಮೆಯ ಅಗತ್ಯತೆ ಇದೆ. ನಾನು ಮಾತನಾಡುತ್ತಿದ್ದುದು ಸ್ವಲ್ಪ ಗಂಧಗಾಳಿ ಇರುವ ವೈದಿಕರಲ್ಲಿ ಎಂಬುದನ್ನು ಮರೆಯುವಂತಿಲ್ಲ. ಮಾತುಕತೆಯ ಮಧ್ಯೆ ನಾನೊಂದು ಪ್ರಾಯೋಗಿಕ ಕಲ್ಪನೆಯನ್ನು ಪ್ರತಿಪಾದಿಸಿದ್ದೇನೆ. ಕೃಷ್ಣಯಜುರ್ವೇದದಲ್ಲಿ ದುರ್ಗಾ ಸೂಕ್ತ ಹೇಳಲ್ಪಟ್ಟಿದೆ. ಈ ದುರ್ಗಾ ಸೂಕ್ತದಲ್ಲಿ ಅಗ್ನಿಯನ್ನು ಧರಿಸಿದ ದೇವಿಯ ಬಗ್ಗೆ ತಿಳಿಸಿದ್ದಾರೆ. ಅಂಥಾ ಅಗ್ನಿಯನ್ನೇ ಉದರದಲ್ಲೂ ಕೈಯ್ಯಲ್ಲೂ ಜ್ವಲಿಸಿದ ಮಹತಾಯಿಯ ಈ ಸ್ತುತಿಯನ್ನು ಇಂದಿನ ನಮ್ಮ ವಾಹನಗಳನ್ನು ಚಲಾಯಿಸುವ ಪೂರ್ವ ಭಕ್ತಿಯಿಂದ ಪಠಿಸಿದರೆ/ ಅಥವಾ ಪುರೋಹಿತರ ದ್ವಾರಾ ಪಠಿಸುವಂತೇ ಕೇಳಿಕೊಂಡು ಪೂಜೆನಡೆಸಿದರೆ ಸಂಭವಿಸಬಹುದಾದ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬರುತ್ತದೆ, ಮತ್ತು ಹಾಗೊಮ್ಮೆ ಸಂಭವಿಸಿದರೂ ಪ್ರಯಾಣಿಕರಿಗೆ, ಚಾಲಕರಿಗೆ ಯಾವುದೇ ಹಾನಿ ಸಂಭವಿಸಿದ ರೀತಿಯಲ್ಲಿ ಬಗೆಹರಿಯುತ್ತದೆ. ಇದು ಹಲವು ದಿನಗಳ ಅವಲೋಕನದಿಂದ ತಿಳಿದು ಬಂದಿದ್ದು ಈ ಬಗ್ಗೆ ಯಾರಾದರೂ ಸಂಶೋಧನೆ ಮಾಡುವವರಿದ್ದರೆ ಅವರಿಗೆ ಸ್ವಾಗತ ಬಯಸುತ್ತೇನೆ !

ಇದೇ ಕಾರಣಕ್ಕೂ ಇರಬಹುದು ಮಹಾನವಮಿಯ ದಿನ ಎಲ್ಲೆಡೆ ಯಂತ್ರಗಳ, ಆಯುಧಗಳ ಪೂಜೆ ನಡೆಯುತ್ತದೆ. ಪಂಚಭೂತಗಳನ್ನು ನಿಯಂತ್ರಿಸುವುದು ನಮ್ಮಿಂದ ಸಾಧ್ಯವಿಲ್ಲ. ಅವುಗಳ ಮೂಲವನ್ನು ಹುಡುಕುವುದೂ ನಮ್ಮಿಂದ ಆಗದ ಮಾತು. ಬಾವಿಯೊಂದನ್ನು ತೋಡಿದಾಗ ಕಾಣುವ ನೀರಿನ ಸೆಲೆಯೇ ಅಲ್ಲಿನ ಜಲಮೂಲ ಎಂದುಕೊಳ್ಳುತ್ತೇವೆಯೇ ಹೊರತು ಆ ನೀರಿನ ಸೆಲೆಯ ಆದಿ ಎಲ್ಲಿ ಎಂಬುದನ್ನು ಅಳೆಯಲು ನಾವು ಹೋಗುವುದೂ ಇಲ್ಲ, ಹೋದರೆ ಅದು ಮುಗಿಯುವ ಕೆಲಸವೂ ಅಲ್ಲ. ಕಣ್ಣಿಗೆ ಕಾಣುವ ನಾವು ನಿತ್ಯ ಉಪಯೋಗಿಸುವ ವಸ್ತು, ಪರಿಕರಗಳಲ್ಲಿ ಹೆಚ್ಚೇಕೆ ನಮ್ಮ ಈ ಭೌತಿಕ ಶರೀರದಲ್ಲೇ ಪಂಚಭೂತಗಳಿವೆ. ಆದರೆ ಆ ಶಕ್ತಿಗಳನ್ನು ನಾವು ಪರಿಗಣಿಸುವುದಿಲ್ಲ. ಶರೀರಕ್ಕೊಂದು ಕಾವು ಇರುತ್ತದೆ. ಆ ಶಾಖದಲ್ಲಿ ಏರಿಳಿತ ಇರುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆಯಾದರೂ ಆ ಶಾಖದ ಮೂಲ ಎಲ್ಲಿದೆ ಎಂಬುದು ನಮಗೆ ಅರ್ಥವಾಗಿದೆಯೇ ? ಇಲ್ಲ. ಆಹಾರ ಜೀರ್ಣಿಸುವ ಸಲುವಾಗಿ ಜಠರದಲ್ಲಿ ಸೃವಿಸುವ ದುರ್ಬಲ ಗಂಧಕಾಮ್ಲ ಅಗ್ನಿಯ ರೂಪವೇ ಆಗಿರುತ್ತದೆ; ತಿಂದ ಅನ್ನವನ್ನು ಕರಗಿಸುತ್ತದೆ. ವಿನಾಕಾರಣ ಅದೇ ದುರ್ಬಲ ಗಂಧಕಾಮ್ಲ ತೀಕ್ಷ್ಣವಾಗತೊಡಗಿ ಕೆಲವರಲ್ಲಿ ಹೊಟ್ಟೆ ಹುಣ್ಣಿಗೆ /ಕರುಳು ಹುಣ್ಣಿಗೆ ಕಾರಣವಾಗುತ್ತದೆ ! ಅಗ್ನಿಯಿಲ್ಲದೇ ನಮ್ಮ ಬದುಕು ಸಾಧ್ಯವಿಲ್ಲ. ನಿತ್ಯದ ಸೂರ್ಯನ ಬೆಳಕಿನಲ್ಲೂ ಅಗ್ನಿಯೇ ಅಡಗಿದೆ. ಹೀಗಿರುವಾಗ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಅಗ್ನಿಯೇ ಪ್ರಪಂಚದ ಅಳಿವು ಉಳಿವಿನಲ್ಲಿ ಪಾಲ್ಗೊಳ್ಳುತ್ತದೆ ಎಂಬುದು ತೋರಿಬರುವ ಸತ್ಯ. ಯಂತ್ರವೊಂದು ಚಾಲನೆಗೊಂಡಾಗ ಅಲ್ಲಿ ಶಾಖೋತ್ಫತ್ತಿಯಾಗುತ್ತದೆ. ಶಾಖೋತ್ಫತ್ತಿ ಜಾಸ್ತಿ ಇದ್ದಾಗ ಅಲ್ಲಿ ಅಗ್ನಿಯ ಆವಾಸ ಇದ್ದೇ ಇರುತ್ತದೆ--ಹೀಗೆ ಅರ್ಥವಿಸೋಣ ಪ್ರತಿಯೊಂದೂ ವಸ್ತುವಿನಲ್ಲೂ ಸುಪ್ತರೂಪದಲ್ಲಿ ಅಗ್ನಿ ಅಡಗಿದೆ! ಕರೆದರೆ ಜ್ವಲಿಸುತ್ತದೆ, ಇಲ್ಲವಾದರೆ ತಣ್ಣಗೆ ಕಾಣದಂತಿರುತ್ತದೆ. ಹೀಗಾಗಿ ಇರುವ ಎಲ್ಲಾ ಉಪಕರಣಗಳಿಗೆ ವಸ್ತುಗಳಿಗೆ ಪೂಜೆ ಸಲ್ಲುವುದು ಸಮರ್ಪಕವಾಗಿದೆ. ಅಗ್ನಿಯನ್ನೇ ಧರಿಸಿದ ಅಮ್ಮ ಅಲ್ಲೆಲ್ಲಾ ಇರುತ್ತಾಳೆ ಎಂಬ ಆಳವಾದ ಪರಿಕಲ್ಪನೆಯಿಂದ ಪೂರ್ವಜರು ಹಾಗೆ ಆರಂಭಿಸಿದರು; ಎಷ್ಟು ವೈಜ್ಞಾನಿಕವಲ್ಲವೇ ?

ವರ್ಷಪೂರ್ತಿ ಅಮ್ಮ ನಮ್ಮ ಸೇವೆಗೆ ನಿಂತಿರುತ್ತಾಳೆ, ವರ್ಷದಲ್ಲಿ ಒಮ್ಮೆ ಅಮ್ಮನಿಗೆ ನಾವು ಗೌರವ ಸಲ್ಲಿಸಿ ಕೃತಜ್ಞರಾಗೋಣ ಎಂಬ ಗೌರವ ಸೂಚಕ ಪ್ರಕ್ರಿಯೆಯೇ ಆಯುಧಪೂಜೆ/ಮಹಾನವಮಿ ಪೂಜೆ. ಈಗೀಗ ನವರಾತ್ರಿಯಲ್ಲಿ ಆರಂಭದಲ್ಲೇ ಕಾರ್ಖಾನೆಗಳಲ್ಲಿ ಸ್ವಚ್ಛಗೊಳಿಸಿ, ಬಣ್ಣ-ಸುಣ್ಣ ಬಳಿದು, ಅಲಂಕರಿಸಿ, ಒಂದಷ್ಟು ಹೂವು ಹಣ್ಣು ಇಟ್ಟು ಪೂಜೆಮಾಡಿ, ಪಟಾಖಿ ಹಚ್ಚಿ, ಕುಂಬಳಕಾಯಿ ಒಡೆದು, ಸಿಹಿತಿಂದು ರಜಾ ಎಂದುಬಿಟ್ಟರೆ ವಾರದ ತನಕ ಯಾರೂ ಬರುವುದಿಲ್ಲ. ಆದರೆ ಈ ಪೊಜೆಯ ಮಹತ್ವದ ಅರಿವಿರುವ ಕೆಲವೇ ಜನ ಮಾತ್ರ ಮಹಾನವಮಿಯ ಆ ದಿನದಂದೇ ಯಂತ್ರಗಳನ್ನು ಪೂಜಿಸುತ್ತಾರೆ. ಯಾವಾಗಲೋ ಮಾಡುವುದನ್ನು ಯಾವಾಗ ಬೇಕಾದರೂ ಮಾಡುವ ಚಾಳಿಗೆ ಏನೂ ಹೇಳಲಾಗುವುದಿಲ್ಲ. ಆದರೆ ರೀತಿಯಲ್ಲಿ ಆಯುಧಪೂಜೆ ಮಾಡಬೇಕಾಗಿರುವುದು ಮಹಾನವಮಿಯಂದೇ. ಬಿಡಿ ಅಷ್ಟಾದರೂ ಮಾಡುತ್ತಾರಲ್ಲ, ಸುಮ್ಮನಾಗೋಣ.

ಕೋಲ್ಕತಾದಲ್ಲಿ ಕಾಳಿಯಾಗಿ, ಕೊಲ್ಲಾಪುರದಲ್ಲಿ ಮಹಾಲಕ್ಷ್ಮಿಯಾಗಿ, ಮೈಸೂರಿನಲ್ಲಿ ಚಾಮುಂಡಿಯಾಗಿ, ಕೊಲ್ಲೂರಿನಲ್ಲಿ ಮೂಕಾಂಬಿಕೆಯಾಗಿ, ಶೃಂಗೇರಿಯಲ್ಲಿ ಶಾರದೆಯಾಗಿ ನೆಲೆಸಿದ ಅಮ್ಮ ಎಲ್ಲರನ್ನೂ ಹರಸಲಿ, ಜಗದ ಎಲ್ಲಾ ಮಕ್ಕಳಿಗೂ ಅವರ ಸದುದ್ದೇಶಪೂರಿತ ವಾಂಛಿತಗಳನ್ನು ದಯಪಾಲಿಸಿ ಕಷ್ಟದಲ್ಲಿರುವ ತನ್ನ ಮಕ್ಕಳನ್ನು ಪಾರುಮಾಡುವ ಕೃಪೆಮಾಡಲಿ ಎಂಬ ಪ್ರಾರ್ಥನೆಯನ್ನು ಸಲ್ಲಿಸುವುದರ ಮೂಲಕ ಶುಭ ಶರನ್ನವರಾತ್ರಿಯ, ವಿಜಯದಶಮಿಯ ಹಾರ್ದಿಕ ಶುಭಕಾಮನೆಗಳನ್ನು ತಮಗೆಲ್ಲಾ ಘೋಷಿಸುತ್ತಿದ್ದೇನೆ, ಶುಭಾಶಯಗಳು.

ಅಯಿ ಸುಮನಃ ಸುಮನಃ ಸುಮನಃ
ಸುಮನಃ ಸುಮನೋಹರ ಕಾಂತಿಯುತೇ |
ಶ್ರಿತರಜನೀ ರಜನೀ ರಜನೀ
ರಜನೀ ರಜನೀಕರ ವಕ್ತ್ರವೃತೇ |
ಸುನಯನವಿಭ್ರಮರ ಭ್ರಮರ ಭ್ರಮರ
ಭ್ರಮರ ಭ್ರಮರಾಧಿಪತೇ |
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ ||

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ |
ಶರಣ್ಯೇ ತ್ರ್ಯಂಬಕೇ ದೇವೀ ನಾರಾಯಣಿ ನಮೋಸ್ತುತೇ ||

ಯಾ ದೇವಿ ಸರ್ವ ಭೂತೇಷು ಯಂತ್ರರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ಚಂಡೀ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ವಿದ್ಯಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ಲಕ್ಷ್ಮೀರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

ಯಾ ದೇವಿ ಸರ್ವ ಭೂತೇಷು ನಾನಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ ||

|| ಓಂ ಸ್ವಸ್ತಿ ||

Posted by ವಿ.ಆರ್.ಭಟ್ (vrbhat06@gmail.com) on October 06, 2011 12:01 PM· permalink

ರೆಕ್ಕೆ ಸುಟ್ಟ ಚಿಟ್ಟೆ

ಸುಟ್ಟ ರೆಕ್ಕೆಯ ಹೊತ್ತು
ಚಿಟ್ಟೆ ಅಳುತ್ತಿತ್ತು,
ಹಾರಲಾರದೆ ಕನಸ
ಕಟ್ಟಿಕ್ಕುತ್ತಿತ್ತು,

ನೂರಾರು ಬಣ್ಣಗಳ
ಹೂರಣದ ಚಹರಿಲ್ಲ,
ನಾನು ಹಾರುತ್ತಿದ್ದ
ಪಂತಂಗವೆಂಬ ಮೊಹರಿಲ್ಲ,

ಹೂವಿಂದೂವಿಗೆ ಜಿಗಿವ
ಕಸುವು ಕಳೆದಾಗಿದೆ,
ಗಾಳಿಗೆ ಮೈಯೊಡ್ಡುವ
ಸುಖವೂ ಬರಿದಾಗಿದೆ,

ಆಗ ಯಾರ ಹಂಗಿರದೇ
ಹಾರಿ ಹರಿದಾಡುತ್ತಿದ್ದ
ಪತಂಗವೀಗ, ತೆವಳುತ್ತ
ಸಾಗೊ ಹುಳವಾಗಿದೆ

Posted by ಪ್ರವರ ಕೆ ವಿ (pravarakumvee@gmail.com) on October 06, 2011 08:14 AM· permalink

"ನಕ್ಕು ಬಿಡಿ"

ಈ ಸಲದ 'ಸುಧಾ'ದಲ್ಲಿ ಬಂದ ಕೆಲ ನಗೆ ಹನಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ನನ್ನೊಂದಿಗೆ ನೀವೂ ನಕ್ಕು ಬಿಡಿ.ನಿಮಗೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.
1) ಪುಟ್ಟನ ಪ್ರಶ್ನೆ;ಅಪ್ಪ,ಮೂರ್ಖ ಎಂದರೆ ಯಾರು?
ಅಪ್ಪ:ಯಾರು ಸರಳವಾಗಿ ಹೇಳೋದನ್ನು ತುಂಬಾ ಕ್ಲಿಷ್ಟವಾದ ಪದಗಳಿಂದ,ಉದ್ದುದ್ದ ವಾಕ್ಯ ಗಳಿಂದ ಒಂದಕ್ಕೊಂದು ಸಂಬಂಧವೇ ಇಲ್ಲದ ಪದಗಳಿಂದ ಹೇಳಿ ,ಕೇಳೋರನ್ನ ಗೊಂದಲಕ್ಕೀಡುಮಾಡಿ ,ಇವನನ್ನು ಯಾಕಪ್ಪಾ ಕೇಳಿದೆ ಅನಿಸುವಂತೆ ಮಾಡಿಬಿಡುತ್ತಾನೋ ಅವನನ್ನು ಮೂರ್ಖನೆಂದು ಕರೆಯಬಹುದು.ಅರ್ಥವಾಯಿತಾ?
ಪುಟ್ಟ:ಇಲ್ಲ!
2) ಟೀಚರ್ ಕ್ಲಾಸಿಗೆ ಬಂದಾಗ ಇಬ್ಬರು ಹುಡುಗರು ಜಗಳವಾಡುತ್ತಿದ್ದರು.
ಟೀಚರ್: ಯಾಕ್ರೋ ಜಗಳ?
ಒಬ್ಬ ಹುಡುಗ: ದಾರಿಯಲ್ಲಿ ಹೋಗುವಾಗ ಹತ್ತು ರೂಪಾಯಿ ಸಿಕ್ಕಿತು.ಯಾರು ಚೆನ್ನಾಗಿ  ಸುಳ್ಳು ಹೇಳುತ್ತಾರೋ ಅವರಿಗೇ ಹತ್ತು ರೂಪಾಯಿ ಅಂತ ಇಬ್ಬರೂ ಒಂದೊಂದು ಸುಳ್ಳು ಹೇಳಿದ್ವಿ.ಯಾರ ಸುಳ್ಳು ಚೆನ್ನಾಗಿತ್ತು ಅಂತ ಇನ್ನೂ ತೀರ್ಮಾನ ಆಗಿಲ್ಲಾ.ಅದಕ್ಕೇ ಜಗಳಾ.
ಟೀಚರ್:ಇಂತಹ ಪಂದ್ಯ ಕಟ್ಟೋಕೆ ನಿಮಗೆ ನಾಚಿಕೆ ಆಗಬೇಕು!ನಿಮ್ಮ ವಯಸ್ಸಿನಲ್ಲಿ ನನಗೆ ಸುಳ್ಳು ಅಂದರೇನು ಅಂತಲೇ ಗೊತ್ತಿರಲಿಲ್ಲ!
ಇನ್ನೊಬ್ಬ ಹುಡುಗ:ಟೀಚರ್ ಈ ಹತ್ತು ರೂಪಾಯಿ ನೀವೇ ಇಟ್ಕೊಳ್ಳಿ !ಇದು ನಿಮಗೇ  ಸೇರಬೇಕು!
3) ಮುಲ್ಲಾ ನಾಸಿರುದ್ದೀನ್  ರಸ್ತೆಯಲ್ಲಿ ಸತ್ತು ಹೋದ ತನ್ನ ಆನೆಯ ಪಕ್ಕ ಕುಳಿತು ಅಳುತ್ತಿದ್ದ.
ದಾರಿಹೋಕ:ಯಾಕಯ್ಯಾ ಅಳುತ್ತಿದ್ದೀ?
ಮುಲ್ಲಾ:ನನ್ನ ಅನೆ ಸತ್ತು ಹೋಗಿದೆ.
ದಾರಿಹೋಕ:ಅತ್ತರೆ ಸತ್ತ ಆನೆ ಬರುತ್ತದೆಯೇ?
ಮುಲ್ಲಾ:ಅನೆ ಬರುವುದಿಲ್ಲ.ಆದರೆ ಸತ್ತ ಆನೆಯನ್ನು ಹೂಳಲು ಗುಂಡಿ ತೋಡಲು ಯಾರಾದರೂ ನಿನ್ನಂತಹವರು ಸಹಾಯಕ್ಕೆ ಬರಬಹುದೆಂದು ಅಳುತ್ತಿದ್ದೇನೆ.

Posted by Dr.D.T.Krishna Murthy. (noreply@blogger.com) on October 05, 2011 10:52 AM· permalink

ಯಳವತ್ತಿ ಟ್ವೀಟ್ 106:-


"ಹುಡುಗಿಯರ ವಯಸ್ಸು ಕೇಳಬಾರದು ಅಂತಾರೆ.."

ಅದಕ್ಕೇ ನಾವು ಅವರ Date of Birth ಕೇಳ್ತೀವಿ...

ಆದರೂ ಈ ಹಿರಿಯರೇ ಹೀಗೇ.. ಹೇಳಿದ್ ಮಾತ್ ಕೇಳೋಲ್ಲ ಅಂತಾ ನಮ್ಮನ್ನು ಮೂದಲಿಸ್ತಾರೆ..

Something is Wrong...

Posted by ಶಿವಶಂಕರ ವಿಷ್ಣು ಯಳವತ್ತಿ (shivagadag@gmail.com) on October 05, 2011 07:21 AM· permalink

ಯಳವತ್ತಿ ಟ್ವೀಟ್ 105:-

ದಿನ ರಾತ್ರಿ ಮಲಗಿ ಬೆಳಿಗ್ಗೆ ಎದ್ದಾಗ, ಅದು ಮನುಷ್ಯನ ಹೊಸ ಹುಟ್ಟು ಅಂತಾರೆ.
ಇಂತಹ ಹೊಸ ಹುಟ್ಟುಗಳ ವರ್ಷಾಂತ್ಯದ ನೆನಪಿಗೆ ಹುಟ್ಟು ಹಬ್ಬ ಎನ್ನಬಹುದು.


-ಯಳವತ್ತಿ

Posted by ಶಿವಶಂಕರ ವಿಷ್ಣು ಯಳವತ್ತಿ (shivagadag@gmail.com) on October 05, 2011 05:03 AM· permalink

ಇವರು "ಸಮೂಹ ಸನ್ನಿ"ಗೊಳಗಾದರೆ ಪತ್ರಿಕೋದ್ಯಮ ಇರುತ್ತದೆಯೇ?

 
    ಕೇಂದ್ರ ಸರ್ಕಾರವನ್ನು ನಡುಗಿಸಿ, ವಿಶ್ವದ ಗಮನವನ್ನೇ ಸೆಳೆದ ಅಣ್ಣಾ ಅಜಾರೆ ಭ್ರಷ್ಟಾಚಾರ ವಿರುದ್ದದ ಉಪವಾಸ ಸತ್ಯಗ್ರಹ ನಮಗೆಲ್ಲಾ ಗೊತ್ತೇ ಇದೆ. ಪ್ರತಿಯೊಬ್ಬ ನಾಗರೀಕನಲ್ಲೂ ಭ್ರಷ್ಟಾಚಾರವನ್ನು ಹೋಗಲಾಡಿಸಲು ಹೋರಾಟ ಮಾಡಬೇಕೆನ್ನುವ ಸಂಚಲನವನ್ನೇ ಉಂಟು ಮಾಡಿದ ಆರೋಗ್ಯಕರ ಸಮೂಹ ಸನ್ನಿ ಎನ್ನಬಹುದು.  ಇಂಥ ಅರೋಗ್ಯಕರ ಸಮೂಹ ಸನ್ನಿ ನಮಗೆ ಬೇಕಿತ್ತು.

   ಇಂಥದ್ದೇ ಒಂದು ಸಮೂಹ ಸನ್ನಿ ನಮ್ಮ ಪೇಪರ್ ಹಾಕುವ ಹುಡುಗರಲ್ಲಿ ನೆಗಟೀವ್ ಆಗಿ ಆಗಿಬಿಟ್ಟರೆ  ಏನಾಗಬಹುದು? ಅಂತ ಒಮ್ಮೆ ಪ್ರಶ್ನಿಸಿಕೊಂಡೆ. ನಿಜಕ್ಕೂ ಒಂದು ಕ್ಷಣ ಹೃದಯ ಬಡಿತ ನಿಂತಂತೆ ಆಗಿ ಆತಂಕ ದಿಗಿಲುಗಳು ಒಟ್ಟಿಗೆ ಮೈಮನಸ್ಸುಗಳನ್ನು ಆವರಿಸಿಕೊಂಡವು.  ಇದೇನಿದು ಪೇಪರ್ ಹಾಕುವ ಹುಡುಗರ ಮನಸ್ಸು ಬದಲಾದರೇ ಹೃದಯಬಡಿತ ನಿಲ್ಲುವಂತದ್ದು, ದಿಗಿಲು, ಆತಂಕ ಪಡುವಂತದ್ದು ಏನಾಗಿಬಿಡುತ್ತದೆ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು.  ವಿವರಿಸಿಬಿಡುತ್ತೇನೆ ಬಿಡಿ..

    ಎಲ್ಲೋ ಪುಟ್ಟ ಗುಡಿಸಲಿನಲ್ಲಿ ಮಲಗಿದ್ದ ಒಬ್ಬ ಹದಿನೆಂಟು ವರ್ಷದ ಪೇಪರ್ ಹಾಕುವ ಹುಡುಗನಿಗೆ ಒಂದು ಅಲೋಚನೆ ಬರುತ್ತದೆ.  ಅದನ್ನು ತನ್ನ ಇತರ ಪೇಪರ್ ಹಾಕುವ ಹುಡುಗರಿಗೆ ಹೇಳುತ್ತಾನೆ. ಅದು ಒಬ್ಬರಿಂದ ಒಬ್ಬರಿಗೆ ಎಸ್ ಎಂ ಎಸ್  ತರ ಸಾಗಿ ಹತ್ತು..ನೂರು...ಸಾವಿರ...ಕೊನೆಗೆ ಭಾರತದಾದ್ಯಂತ ಮುಂಜಾನೆ ದಿನಪತ್ರಿಕೆ ಹಂಚುವ ಎಲ್ಲಾ ಹುಡುಗರ ಮನಸ್ಸಿನಲ್ಲಿಯೂ ಆದೇ ಅಲೋಚನೆ ಗಟ್ಟಿಯಾಗಿಬಿಡುತ್ತದೆ.  ನಿಮಗೆ ಗೊತ್ತಿರಲಿ, ನಮ್ಮ ಭಾರತದಾದ್ಯಂತ ಪೇಪರ್ ಹಾಕುವ ಹುಡುಗರೆಲ್ಲರ ವಯಸ್ಸು ಹದಿನೈದರಿಂದ ಇಪ್ಪತ್ತೈದು. ಈ ಪೇಪರ್ ಹಾಕುವ ಕೆಲಸವನ್ನು ಹಣವಂತರ ಮಕ್ಕಳು ಮಾಡುವುದಿಲ್ಲ. ಸೋಕಿಗೆ ಅಥವ ವ್ಯಾಯಾಮಕ್ಕೆ ಆಗುತ್ತೆ ಅಂದುಕೊಂಡು ಬರುವವರು ಹೆಚ್ಚೆಂದರೆ ಒಂದು ವಾರ್‍ಅ-ಹದಿನೈದು ದಿನವಷ್ಟೆ. ಅಷ್ಟರಲ್ಲಿ ಬೇಸರವಾಗಿ ಮನೆಯಲ್ಲಿ ಸುಖನಿದ್ರೆ ಮಾಡುತ್ತಾರೆ. ಇನ್ನೂ ಮೇಲ್ಮದ್ಯಮ, ಮದ್ಯಮ ವರ್ಗದ ಹುಡುಗರು ಇತ್ತ ಸುಳಿಯುವುದಿಲ್ಲ. ಸುಳಿದರೂ ಅವರ ಕತೆ ಶ್ರೀಮಂತ ಹುಡುಗರ ಕತೆಯೇ!  ಇಲ್ಲಿ ಅವರ ತಂದೆ ತಾಯಿಗಳಿಗೆ ಗೌರವ ಅಂತಸ್ಥು, ಪಕ್ಕದ ಮನೆಯವರು, ಸಂಭಂದಿಕರು ಏನಂದುಕೊಳ್ಳುತ್ತಾರೋ ಎನ್ನುವ ಕಾರಣಕ್ಕೆ ಅವರ ಮಕ್ಕಳನ್ನು ಈ ಕೆಲಸಕ್ಕೆ ಕಳಿಸುವುದಿಲ್ಲ. ಇನ್ನೂ ಕೆಳ ಮದ್ಯಮವರ್ಗದವರು ಸ್ವಲ್ಲ ಜನ ಬರುತ್ತಾರಾದರೂ ಅವರು ತಾತ್ಕಾಲಿಕ ಅಷ್ಟೆ. ಇಂಥ ಕೆಲಸಕ್ಕೆ ಬಡತನದಲ್ಲಿರುವವರು, ಸ್ಲಮ್‍ನಲ್ಲಿರುವ ಹುಡುಗರು, ಮನೆಯಲ್ಲಿ ಕಷ್ಟವಿರುವವರು. ಇವರೇ ಮುಂಜಾನೆ ದಿನಪತ್ರಿಕೆ ಸಂತೆಯ ಜೀವಾಳ. ಈ ಹುಡುಗರ ಮನಸ್ಥಿತಿಯನ್ನು ಎಂಥದ್ದು ಅಂದರೆ ಇವರೊಮ್ಮೆ ಮನಸ್ಸು ಮಾಡಿದರೆ ಕಿತ್ತು ಹೋದ ಕಚಡ ಮಾಸ್ ಸಿನಿಮವನ್ನು ಸೂಪರ್ ಹಿಟ್ ಮಾಡಿಬಿಡಬಲ್ಲರು. ತುಂಬಾ ಚೆನ್ನಾಗಿರುವ ಮಾಸ್ ಚಿತ್ರವನ್ನು ಪ್ಲಾಪ್ ಮಾಡಿ ಡಬ್ಬದೊಳಗೆ ಹಾಕಿಬಿಡುವಂತೆ ಮಾಡುವವರು.  ಪಾದರಸಕ್ಕಿಂತ ವೇಗವಾಗಿ ಸದಾ ಚಂಚಲತೆಯನ್ನು ಹೊಂದಿರುವ, ಇವರು "ಇದರಿಂದೇನು ಲಾಭವಿಲ್ಲ,  ಇಷ್ಟು ವರ್ಷ ನಮ್ಮ ಮುಂಜಾನೆ ಸಕ್ಕರೆ ನಿದ್ರೆಗಳನ್ನು ಹಾಳುಮಾಡಿಕೊಂಡು ಪೇಪರ್ ಹಾಕುವ ಕೆಲಸಕ್ಕೆ ನಿಂತೆವಲ್ಲ, ಇದನ್ನು ಮನೆ ಮನೆಗೆ ಹಾಕಿ ಯಾರನ್ನು ಉದ್ದಾರ ಮಾಡಬೇಕಾಗಿದೆ?  ನಾಳೆಯಿಂದ ಯಾರು ಪೇಪರ್ ಹಾಕುವ ಕೆಲಸಕ್ಕೆ ಹೋಗುವುದು ಬೇಡ ಅಂತ ತೀರ್ಮಾನಿಸಿ ಅಣ್ಣಾ ಅಜಾರೆಯಷ್ಟೇ ದೊಡ್ಡ ಸಂಚಲನ ಉಂಟು ಮಾಡಿದ ಸಮೂಹ ಸನ್ನಿಗೊಳಗಾಗಿಬಿಟ್ಟರೆ ಮುಂದೇನಾಗಬಹುದು..


    ಮೊದಲು ಕೆಲಸ ಕಳೆದುಕೊಳ್ಳುವುದು ನಮ್ಮಂಥ ನೂರಾರು ಸಾವಿರಾರು ವೆಂಡರುಗಳು. ಒಬ್ಬ ವೆಂಡರ್ ಹೆಚ್ಚೆಂದರೆ ೨೦೦ ದಿನಪತ್ರಿಕೆಯನ್ನು ಮುಂಜಾನೆ ಮನೆಮನೆಗಳಿಗೆ ವಿತರಿಸಬಹುದು ಅದಕ್ಕಿಂತ ಹೆಚ್ಚು ಸಾಧ್ಯವೇ ಇಲ್ಲ.  ಹಾಗೆ ಆದಲ್ಲಿ ಒಬ್ಬ ವೆಂಡರ್ ಆದಾಯ ನೂರರಲ್ಲಿ ೯೦% ಮಾಯವಾಗಿ  ೧೦% ಗಿಳಿಯುತ್ತದೆ.
  ನಂಬರ್ ಒನ್ ಎಂದು ಮೀಸೆ ತಿರುಗಿಸುವ ಟೈಮ್ಸ್ ಆಫ್ ಇಂಡಿಯ ಸರ್ಕುಲೇಷನ್ ಐದು ಲಕ್ಷ ನಲವತ್ತು ಸಾವಿರದಿಂದ ಐವತ್ತನಾಲ್ಕು ಸಾವಿರಕ್ಕೆ ಇಳಿಯುತ್ತದೆ.
  ಡೆಕ್ಕನ್ ಹೆರಾಲ್ಡ್ ಒಂದು ಲಕ್ಷದಿಂದ ಹತ್ತು ಸಾವಿರಕ್ಕೆ, ಹಿಂದೂ ದಿನಪತ್ರಿಕೆ ಅರವತ್ತು ಸಾವಿರದಿಂದ ಆರುಸಾವಿರಕ್ಕೆ, ಇಂಡಿಯನ್ ಎಕ್ಸ್ ಪ್ರೆಸ್ ನಲವತ್ತು ಸಾವಿರದಿಂದ ನಾಲ್ಕು ಸಾವಿರಕ್ಕೆ, ಡೆಕ್ಕನ್ ಕ್ರಾನಿಕಲ್ ಇಪ್ಪತ್ತು ಸಾವಿರದಿಂದ ಎರಡು ಸಾವಿರಕ್ಕೆ, ಡಿ ಎನ್ ಎ ಪತ್ರಿಕೆ ಹದಿನೆಂಟು ಸಾವಿರದಿಂದ ಸಾವಿರದ ಎಂಟು ನೂರಕ್ಕೆ ಇಳಿಯುತ್ತದೆ. ಮತ್ತೆ ಕನ್ನಡ ದಿನಪತ್ರಿಕೆಗಳಲ್ಲಿ ಎರಡು ಲಕ್ಷವಿರುವ ವಿಜಯ ಕರ್ನಾಟಕ ಇಪ್ಪತ್ತು ಸಾವಿರಕ್ಕೆ ಒಂದುಲಕ್ಷ ನಲವತ್ತು ಸಾವಿರವಿರುವ ಪ್ರಜಾವಾಣಿ ಹದಿನಾಲ್ಕು ಲಕ್ಷಕ್ಕೆ, ಅರವತ್ತು ಸಾವಿರವಿರುವ ಕನ್ನಡಪ್ರಭ ಆರುಸಾವಿರಕ್ಕೆ, ಮುವತ್ತು ಸಾವಿರವಿರುವ ಉದಯವಾಣಿ ಮೂರು ಸಾವಿರಕ್ಕೆ, ಹದಿನೆಂಟು ಸಾವಿರವಿರುವ ಸಂಯುಕ್ತ ಕರ್ನಾಟಕ ಸಾವಿರದ ಎಂಟುನೂರಕ್ಕೆ, ಇದು ಬಿಟ್ಟು ಹೊಸದಿಗಂತ, ವ್ಯಾಪಾರಿ ದಿನಪತ್ರಿಕೆಗಳಾದ ಎಕನಾಮಿಕ್ಸ್ ಟೈಮ್ಸ್, ಬುಸಿನೆಸ್ ಲೈನ್, ಬುಸಿನೆಸ್ ಸ್ಟಾಂಡರ್ಡ್, ಇತ್ಯಾದಿಗಳು ನೂರು ಇನ್ನೂರು ಲೆಕ್ಕಕ್ಕೆ ಇಳಿದುಬಿಡುತ್ತವೆ. ಇದು ಬೃಹತ್ ಬೆಂಗಳೂರಿನ ಲೆಕ್ಕಚಾರ. ಇತರೆ ನಗರಗಳು, ಇತರೆ ರಾಜ್ಯಗಳು, ಪೂರ್ತಿ ಭಾರತದ ಮುಂಜಾನೆ ದಿನಪತ್ರಿಕೆ ವಿತರಣೆ ಲೆಕ್ಕಾಚಾರ ಕೇವಲ ೧೦% ಗೆ ಇಳಿದುಬಿಡುತ್ತದೆ.

      ನೂರು ರೂಪಾಯಿಯನ್ನು ನೋಡುತ್ತಿದ್ದ ನನ್ನಂತ ವೆಂಡರ್ ಹತ್ತು ರೂಪಾಯಿಗೆ ಎಷ್ಟು ದಿನ ಇಂಥ ವ್ಯಾಪಾರ ಮಾಡಿಯಾನು? ವಿಧಿಯಿಲ್ಲದೇ ಅವನು ಬೇರೆ ಉದ್ಯೋಗ, ಅಥವ  ವ್ಯಾಪರವನ್ನೋ ಹುಡುಕಿಕೊಳ್ಳುತ್ತಾನೆ.  ಅಲ್ಲಿಗೆ ಮೇಲೆ ವಿವರಿಸಿದ ಹತ್ತು ಪರಸೆಂಟ್ ಕೂಡ ಇಲ್ಲವಾಗುತ್ತದೆ.

       ಯಾರು ಇದ್ದರೆಷ್ಟು ಬಿಟ್ಟರೆಷ್ಟು ಅಂದುಕೊಂಡ ಪತ್ರಿಕಾ ಕಛೇರಿಗಳು ತಾವೆ ವಿತರಣೆ ಮಾಡುತ್ತೇವೆ ಅಂತ ಮುಂದೆ ನಿಂತರೆ ಅವರಿಗೆ ಮನೆಮನೆಗೆ ತಲುಪಿಸಲು ಅವರ ವರದಿಗಾರರನ್ನು ಬಿಡುತ್ತಾರಾ, ಎಸಿ ರೂಮಿನಲ್ಲಿ ಕುಳಿತ ಡೆಸ್ಕ್ ಆಪರೇಟರುಗಳಿಗೆ ಸೈಕಲ್ ಕೊಟ್ಟು ಮನೆಮನೆಗೆ ಕಳಿಸುತ್ತಾರಾ? ಈಗಿನ ವರದಿಗಾರರು ಮತ್ತು ಡೆಸ್ಕ್ ಆಪರೇಟರುಗಳು ಆಕಾಶದಿಂದ ಇಳಿದುಬಂದ ರಾಜಕುಮಾರರಂತೆ ವರ್ತಿಸುವ ಇಂದಿನ ಕಾಲದಲ್ಲಿ ಅವರನ್ನು ಮನೆಮನೆಗೆ ಪೇಪರ್ ಹಂಚುವ ಕೆಲಸಕ್ಕೆ ಹಚ್ಚಿಬಿಟ್ಟರೆ ಅವರ ಅಹಂಗೆ ಕುಂದು ಬಂದಂತಾಗಿ ಅವರು ಖಂಡಿತ ಕೆಲಸ ಬಿಡುತ್ತಾರೆ. ಇದೆಲ್ಲವನ್ನು ಬಿಟ್ಟು ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಿಗೆ ಸೈಕಲ್ಲು, ಮೋಟರ್ ಸೈಕಲ್ ಕೊಟ್ಟು ಮನೆಮನೆಗೆ ಪೇಪರ್ ಹಾಕಲು ಕಳಿಸಿದರೂ ಇವರ ಅರ್ಹತೆಯೂ ವೆಂಡರಿನಷ್ಟೆ. ಮತ್ತೆ ಈಗಾಗಲೇ ಐದು ಆರಂಕಿ ಪಗಾರದ ರುಚಿಯನ್ನು ನೋಡಿರುವ ಇವರೆಲ್ಲಾ ಐನೂರು ಸಾವಿರಕ್ಕೆ ಕೆಲಸ ಮಾಡುತ್ತಾರಾ? ಅಲ್ಲಿಗೆ ಇದು ಕಾರ್ಯಸಾಧುವಲ್ಲವೆಂದಾಯಿತು.

      ಈ ಪತ್ರಿಕೆ ಕಛೇರಿಯವರು ಮೊಂಡುಬಿದ್ದು ವೆಂಡರುಗಳು ಬೇಡ, ಪೇಪರ್ ಹಾಕುವ ಹುಡುಗರೂ ಬೇಡ ಅಂತ ಅಜೆಂಡ ಹೊರಡಿಸಿ, ಈ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೊಸದಾಗಿ ನೂರಾರು ಜನರನ್ನು ನೇಮಿಸಿಕೊಂಡರೂ ಪ್ರತಿಯೊಬ್ಬನೂ ಹೆಚ್ಚೆಂದರೆ ಇನ್ನೂರು ಪೇಪರುಗಳನ್ನು ಮನೆಮನೆಗೆ ತಲುಪಿಸಬಹುದು....ಅಲ್ಲಿಗೆ ಅವನ ಕತೆಯೂ ವೆಂಡರ್‌‍ಗಿಂತ ವ್ಯತ್ಯಾಸವೇನು ಇಲ್ಲ. ಮತ್ತೆ ಅವನ ಕೆಲಸಕ್ಕೆ ವೆಂಡರಿಗೆ ಸಿಗುವ ೧೦% ಅಧಾಯವನ್ನೆ ಸಂಬಳವಾಗಿ ಕೊಟ್ಟರೆ ಅವನಿಗೆ ಅದು ಸಾಲದಾಗಿ ಒಂದೇ ತಿಂಗಳಿಗೆ ಕೆಲಸ ಬಿಟ್ಟು ಓಡುತ್ತಾನೆ. ಅಥವ ಅವರ ಸಂಬಳವನ್ನು ೧೦% ಗೆ ೯೦% ಸೇರಿಸಿ ಕೊಟ್ಟರೆ ಪತ್ರಿಕೆ ಕಂಪನಿಗಳು ಒಂದೇ ತಿಂಗಳಿಗೆ ಬಾಗಿಲು ಮುಚ್ಚಿಕೊಂಡು ಒಳಗೆ ಮಲಗಬೇಕಾಗುತ್ತದೆ.

      ಮತ್ತೇನು ಮಾಡಬಹುದು ಅಂತ ಬೇರ್‍ಎ ದಿಕ್ಕಿನಲ್ಲಿ ಅಲೋಚಿಸಿದಾಗ ಹೀಗೆ ಹೊಸದಾಗಿ ನೇಮಕ ಮಾಡಿಕೊಂಡ ನೂರಾರು ಜನರನ್ನೇ ಮನೆಮನೆಗಳಿಗೆ ವಿತರಿಸುವ ಬದಲು ನೂರು ಇನ್ನೂರು ಪತ್ರಿಕೆಗಳನ್ನು ನೇರವಾಗಿ ಎಲ್ಲಾ ಏರಿಯಗಳಲ್ಲಿರುವ ದೊಡ್ಡ-ಪುಟ್ಟ ಅಂಗಡಿಗಳಿಗೆ ಕೊಟ್ಟರೆ ಅವರು ಭರ್ಜರಿ ವ್ಯಾಪರ ಮಾಡಬಹುದು ಅಂದುಕೊಂಡರೆ ಅದು ಸುಳ್ಳೇ ಸುಳ್ಳು. ನಿಮಗೆ ಮತ್ತೊಂದು ವಿಚಾರ ಗೊತ್ತಿರಲಿ, ಬೆಂಗಳೂರಿನಲ್ಲಿ ಪ್ರಿಂಟ್ ಆಗುವ ಎಲ್ಲಾ ದಿನಪತ್ರಿಕೆಗಳ ಕೇವಲ ೧% ಮಾತ್ರ ಅಂಗಡಿಗಳಲ್ಲಿ ಸೇಲ್ ಆಗುತ್ತವೆ. ಎಷ್ಟೇ ಶ್ರಮವಹಿಸಿ ಚಾಣಕ್ಷತೆ ಮೆರೆದರೂ ಇದು ೫% ದಾಟುವುದಿಲ್ಲ. ಏಕೆ ದಾಟುವುದಿಲ್ಲವೆನ್ನುವುದಕ್ಕೆ ಕಾರಣಗಳನ್ನು ಕೊಡುತ್ತೇನೆ.  ಬೆಂಗಳೂರಿನ ಒಂದು ಏರಿಯದಲ್ಲಿ ನೂರು ಮೀಟರ್ ರಸ್ತೆಯ ಆ ಬದಿ ಈ ಬದಿ ಎರಡು ಅಂಗಡಿಗಳಿದ್ದರೂ ಆ ನೂರು ಮೀಟರ್ ಸುತ್ತಳತೆಯಲ್ಲಿರುವ ಒಂದು ಸಾವಿರ ಮನೆಗಳಲ್ಲಿ ಕೇವಲ ನಲವತ್ತು-ಐವತ್ತು ಮನೆಯವರು ಮಾತ್ರ ಮನೆಯಿಂದ ಹೊರಗೆ ವಾಕಿಂಗ್ ಅಂತ ಬಂದು ಪೇಪರ್ ಕೊಳ್ಳುತ್ತಾರೆ. ಅಲ್ಲಿಗೆ ೫೦ ಪೇಪರ್ ಮಾತ್ರ ಖರ್ಚಾಯಿತು.  ಉಳಿದ ಮನೆಯವರಿಗೆ ಪೇಪರ್ ಓದುವ ಆಸಕ್ತಿಯಿಲ್ಲ ಇಲ್ಲವಾ ಅಂದುಕೊಂಡರೆ ಅವರಲ್ಲಿ ಕಡಿಮೆಯೆಂದರೂ ಇನ್ನೂ ಏಳುನೂರು ಮನೆಗಳವರಿಗೆ ಪೇಪರ್ ಬೇಕಿದೆ. ಆದ್ರೆ  ನಮ್ಮ ಬೆಂಗಳೂರು ಇವರಿಗೆಲ್ಲಾ ಅದೆಂತ ಅರಾಮದಾಯಕ ಜೀವನವನ್ನು ಒದಗಿಸಿಕೊಟ್ಟಿದೆಯೆಂದರೆ ಅವರು ಕುಳಿತಲ್ಲೆ ಮಲಗಿದಲ್ಲೇ ಬೇಕಾದರೆ ವೆಂಡರುಗಳ ಜೊತೆ ಪೇಪರ್ ಹುಡುಗರ ಜೊತೆ ಫೋನಿನಲ್ಲೇ ಅರ್ಧಗಂಟೆ ಮಾತಾಡುತ್ತಾರೆ ಹೊರತು, ಮನೆಯಿಂದ ಹೊರಬಂದು ಮೆಟ್ಟಿಲಿಳಿದು ಪೇಪರ್ ಅಂಗಡಿಯಲ್ಲಿ ಪೇಪರ್ ಕೊಳ್ಳುವುದಿಲ್ಲ. ಇದೆಲ್ಲಾ ನಮ್ಮ ಬೆಂಗಳೂರು ಇವರಿಗೆ ಕರುಣಿಸಿರುವ ಮಾರ್ವಾಡಿ ಬದುಕಿನ ಗಿಪ್ಟ್. ಇದೇ ಲೆಕ್ಕಾಚಾರದಲ್ಲಿ ಈಗ ನೂರು ಮೀಟರ್ ಅಂತರದಲ್ಲಿರುವ ಸಾವಿರ ಮನೆಗಳಲ್ಲಿ ವೆಂಡರುಗಳು-ಪೇಪರ್ ಹುಡುಗರ ಮೂಲಕ ಏಳುನೂರಕ್ಕೂ ಹೆಚ್ಚು ಮನೆಗಳಿಗೆ,  ನೂರು ಮನೆಗಳಿರುವ ಅಪಾರ್ಟ್‍ಮೆಂಟಿನಲ್ಲಿ ೯೫ ಮನೆಗಳ ಬಾಗಿಲಿಗೆ, ಮೆಟ್ಟಿಲ ಮೇಲೆ, ಬಾಲ್ಕನಿಗಳ ಮೇಲೆ, ಪೇಪರುಗಳು ಸುರಕ್ಷಿತವಾಗಿ ತಲುಪುತ್ತಿವೆ ಎನ್ನುವ ವಿಚಾರ ನಿಮ್ಮ ಮನಸ್ಸಿನಲ್ಲಿರಲಿ. ನಾನಿಲ್ಲಿ ವಿವರಿಸಿದ ವಿಚಾರಗಳು ಬೆಂಗಳೂರಿಗೆ ಸೀಮಿತವಾದರೂ ಇತರೆ ನಗರಗಳು ಹಾಗೂ ನಮ್ಮ ಭಾರತದಾದ್ಯಂತ ಒಂದರಡು % ಹೆಚ್ಚು ಕಡಿಮೆಯಾದರೂ ದೊಡ್ಡ ಬದಲಾವಣೆಯೇನಿಲ್ಲ.

     ಮತ್ತೊಂದು ವಿಚಾರ್‍ಅವಿದೆ. ಅದು ಜಾಹಿರಾತಿಗೆ ಸಂಭಂದಿಸಿದ್ದು.  ನೀವ್ಯಾರು ಬೇಕಾಗಿಲ್ಲ. ನೀವಿಲ್ಲದಿದ್ದಲ್ಲಿ ನಮ್ಮ ಪತ್ರಿಕೆ ನಿಂತುಹೋಗುವುದಿಲ್ಲ ನಮಗೆ ಜಾಹಿರಾತಿನ ಅದಾಯವಿದೆ. ಅದರಿಂದ ನಾವು ಪತ್ರಿಕೆಯನ್ನು ನಡೆಸುತ್ತೇವೆ ಬೇಕಾದರೆ  ಪತ್ರಿಕೆಯನ್ನು ಉಚಿತವಾಗಿ ಹಂಚುತ್ತೇವೆ ಅಂತ ಶೂರ ಧೀರ ಏಕಾಂಗಿ ವೀರರಂತೆ ಮುನ್ನುಗ್ಗಿದರೂ ಹಾಗೆ ಉಚಿತವಾಗಿ ಮನೆಮನೆಗೆ ತಲುಪಿಸಲು ನೂರಾರು ಸಾವಿರಾರು ಕೆಲಸಗಾರರು ಬೇಕಾಗುತ್ತದೆ.  ಮತ್ತೆ ಅವರೆಲ್ಲಾ ವೆಂಡರುಗಳು ಮತ್ತು ಪೇಪರ್ ಬಾಯ್‍ಗಳಾಗುವುದಕ್ಕೆ ಆಗುವುದಿಲ್ಲ. ಈ ರೀತಿ ಉಚಿತವಾಗಿ ಹಂಚಿದರೂ ಈಗಿನ ಜಾಹಿರಾತು ತುಂಬಿದ ಪೇಪರುಗಳನ್ನು ಮತ್ತೆ ಹತ್ತು % ಮಾತ್ರ ಹಂಚಲು ಸಾಧ್ಯ. ಇನ್ನೂ ನಾಲ್ಕರಷ್ಟು ಹೆಚ್ಚು ಕೆಲಸಗಾರರನ್ನು ನೇಮಿಸಿ ಮನೆಮನೆಗೆ ಹಂಚುತ್ತೇವೆ. ಅಂತ ಶುರುಮಾಡಿದರೇ ಅದು ಖಂಡಿತ ಚೆನ್ನಾಗಿ ನಡೆಯುತ್ತದೆ.  ಆಹಾ! ಎಲ್ಲಾ ಪತ್ರಿಕೆಗಳು ಉಚಿತವಾಗಿ ಸಿಗುತ್ತಿವೆಯಲ್ಲಾ ಅಂತ ಗ್ರಾಹಕರು ಪುಲ್ ಖುಷ್!  ಆದ್ರೆ ಉಚಿತವಾಗಿ ಹಂಚುವವನು ಉಪ್ಪುಕಾರ ತಿನ್ನುವ, ನವರಸಗಳ ಮನುಷ್ಯರೇ ತಾನೆ!  ಒಂದು ತಿಂಗಳು ತುಂಬಾ ಖುಷಿಯಾಗಿ ತಾವು ಪಡೆಯುವ ಸಂಬಳಕ್ಕೆ ತಕ್ಕಂತೆ ಉಚಿತವಾಗಿ ಮನೆಮನೆಗೆ ಪೇಪರ್ ತಲುಪಿಸುತ್ತಾರೆ.  ಮುಂದಿನ ತಿಂಗಳಿಗೆ ಅವರ ತಲೆ ತಿರುಗುತ್ತದೆ. ಮನೆಮನೆಗೆ ಉಚಿತವಾಗಿ ಏಕೆ ಕೊಡಬೇಕು. ಅದರ ಬದಲು ತೂಕಕ್ಕೆ ಹಾಕಿದರೆ ಸಕ್ಕತ್ ಹಣಬರುತ್ತದಲ್ಲಾ....ಸರಿಯಾಗಿ ಹಾಕಬೇಕು ಎನ್ನುವುದಕ್ಕೆ ಮನೆಯವರೇನು ಹಣಕೊಡುವುದಿಲ್ಲವಲ್ಲ. ಒಂದೆರಡು ದಿನ ತಪ್ಪಿಸಿದರಾಯಿತು..ಅಂದುಕೊಂಡು ಒಂದೆರಡು ದಿನ ತಪ್ಪಿಸಿ ತೂಕಕ್ಕೆ ಹಾಕುತ್ತಾರೆ. ಈ ಸುಲಭದ ಹಣ ಯಾವಾಗ ಕೈತುಂಬ ಸಿಗಲು ಪ್ರಾರಂಭವಾಗುತ್ತದೋ...ಅಲ್ಲಿಗೆ ಅದು ಒಂದು ವಾರ, ತಿಂಗಳು.ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಅಂತ ಈ ಕೆಲಸಗಾರರೆಲ್ಲಾ ಚೆನ್ನಾಗಿ ಹಣ ಮಾಡುತ್ತಾರೆ....ಹೀಗೆ ಮುಂದುವರಿದು  ಪತ್ರಿಕೋದ್ಯಮದ ಮಾರುಕಟ್ಟೆ ವ್ಯವಸ್ಥೆಯೇ ಅಡ್ಡದಾರಿ ಹಿಡಿಯುತ್ತದೆ.  ಜಾಹಿರಾತು ನೀಡುವವರಿಗೆ ಸತ್ಯ ಗೊತ್ತಾಗಿ ಅವರು ಪತ್ರಿಕೆಗೆ ಕೊಡುವ ಜಾಹಿರಾತು ನಿಲ್ಲಿಸಿದರೆ ಅದನ್ನೇ ನಂಬಿಕೊಂಡು ಪತ್ರಿಕೆ ನಡೆಸುವ ಶೂರ ಧೀರರೆಲ್ಲಾ ಟುಸ್ ಪಟಾಕಿಗಳಾಗಿ ತಲೆಮೇಲೆ ಟವಲ್ ಹಾಕಿಕೊಂಡು ಮಕಾಡೆ ಮಲಗಬೇಕಾಗುತ್ತದೆ.

     ಈಗ ಹೇಳಿ ಮುಂಜಾನೆ ದಿನಪತ್ರಿಕೆಯ ನಿಜವಾದ ಹೀರೋಗಳು ಯಾರು? ಭಾರತಕ್ಕೆ ನಂಬರ್ ಒನ್ ಎಂದು ಮೀಸೆ ತಿರುವುವ ಟೈಮ್ಸ್  ಅಫ್ ಇಂಡಿಯಾನ, ಡೆಕ್ಕನ್, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿಯ....ಇತ್ಯಾದಿ ಹತ್ತಾರು ಪತ್ರಿಕೆಗಳ ಮಾಲೀಕರಾ,  ತಾವು ಅದ್ಬುತ ಕಾಲಂ ಲೇಖಕರು ಎಂದು ಬೀಗುವ ಸಂಪಾದಕರಾ, ಹೊರಪ್ರಪಂಚದಲ್ಲಿರುವವರೆಲ್ಲಾ ದಡ್ಡರು, ನಾವು ಬರೆದಿದ್ದೇ ವೇದವಾಕ್ಯ ಎಂದುಕೊಂಡು ಬೈಲೈನ್ ಹಾಕಿಕೊಳ್ಳುವ ವರದಿಗಾರರು ಮತ್ತು ಡೆಸ್ಕ್ ಅಪರೇಟರುಗಳಾ? ವಾರಕ್ಕೊಂದು ಕಾಲಂ ಬರೆಯುವ ಪ್ರಖ್ಯಾತ ಲೇಖಕರಾ?  ಪುಟಗಟ್ಟಲೇ ಜಾಹಿರಾತು ಹಾಕಿಸಿ ಜನರನ್ನು ಟೆಂಪ್ಟ್ ಮಾಡುತ್ತಿರುವ ಜಾಹಿರಾತು ಕಂಪನಿಗಳಾ? ಇರುವುದರಲ್ಲೇ ಸ್ವಲ್ಪ ವಾಸಿ ಎನ್ನುವಂತೆ ವೆಂಡರುಗಳನ್ನು ಪುಸಲಾಯಿಸುತ್ತಾ, ಕಛೇರಿಯಲ್ಲಿ ಸರ್ಕುಲೇಷನ್ ಹೆಚ್ಚು ಮಾಡಬೇಕು ಅಂತ ಮಾಡುವ ತಾಕೀತನ್ನು ಸಹಿಸಿಕೊಳ್ಳುವ ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಾ? 

    ಜನರ ಮಾನಸಿಕ ಸ್ಥಿತಿಗತಿಗಳನ್ನು ಬದಲಾಯಿಸುವ ನಾವೇ ಹೀರೋಗಳು ಅಂತ ಭ್ರಮೆಯಲ್ಲಿರುವವರು. ಈ ಭ್ರಮೆಯಲ್ಲಿರುವುದಕ್ಕೆ ಅವರಿಗೆ ವರ್ಷಕ್ಕೊಮ್ಮೆಯಾದರೂ ಅವರಿಗೆ ವೆಂಡರ್ಸ್ ಡೇ ನೆನಪಾಗುವುದಿಲ್ಲ. ವೆಂಡರುಗಳ ಕಷ್ಟಗಳು ಮನಸ್ಸಿಗೆ ಬರುವುದಿಲ್ಲ. ಇದುವರೆಗೂ ಒಬ್ಬಸಂಪಾದಕ, ಸಹಸಂಪಾದಕನಾಗಲಿ, ವರದಿಗಾರನಾಗಲಿ, ಪ್ರಖ್ಯಾತ ಲೇಖನರಾಗಲಿ, ವಾರಕ್ಕೊಂದು ಕಾಲಂ ಬರೆಯುವ ಡೆಸ್ಕ್ ಆಪರೇಟರುಗಳಾಗಲಿ ಒಬ್ಬ ವೆಂಡರ್‍ಅನ್ನು ಸಂದರ್ಶಿಸಿಲ್ಲ. ಪೇಪರ್ ಹುಡುಗನ ಸ್ಥಿತಿ ಗತಿ ತಿಳಿದಿಲ್ಲ.


  ನಂಬರ್ ಒನ್ ಪತ್ರಿಕೆಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುವವರ ಮನೆಗೆ ಪೇಪರ್ ಹಾಕುತ್ತೇನೆ. ಆರಾಮ ಸೋಪ ಮೇಲೆ ಕುಳಿತು ಟೀಪಾಯ್ ಮೇಲೆ ಕಾಲುಚಾಚಿ ಎದುರಿನ ಗೋಡೆಯಲ್ಲಿನ ನಲವತ್ತು ಇಂಚಿನ ಟಿವಿಯನ್ನು ನೋಡುವ ಅವರಿಗೆ ನಾಲ್ಕು ಅಡಿ ಅಗಲ ಎಂಟು ಅಡಿ ಉದ್ದ ಮಲಗಿದರೆ ಕಾಲು ಚಾಚಲು ಆಗದ ನಮ್ಮ ಪೇಪರ್ ಹುಡುಗನ ಪುಟ್ಟ ಗುಡಿಸಲು ಗೊತ್ತಿಲ್ಲ. ಜಾಹಿರಾತು ಹಣಕ್ಕಾಗಿ ಗಂಡು ಹೆಣ್ಣಿನ ಅರೆಬೆತ್ತಲೆ ಫೋಟೊಗಳನ್ನು ಹಾಕುವ ನಮ್ಮ ಸಂಪಾದಕರಿಗೆ ಅರಕಲು ಕುಪ್ಪಸ, ಸೀರೆ ಹಾಕಿಕೊಂಡ ನಮ್ಮ ಸಾವಿರಾರು ಪೇಪರ್ ಹುಡುಗರ ತಾಯಂದಿರ ಸ್ಥಿತಿಯ ಕಲ್ಪನೆಯಿಲ್ಲ.

      ಈಗ ಮತ್ತೆ ಮೊದಲೆರಡು ಪ್ಯಾರಗಳನ್ನು ನೆನಪಿಸಿಕೊಳ್ಳೋಣ. ನಮ್ಮ ಭಾರತದಾಧ್ಯಂತ ಇರುವ ಇಂಥ ನೂರಾರು ಸಾವಿರಾರು, ಲಕ್ಷಾಂತರ ಪುಟ್ಟ ಪುಟ್ಟ ಮನೆ, ಗುಡಿಸಲು,...ಮುಂತಾದವುಗಳಲ್ಲಿರುವ ನಮ್ಮ ಪೇಪರ್ ಹಾಕುವ ಹುಡುಗರೆಲ್ಲಾ ನಾಳೆಯಿಂದ ಪೇಪರ್ ಹಾಕಬಾರದೆಂದು ತೀರ್ಮಾನಿಸಿ "ಸಮೂಹ ಸನ್ನಿಗೆ ಒಳಗಾಗಿಬಿಟ್ಟರೆ"........ನಮ್ಮ ಭಾರತದಲ್ಲಿ ಮುಂಜಾನೆ ದಿನಪತ್ರಿಕೆ ಉದ್ಯಮ ಮಕಾಡೆ ಮಲಗುತ್ತದೆ. ಈಗ ನಿಮ್ಮ ಎದೆ ಬಡಿತವೂ ಒಂದು ಕ್ಷಣ ನಿಂತಂತೆ ಅಯ್ತಲ್ಲವೇ....ಜನರನ್ನು ಮೆಚ್ಚಿಸುವ ಸಲುವಾಗಿ ಉಪ್ಪು ಖಾರ, ಮಸಾಲೆಗಳನ್ನು ತಮ್ಮ ಲೇಖನಗಳಲ್ಲಿ ತುರುಕುವ, ನಮ್ಮ ಪತ್ರಿಕೆಗಳ ಸಂಪಾದಕರು, ವರದಿಗಾರರು ಈ ಮುಂಜಾನೆ ಹೀರೋಗಳು ಕೈಕೊಟ್ಟರೆ.....ಆ ಮಸಾಲಯುಕ್ತ ಬಿಸಿಬಿಸಿ ಪತ್ರಿಕೆಗಳನ್ನು ತಮ್ಮ ತಮ್ಮ ಮನೆಗಳ ಟೆರಸ್ ಮೇಲೆ ಹರಡಿ ಅದರ ಮೇಲೆ ಹಪ್ಪಳ ಸಂಡಿಗೆಗಳನ್ನು ಒಣಗಿಸುತ್ತಾ, ಅದನ್ನು ಕದ್ದು ತಿನ್ನಲು ಬರುವ ಕಾಗೆ ಕೋತಿಗಳನ್ನು ಓಡಿಸುತ್ತಾ ಕೂರಬೇಕಾಗುತ್ತದೆ. ಏನಂತೀರಿ?

   ಇದುವರೆಗೂ ದಿನಪತ್ರಿಕೆ ವೆಂಡರುಗಳು ಮತ್ತು ಪೇಪರ್ ಹುಡುಗರು ಗ್ರೇಟ್, ಸೆಲೆಬ್ರಿಟಿಗಳು, ಹೀರೋಗಳು, ಅವರಿಲ್ಲದಿದ್ದರೇ ಬೆಳಗಾಗುವುದಿಲ್ಲ ಅಂತ ಹೇಳಲಿಕ್ಕೆ ನಾನು ಈ ಲೇಖನವನ್ನು ಖಂಡಿತ ಬರೆಯಲಿಲ್ಲ. ಸದ್ಯ ನಮ್ಮ ಸ್ಥಿತಿಗತಿಯನ್ನು ನೇರವಾಗಿ ವಿವರಿಸುತ್ತಿದ್ದೇನೆ ಅಷ್ಟೆ. ಹಾಗಾಂತ ಎಲ್ಲಾ ದಿನಪತ್ರಿಕೆ ಸಂಪಾದಕರು, ರಿಪೋರ್ಟರುಗಳು, ಡೆಸ್ಕ್ ಆಪರೇಟರುಗಳು ಮಾರುಕಟ್ಟೆ ಪ್ರತಿನಿಧಿಗಳು ಕೆಟ್ಟವರಲ್ಲ. ಒಳ್ಳೆಯ ಸಂಪಾದಕರು, ರೆಪೋರ್ಟರುಗಳು, ಪ್ರತಿನಿಧಿಗಳು ಇದ್ದಾರೆ. ಅವರಿಂದಲೇ ವೆಂಡರುಗಳ ಮತ್ತು ಪೇಪರ್ ಹುಡುಗರಿಗೆ ಬೆಳಗಿನ ಕೆಲಸ ಸಿಗುತ್ತಿದೆ. ಅದಕ್ಕಾಗಿ ಈ ಲೇಖನದಿಂದಾಗಿ ಬೇರೆ ಗ್ರಾಹಕರು, ಮತ್ತು ಪತ್ರಿಕೋದ್ಯಮದವರು ತಪ್ಪು ತಿಳಿಯಬಾರದಾಗಿ ವಿನಂತಿ.

       ಮತ್ತೊಂದು ವಿಚಾರವೇನೆಂದರೆ, ಈ ಲೇಖನದಲ್ಲಿರುವ ಕೆಲವು ಅಂಶಗಳನ್ನು ತುಂಬಾ ನೇರವಾಗಿ ಬರೆದಿರುವುದರಿಂದ ನನ್ನ ಪತ್ರಕರ್ತ ಗೆಳೆಯರು, ಪತ್ರಿಕೆಯಲ್ಲಿ ಕೆಲಸಮಾಡುವ ಡೆಸ್ಕ್ ಆಪರೇಟರುಗಳು, ಸಂಪಾದಕರು ಒಪ್ಪದಿರಬಹುದು. ಇಲ್ಲಿ ಇವೆರೆಲ್ಲ ಕೆಟ್ಟವರು ಅಂತ ಹೇಳಲು ಪ್ರಯತ್ನಿಸಿಲ್ಲ. ಯಾರ ಮನಸ್ಸನ್ನು ನೋಯಿಸುವ ಉದ್ದೇಶವೂ ನನಗಿಲ್ಲ.  ನಮ್ಮ  ಮುಂಜಾನೆ ಸತ್ಯದ ನೋವುಗಳನ್ನು ಹೊರಜಗತ್ತಿಗೆ ತೋರಿಸಲು ಪ್ರಯತ್ನಿಸಿದ್ದೇನೆ. ಮತ್ತೆ ಸಮೂಹ ಸನ್ನಿ ಎನ್ನುವ ಪದಕ್ಕೂ ಚಳುವಳಿಗೂ ಹೋಲಿಸಿ ಇಲ್ಲಿ ಬರೆದಿರುವುದು ತಪ್ಪು ಅಂತ ನನಗೂ ಗೊತ್ತು.  ಆದಕ್ಕಾಗಿ ಅದನ್ನು "ಆರೋಗ್ಯಕರ ಸಮೂಹ ಸನ್ನಿ" ಎಂದು ಹೇಳಿದ್ದೇನೆ. ನಾನು ಬರೆಯುವ ಸಮಯದಲ್ಲಿ ನನಗೆ ಹೊಳೆದ ಪದ ಇದೊಂದೆ. ಆ ಕಾರಣಕ್ಕೆ ಅದನ್ನೇ ಹೈಲೈಟ್ ಮಾಡಿ ಲೇಖನದ ದಿಕ್ಕು ತಪ್ಪಿಸಬಾರದಾಗಿ ವಿನಂತಿ. ಈ ಪದಕ್ಕಿಂತ ಉತ್ತಮ ಪದವಿದ್ದಲ್ಲಿ ತಿಳಿಸಿದರೆ ಸ್ವಾಗತಿಸುತ್ತೇನೆ ಮತ್ತು ನಾನು ಕಲಿತಂತಾಗುತ್ತದೆ.

     ಮತ್ತೆ ಅನಾಮಧೇಯ ನಾಮದಲ್ಲಿ ವಿತಂಡವಾದ, ಇತ್ಯಾದಿ comments ನೀಡಿದರೆ ಅದಕ್ಕೆ ಉತ್ತರಿಸದೆ  ಡಿಲಿಟ್ ಮಾಡಲಾಗುವುದು.  ಇಲ್ಲಿರುವ ವಿಚಾರಗಳಿಗಾಗಿ ನಿಮ್ಮ ಪ್ರತಿಕ್ರಿಯೆಗಳು ಆರೋಗ್ಯಕರವಾಗಿದ್ದು ಚರ್ಚೆಗೆ ಅವಕಾಶ ಮಾಡಿಕೊಟ್ಟರೆ ಎಲ್ಲರಿಂದ ಎಲ್ಲರೂ ಕಲಿಯಲು ಅವಕಾಶವಾಗುತ್ತದೆ.

ಈ ಲೇಖನ "ಸಂಪಾದಕೀಯ" ಬ್ಲಾಗಿನಲ್ಲೂ ಪ್ರಕಟವಾಗಿದೆ ಬೇಕಿದ್ದವರು ಅಲ್ಲಿಯೂ ಓದಬಹುದು.
http://sampadakeeya.blogspot.com/2011/10/blog-post.html#comments

ಚಿತ್ರಗಳು ಮತ್ತು ಲೇಖನ
ಶಿವು.ಕೆ

     

Posted by shivu.k (shivuu.k@gmail.com) on October 04, 2011 05:40 PM· permalink

ರೀತಿ...ನೀತಿ..ಪ್ರೀತಿ..

http://ittigecement.blogspot.com/2011/09/blog-post.html - ಇದು ಪ್ರಕಾಶಣ್ಣ ಬರೆದ ಕಥೆ...

ನೀತಿ..ಪ್ರೀತಿ..
ಅದೇ ಕಥೆಯನ್ನು ಮುಂದುವರಿಸಿ ಬರೆದಿದ್ದೇನೆ...

ನಾನು ಪ್ರಶ್ನೆ ಕೇಳುವುದು ಸಹಜ......!!!

ಯಾಕೆ ಅಂದರೆ.... ನಾನು ಜೀವನದಲ್ಲಿ ಎಂದೂ ಇವರನ್ನ ನೋಡೇ ಇಲ್ಲ, ಇವರ ಬಗ್ಗೆ ಕೇಳಿಲ್ಲ, ಬಹಳ ದಿನಗಳ ಪರಿಚಯವಿಲ್ಲ ಅಥವಾ ನಮ್ಮ ನೆಂಟರೂ ಅಲ್ಲ... ದಿಢೀರ್ ಎಂದು ೨ ತಿಂಗಳಲ್ಲಿ ನೋಡಿದ್ದು ಆಯ್ತು ಮದುವೆನೂ ಆಯ್ತು ಈ ಎರಡು ತಿಂಗಳಲ್ಲಿ ಗಂಡನಾಗುವನನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ......


ಆ ಹುಡುಗಿಯನ್ನು ಇಷ್ಟ ಪಟ್ಟಿದ್ದರೆ ಹೂ ಎನ್ನಲಿ.... ಇಲ್ಲವಾ ಖಡಾಖಂಡಿತವಾಗಿ ಇಲ್ಲ ಎಂದು ವಾದಿಸಿ ನನ್ನನ್ನ ಗೆಲ್ಲ ಬೇಕಿತ್ತು ಅದು ಬಿಟ್ಟು.... ಕೆಟ್ಟ ಕೋಪ ತೋರಿಸಿ ಮುಖ ತಿರುಗಿಸಿ ಮಲಗುವುದೇನು...?????

ಇವರೊಬ್ಬರಿಗೇ ಕೋಪ ಬರುವುದ.... ನನಗೂ ಬರುತ್ತೆ..... ನನ್ನಲ್ಲೂ ಸ್ವಾಭಿಮಾನವೆನ್ನುವುದು ಇದೆ......

ಮದುವೆಯಾದರೆ ಈ ತರಹ ಕದನ, ಕೋಪ ಎಲ್ಲಾ ಇರುತ್ತಾ...ಅಬ್ಬಾ!!! ಭಯವಾಗುತ್ತೆ... ಅಪ್ಪ ಅಮ್ಮನಿಗೆ ಹೇಳಿದ್ದೆ, ಪ್ರೀತಿಸಿ ಮದುವೆವಾಗತೀನಿ ಎಂದು ಆದರೆ ಅಪ್ಪ,ಅಮ್ಮ ಅದೇ ಓಭಿರಾಯನ ಕಾಲದಲ್ಲೇ ಇದ್ದಾರೆ.... ಜಾತಿ,ಮತ, ಹಣ, ಅಂತಸ್ತು ಎಂದು ಏನೋ ಮನೆಯವರೆಲ್ಲಾ ನೋಡಿ ಮಾಡಿದ ಮದುವೆ ಸಂಬಂಧ ಭದ್ರವಾಗಿರುತ್ತೆ ಎನ್ನೋ ಇರಾದೆ ಇವರದು...... ಏನೋ ನನಗೆ ನನ್ನ ಜೀವನವೇ ಗೊಂದಲದಲ್ಲಿದೆ... ಈಗಲೇ ನನ್ನ ಗಂಡನಿಗೆ ಇಷ್ಟು ಕೋಪ... ಮುಂದೆ ಹೇಗೋ ದೇವರೇ ಬಲ್ಲ..!!!!!!!! ಈ ರೀತಿ ಯೋಚನೆ ಆ ಹೆಣ್ಣು ಮಗಳದು...

ಮೌನ ಆವರಿಸಿದೆ ಆ ಬದಿ ಅವನು ಈ ಬದಿ ಇವಳು...... ನೀರವ ಮೌನ .... ಇಲ್ಲಿ ತಪ್ಪುನೆಪ್ಪುಗಳ ಪ್ರಶ್ನೆ ಇಲ್ಲ...... ಹುಸಿಮುನಿಸು ಮನೆ ಮಾಡಿದೆ.... ಆ ಮುನಿಸಲ್ಲೇ ಕಣ್ಣ ಕಂಬನಿಗಳು ತಲೆದಿಂಬನ್ನ ಒದ್ದೆಗೊಳಿಸುತ್ತಿತ್ತು ಇದು "ಮೌನದಿ ಕಣ್ಣೀರ ರಾಗ".........

--
ತನ್ನೆಲ್ಲಾ ಆಸೆ, ಪ್ರೀತಿ, ಬದುಕು, ನಂಬಿಕೆ, ನನ್ನವನೇ ಇವನು.. ಇವಳು ನನ್ನವಳು ಎಂದು ಒಬರಿಗೊಬ್ಬರಿದ್ದೇವೆ..... ಒಲವಿನ ಆಸರೆಯಾಗಿ ಹೊಸ ಬದುಕು ಪ್ರಾರಂಭಿಸುವ ದಿನ ಈ ಮೊದಲ ರಾತ್ರಿ ಇಂತಹದರಲ್ಲಿ ಎಲ್ಲವೂ ಅನುಮಾನದಲ್ಲಿ ದೂಡಿಬಿಡುತ್ತಾಳಲ್ಲ ಇವಳು... ಕನಸು ಕಟ್ಟಿದ್ದ ಮೊದಲ ರಾತ್ರಿ ಕನಸಾಗೇ ಉಳಿದು ಬಿಟ್ಟಂತಾಯ್ತು............ -ಈ ರೀತಿ ಇರಾದೆ ಗಂಡನದು

ಮತ್ತದೇ ನೀರವ ಮೌನ ಮಗ್ಗುಲು ಬದಲಿಸದೇ ಯೋಚಿಸಿದ್ದವನಿಗೆ ನಿದ್ರೆ ಆವರಿಸಿತ್ತು....

ಮಧ್ಯರಾತ್ರಿ....

ಏಕೋ ಗಂಟಲು ಒಣಗಿದೆ.... ಗಂಡನ ಮೇಲಿನ ಕೋಪ...ಕಣ್ಣಲ್ಲಿ ನೀರನ್ನು ತರಿಸಿತ್ತು... ಕಣ್ಣಲ್ಲಿ ಹೋದ ನೀರು ಬಾಯಾರಿಕೆಯನ್ನ ಎಳೆತಂದಿತು.. ಅಯ್ಯೋ ದೇವರೆ.. ಈಗಲೇ ಗಂಟಲು ಒಣಗಬೇಕೆ.... ಅತ್ತು ಅತ್ತು... ಗಂಟಲ್ಲಿಂದ ಕೆಮ್ಮು ಪಕ್ಕದಲ್ಲಿದ್ದ ಗಂಡನನ್ನ ಎಬ್ಬಿಸಿತು.....

ತಟ್ಟನೆ ಎದ್ದವನು ಒಂದು ಲೋಟದಲ್ಲಿ ನೀರನ್ನಿಡಿದು ಕೈಚಾಚಿದನು... ಕುಳಿತು ಕೆಮ್ಮುತ್ತಿದ್ದವಳು ಮಾತನಾಡಲಿಲ್ಲ... ಬೇಡವೆಂಬಂತೆ ಮುಖ ತಿರುಗಿಸಿದಳು... ಆದರು ಅವಳ ಮುಖ ತಿರುಗಿಸಿ ನೀರನ್ನ ಇವನೇ ಕುಡಿಸಿದ.... ಅವನ ಆ ಸೇವೆ ಇಷ್ಟವಾಯ್ತು.. ನನ್ನ ಮೇಲೂ ಕಾಳಜಿ ಇದೆ ಎನಿಸಿತು... ಆದರು ಯಾಕೋ ಆ ಕೋಪವಿಡಿಸಲಿಲ್ಲ....ಎಂದೆಲ್ಲಾ ಮನಸಿನಲ್ಲಂದುಕೊಂಡಳು

ಲೋಟದಿಂದ ನೀರು ಕುಡಿಸುತ್ತ ಅವಳ ಸೌಂದರ್ಯವನ್ನೇ ಸವಿಯಬೇಕೆನಿಸಿತು..... ಆದರೂ ಅವಳು ನನ್ನನೇ ಪ್ರಶ್ನಿಸಿದಳು... ನನ್ಗೆ ಕೋಪ ಬಂದಿದೆ ಈ ರೀತಿ ಅನುಮಾನ ಪಡುತ್ತಾಳಲ್ಲ ನನ್ನ ಮೇಲೆ... ಛೇ..!! ಬಿಡು ಮಾತ್ಯಾಕೆ ಈಗ..ಮಾತನಾಡೋದು ಎಂದುಕೊಂಡು ಮಲಗಿದನು....

ಗಂಟಲಿಗೆ ಧಣಿವಾರಿತು.... ಆದರೆ ಕೋಪ ಶಮನವಾಗಲಿಲ್ಲ..... ಮಬ್ಬು ಬೆಳಕಲ್ಲಿ ಒಬ್ಬರ ಮುಖ ಒಬ್ಬರು ನೋಡಿದರು ಮೌನ ಕರಗಿಲ್ಲ.... ಅವನ ಕಣ್ಣ ಭಾಷೆ ಅರ್ಥ ಮಾಡಿಕೊಳ್ಳಲಾಗಿಲ್ಲ ಇವಳಿಗೆ...... ಪ್ರೀತಿ ಇದೆ... ಅದನ್ನ ಕೋಪದಲ್ಲಿ ಕಳೆಯೋ ಮನಸ್ಸಿಲ್ಲ ಇಬ್ಬರಿಗೂ....... ಆದರೂ ಏನೋ ಸ್ವಾಭಿಮಾನ....

ಮುಖ ತಿರುವಿ ಮಲಗಿದ್ದ ಅವಳೀಗ ಗಂಡನತ್ತ ಮುಖ ಮಾಡಿ ಮಲಗಿದ್ದಳು ಆದರೆ ಅಂತರ ಮಾತ್ರ ಮುಂದುವರಿಸಿದ್ದಳು......

ಇತ್ತ ಇವನೂ ಅವಳ ಮೌನ ಮುರಿಯಲು ಸಾಧ್ಯವಾಗಲಿಲ್ಲ ತನ್ನಲಿದ್ದ ಕೋಪ ಸಹ ಕಡಿಮೆಯಾಗಿರಲಿಲ್ಲ..... ಮುಖ ತಿರುಗಿಸಿ ಮಲಗಿಬಿಟ್ಟಿದ್ದ...... ಒಂದೇ ಮಗ್ಗುಲಲಿ ಮಲಗಿದ್ದವಗೆ ಕೈ ಹಿಡಿದಂತೆ ನೋವಾಗಿದೆ......... ಇತ್ತ ಒರಳುತ್ತಾನೆ.... ಒಮ್ಮೆಲೇ ಬದಲಿಸಿದ ಕೈ ಪಕ್ಕದಲ್ಲೇ ಇದ್ದ ಮೃದು ತೋಳು ಅವನನ್ನ ಆಕರ್ಷಿಸಿದೆ........ ಮೆಲ್ಲಗೆ ನೇವರಿಸಿ.....ತಲೆದಡವಿದೊಡೆ....... ಅದೇನೋ ಮೋಹಕ ಭಾವ ಮನದಲ್ಲೇ ಅರಳುತ್ತದೆ.....

ಮಬ್ಬುಗತ್ತಲಲಿ ಕಣ್ಣು ಬಿಟ್ಟವಗೆ ಆ ಕೆಂಬಣ್ಣದ ತುಟಿಗಳು ಆಹ್ವಾನಿಸಿವೆ...... ಅವಳ ಮುಗ್ಧ ಮೊಗ ಅವಳತ್ತ ಸೆಳೆದಿದೆ......ಇತ್ತ ನಿದ್ರೆಯಲ್ಲಿರುವಂತೆ ನಟಿಸುತ್ತಿದ್ದವಳಿಗೆ... ಅವನ ಘಾಡ ಚುಂಬನ ಅವನನ್ನೇ ಬಾಚಿ ತಬ್ಬುವಂತೆ ಮಾಡಿದೆ...... ಆ ಕತ್ತಲ ರಾತ್ರಿ... ಇಬ್ಬರೂ ಮಾತಿಲ್ಲ ಕಥೆ ಇಲ್ಲ.... ನೀರವ ಮೌನದಲ್ಲೇ ಒಬ್ಬರಿಗೊಬ್ಬರು ಕ್ಷಮಾಪಣೆ ಸಲ್ಲಿಸಿ.........ಮಿಲನ ಮಹೋತ್ಸವದಲ್ಲಿ ತೇಲಿಬಿಡುತ್ತಾರೆ.... ಈ ಸಮ್ಮಿಲನ ಅವರಿಬ್ಬರಿಗೂ ಅರಿವೇ ಇಲ್ಲದೇ ಒಂದು ಮಾಡಿಸಿಬಿಟ್ಟಿದೆ...

ಒಬ್ಬರಿಗೊಬ್ಬರ ಪ್ರಶ್ನೆ ಅದು ಘಾಡವಾದ ವಿಷಯವೇನಲ್ಲ....... ಮಾತು ಸಹಜ... ಪ್ರೀತಿಯ ಬಂಧನ ಎಲ್ಲ ತಪ್ಪು ಮಾತುಗಳನ್ನ ಮುಚ್ಚಾಕಿ ಬಿಡುವಂತೆ ಎರಡು ಜೀವಗಳು ಪ್ರೀತಿಯಲ್ಲಿ ಇಬ್ಬರೂ ಬಂಧಿಯಾಗಿದ್ದರು......

ಆ ಕೋಪದ ರಾತ್ರಿ ಇಬ್ಬರಿಗೂ ಅರಿವಿಲ್ಲದೇ ಒಂದು ಮಾಡಿಸಿತ್ತು.........ಕೋಪ, ಮುನಿಸು.... ಮುಖ ತಿರುಗಿಸಿ ಮಲಗಿದ್ದೂ ಯಾವೊಂದು ವ್ಯತ್ಯಾಸ ಅರಿಯದೇ ಬೆಳಗಿನ ಸೂರ್ಯ ಕಿಟಕಿಯಲ್ಲಿ ನಾಚುತ್ತ ಇವರಿಬ್ಬರ ಮುಖಕ್ಕೆ ಬೆಳಕು ಚೆಲ್ಲಿದ್ದ......


ರೀತಿ: ಈ ರೀತಿನು ಇರುತ್ತಾರೆ ಜನ ಎಂಬುದು ಪ್ರಕಾಶಣ್ಣನ ಕಥೆ

ನೀತಿ: ಗಂಡ ಹೆಂಡಿರು ಜಗಳ ತಿಂದು ಮಲಗೋವರೆಗಷ್ಟೇ

ಪ್ರೀತಿ: ಗಂಡು ಹೆಣ್ಣು ಪ್ರೀತಿಯಲ್ಲಿ ಎಲ್ಲವನ್ನೂ ಮರೆಮಾಚಬಹುದು...

ತಪ್ಪುಗಳಿದ್ದರೆ ಕ್ಷಮೆ ಇರಲಿ...

Posted by ಮನಸು (noreply@blogger.com) on October 04, 2011 12:16 PM· permalink

ಡೊಂಕು ಬಾಲದ ನಾಯಕರೆ...


ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?

ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!

ಪುರಂದರದಾಸರ ಜನಪ್ರಿಯ ಗೀತೆಯಿದು. ಈ ಗೀತೆಯಲ್ಲಿ ದಾಸರು ಮನುಷ್ಯನ ಮನಸ್ಸನ್ನು ನಾಯಿಯ ಡೊಂಕು ಬಾಲಕ್ಕೆ ಹೋಲಿಸಿದ್ದಾರೆ. ‘ನಾಯಿಯ ಬಾಲ ಲಳಿಗೆಯಲ್ಲಿ ಹಾಕಿದರೂ ಡೊಂಕೇ’ ಎನ್ನುವ ಗಾದೆ ಮಾತು ಇದೆಯಲ್ಲ! ಅದೇ ತರಹ, ಮನುಷ್ಯನ ಮನಸ್ಸೂ ಸಹ ಮತ್ತೆ ಮತ್ತೆ ವಿಷಯಭೋಗಗಳ ಕಡೆಗೇ ಹರಿಯುತ್ತದೆ. ಕಣಕದ ಅಥವಾ ಹುಗ್ಗಿಯ ವಾಸನೆಯನ್ನು ಹಿಡಿದು ಹೋದ ನಾಯಿಗೆ ಒನಕೆಯ ಅಥವಾ ಸವಟಿನ ಪೆಟ್ಟು ತಪ್ಪಿದ್ದಲ್ಲ. ಅದೇ ರೀತಿ ವಿಷಯವಾಸನೆಯನ್ನು ಹಿಡಿದು ಹೋಗುವ ಮನುಷ್ಯನಿಗೂ ಸಹ ವಿಧಿಯ ಪೆಟ್ಟು ತಪ್ಪಿದ್ದಲ್ಲ. ಈ ಪೆಟ್ಟೇ ಮನುಷ್ಯನಿಗೆ ಸಿಗುವ ಊಟ ಅಥವಾ ಕರ್ಮಫಲ! ಇದು ದಾಸರ ಸಂದೇಶ. ಹಾಗೆಂದ ಮಾತ್ರಕ್ಕೆ ಈ ವಿಷಯದಲ್ಲಿ ಮನುಷ್ಯನನ್ನೇ ಸಂಪೂರ್ಣವಾಗಿ ದೂರುವಂತಿಲ್ಲ. ಮನುಷ್ಯನು ಭಗವಂತನ ಸೂತ್ರದ ಗೊಂಬೆ. ಆದುದರಿಂದ ಪುರಂದರ ವಿಠ್ಠಲನು ತೋರಿದ ಆಟಗಳನ್ನು ಈ ಗೊಂಬೆ ಆಡುತ್ತಿದೆ ಎನ್ನುವದು ದಾಸರು ಕೊಡುವ ಸಮಾಧಾನ.

ಪುರಂದರದಾಸರ ಗೀತೆಗಳೆಲ್ಲವೂ ಸರಳ ಗೀತೆಗಳು. ಅವುಗಳಲ್ಲಿಯ ಸಂದೇಶ ಅಥವಾ ನೀತಿಬೋಧೆ ಸರಳವಾಗಿಯೇ ಇರುತ್ತದೆ. ಆದರೆ ‘ಡೊಂಕು ಬಾಲದ ನಾಯಕರೆ’ ಎನ್ನುವ ಈ  ಗೀತೆಯಲ್ಲಿ ಒಂದು ಸ್ವಾರಸ್ಯಕರವಾದ ಶ್ಲೇಷೆ ಇದೆ. ಅದೇ ಈ ಗೀತೆಗೆ ವಿಶೇಷ ಅರ್ಥವನ್ನು ಕೊಡಲು ಕಾರಣವಾಗಿದೆ. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕ ಎನ್ನುವದು ಎಲ್ಲರಿಗೂ ತಿಳಿದ ಸಂಗತಿ. ಈ ಹಾಡಿನ ಪಲ್ಲವಿಯಲ್ಲಿ ‘ಡೊಂಕು ಬಾಲದ ನಾಯಕರೆ’ ಎನ್ನುವ ಪದಪುಂಜವನ್ನು ಗಮನಿಸಿ. ಈ ಸಂಬೋಧನೆಯು ನಾಯಿಯನ್ನು ಉದ್ದೇಶಿಸಿರುವದು ಎನ್ನುವದು ಸಾಮಾನ್ಯ ಅರ್ಥ. ಅದರ ಜೊತೆಗೇ ದಾಸರು ‘ನಾಯಕರೆ’ ಎಂದು ಶ್ರೀನಿವಾಸ ನಾಯಕರನ್ನು ಅಂದರೆ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿರುವದು ಇಲ್ಲಿಯ ವಿಶೇಷಾರ್ಥ. ಬಹುಶಃ ದಾಸರು ತಮಗೆ ತಾವೇ ಹೀಗೆ ಹೇಳಿಕೊಳ್ಳುತ್ತಿರಬಹುದು:

ನಾಯಕಾ, ನೀನು ವೈರಾಗ್ಯವೃತ್ತಿಯನ್ನು ತಾಳಿ ದಾಸನಾದೆ ಎಂದು ಹೇಳಿಕೊಳ್ಳುತ್ತೀಯಾ. ಆದರೆ ನಿನ್ನ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಇದೆ. ಮತ್ತೆ ಮತ್ತೆ ನಿನ್ನ ಮನಸ್ಸು ಸಂಸಾರದ ಸುಖಗಳ ಕಡೆಗೆ ಹರಿಯುತ್ತದೆ. ಇದನ್ನು ನಿಯಂತ್ರಿಸದಿದ್ದರೆ, ನೀನು ಮತ್ತೆ ಮತ್ತೆ ಪೆಟ್ಟು ತಿನ್ನುತ್ತೀಯಾ!
ಭಗವಂತಾ, ವಿಠ್ಠಲಾ! ನನ್ನ ಮನಸ್ಸಿನ ಆಟಗಳೆಲ್ಲಕ್ಕೂ ನೀನೆ ಹೊಣೆ. ನೀನು ಆಡಿಸಿದಂತೆ ನಾನು ಆಡುತ್ತಿದ್ದೇನೆ.

ಆದುದರಿಂದ ‘ನಾಯಕರೆ’ ಎಂದು ಹೇಳುವ ಮೂಲಕ, ದಾಸರು ಈ ಹಾಡನ್ನು  ಕೇವಲ ಪರರಿಗೆ ನೀತಿಬೋಧೆಯನ್ನು ಮಾಡಲು ಹಾಡಿಲ್ಲ, ತಮಗೆ ತಾವೇ ಆತ್ಮಬೋಧೆಗಾಗಿ ಹಾಡಿದ್ದಾರೆ ಎಂದೆನಿಸುವದು.

ಪುರಂದರದಾಸರ ಪರಿವರ್ತನೆಯ ಬಗೆಗಿರುವ ಜನಜನಿತ ಕತೆಯಿಂದಾಗಿ ಅವರ ವ್ಯಕ್ತಿತ್ವದ ಅನೇಕ ಆಯಾಮಗಳು ಮಸುಕಾಗಿ ಹೋಗಿವೆ. ಶ್ರೀನಿವಾಸ ನಾಯಕರು ಪುರಂದರದಾಸರಾಗಿ ಬದಲಾಗುವದಕ್ಕಿಂತ ಮೊದಲಿನಿಂದಲೂ ಸಂಗೀತವಿದ್ವಾಂಸರು, ಅಧ್ಯಯನಶೀಲರು, ಬಹುಶ್ರುತರು ಹಾಗು ದೇವಭಕ್ತರು ಆಗಿರಬೇಕು. ಅವರ ಕೀರ್ತನೆಗಳಲ್ಲಿ ಬರುವ ಕೆಲವು ಸಾಲುಗಳನ್ನು ಗಮನಿಸಿರಿ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ಹೂವ ತರುವರ ಮನೆಗೆ ಹುಲ್ಲ ತರುವ’, ‘ಉದರವೈರಾಗ್ಯವಿದು’,‘ದಾರಿ ಯಾವುದಯ್ಯಾ ವೈಕುಂಠಕೆ’, ‘ಅಲ್ಲಿರುವದು ನಮ್ಮ ಮನೆ, ಇಲ್ಲಿರುವದು ಸುಮ್ಮನೆ’ ಇಂತಹ ಅನೇಕ ಸಾಲುಗಳಲ್ಲಿ, ಗೀತೆಗಳಲ್ಲಿ ದಾಸರ ಸಾಹಿತ್ಯಪ್ರತಿಭೆ ವ್ಯಕ್ತವಾಗುತ್ತದೆ.  

ಪುರಂದರದಾಸರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯಲಾಗುತ್ತಿದೆ. ದಾಸರಾಗುವ ಮೊದಲೂ ಸಹ ಅವರಿಗೆ ಸಾಹಿತ್ಯದಲ್ಲಿ ಹಾಗು ಸಂಗೀತದಲ್ಲಿ ಪರಿಣತಿ ಇರಲೇ ಬೇಕಲ್ಲವೆ? ಇಲ್ಲದೆ ಹೋದರೆ, ಅವರು ತಮ್ಮ ನೂರಾರು ಕೀರ್ತನೆಗಳನ್ನು ರಾಗಬದ್ಧವಾಗಿ ರಚಿಸಲು ಸಾಧ್ಯವಾಗುತ್ತಿರಲಿಲ್ಲ. ದಾಸರಾಗುವ ಪೂರ್ವದಲ್ಲಿ ಶ್ರೀನಿವಾಸ ನಾಯಕರ ಐಹಿಕ ಆಸೆಗಳು ಏನೇ ಇರಲಿ, ಈ ಲೌಕಿಕಕ್ಕೆ ಅವರ ಮನಸ್ಸು ಎಷ್ಟೇ ಕಟ್ಟು ಬಿದ್ದಿರಲಿ, ತಮ್ಮ ಮನೆಯಲ್ಲಿ, ತಮ್ಮ ಮನದಲ್ಲಿ ಅವರು ದೇವರನ್ನು ಶ್ರದ್ಧಾಪೂರ್ವಕವಾಗಿ ಪೂಜಿಸುತ್ತಿರಬಹುದು. ಆ ಸಮಯದಲ್ಲಿ ಸಂಗೀತದ ಮೂಲಕ ದೇವರನ್ನು ಭಜಿಸುತ್ತಿರಬಹುದು. ಅವರ ಕೀರ್ತನೆಯೊಂದನ್ನು ಗಮನಿಸಿದರೆ ಅವರಿಗಿರುವ ಅಪಾರ ಸಂಗೀತಜ್ಞಾನದ ಕಲ್ಪನೆಯಾಗುತ್ತದೆ:

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ
ಮಂಗಳ ನಾಮವ ಪಾಡಿ ರಂಗನ ಕುಣಿಸುವರು
ಪಾಡಿ ಮಲ್ಹಾರಿ ಭೈರವಿ ಸಾರಂಗಿ ದೇಸಿ
ಗುಂಡಕ್ರಿಯೆ ಗುರ್ಜರಿ ಕಲ್ಯಾಣಿ ರಾಗದಿ
ತಂಡ ತಂಡದಲಿ ನೆರೆದು ರಂಗನ ಉಡಿಯ ಘಂಟೆ
ಘಣ ಘಣ್ ಘಣಿರೆಂದು ಹಿಡಿದು ಕುಣಿಸುವರು

ಅವರು ಲೌಕಿಕರಿದ್ದಾಗ ದೇವರ ಪೂಜೆಯನ್ನು ಬಲು ಆಡಂಬರದಿಂದ ನೆರವೇರಿಸುತ್ತಿರಬಹುದು. ಜ್ಞಾನೋದಯವಾದ ಬಳಿಕ ಈ ಆಡಂಬರದ ವ್ಯರ್ಥತೆಯನ್ನು ಅರಿತ ಅವರು ‘ಉದರವೈರಾಗ್ಯವಿದು ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ’ ಎಂದು ಹಾಡಿರಬಹುದು. ಅಷ್ಟೇ ಏಕೆ, ತಾವೇ ಮೊದಲು ಮಾಡುತ್ತಿರಬಹುದಾದ ‘ಮಡಿ ಆಚರಣೆ’ ವ್ಯರ್ಥವೆಂದು ಅರಿತುಕೊಂಡೇ ಅವರು ‘ಮಡಿ ಮಡಿ ಎಂದು ಅಡಿಗಡಿಗೆ ಹಾರುವಿ’ ಎಂದು ‘ಮಡಿವಂತ’ರನ್ನು ಹೀಯಾಳಿಸಿರಬಹುದು.

ಈ ಆಡಂಬರ, ಈ ಮಡಿ ‘ಈ ಆನೆ, ಕುದುರೆ, ಒಂಟೆ ಎಲ್ಲಾ’ ಲೊಳಲೊಟ್ಟೆ ಎಂದು ಶ್ರೀನಿವಾಸ ನಾಯಕರಿಗೆ ಅರಿವಾದದ್ದು ಹೇಗೆ?  ಜನಪ್ರಿಯ ಕತೆಯು ಹೇಳುವಂತೆ ಶ್ರೀನಿವಾಸ ನಾಯಕರು ಜಿಪುಣಾಗ್ರೇಸರರು. ತಮ್ಮ ಹೆಂಡತಿಯು ತನ್ನ ಮೂಗುತಿಯನ್ನು ದಾನವಾಗಿ ಕೊಟ್ಟಿರಬಹುದು ಎನ್ನುವ ಸಂದೇಹದಿಂದ ಅವಳನ್ನು ಪರೀಕ್ಷಿಸುತ್ತಾರೆ. ವಿಷ ತೆಗೆದುಕೊಳ್ಳಲು ಹೋದ ಅವಳಿಗೆ ವಿಷದ ಬಟ್ಟಲಿನಲ್ಲಿ ಮೂಗುತಿ ದೊರೆತುದರಿಂದ, ಆ ವಿಷಮ ಸನ್ನಿವೇಷದಿಂದ ಅವಳು ಪಾರಾಗುತ್ತಾಳೆ. ಇದು ನಾಯಕರ ಮನಃಪರಿವರ್ತನೆಗೆ ಕಾರಣವಾಗುತ್ತದೆ. ಈ ಪವಾಡವು ನಿಜವೆ? ನಿಜವಾಗಿಯೂ ಏನಾಯಿತು ಎನ್ನುವದನ್ನು ಈಗ ತಿಳಿಯಲು ಸಾಧ್ಯವಾಗಲಿಕ್ಕಿಲ್ಲ. ಆದರೆ ಇದರ ಸಂಭಾವ್ಯತೆಗಳನ್ನು ಹೀಗೆ ಊಹಿಸಬಹುದು:

(೧) ಇದು ನಿಜವಾಗಿಯೂ ಆದಂತಹ ಪವಾಡ.
(೨) ಮನೋಚಲನ ಶಕ್ತಿ ಎನ್ನುವದು ಒಂದು ಇದೆ ಎನ್ನುವದನ್ನು ಪರಾಮನೋವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಮೂಗುತಿಯು ಬಟ್ಟಲಿನಲ್ಲಿ ಬಂದಿದ್ದು ಹಾಗು ಮರಳಿ ನಾಯಕರ ತಿಜೋರಿಗೆ ಹೋಗಿದ್ದು ಅವರ ಸಾಧ್ವಿ ಹೆಂಡತಿಯ ಮನೋಚಲನ ಶಕ್ತಿಯಿಂದ ಆಗಿರಬಹುದು.
(೩) ವಿಷಪ್ರಾಶನ ಮಾಡಲು ಉದ್ಯುಕ್ತಳಾದ ಅಥವಾ ಮಾಡಿದಂತಹ ಹೆಂಡತಿಯನ್ನು ಕಂಡು, ನಾಯಕರ ಮನಸ್ಸಿನ ಮೇಲೆ ವಿಪರೀತ ಪರಿಣಾಮವಾಗಿ ಅವರು ಬದಲಾಗಿರಬಹುದು.

ಏನೇ ಆಗಿರಲಿ, ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ಸಂಭವಿಸಿದೆ. ಈ ಘಟನೆಯ ಪರಿಣಾಮವಾಗಿ ಅವರ ಮೊದಲಿನ ವ್ಯಾವಹಾರಿಕ ನಂಬಿಕೆಗಳು ಅಳಿದು, ಅವರಲ್ಲಿ ಆಧ್ಯಾತ್ಮಿಕ ನಂಬಿಕೆಗಳು ಮೂಡಿವೆ. ಈ ತರಹದ ಪರಿವರ್ತನೆಯನ್ನು ರಶಿಯದ ಖ್ಯಾತ ವರ್ತನಾವಿಜ್ಞಾನಿ ಪಾವ್ಲೋವ್(೧೮೪೯-೧೯೩೬) ಗಮನಿಸಿದ್ದಾನೆ. ಆತನ ಪ್ರಯೋಗಶಾಲೆಗೆ ಒಮ್ಮೆ ಪ್ರವಾಹದ ನೀರು ನುಗ್ಗಿದಾಗ, ಅಲ್ಲಿದ್ದ ನಾಯಿಗಳಲ್ಲಿ ಕೆಲವು ಸತ್ತೇ ಹೋದವು. ಬದುಕುಳಿದ ನಾಯಿಗಳಲ್ಲಿದ್ದ ‘ಸಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ(=strong  conditioned reflexes) ನಶಿಸಿ, ದುರ್ಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ (= weak conditioned reflexes) ಮೇಲೆದ್ದವು’ ಎಂದು ಪಾವ್ಲೋವ್ ದಾಖಲಿಸಿದ್ದಾನೆ.

ಒಟ್ಟಿನಲ್ಲಿ ಶ್ರೀನಿವಾಸ ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ನಡೆಯಿತು. ಆಧ್ಯಾತ್ಮವನ್ನು ನಂಬದವರು ಈ ಘಟನೆಯು ಅವರ ಮೊದಲಿನ ನಂಬುಗೆಗಳನ್ನು ಅಂದರೆ ವ್ಯಾವಹಾರಿಕ ಮನೋಭಾವನೆಯನ್ನು ಬದಲಾಯಿಸಿತು ಎಂದು ಹೇಳಬಹುದು. ಆಧ್ಯಾತ್ಮಜೀವನದಲ್ಲಿ ನಂಬುಗೆ ಇದ್ದವರು ಈ ಘಟನೆಯಿಂದಾಗಿ ನಾಯಕರ ಕಣ್ಣು ತೆರೆಯಿತು ಎಂದು ಹೇಳಬಹುದು. ಏನೇ ಆಗಲಿ, ಈ ಆಘಾತಕಾರಿ ಘಟನೆಯಿಂದಾಗಿ ಕನ್ನಡಿಗರಿಗೆ ಓರ್ವ ಶ್ರೇಷ್ಠ ದಾರ್ಶನಿಕ ಮಾರ್ಗದರ್ಶಕರು ದೊರೆತರು, ಕರ್ನಾಟಕ ಸಂಗೀತ ಪಿತಾಮಹ ದೊರೆತರು. ಇದಕ್ಕೆಲ್ಲ ಕಾರಣಳಾದವರು ನಾಯಕರ ಹೆಂಡತಿ.
‘ಹೆಂಡತಿ ಸಂತತಿ ಸಾವಿರವಾಗಲಿ,
ದಂಡಿಗೆ ಬೆತ್ತ ಹಿಡಿಸಿದಳಯ್ಯ’ ಎಂದು ದಾಸರೇ ತಮ್ಮ ಹೆಂಡತಿಯ ಉಪಕಾರವನ್ನು ಸ್ಮರಿಸಿದ್ದಾರೆ.
ಆ ಸಾಧ್ವಿಗೆ ಕನ್ನಡಿಗರು ಚಿರಕೃತಜ್ಞರು.

ಪ್ರತಿಯೊಬ್ಬ ಮಹಾನುಭಾವನ ಹಿಂದೆ ಒಬ್ಬ ಮಹಾನ್ ಸ್ತ್ರೀ ಇರುತ್ತಾಳೆ ಎನ್ನುವ ಮಾತಿಗೆ ಈ ಘಟನೆ ನಿದರ್ಶನವಾದೀತು. ಕೆಲವು ನಗೆಗಾರರು `ದಾರ್ಶನಿಕರಾಗಲು ಮದುವೆಯಾಗಬೇಕು ಎಂದು ಸಾಕ್ರೆಟೀಸನ ಉದಾಹರಣೆ ಕೊಟ್ಟು ಹಾಸ್ಯ ಮಾಡಲೂ ಬಹುದು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲನ್ನು ಓದಿದಾಗ ನನಗೆ ನೆನಪಾಗುವದು ಇಂಗ್ಲೀಶ ಕವನವೊಂದರ ಸಾಲು:
Abou Ben Adhem
(may his tribe increase)
ಲೀ ಹಂಟ್ ಎನ್ನುವ ಇಂಗ್ಲಿಶ್ ಕವಿ ಈ ಕವನವನ್ನು  ಕ್ರಿ. ಶ. ೧೮೩೪ರಲ್ಲಿ ಬರೆದನು. ದಾಸರು ಕ್ರಿ.ಶ. ೧೪೮೪-೧೫೬೪ರಲ್ಲಿ ಬಾಳಿದವರು. ಇಬ್ಬರೂ ಬೇರೆ ಬೇರೆ ದೇಶ ಹಾಗು ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೆಳೆದವರು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲಿಗೂ ‘may his tribe increase ಎನ್ನುವ ಸಾಲಿಗೂ ಎಂಥಾ ಸಾಮ್ಯತೆ ಇದೆಯಲ್ಲವೆ! ಕಾವ್ಯಕ್ಕೆ ಕಾಲ, ದೇಶ ಹಾಗು ಸಂಸ್ಕೃತಿಯ ಭೇದ ಇದ್ದೀತೆ?

ವೈರಾಗ್ಯವನ್ನು ತಾಳಿ, ಸನ್ಯಾಸವನ್ನು ಸ್ವೀಕರಿಸಿದವರು ಅನೇಕರಿದ್ದಾರೆ. ಇವರೆಲ್ಲ ತಮ್ಮ ಸಂಪತ್ತನ್ನು ತಮ್ಮ ಹೆಂಡತಿ, ಮಕ್ಕಳಿಗೆ ಬಿಟ್ಟು ಸನ್ಯಾಸಿಯಾದವರು. ಆದರೆ ಪುರಂದರದಾಸರು ತಾವಷ್ಟೇ ದಾಸರಾಗಲಿಲ್ಲ. ಅವರ ಜೊತೆಗೆ ಅವರ ಹೆಂಡತಿ ಹಾಗು ಮಕ್ಕಳೂ ಸಹ ಗೋಪಾಳಬುಟ್ಟಿಯನ್ನು ಹಿಡಿದರು. ತಾವು ಕಂಡ ಸತ್ಯದ ದಾರಿಯನ್ನು ತಮ್ಮವರೂ ತುಳಿಯಬೇಕು ಎನ್ನುವದು ಸತ್ಯಪ್ರಜ್ಞರ ತಿಳಿವು. ದಾಸರ ಬಳಿಕ ಐದು ಶತಮಾನಗಳ ನಂತರ ಮತ್ತೊಬ್ಬ ಸಂತ ಇಂತಹ ಸತ್ಯನಿಷ್ಠೆಯನ್ನು ತೋರಿಸಿದ. ಆತ ಮೋಹನದಾಸ ಗಾಂಧೀ.

ಪುರಂದರದಾಸರ ಒಂದು ಕೀರ್ತನೆ  ತುಂಬ ಜನಪ್ರಿಯವಾಗಿದೆ. ಪ್ರತಿ ಶುಕ್ರವಾರವೂ ಅನೇಕರು ಈ ಭಜನೆಯನ್ನು ಹಾಡುತ್ತಾರೆ:
ಭಾಗ್ಯದಾ ಲಕ್ಷ್ಮೀ ಬಾರಮ್ಮಾ, ನಮ್ಮಮ್ಮಾ ನೀ ಸೌ-
ಭಾಗ್ಯದಾ ಲಕ್ಷ್ಮೀ ಬಾರಮ್ಮಾ.

ಲೌಕಿಕ ಸಂಪತ್ತೆನ್ನೆಲ್ಲ ಬಿಸುಟು ಹೋದ ದಾಸರು ಯಾವ ಭಾಗ್ಯಲಕ್ಷ್ಮಿಯನ್ನು ಕರೆಯುತ್ತಿರಬಹುದು?
ಕನಕವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ತೋರೆ
ದಿನಕರಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ
ಈ ನುಡಿಯನ್ನು ನೋಡಿದಾಗ ದಾಸರು ಲೌಕಿಕ ಸಂಪತ್ತಿನ ಲಕ್ಷ್ಮಿಯನ್ನು ಕರೆಯುತ್ತಿರಬಹುದೆ ಎನ್ನುವ ಅನುಮಾನ ಬಾರದಿರದು. ಆದರೆ,
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಗೊಂಬೆ”
ಎನ್ನುವ ಸಾಲುಗಳನ್ನು ನೋಡಿದಾಗ, ದಾಸರು ಕರೆಯುತ್ತಿರುವದು ವೈರಾಗ್ಯಲಕ್ಷ್ಮಿಯನ್ನು ಎಂದು ಭಾಸವಾಗುತ್ತದೆ.
‘ಲಂಗೋಟಿ ಬಲು ದೊಡ್ಡದಣ್ಣ’ ಎಂದು ಹಾಡಿದ ದಾಸರು, ತಾವು ತ್ಯಜಿಸಿದ ಸಿರಿ ಸಂಪತ್ತನ್ನು ವಿಜೃಂಭಿಸಿ ಕೀರ್ತಿಸುವದು ಸಾಧ್ಯವಿಲ್ಲ. ಏನೇ ಆಗಲಿ, ಅವರವರ ಭಾವಕ್ಕೆ ತಕ್ಕಂತಹ ಫಲ ಅವರವರಿಗೆ ಲಭಿಸುತ್ತದೆ. ಆದುದರಿಂದ ಲೌಕಿಕ ಸಂಪತ್ತನ್ನು ಬಯಸುವವರು ದಾಸರ ಗೀತೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವದು ಶ್ರೇಯಸ್ಕರ:

ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?

ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!

Posted by sunaath (noreply@blogger.com) on October 04, 2011 04:07 AM· permalink

ಬಿತ್ತಿರುವ ಭತ್ತದ ತೆನೆಗಳಿವು ಎಲ್ಲೆಡೆಯು...

ಬದುಕಿನ ತುಂಬಾ ನೋವುಗಳಿವೆ, ಆಸೆಗಳಿವೆ, ಕೊಳಕು ಮನಸುಗಳಿವೆ, ಮೋಸದ ಮುಖಗಳಿವೆ. ಯಾರನ್ನು ನಂಬುವುದು, ಯಾರನ್ನು ಮೆಚ್ಚುವುದು, ಮುತ್ತುಗಳ ಆಸೆಯಲ್ಲಿ ಎಲ್ಲರೂ ಮತ್ತೇರಿದಂತೆ ನಶೆಯಲ್ಲಿ ಮುಳುಗಿದ್ದಾರೆ. ಎಷ್ಟು ಹಣ ಇದ್ದರೂ ಸುಖವಿಲ್ಲ. ಎರಡಗಲ ಭೂಮಿಯಲ್ಲಿ ಮಣ್ಣಾಗುವ ದೇಹವಿದು, ಅಂಥಹ ದೇಹ ಮಣ್ಣಾಗುವ ಮುನ್ನ, ಬಾಯಿ ತುಂಬಾ ನಗಲು ಕೂಡಾ ಹಿಂದೆ ಮುಂದೆ ನೋಡುವ ನಾವು ಸಾಧಿಸುವುದಾದರೂ  ಏನನ್ನು? 

ಇಲ್ಲಿ ಸಖ ತನ್ನ ಸಖಿಗೆ ಹೇಳುತ್ತಿದ್ದಾನೆ,  ನಿನ್ನ ಮುಖದಲ್ಲಿ ನನಗೆ ನಗು ಕಂಡರೆ ಅದಕ್ಕೆ ಕಾರಣ ನಾ ಹುಡುಕುವುದಿಲ್ಲ, ನಿನ್ನ ಸುಂದರ ಮಾತುಗಳಿಗೆ ನನಗೆ ಟಿಪ್ಪಣಿ ಬೇಕಾಗಿಲ್ಲ, ಆದರೆ ನೀನು ಬಿಕ್ಕಳಿಸದಿರು ಗೆಳತಿ, ಅದು ನನಗೆ ಹಿಂಸೆ ನೀಡುತ್ತದೆ. ಬತ್ತದ ಅದೆಷ್ಟೋ ನದಿಗಳು, ಅವುಗಳ ದಂಡೆಯಲ್ಲಿ ಬೆಳೆಯ ಬೆಳೆಯುತ್ತ ಇರುವ ಅದೆಷ್ಟೋ ಜನರಿದ್ದಾರೆ. ಎಲ್ಲೆಡೆ ಭತ್ತದ ಬಿತ್ತನೆ ಮುಗಿದು ತೆನೆ ಹಸನಾಗಿ ತೋರುತ್ತಿದೆ, ಮತ್ತೆ ಚಿಂತೆ ಬೇಡ, ಸದಾ ನಗುವಿರಲಿ ಮುಖದಿ, ಎನ್ನುತ್ತಿದ್ದಾನೆ. ಮೇಲುನೋಟಕ್ಕೆ ಇದು ಕೇವಲ ಗೆಳತಿಯ ಸಮಾಧಾನ ನೀಡುವ ಗೆಳೆಯನ ಪ್ರೀತಿಯೇ ಆದರೂ ಇದು ಸಮಾಜಕ್ಕೆ ಹಿಡಿದ ಕನ್ನಡಿಯೂ ಹೌದು. ಇಲ್ಲಿ ಬತ್ತದ ನದಿಗಳೆಂದರೆ, ''ಮನಸು''. ಬಿತ್ತಿದ ಬೆಳೆ ''ಪ್ರೀತಿ''. ಹುಟ್ಟಿ ನಳ ನಳಿಸುತ್ತಿರುವ ತೆನೆಗಳೆಂದರೆ ''ನಾಳೆಯ ಕಂದಮ್ಮಗಳು''. ಅವುಗಳಿಗೆ ಸರಿಯಾದ ನೀರಿನ ಪೋಷಣೆ ಸಿಕ್ಕರೆ ನಾಳಿನ ಉತ್ತಮ ಫಸಲಿಗೆ ಚಿಂತಿಸುವ ಅಗತ್ಯವಿಲ್ಲ. ಹಾಗೆಯೇ ಪ್ರೀತಿ, ನಗು ತುಂಬಿದ್ದರೆ ಅಲ್ಲಿ ಬಿಕ್ಕಳಿಸುವ ಪ್ರಮೇಯವಿಲ್ಲ ಎಂದು ತನ್ನ ಸಖಿಗೆ ಪ್ರಿಯ ಸಖ ಹೇಳುತ್ತಿದ್ದಾನೆ.




ನಿನ್ನ ನಗು ಕಂಡಾಗ ಕಾರಣವು ಬೇಕಿಲ್ಲ
ಅಂದದ ಮೊಗದಲ್ಲಿ, ಗೆರೆಗಳೇಕೆ
ಅಕ್ಕರೆಯ ನುಡಿಗಳಿಗೆ ಒಕ್ಕಣಿಕೆ ಬೇಕಿಲ್ಲ
ಬಿಕ್ಕಳಿಸದಿರು ಗೆಳತಿ, ಚಿಂತೆಯೇಕೆ?

ಮುತ್ತಿನ ಮಾತುಗಳ ಮಾಲೆಯ ಹೆಣೆಯುವರು
ಕಿತ್ತಾಡುತಿಹರೆಲ್ಲ ಜಗದ ಒಳಗೆ
ಮುತ್ತುಗಳ ಆಸೆಯಲಿ ಮತ್ತೇರಿಹರೆಲ್ಲ
ಬಿಕ್ಕಳಿಸು ಗೆಳತಿ ಸುಖವು ಬೇಕೇ?


ಬತ್ತದ ನದಿಗಳಿವು ಬಿತ್ತುತಿರು ಬೆಳೆಯ
ಹೊತ್ತಲ್ಲದೊತ್ತಿನಲಿ ಹಸನು ಹಸನು
ಬಿತ್ತಿರುವ ಭತ್ತದ ತೆನೆಗಳಿವು ಎಲ್ಲೆಡೆಯು
ಬಿಕ್ಕಳಿಸದಿರು ಗೆಳತಿ, ಚಿಂತೆಯೇಕೆ?

ಅಡಿಯಗಲ ಭೂಮಿಯಲಿ ಮಣ್ಣಾಗುವ ಮುನ್ನ
ಮನದಗಲ ನಗುವಿಗೆ ಸುಂಕ ಯಾಕೆ?
ನಿನ್ನ ನಗುವಿನಲೆನಗೆ ಕಾರಣವು ಬೇಕಿಲ್ಲ 
ಮಗುವಿನ  ಮೊಗವಿರಲಿ, ಬದುಕಿರುವುದ್ಯಾಕೆ?

Posted by ಸಾಗರದಾಚೆಯ ಇಂಚರ (koorsebabbi@gmail.com) on October 03, 2011 03:33 PM· permalink

.............ಹೀಗೆ .


ನಿರ್ಧಾರಗಳು ಯಾಕೆ ಬದಲಾಗುತ್ತವೆ?


ಉತ್ತರ ಬಲು ಕಷ್ಟ...


ನನ್ನಪ್ಪ ಊರಿಂದ ಬರುವಾಗ ಹೇಳಿದ್ದರು...


"ಮಗಾ..
ಪಟ್ಟಣದಲ್ಲಿ ಇರ್ತೀಯಾ...
ಹದಿಹರೆಯದ ವಯಸ್ಸು... ಮನಸ್ಸು ಹಿಡಿತದಲ್ಲಿರೋದಿಲ್ಲ..


ಮೊದಲಬಾರಿಗೆ ಊರಿಂದ... ಅಪ್ಪ,ಅಮ್ಮರಿಂದ ದೂರ ಇರ್ತಿದ್ದೀಯಾ..
ಒಂಟೀತನ ಕಾಡಬಹುದು...


ಚಟಕ್ಕೆ ..
ಹೆಣ್ಣುಮಕ್ಕಳ ಕಡೆಗೆ  ಮನಸ್ಸು ಎಳೆಯ ಬಹುದು..


ನೀನು ಎಚ್ಚರಿಕೆಯಲ್ಲಿರಬೇಕು..."


ನಾನೂ ಗಟ್ಟಿಯಾಗಿ ನಿರ್ಧರಿಸಿದ್ದೆ... ಅಪ್ಪಹೇಳಿದಂತೆ ನಡೆಯಬೇಕು ಅಂತ...


ಆದರೆ...
ಆ ಹುಡುಗಿ....
ಸ್ವಲ್ಪ ಕುಳ್ಳಿ... 
ಕಣ್ಣಲ್ಲೇ ನಗುವ..ಚಂದದ ತುಟಿಗಳಿಗೆ ಮರುಳಾಗಿಬಿಟ್ಟೆ...


ಅರಳು ಹುರಿದಂತೆ ಅವಳು ಮಾತನಾಡುವಾಗ ನಾನೋ ಎಲ್ಲೋ ಕಳೆದು ಹೋಗುತ್ತಿದ್ದೆ...


ಅವಳ ಧ್ವನಿಯೂ ಇಂಪು...


ಅವಳು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಹಾಡಿದ್ದಳು...


"ನೀ...ನಿರಲು ಜೊತೆಯಲ್ಲಿ.. ಬಾಳೆಲ್ಲ ಹಸಿರಾದಂತೆ..."


ವಾಹ್ !!


ನಾನು ಏನು ಮಾಡಬಾರದಾಗಿತ್ತೋ... ಅದನ್ನು ಮಾಡಿದೆ...
ನನ್ನ ಹೃದಯ ಢವ ಢವ ಅನ್ನುತ್ತಿತ್ತು...
ಧೈರ್ಯಮಾಡಿ ಹುಡುಗಿ ಒಬ್ಬಳೆ ಇದ್ದಾಗ ಹೇಳಿದೆ..


"ಹುಡುಗಿ.. 
ನಿನ್ನನ್ನು ನಾನು ಪ್ರೀತಿಸುತ್ತಿದ್ದೇನೆ..."


ಅವಳ ಜಿಂಕೆ ಕಣ್ಣುಗಳಲ್ಲಿ ಆಶ್ಚರ್ಯ.... !


"ಹೌದಾ...?
ನನ್ನ ಪ್ರೀತಿಸ್ತಿದ್ದೀಯಾ...?


ಯಾಕೆ?"


"ಗೊತ್ತಿಲ್ಲ... 
ನೀನು ನನಗೆ ತುಂಬಾ ತುಂಬಾ ಇಷ್ಟ..
ತುಂಬಾ ತುಂಬಾ ಪ್ರೀತಿಸ್ತಾ ಇದ್ದಿನಿ..."


"ಹುಡುಗಾ...
ಸಿನೇಮಾ ಥರಹ ನನ್ನನ್ನು ತಬ್ಬಿಕೊ ಬೇಕು...
ಹಾಡು ಹೇಳಬೇಕು ...
ಅಂತೆಲ್ಲ  ಅನ್ನಿಸ್ತಾ ಇದೆಯಾ...?"


ಅನಿರೀಕ್ಷಿತವಾದ ಅವಳ ಈ ನೇರ ಮಾತಿಗೆ ನನ್ನಲ್ಲಿ ಉತ್ತರ ಇರಲಿಲ್ಲ...


ತಡಬಡಿಸಿದೆ... 
ಸಣ್ಣಗೆ ಹಣೆಯಲ್ಲಿ ಬೆವರು ಬಂತು...!


"ಹುಡುಗಾ...
ಪ್ರೀತಿ ಎಂದರೆ ಏನು?"


ನಾನು ತಲೆ ಕೆರೆದು ಕೊಂಡೆ...


ಅಸಲಿಗೆ ಪ್ರೀತಿ ಎಂದರೇನು ಅಂತ ನನಗೂ ಗೊತ್ತಿಲ್ಲ...!


"ಗೊತ್ತಿಲ್ಲ ...
ನಿನ್ನನ್ನು ನೋಡಬೇಕು ಅನ್ಸುತ್ತೆ...
ನೀನು ನನಗೆ ಚಂದ ಕಾಣ್ತಾ  ಇದ್ದೀಯ...


ನೋಡ್ತಾ ಇದ್ದೀನಿ...


ನೀನು ಖುಷಿಯಾಗಿರಬೇಕು...
ನಿನ್ನ ಸಂತೋಷ ನಾನು ನೋಡಬೇಕು...


ನಿನಗೆ ಒಳ್ಳೆಯದನ್ನು ಬಯಸುತ್ತೇನೆ... ಹೃದಯಪೂರ್ವಕವಾಗಿ..."


"  ಸರಿ...
ಹಾಗಾದರೆ..ನೀನು ನನ್ನನ್ನು ಪ್ರೀತಿ ಮಾಡಬಹುದು...
ಆದರೆ...
ಒಂದು ಕಂಡೀಷನ್......."


"ಏನು...?"


" ನೀನು ನನ್ನಿಂದ ದೂರ ಇರಬೇಕು...


ನನ್ನ ಕಡೆಗೆ ಪೆಂಗನಂತೆ ನೋಡುತ್ತ.. 
ಹುಚ್ಚುರೀತಿಯಲ್ಲಿ ವರ್ತಿಸಬಾರದು...


ಅವಶ್ಯಕತೆ ಇದ್ದಷ್ಟೇ ಮಾತನಾಡಬೇಕು...
ಕಾರಣವಿಲ್ಲದೆ ನನ್ನನ್ನು ಭೇಟಿ ಮಾಡಬಾರದು..."


ನಾನು ಮತ್ತೆ ತಲೆ ಕೆರೆದುಕೊಂಡೆ...


"ಆಯಿತು...
ಓಕೆ..
ಎಸ್ಸೆಮ್ಮೆಸ್  ಕಳಿಸ ಬಹುದಾ?"


ಹುಡುಗಿ ಈಗ ತುಂಬಾ ಕಠಿಣವಾದಳು...


" ಇಲ್ಲ...
ನಾವಿಬ್ಬರೂ ಇಲ್ಲಿ ಓದಲಿಕ್ಕೆ ಬಂದಿದ್ದೇವೆ... ಚೆನ್ನಾಗಿ ಓದಬೇಕು...
ಅದು ನಮ್ಮ ಮೊದಲ ಗುರಿ...


ನನ್ನ ಓದಿಗೆ ನೀನು ..
ನಿನ್ನ ಪ್ರೀತಿ ...
ನನಗೆ ತೊಂದರೆ ಕೊಡಬಾರದು..."


ನಾನು ಅವಳು ಹೇಳಿದುದಕ್ಕೆ "ಹೂಂ" ಅಂದೆ...


"ನೋಡು ಹುಡುಗಿ...


ನಾನೂ ಕೂಡ ಒಳ್ಳೆಯವನು... 
ಒಳ್ಳೆಯ ಮನೆತನದವನು...
ಕೆಟ್ಟ ಅಭ್ಯಾಸಗಳಿಲ್ಲ..
ದಯವಿಟ್ಟು ನನ್ನನ್ನೂ ಪ್ರೀತಿಸು.... ಪ್ಲೀಸ್...."


ಈ ಪ್ರೀತಿ ನಿವೇದನೆ ಬಲು ಕಷ್ಟ....


ಹುಡುಗಿ ಕಿರುಗಣ್ಣಿನಿಂದ ನೋಡಿದಳು...
ತಕ್ಷಣ ಉತ್ತರ ಕೊಡಲಿಲ್ಲ...


"ಪ್ರೀತಿಗೆ ಬಲವಂತ ಮಾಡಬಾರದು.. .. 
ಹುಡುಗಾ...
ಕಾದು ನೋಡೋಣ...


ನೀನು ನನ್ನನ್ನು ಪ್ರೀತಿಸಿಕೊ.. 


ಪರವಾಗಿಲ್ಲ...
ಆದರೆ ನನಗೆ ತೊಂದರೆ ಕೊಡಬೇಡ...."


ಅಂದಿನಿಂದ ....
ಅವಳನ್ನು ದೂರದಿಂದಲೇ ನೋಡುತ್ತಿದ್ದೆ...
ಕಣ್ಣತುಂಬಾ... ಹೃದಯದ ತುಂಬಾ....


ನೋಡುತ್ತಿದ್ದೆ.. 
ಅವಳಿಗೆ ಗೊತ್ತಾಗದ ಹಾಗೆ... 
ಕವನ ಗೀಚುತ್ತಿದ್ದೆ.... ಕನಸು ಕಾಣುತ್ತಿದ್ದೆ....


ಏನೋ ಒಂಥರಾ ಖುಷಿ..!
ಅವಳಿದ್ದಳು ನನ್ನ  ಮನಸ್ಸಲ್ಲಿ ..
ನಿದ್ದೆ  ಕನಸುಗಳಲ್ಲಿ..


ಪ್ರೀತಿ ಎಂದರೆ  ಇದೇನಾ?


ನೋಡು ನೋಡುತ್ತಿರುವಂತೆ... ನಮ್ಮ ಓದು ಮುಗಿಯಿತು...
ಇಬ್ಬರೂ ಪಾಸಾಗಿದ್ದೆವು...


ನೌಕರಿಯೂ ಸಿಕ್ಕಿತು....


ಇನ್ನೇನು?


ಈ ಆಸೆಗಳದ್ದೇ ಸಮಸ್ಯೆ....!


ಅಸೆಗಳು ಮತ್ತೆ ಗರಿಗೆದರಿತು....


ಆಸೆಗಳಿಗೇನು...?
ಯಾವಾಗಲೂ ಅವಕಾಶ ಹುಡುಕುತ್ತಿರುತ್ತವೆ....


"ಹುಡುಗಿ...
ನನ್ನ ಪ್ರೀತಿ ಮರೆತುಬಿಟ್ಟೆಯಾ...?


"ಇಲ್ಲ ಕಣೋ...
ಮರೆತಿಲ್ಲ... 
ನೀನು ತುಂಬಾ ಒಳ್ಳೆಯ ಹುಡುಗ...
ನಾನು ಹೇಳಿದಂತೆ ನಡೇದುಕೊಂಡಿದ್ದೀಯಾ..."


"ಸರಿ...
ಮುಂದೇನು...?


"ಹುಡುಗಾ...
ನನ್ನ ಅಪ್ಪ ತುಂಬಾ ಕಷ್ಟ ಪಟ್ಟು ನನಗೆ ಓದಿಸಿದ್ದಾನೆ..
ನನಗೂ ಒಂದಷ್ಟು ಕನಸಿದೆ..
ನನ್ನ ಅಪ್ಪನಿಗೆ ಏನಾದರೂ ಕೊಡಬೇಕು...
ಒಂದಷ್ಟು ದಿನ ಕೆಲಸ ಮಾಡಿ ....
ಅಪ್ಪನಿಗೆ ಏನಾದರೂ ನನ್ನಿಂದ ಸಹಾಯ ಆಗಬೇಕು....."


ನಿಜ ಹೇಳ್ತೀನಿ...
ಈಗ ಮಾತಾಡಿದ್ದು ನಾನಲ್ಲ...
ನನ್ನ ಆಸೆಗಳು...


ನನ್ನ ಆಸೆಗಳೇ ಮಾತಾಡಿದವು...


" ಖಂಡಿತವಾಗಿ ಕೊಡು ಮಾರಾಯ್ತಿ...
ನನ್ನ ಅಭ್ಯಂತರ ಏನೂ ಇಲ್ಲ...


ನಾನು ನಿನ್ನ ಕೈ ಹಿಡಿದುಕೊಂಡು ಪಾರ್ಕಿನಲ್ಲಿ ಓಡಾಡಬಹುದಾ?
ನಿನ್ನ ಜೊತೆ ಪಾನಿ ಪುರಿ ತಿನ್ನ ಬಹುದಾ?


ನನಗೆ ನಿನ್ನ ಮೇಲೆ ಪ್ರೀತಿ ಇನ್ನೂ ಜಾಸ್ತಿಯಾಗಿದೆ..."


"ಇಲ್ಲ ಕಣೊ...
ನೀನು ನನ್ನನ್ನು ಮುಟ್ಟಬಾರದು...
ದೂರದಿಂದಲೇ ಮಾತನಾಡಬೇಕು...


ಆದರೆ..."


"ಏನು..?"


"ಆದರೆ..
ನನ್ನೊಟ್ಟಿಗೆ ಓಡಾಡ ಬಹುದು...
ವಾರಕ್ಕೊಮ್ಮೆ ಪಾರ್ಕು.. ಸಿನೇಮಾ ನೋಡಬಹುದು...


ಆದರೆ ಎಲ್ಲವೂ ದೂರ...ದೂರದಲ್ಲೇ.. ಇರಬೇಕು...!


ನಿನ್ನ ಪ್ರೀತಿ ನನ್ನ ಮೈ ಮುಟ್ಟಬಾರದು..."


ನನಗೆ ಬಹಳ ಸಂತೋಷವಾಯಿತು...!
ಸ್ವರ್ಗ ಸಿಕ್ಕಿದಷ್ಟು ಖುಷಿಯಾಯಿತು....!


ನನ್ನ ಹುಡುಗಿ ನನಗೆ ಮಾತನಾಡಲು ಸಿಗುತ್ತಾಳಲ್ಲ...!


ವಾಹ್..!


"ಹುಡುಗಿ...
ನಾನು ಫೋನ್ ಮಾಡಬಹುದಾ?"


"ಮಾಡು..
ಸಾಯಂಕಾಲ ಮಾತ್ರ... 
ನಾನು ಆಫೀಸಿನಿಂದ  ಬಂದಮೇಲೆ..."


ನಿಜ ಹೇಳ್ತಾ ಇದ್ದೀನಿ..
ಆಡುವ ಮಾತುಗಳು ಇಷ್ಟು ಅಪ್ಯಾಯಮಾನವಾಗಿರುತ್ತವೆ ...
ಅಂತ ನನಗೆ ಗೊತ್ತಾಗಿದ್ದು ಆವಾಗಲೇ...


ನಾವಿಬ್ಬರೂ ಹರಟಿದೆವು.... ಓಡಾಡಿದೆವು...
ಸಿನೇಮಾ ನೋಡಿದೆವು...


ಪಾರ್ಕಿನ ಮೂಲೆಯಲ್ಲಿ ಕುಳಿತು ನನ್ನ ಹುಡುಗಿ ನನಗಾಗಿ ಹಾಡು ಹಾಡುತ್ತಿದ್ದಳು...
ನನ್ನಿಷ್ಟದ ಹಾಡುಗಳು... !!


"ತುಮ್ ಸೆ.. ನಾರಾಜ್ ನಹೀ...ಜಿಂದಗೀ...
ಹೈರಾನು ಹೂಂ... ಮೈ ಪರೇಶಾನು ಹೂಂ...


ತೆರೆ ಮಾಸೂಮ್ ಸವಾಲೋ ಸೆ  ಪರೆಶಾನೂ ಹೂಂ..."


ಅವಳ ಧ್ವನಿ ಬಲು ಇಂಪು....


ಅವಳು ನನ್ನ ಪ್ರತಿಮಾತಿಗೂ ನಗುತ್ತಿದ್ದಳು...
ನಗುವಾಗ ಅವಳ ಕಣ್ಣುಗಳು ಮುಚ್ಚುತ್ತಿದ್ದವು...



ಅವಳ ಜೊತೆಯಲ್ಲಿ ಏನೇನೋ ಕನಸು ಕಂಡೆ...!
ಅವಳನ್ನು ದೂರದಿಂದ ಕಣ್ಣು ತುಂಬಿಸಿಕೊಳ್ಳುತ್ತಿದ್ದೆ...


ಅವಳು ನನಗೆ ಮತ್ತಷ್ಟು ಇಷ್ಟವಾದಳು... 
ಹತ್ತಿರವಾದಳು...


ವರುಷ ಕಳೆದು ಹೋಯಿತು....


"ಹುಡುಗಾ...
ನಿನ್ನೆ ನನ್ನ ಅಪ್ಪ ....
ನನ್ನ ಮದುವೆಯ ಬಗೆಗೆ ಮಾತನಾಡಿದ..
ನನಗೆ ಗಂಡು ಹುಡುಕುತ್ತಾನಂತೆ...
ನಾನು ನಿನ್ನ ಬಗೆಗೆ ಹೇಳಿಲ್ಲ...


ದಯವಿಟ್ಟು ನೀನು ನಿನ್ನ ಅಪ್ಪನೊಡನೆ ಮಾತನಾಡು...


ನಮ್ಮ ಮದುವೆಯ ಬಗೆಗೆ ಮಾತಾಡು..
ನಮ್ಮ ಸಂಭಂಧಕ್ಕೊಂದು  ಹೆಸರು ಕೊಡು..
ಭದ್ರತೆ  ಕೊಡು.."


"ಹುಡುಗಿ..
ನಿನಗೆ ನಾನು ಇಷ್ಟನಾ?


ನಾನು ಪ್ರೀತಿಸಿದ ಹಾಗೆ ...
ನೀನೂ ನನ್ನನ್ನು  ಪ್ರೀತಿಸುತ್ತೀಯಾ?"


"ಹೌದು ಕಣೋ...


ನನ್ನ ಪ್ರೀತಿ ನನ್ನ ಕಣ್ಣಲ್ಲಿದೆ.. ಗೊತ್ತಾಗಲಿಲ್ಲವಾ?


ಹುಚ್ಚು ಹುಡುಗ ನೀನು...!


ನಿನ್ನ ಸಭ್ಯತೆ... ವಿನಯ...
ಸಂಯಮ...
ನೀನು ದೂರದಿಂದ ನನ್ನನ್ನು ಪ್ರೀತಿಸುವ ರೀತಿ..
ನಿನ್ನ ಪ್ರೀತಿತುಂಬಿದ ಕಣ್ಣುಗಳು ನನಗಿಷ್ಟ ಕಣೊ...


ನಿನ್ನೊಂದಿಗೆ ನನ್ನ ಬದುಕು ಸಂತಸವಾಗಿರುತ್ತದೆ...
ನನ್ನ ಬದುಕಿನ ಭರವಸೆ ನೀನು...


ದಯವಿಟ್ಟು ನಮ್ಮ ಮದುವೆಯ ಪ್ರಸ್ತಾಪ ನಿನ್ನಪ್ಪನೊಡನೆ ಮಾಡು..."


"ಹುಡುಗಿ...
ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಅಂತ ನನಗೇ ಗೊತ್ತಿಲ್ಲ...


ನಿನ್ನ ನೋಟ,,.. ಧ್ವನಿ... ಪ್ರೀತಿ... ಎಲ್ಲವನ್ನೂ..
ಇಷ್ಟು ವರ್ಷ ನನ್ನ ಹೃದಯದಲ್ಲಿ ತುಂಬಿಟ್ಟುಕೊಂಡಿದ್ದೇನೆ...


ನಿನ್ನ ಪ್ರೀತಿಯನ್ನು ನಿನ್ನೊಡನೆ ಮಾತನಾಡದೇ ಅನುಭವಿಸಿದ್ದೇನೆ...


ಮಾತಾನಾಡಿಯೂ ಅನುಭವಿಸಿದ್ದೇನೆ...
ನಿನ್ನ ಪ್ರೀತಿಯನ್ನು ನನ್ನೆದೆಯೊಳಗೆ ಪೂಜಿಸಿದ್ದೇನೆ..


ನಿನ್ನಂಥಹ ಹುಡುಗಿ ನನ್ನ ಸಂಗಾತಿಯಾಗುವದು ಎಷ್ಟೋ ಜನ್ಮದ ಪುಣ್ಯ..."


ನನಗೆ ಮುಂದೆ ಮಾತನಾಡಲಾಗಲಿಲ್ಲ...
ಗಂಟಲು ಉಬ್ಬಿ ಬಂತು...


"ಹುಡುಗಾ ..
ಏನಾಯ್ತೋ.....?
ನಾನು ನಿನ್ನವಳು... 
ಇಬ್ಬರೂ ಮದುವೆಯಾಗೋಣ.. ಚಿಂತೆ ಮಾಡಬೇಡ..."


ಹುಡುಗಿ ನನ್ನ ತಲೆ ಸವರಿದಳು...


"ಹುಡುಗಿ...
ಮದುವೆಯಾಗಿ  ವಾಸ್ತವದ ಬದುಕಿನಲ್ಲಿ ನನ್ನ ಪ್ರೀತಿಯನ್ನು ಸಾಯಿಸುವದು ನನ್ನಿಂದ ಆಗದು...
ಸಂಸಾರದ ಜಂಜಾಟದಲ್ಲಿ ನಾವು ಜಗಳಕಾದು...
ಕೂಗಾಡುವದು.. ರೇಗಾಡುವದು ನನ್ನಿಂದಾಗದು...


ನಮ್ಮ ಪ್ರೀತಿ ಹೀಗೆಯೇ ಇರಲಿ...


ನಿನ್ನಪ್ಪ ನಿನಗೊಂದು ವರ ಹುಡುಕುತ್ತಾನೆ ಅವನನ್ನು ಮದುವೆಯಾಗು...
ನನಗೂ ಒಬ್ಬಳು ಮಡದಿಯಾಗಿ ಬರುತ್ತಾಳೆ...


ನಮ್ಮ ಪ್ರೀತಿಯನ್ನು ಬಚ್ಚಿಟ್ಟುಕೊಂಡು...
ಆಗಾಗ ತೆರೆದು ಅನುಭವಿಸೋಣ...


ಎಲ್ಲ ಸಂಬಂಧಗಳು... ಬಾಂಧವ್ಯಗಳು...
ಪ್ರೀತಿ..
ಪ್ರೇಮ ದೂರದಿಂದಲೇ ಚಂದ ...
ಸುಂದರ...ಕಣೆ...


ಇಷ್ಟೆಲ್ಲಾ ಕನಸು ಕೊಟ್ಟ 
ನೀನು...
ನಿನ್ನ ಪ್ರೀತಿ ನನ್ನೊಡನೆ ಯಾವಾಗಲೂ ಹೀಗೆಯೇ ಇರಲಿ...

ನಾವು ಮದುವೆಯಾಗುವದು ಬೇಡ.. ಕಣೆ...
ಬೇಡ..."


ಹುಡುಗಿ ಮಾತನಾಡಲಿಲ್ಲ...


ನನಗೆ ಹುಡುಗಿಯ ಮುಖ ನೋಡಬೇಕಿತ್ತು...


ಹುಡುಗಿ ಸರಿಯಾಗಿ ಕಾಣಿಸುತ್ತಿರಲಿಲ್ಲ...


ನನ್ನ ಕಣ್ಣಂಚಲ್ಲಿ  ನೀರಿತ್ತು....




( ಚಂದದ ಪ್ರತಿಕ್ರಿಯೆಗಳು... 
ಪ್ರೀತಿ ಬಗೆಗಿನ ಸಂವಾದ ಚೆನ್ನಾಗಿದೆ...
ದಯವಿಟ್ಟು ನೋಡಿ....)

Posted by ಸಿಮೆಂಟು ಮರಳಿನ ಮಧ್ಯೆ (kash531@gmail.com) on October 03, 2011 03:27 PM· permalink

ಮರೆಯಬೇಕಿದೆ ಎಲ್ಲಾ...

ಎಲ್ಲಾ ಮರೆಯಬೇಕಿದೆ
ಹಾಗಂತ ಪದೆ ಪದೆ ನೆನಪಿಸಿಕೊಳ್ಳುತ್ತಿದ್ದೇನೆ

ಅಲಾರಾಂ ಅದುಮಿದ್ದೇನೆ
ಕರೆಗಂಟೆ ಕಿತ್ತಿದ್ದೇನೆ
ಗೇಟಿಗೆ ಹಾಕಿದ್ದ ಪತ್ರದ ಡಬ್ಬವನ್ನೂ ಬಿಚ್ಚಿಟ್ಟಾಗಿದೆ
ಯಾರೂ ಬರಬೇಡಿ
ನಾನು ಒಳಗಿಲ್ಲ

ಮುಚ್ಚಿದ ಬಾಗಿಲೊಳಗಿನ ಮನೆಯಲ್ಲಿ
ಬೆಳಕಿಲ್ಲ; ದೀಪ ಹಾಕುವಂತಿಲ್ಲ
ಫ್ಯಾನು, ಫೋನು, ಕುಕ್ಕರ್
ಊಹೂಂ
ನಲ್ಲಿ ತಿರುಗಿಸುವಂತಿಲ್ಲ,
ಹಾಡು ಗುನುಗುವಂತಿಲ್ಲ
ಒಳಗಿದ್ದೇನೆಂಬುದು ಹೊರಹೋಗುವಂತಿಲ್ಲ

ಸದ್ದೇ ಮಾಡದೇ ಕೂತರೂ
ಸೊಳ್ಳೆಗಳು ಮಾತಾಡಿಸುತ್ತವೆ
ಬಾಗಿಲು ಮುಚ್ಚಿದ್ದರೂ
ನೆನಪ ಕಿಟಕಿಗಳು ತೆರೆದುಕೊಳ್ಳುತ್ತವೆ
ಬೇಡವೆಂದ ಬೆಳಕು, ಶಬ್ದ
ಒಳ ಬಂದು ‘ಏನೀಗ?’ ಎಂಬಂತೆ
ಕೆಣಕುತ್ತವೆ, ಕೆರಳಿಸುತ್ತವೆ

ದುರುಗುಟ್ಟಿ ನೋಡಿದರೂ ಬೆದರುವುದಿಲ್ಲ
ಹೋಗಾಚೆ ಎಂದು ಒರಲಿದರೂ ಕೇಳುವುದಿಲ್ಲ
ಮರೆತ ಹಾಡುಗಳನ್ನು ನೆನಪಿಸಿ,
ಒರೆಸಿಹಾಕಿದ ಚಿತ್ರಗಳನ್ನು
ಎಲ್ಲೆಡೆ ಹರವುತ್ತವೆ; ಮನಸ ಕದಡುತ್ತವೆ

ಎಲ್ಲ ಮರೆಯಬೇಕೆಂದರೂ
ಎಲ್ಲಾ ನೆನಪಾಗುತ್ತದೆ
ಆ ಮಾತು, ಧ್ವನಿ, ಸಂದೇಶ, ಕನಸು
ಕವನ, ಕದನ, ಕಾಮನೆ, ಭಾವನೆ
ಒಂದೇ ಎರಡೇ
ಲೆಕ್ಕದ ಬೆಂಬತ್ತಿ, ಸೋತು ಸೋತು
ಮತ್ತೆ ಸುಮ್ಮನೇ ಕೂಡುತ್ತೇನೆ

ಬಾಗಿಲ ಮೇಲೆ ಬೆರಳಾಡಿಸಿದ ಸದ್ದು...
 

ಅದನ್ನೇ ಕಾಯುತ್ತಿದ್ದವನಂತೆ ಎದ್ದು
ಬಾಗಿಲು ತೆರೆದರೆ;

ಅವಳಿಲ್ಲ!

ಮರೆಯಬೇಕೆಂಬ, ಮರೆತ ಸಂಕಲ್ಪ
ಮತ್ತೆ ನೆನಪಾಗುತ್ತದೆ

- ಚಾಮರಾಜ ಸವಡಿ

Posted by Chamaraj Savadi (chamarajs@gmail.com) on October 03, 2011 12:52 PM· permalink

ಚಿತೆಯ ಚಿಂತೆ

ಎಲ್ಲೆಲ್ಲೋ ಹುಟ್ಟಿದವರು

ಒಂದಾದರು ಇಲ್ಲಿ.

ಕಳಚಿ ನಾಮ, ಬಿಸುಟು ದಾರ

ಮರೆತು ಹೆಣ್ಣು-ಗಂಡೆಂಬುದ,

ಬೆತ್ತಲಾದರು ಬಟ್ಟೆಯಿದ್ದರೂ

ಕತ್ತಲಲ್ಲೂ ಬೆಳಕಾದರು



ಸುಟ್ಟಿದ್ದು ಮಾಂಸ, ಮೂಳೆಯಷ್ಟೇನಾ?

ಹೌದಂತೆ ಬಂಧನವೂ

ಹಂಬಲಿಸಿದ್ದರು ಯಾವುದಕ್ಕೆಲ್ಲ

ಪರದಾಡಿದ್ದರು, ಪಡೆದಿದ್ದರು

ಎಲ್ಲ ಮರೆತರವರಂತೆ

ಮಲಗಿ, ಉರಿದು ಮರೆಯಾದರು

ಸಿಗದಂತೆ ಮತ್ತೆ



ಚಿತೆಗೆಂಥದದು ಚಿಂತೆ?

ಆರಿಸುವುದಿಲ್ಲ ಕಣ್ಣೀರು ಉರಿ

ಕಣ್ಣೀರಿಡುವುದಿಲ್ಲ ಕೆನ್ನಾಲಗೆ

ಮೈಯೆಲ್ಲ ಕೈಕಾಲಿನ ಬೆಂಕಿ

ಎಲ್ಲವನ್ನೂ ನುಂಗಿ ನೊಣೆಯುವಾಗ

ಭವಬಂಧನಗಳು ಯಾವ ಲೆಕ್ಕ ಮರುಳೆ



ಗೊತ್ತಿದ್ದೂ ಎಲ್ಲ

ಬೆದರುವುದಿಲ್ಲ ಬೆಂಕಿಗೆ ಬದುಕು

ಚಿಂತಿಸುವುದಿಲ್ಲ ಚಿತೆಗೂ

ಕೆರಳುತ್ತದೆ ಮತ್ತೆ ಮತ್ತೆ

ಹೊರಳುತ್ತದೆ

ಕತ್ತಲ ಜಾರುದಾರಿಯಲ್ಲಿ

ಹೊರಡುತ್ತದೆ ಗುರಿಯಿಟ್ಟಂತೆ

ತಾಕುತ್ತದೆ, ತಣಿಯುತ್ತದೆ

ಬೇರಗರ್ಭದಲ್ಲೊಂದು

ಕಣ್ತೆರೆಯುತ್ತದೆ ಬೆಳಕು



ಕತ್ತಲಾಳದಲ್ಲಿ ಮೊಳಕೆಯೊಡೆವ ಬದುಕಿಗೆ

ಹುಟ್ಟಿನಿಂದ ಚಟ್ಟದವರೆಗೂ

ನಿತ್ಯ ಬೆಳಕಿನದೇ ಧ್ಯಾನ


ಚಿತೆಯಲ್ಲಿ ಬೆಳಕೂ ಮೌನ.


-ಶ್ರೀದೇವಿ ಕಳಸದ

Posted by ಆಲಾಪಿನಿ (shreevind@gmail.com) on October 03, 2011 11:57 AM· permalink

ಶಾರದೆ, ನಿನ್ನಯ ದಯವಿಲ್ಲದೆ...

|ಶ್ರೀಶಾರದಾಮಾತೆ|
ಶ್ರೀ ಸರಸ್ವತಿ ನಮಸ್ತುಭ್ಯಂ ವರದೇ ಕಾಮ ರೂಪಿಣೇ|
ತ್ವಾಮಹಂ ಪ್ರಾರ್ಥನೆ ದೇವೀ ವಿದ್ಯಾದಾನಂ ಚ ದೇಹಿ ಮೇ||

ಯಾ ದೇವೀ ಸ್ತುತಯೇ ನಿತ್ಯಂ ವಿಭುಹೈರರ್ವೇದಪರಾಗೈ:|
ಸಮೇ ವಸತು ಜಿಹ್ವಾಗ್ರೇ ಬ್ರಹ್ಮರೂಪ ಸರಸ್ವತಿ||


========================


ಶಾರದೆ, ನಿನ್ನಯ ದಯವಿಲ್ಲದೆ
ವಿದ್ಯೆಯಿಲ್ಲ, ವಿನಯವಿಲ್ಲ ನಮಗೆ
ನಿನ್ನೇ ಜಪಿಸುವೆವು, ಸದಾ ಸರ್ವದಾ
ವಿದ್ಯಾದಾನವನು ನೀಡು, ತಾಯೇ ಭಾರತೀ...

ಶ್ವೇತಾಂಬರಧಾರಿಣೀ, ಶುಭದೇ
ನೀ ದಾರಿ ತೋರದೇ, ಜ್ಞಾನಗಂಗೆ ಹರಿಸದೇ
ಅಜ್ಞಾನ ತೊಳೆಯದು ನಮಗೆ,
ಜ್ಞಾನವನು ನೀಡೆಮಗೆ, ತಾಯೇ ಭಾರತೀ...

ವಾಣೀ, ವಾಗೀಶ್ವರೀ, ನಮ್ಮ ಜಿಹ್ವಾಗ್ರದಲಿ
ಸವಿನುಡಿಗಳ ನುಡಿಸಿ, ಶಾಂತಿಮಂತ್ರವನುಳಿಸಿ
ಪೊರೆಯೆ, ಪರಮಬ್ರಹ್ಮನ ರಾಣಿ,
ಪರಮಾಪ್ತವಾಗಿರಲು ಮನಸುಕೊಡು, ತಾಯೇ ಭಾರತೀ...

ವೀಣಾಧಾರಿಣಿ, ಸಂಗೀತ ವಿಲಾಸಿನಿ,ನಮ್ಮಯ
ಬಾಳಿನೊಳು ಸಂತಸದ ಶೃತಿ ಸೇರಿಸಿ,
ಅದರಲಿ ತಾಳ ತಪ್ಪದ ಬಾಳು ಕೊಡು, ತಾಯೇ ಭಾರತೀ...

ಇದೋ ನಿನಗೆ ನಮನ, ನಿನ್ನ ನಾಮವೆ ನಮಗೆ ಮನನ
ಆಗಿರಲೆಂದು ಜೀವನ, ಪಾವನ ಎಂದು ಹಾರೈಸೆ, ಭಕ್ತಿಯಲಿ
ಬೇಡಿಕೊಂಬೆವು, ಕೊಡುತಾಯೆ ವರವನ್ನ, ತಾಯೇ ಭಾರತೀ...
===================

ಎಲ್ಲರಿಗೂ, ಶ್ರೀ ಸರಸ್ವತೀ ದೇವಿಯ ಕೃಪೆಯಿರಲಿ. 

-ಚಂದ್ರಶೇಖರ ಬಿ.ಎಚ್. ೩/೧೦/೨೦೧೧

Posted by ಕ್ಷಣ... ಚಿಂತನೆ... (bhchandru@gmail.com) on October 03, 2011 09:17 AM· permalink

ಮನದ ಅಂಗಳದಿ......... ೬೦. ಕ್ಷಮೆ ಕೇಳುವ ಪರಿ

ಸಾಮಾನ್ಯವಾಗಿ ನಾವು ಏನನ್ನಾದರೂ ತಪ್ಪು ಮಾಡಿದಾಗ ಕ್ಷಮೆಯನ್ನು ಕೇಳುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತೇವೆ. `sorry' (ಸಾರಿ) ಎನ್ನುವ ಪದವನ್ನು ನಾವು ದಿನದಲ್ಲಿ ಹತ್ತಾರು ಬಾರಿ ಅದರ ಅಗತ್ಯವಿರಲಿ-ಬಿಡಲಿ ಹೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಈ ಅಭ್ಯಾಸವು ಹಾಸ್ಯಾಸ್ಪದವೂ ಆಗಿರುತ್ತದೆ. ಒಮ್ಮೆ ಎಸ್.ಎಸ್.ಎಲ್.ಸಿ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರದಲ್ಲಿ ನನ್ನ ಪಕ್ಕವೇ ಕುಳಿತು ಮೌಲ್ಯಮಾಪನ ಮಾಡುತ್ತಿದ್ದ ಶಿಕ್ಷಕಿಯೊಬ್ಬರಿಗೆ ಬಿಕ್ಕಳಿಕೆ ಬರಲಾರಂಭಿಸಿತು. ಪ್ರತಿಭಾರಿಯೂ ಅವರು`sorry' ಎನ್ನುತ್ತಿದ್ದರು. ಅದು ಎಷ್ಟೊಂದು ಕಿರಿಕಿರಿಯಾಯ್ತೆಂದರೆ ಅವರು ಬಿಕ್ಕಳಿಸುವುದಕ್ಕಿಂತಲೂ ಕ್ಷಮೆಕೋರಿಕೆಯೇ ಅಸಹನೀಯವೆನಿಸಲಾರಂಭಿಸಿತು! ಕೆಲವೊಮ್ಮೆ ಈ `sorry'ಎನ್ನುವ ಪದವು ಕೇವಲ ಅಭ್ಯಾಸ ಬಲದಿಂದ ಬರುತ್ತಿದೆಯೋ, ನಿಜಕ್ಕೂ ಕೇಳುತ್ತಿದ್ದಾರೋ ಎಂದು ತಿಳಿದುಕೊಳ್ಳುವುದು ಕಷ್ಟವಾಗುತ್ತದೆ! ಕ್ಷಮೆಯನ್ನು ಕೇಳುವ ರೀತಿಯನ್ನು ರ್ಯಾಂಡಿಪಾಶ್ ಅವರು ತಮ್ಮ ‘ಲಾಸ್ಟ್ ಲೆಕ್ಚರ್’ನಲ್ಲಿ ಬಹಳ ಚೆನ್ನಾಗಿ ತಿಳಿಸಿದ್ದಾರೆ:
‘ಜೀವನದಲ್ಲಿ ನಾವು ಸಾಕಷ್ಟು ತಪ್ಪುಗಳನ್ನು ಮಾಡುತ್ತೇವೆ. ತಪ್ಪು ಮಾಡಿದಾಗ ಕ್ಷಮೆ ಕೇಳುವುದು ಉತ್ತಮ ಅಭ್ಯಾಸ. ಆದರೆ ಒಂದು ಬಾರಿ ಕ್ಷಮೆ ಕೇಳಿದ ನಂತರವೂ ಮತ್ತೆ ಅದೇ ತಪ್ಪನ್ನು ಮಾಡುವುದು ಅಕ್ಷಮ್ಯ ಅಪರಾಧ. ಅರ್ಧ ಮನಸ್ಸಿನಿಂದ ಅಥವಾ ಅಸಭ್ಯತೆಯಿಂದ ಕ್ಷಮೆ ಕೇಳುವುದು ನಿಜಕ್ಕೂ ಹಾನಿಕರ. ಸದಕ್ಕಿಂತ ಕ್ಷಮೆ ಕೇಳದಿರುವುದೇ ಮೇಲು. ಈ ರೀತಿ ಅಸಭ್ಯತೆಯಿಂದ ಕ್ಷಮೆ ಕೇಳುವುದು ನಾವು ಮತ್ತೊಬ್ಬರಿಗೆ ಮಾಡುವ ಅಪಮಾನವೆಂದೇ ನನ್ನ ಭಾವನೆ. ನೀವು ಮತ್ತೊಬ್ಬರೊಂದಿಗೆ ವ್ಯವಹ